ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಂಜೋ ಅಬೆ ನಿಧನಕ್ಕೆ ಭಾರತದಿಂದ ಶೋಕಾಚರಣೆ

|
Google Oneindia Kannada News

ನವದೆಹಲಿ,ಜು.8: ಪಶ್ಚಿಮ ಜಪಾನ್‌ನ ನಾರಾ ನಗರದಲ್ಲಿ ಪ್ರಚಾರ ಭಾಷಣ ಮಾಡುವಾಗ ಶುಕ್ರವಾರ ಗುಂಡು ಹಾರಿಸಲ್ಪಟ್ಟು ಮೃತರಾದ ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಗೌರವಾರ್ಥವಾಗಿ ಭಾರತವು ಜುಲೈ 9 ರಂದು ಒಂದು ದಿನದ ಶೋಕಾಚರಣೆಯನ್ನು ಘೋಷಿಸಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಬೆ ಅವರ ದುರಂತ ನಿಧನದ ಬಗ್ಗೆ ತಮ್ಮ ಆಘಾತವನ್ನು ವ್ಯಕ್ತಪಡಿಸಿದ್ದಾರೆ. ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಮೇಲಿನ ನಮ್ಮ ಆಳವಾದ ಗೌರವದ ಸಂಕೇತವಾಗಿ 9 ಜುಲೈ 2022 ರಂದು ಒಂದು ದಿನದ ರಾಷ್ಟ್ರೀಯ ಶೋಕಾಚರಣೆಯನ್ನು ಆಚರಿಸಲಾಗುತ್ತದೆ ಎಂದು ಹೇಳಿದ್ದಾರೆ.

Video: ಜಪಾನ್ ಮಾಜಿ ಪ್ರಧಾನಿ ಅಬೆ ಮೇಲೆ ಗುಂಡಿನ ದಾಳಿVideo: ಜಪಾನ್ ಮಾಜಿ ಪ್ರಧಾನಿ ಅಬೆ ಮೇಲೆ ಗುಂಡಿನ ದಾಳಿ

ನನ್ನ ಆತ್ಮೀಯ ಸ್ನೇಹಿತರಲ್ಲೊಬ್ಬರಾದ ಶಿಂಜೋ ಅಬೆ ಅವರ ದುರಂತ ನಿಧನದಿಂದ ನಾನು ಆಘಾತಕ್ಕೊಳಗಾಗಿದ್ದೇನೆ, ದುಃಖಿತನಾಗಿದ್ದೇನೆ. ಅವರು ಜಾಗತಿಕ ರಾಜಕಾರಣಿ, ಅತ್ಯುತ್ತಮ ನಾಯಕ ಮತ್ತು ಉತ್ತಮ ಆಡಳಿತಗಾರರಾಗಿದ್ದರು. ಅವರು ಜಪಾನ್ ಮತ್ತು ಜಪಾನ್ ಕಟ್ಟಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಈಗ ಜಪಾನ್‌ ಜಗತ್ತಿನ ಉತ್ತಮ ಸ್ಥಳವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಅವರ ಮೇಲಿನ ದಾಳಿಯ ನಂತರ ಅಬೆ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಜಪಾನಿನ ಮಾಜಿ ಪ್ರಧಾನಿ ಅಬೆ ಅವರ ಎದೆಗೆ ಗುಂಡು ಹಾರಿಸಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಆರಂಭಿಕ ಮಾಧ್ಯಮ ವರದಿಗಳು ತಿಳಿಸಿವೆ. ಅಬೆ ಅವರ ಸ್ಥಿತಿಯನ್ನು ಹೃದಯ ಶ್ವಾಸನಾಳದ ಸ್ತಂಭನ ಎಂದು ಹೇಳಲಾದರೂ ಅವರು ಆತರಹದ ಯಾವುದೇ ಪ್ರಮುಖ ಲಕ್ಷಣಗಳನ್ನು ತೋರಿಸಲಿಲ್ಲ. ಕೊನೆಗೆ ಇದು ಗುಂಡಿನ ದಾಳಿ ಎಂದು ಖಚಿತಪಡಿಸಲಾಯಿತು.

Breaking: ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ವಿಧಿವಶBreaking: ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ವಿಧಿವಶ

 ಟೆಟ್ಸುಯಾ ಯಮಗಾಮಿ ಶಂಕಿತ ಹಂತಕ

ಟೆಟ್ಸುಯಾ ಯಮಗಾಮಿ ಶಂಕಿತ ಹಂತಕ

ನಾರಾ ಮೆಡಿಕಲ್ ಯೂನಿವರ್ಸಿಟಿ ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ, ಅಬೆ ಸಂಜೆ 5:03 ಕ್ಕೆ (ಸ್ಥಳೀಯ ಕಾಲಮಾನ) ನಿಧನರಾದರು ಮತ್ತು ಅವರ ಕುತ್ತಿಗೆಯಲ್ಲಿ ಎರಡು ಗುಂಡಿನ ಗಾಯಗಳಿವೆ. ಸ್ಥಳೀಯ ಮಾಧ್ಯಮಗಳ ಪ್ರಕಾರ ನಾರಾ ನಗರದ ನಿವಾಸಿ 41 ವರ್ಷದ ಟೆಟ್ಸುಯಾ ಯಮಗಾಮಿ ಎಂಬ ವ್ಯಕ್ತಿ ಅಬೆಗೆ ಗುಂಡು ಹಾರಿಸಿದ ಶಂಕಿತ. ಈತನನ್ನು ಜಪಾನಿನ ಪೊಲೀಸರು ಬಂಧಿಸಿದ್ದಾರೆ. ಜಪಾನ್‌ನ ಸಂಸತ್ತಿನ ಮೇಲ್ಮನೆಗೆ ಭಾನುವಾರ ನಡೆಯಲಿರುವ ಚುನಾವಣೆಗೆ ಮುನ್ನ ಅಬೆ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡುತ್ತಿದ್ದ ಸ್ಥಳದಿಂದ ಟೆಟ್ಸೂಯಾ ಯಮಗಾವಿಯ ಕೈಯಿಂದ ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ.

 ಶಾಶ್ವತ ಸಂಬಂಧದ ಪರಂಪರೆ

ಶಾಶ್ವತ ಸಂಬಂಧದ ಪರಂಪರೆ

ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಈ ದುರದೃಷ್ಟಕರ ಕ್ಷಣಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಭಾರತ ಮತ್ತು ಜಪಾನ್ ನಡುವಿನ ಕಾರ್ಯತಂತ್ರದ ಸಂಬಂಧವನ್ನು ಬಲಪಡಿಸುವಲ್ಲಿ ಅವರ ಪಾತ್ರ ಶ್ಲಾಘನೀಯವಾಗಿದೆ. ಅವರು ಇಂಡೋ ಪೆಸಿಫಿಕ್‌ನಲ್ಲಿ ಶಾಶ್ವತ ಸಂಬಂಧದ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ. ಅವರ ಕುಟುಂಬ ಮತ್ತು ಜನರಿಗೆ ನನ್ನ ಸಂತಾಪಗಳು ಎಂದು ಅವರು ಟ್ವೀಟ್‌ನಲ್ಲಿ ಬರೆದಿದ್ದಾರೆ.

 ಸಂಬಂಧವನ್ನು ಬಲಪಡಿಸುವಲ್ಲಿ ಅಬೆ ಪಾತ್ರ ಶ್ಲಾಘನೀಯ

ಸಂಬಂಧವನ್ನು ಬಲಪಡಿಸುವಲ್ಲಿ ಅಬೆ ಪಾತ್ರ ಶ್ಲಾಘನೀಯ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, "ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಭಾರತ ಮತ್ತು ಜಪಾನ್ ನಡುವಿನ ಕಾರ್ಯತಂತ್ರದ ಸಂಬಂಧವನ್ನು ಬಲಪಡಿಸುವಲ್ಲಿ ಅವರ ಪಾತ್ರ ಶ್ಲಾಘನೀಯವಾಗಿದೆ. ಅವರು ಇಂಡೋ-ಪೆಸಿಫಿಕ್‌ನಲ್ಲಿ ಶಾಶ್ವತ ಅವರು ಉತ್ತಮ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ. ಅವರ ಕುಟುಂಬ ಮತ್ತು ಜಪಾನ್ ಜನರಿಗೆ ನನ್ನ ಸಂತಾಪಗಳು," ಎಂದು ಟ್ವಿಟ್‌ನಲ್ಲಿ ಬರೆದುಕೊಂಡಿದ್ದಾರೆ.

ಜಪಾನ್‌ನ ದೀರ್ಘಾವಧಿಯ ಪ್ರಧಾನ ಮಂತ್ರಿ ಅಬೆ ಅವರು ಆರೋಗ್ಯ ಕಾರಣಗಳನ್ನು ಉಲ್ಲೇಖಿಸಿ 2020 ರಲ್ಲಿ ಅಧಿಕಾರದಿಂದ ಕೆಳಗಿಳಿದರು. ಅವರು 2006-07 ಮತ್ತು 2012-20 ರವರೆಗೆ ಎರಡು ಬಾರಿ ಜಪಾನ್‌ನ ಪ್ರಧಾನಿಯಾಗಿದ್ದರು. ಅವರ ನಂತರ ಯೋಶಿಹಿಡೆ ಸುಗಾ ಮತ್ತು ನಂತರ ಫ್ಯೂಮಿಯೊ ಕಿಶಿಡಾ ಅವರು ಅಧಿಕಾರ ವಹಿಸಿಕೊಂಡರು.

 ಇದು ಕ್ಷಮಿಸಬಹುದಾದ ಕಾರ್ಯವಲ್ಲ

ಇದು ಕ್ಷಮಿಸಬಹುದಾದ ಕಾರ್ಯವಲ್ಲ

ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ಶುಕ್ರವಾರ ದೇಶವನ್ನುದ್ದೇಶಿಸಿ ತಮ್ಮ ನೇರ ಭಾಷಣದಲ್ಲಿ, "ಇದು ಕ್ಷಮಿಸಬಹುದಾದ ಕಾರ್ಯವಲ್ಲ ಮತ್ತು ಅಧಿಕಾರಿಗಳು ಪರಿಸ್ಥಿತಿಯನ್ನು ನಿಭಾಯಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಅಬೆಯ ಗುಂಡಿನ ಹಿಂದಿನ ಉದ್ದೇಶ ತಿಳಿದಿಲ್ಲ," ಎಂದು ಕಿಶಿದಾ ಹೇಳಿದ್ದಾರೆ.


ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮವು ಅಬೆಯ ಗುಂಡಿನ ಶಂಕಿತನನ್ನು ಜಪಾನ್‌ನ ಸ್ವ-ರಕ್ಷಣಾ ಪಡೆಗಳ ಮಾಜಿ ಸದಸ್ಯ ಎಂದು ವರದಿ ಮಾಡಿದೆ. ಆ ಸಮಯದಲ್ಲಿ ಯಾವುದೇ ರಾಜಕೀಯ ಪರಿಣಾಮಗಳ ಬಗ್ಗೆ ಊಹಿಸಬೇಡಿ ಎಂದು ಜಪಾನ್ ಪ್ರಧಾನಿ ಎಲ್ಲರಿಗೂ ವಿನಂತಿಸಿದರು.

English summary
India has declared a day of mourning on July 9 in honor of former Japanese Prime Minister Shinzo Abe, who was shot dead Friday while giving a campaign speech in the city of Nara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X