ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರಾನ್ ಛಬಹಾರ್ ಬಂದರು ಅಭಿವೃದ್ಧಿಗೆ ಅಮೆರಿಕದಿಂದ ಭಾರತಕ್ಕೆ ವಿನಾಯ್ತಿ

|
Google Oneindia Kannada News

ಇರಾನ್ ಮೇಲೆ ಕೆಲವು ನಿರ್ಬಂಧಗಳನ್ನು ಹೇರಿರುವ ಅಮೆರಿಕವು ಭಾರತವು ಅಲ್ಲಿ ನಡೆಸುತ್ತಿರುವ ಕೆಲವು ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ವಿನಾಯಿತಿ ನೀಡಿದೆ. ಅದರಲ್ಲೂ ಮುಖ್ಯವಾಗಿ ಇರಾನ್ ನ ಛಬಹಾರ್ ಬಂದರು ಅಭಿವೃದ್ಧಿ ಹಾಗೂ ಅಫ್ಘಾನಿಸ್ತಾನದ ಜತೆಗೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗ ನಿರ್ಮಾಣಕ್ಕೆ ಭಾರತಕ್ಕೆ ಅಮೆರಿಕವು ವಿನಾಯ್ತಿ ನೀಡಿದೆ.

ವಿಸ್ತೃತವಾದ ಆಲೋಚನೆ ಮಾಡಿದ ನಂತರ ಅಮೆರಿಕವು ಇರಾನ್ ವಿಚಾರದಲ್ಲಿ ಭಾರತಕ್ಕೆ ಕೆಲವು ವಿನಾಯ್ತಿ ನೀಡಿದೆ. ಜತೆಗೆ ಪೆಟ್ರೋಲಿಯಂ ಉತ್ಪನ್ನಗಳನ್ನು ಇರಾನ್ ನಿಂದ ಆಮದು ಮಾಡಿಕೊಳ್ಳಬಹುದು ಎಂದು ತಿಳಿಸಲಾಗಿದೆ.

ಇರಾನ್‌ನಿಂದ ಭಾರತ ತೈಲ ಖರೀದಿ ಮಾಡಲು ಅಡ್ಡಿಯಿಲ್ಲ: ಅಮೆರಿಕ ಸಮ್ಮತಿ ಇರಾನ್‌ನಿಂದ ಭಾರತ ತೈಲ ಖರೀದಿ ಮಾಡಲು ಅಡ್ಡಿಯಿಲ್ಲ: ಅಮೆರಿಕ ಸಮ್ಮತಿ

‌ಈ ವರೆಗಿನ ಕಠಿಣವಾದ ದಿಗ್ಬಂಧನವನ್ನು ಸೋಮವಾರ ಅಮೆರಿಕವು ಇರಾನ್ ಗೆ ವಿಧಿಸಿದೆ. ಅಲ್ಲಿನ ಬ್ಯಾಂಕಿಂಗ್ ಮತ್ತು ಇಂಧನ ವಲಯದ ಮೇಲೆ ದಿಗ್ಬಂಧನ ಹೇರಲಾಗಿದೆ. ಯುರೋಪ್, ಏಷ್ಯಾ ಅಥವಾ ಇತರ ಯಾವುದೇ ದೇಶದಲ್ಲಿರುವ ಕಂಪನಿಗಳು ಇರಾನ್ ನಿಂದ ತೈಲ ಆಮದು ನಿಲ್ಲಿಸದಿದ್ದರೆ ವಿಧಿಸುವ ದಂಡವನ್ನು ಮತ್ತೆ ಚಾಲ್ತಿಗೆ ತರಲಾಗುವುದು ಎಂದು ತಿಳಿಸಲಾಗಿದೆ.

India gets US waiver for development of Chabahar Port in Iran

ಇರಾನ್ ನಿಂದ ತಾತ್ಕಾಲಿಕವಾಗಿ ತೈಲ ಆಮದು ಮಾಡಿಕೊಳ್ಳಬಹುದಾದ ದೇಶಗಳ ಪಟ್ಟಿಯಲ್ಲಿ ಭಾರತವೂ ಇದೆ. ಅಂದಹಾಗೆ ಛಬಹಾರ್ ಬಂದರು ಅಭಿವೃದ್ಧಿ ಹಾಗೂ ರೈಲು ಹಳಿ ನಿರ್ಮಾಣದಿಂದ ಅಫ್ಘಾನಿಸ್ತಾನಕ್ಕೆ ನೆರವಾಗುವುದರಿಂದ ಅವುಗಳಿಗೆ ದಿಗ್ಬಂಧನದಿಂದ ವಿನಾಯ್ತಿ ನೀಡಲಾಗಿದೆ ಎಂದು ಅಮೆರಿಕ ತಿಳಿಸಿದೆ.

India gets US waiver for development of Chabahar Port in Iran

ಪಾಕ್ ಗೆ ನೀಡುತ್ತಿರುವ ನೆರವೇನು ಎಂದು ಬಹಿರಂಗ ಪಡಿಸಲು ಚೀನಾ ನಕಾರಪಾಕ್ ಗೆ ನೀಡುತ್ತಿರುವ ನೆರವೇನು ಎಂದು ಬಹಿರಂಗ ಪಡಿಸಲು ಚೀನಾ ನಕಾರ

ಪಾಕಿಸ್ತಾನದ ಗ್ವದಾರ್ ಬಂದರನ್ನು ಅಭಿವೃದ್ಧಿ ಪಡಿಸಿದ ಚೀನಾಗೆ ಹೊಡೆತ ಕೊಡುವ ಉದ್ದೇಶದಿಂದ ಭಾರತದಿಂದ ನೇರವಾಗಿ ಸಂಪರ್ಕ ಇರುವ ಇರಾನ್ ನ ಛಬಹಾರ್ ಬಂದರು ಅಭಿವೃದ್ಧಿ ಕೈಗೆತ್ತಿಕೊಂಡಿತು. ಅಂದಹಾಗೆ ಛಬಹಾರ್ ನಿಂದ ಗ್ವದಾರ್ ಎಂಬತ್ತು ಕಿ.ಮೀ. ದೂರದಲ್ಲಿದೆ.

English summary
In a relief for India, the United States has exempted New Delhi from the imposition of certain sanctions for the development of the strategically-located Chabahar Port in Iran as well as the construction of the railway line connecting it with Afghanistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X