ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾ ಬಿಕ್ಕಟ್ಟು; ಸರಕಾರ, ರಾಜಪಕ್ಸೆ ಹೆಸರೆತ್ತದೆಯೇ ಭಾರತದ ಪ್ರತಿಕ್ರಿಯೆ

|
Google Oneindia Kannada News

ನವದೆಹಲಿ, ಮೇ 11: ಶ್ರೀಲಂಕಾದಲ್ಲಿ ಸಂಭವಿಸುತ್ತಿರುವ ಹಿಂಸಾಚಾರ ಘಟನೆ ಬಗ್ಗೆ ಭಾರತ ಬಹಳ ಎಚ್ಚರಿಕೆಯಿಂದ ಪ್ರತಿಕ್ರಿಯೆ ನೀಡಿದೆ. ಹಿಂಸಾಚಾರ ಘಟನೆಗಳನ್ನು ನಯವಾಗಿ ಖಂಡಿಸಿದೆ. ಲಂಕಾ ಜನರ ಬೆಂಬಲಕ್ಕೆ ತಾನಿರುವುದಾಗಿ ಹೇಳಿರುವ ಭಾರತ, ಅದೇ ವೇಳೆ ಲಂಕಾ ಸರಕಾರ ಅಥವಾ ರಾಜಪಕ್ಸ ಕುಟುಂಬ ಸದಸ್ಯರ ಯಾರ ಹೆಸರನ್ನೂ ಪ್ರಸ್ತಾಪಿಸದೇ ಕುತೂಹಲ ಮೂಡಿಸಿದೆ.

Recommended Video

Srilanka ಹಿಂಸಾಚಾರ: ರಾಜಕಾರಣಿಗಳನ್ನೇ ಕೊಂದ ರೊಚ್ಚಿಗೆದ್ದ ಪ್ರತಿಭಟನಾಕಾರರು | Oneindia Kannada

"ಪ್ರಜಾತಂತ್ರೀಯ ಪ್ರಕ್ರಿಯೆ ಮೂಲಕ ಅಭಿಪ್ರಾಯ ವ್ಯಕ್ತಪಡಿಸುವ ಶ್ರೀಲಂಕಾ ಜನರ ಹಿತಾಸಕ್ತಿಯು ಭಾರತಕ್ಕೆ ಮಾನದಂಡವಾಗಿರುತ್ತದೆ" ಎಂದು ಭಾರತ ಸರಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಶ್ರೀಲಂಕಾದ ನಿಗೊಂಬೋದಲ್ಲಿ ಘರ್ಷಣೆ; 8 ಸಾವುಶ್ರೀಲಂಕಾದ ನಿಗೊಂಬೋದಲ್ಲಿ ಘರ್ಷಣೆ; 8 ಸಾವು

ಕುತೂಹಲ ಎಂದರೆ, ಪ್ರಜಾತಂತ್ರೀಯ ಪ್ರಕ್ರಿಯೆ ಪದ ಬಳಕೆ ಮೂಲಕ ಭಾರತ ಹಿಂಸಾಚಾರ ಕೃತ್ಯಗಳನ್ನ ಖಂಡಿಸಿ ಶಾಂತಿಯುತ ಪ್ರತಿಭಟನೆಗೆ ಪರೋಕ್ಷವಾಗಿ ಬೆಂಬಲ ಕೊಟ್ಟಂತಿದೆ. ಪ್ರಜಾತಂತ್ರೀಯ ವಿಧಾನ ಬಿಟ್ಟು ತರ್ತು ಪರಿಸ್ಥಿತಿ ಇತ್ಯಾದಿ ಕ್ರಮಗಳಿಂದ ಅಧಿಕಾರ ದುರ್ಬಳಕೆ ಮಾಡಿಕೊಳ್ಳುವ ಸರಕಾರದ ನಿಲುವಿನ ಬಗ್ಗೆ ಸರಕಾರ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದಂತಿದೆ.

 India Express Support to People of Sri Lanka and Democratic Process

"ಶ್ರಿಲಂಕಾದ ನೆರೆ ದೇಶವಾಗಿ ಮತ್ತು ಅದರೊಂದಿಗೆ ಐತಿಹಾಸಿಕ ಸಂಬಂಧ ಹೊಂದಿರುವ ದೇಶವಾಗಿ ಭಾರತ ಲಂಕಾದ ಪ್ರಜಾಪ್ರಭುತ್ವ, ಸ್ಥಿರತೆ ಮತ್ತು ಆರ್ಥಿಕ ಪುನಶ್ಚೇತನಕ್ಕಾಗಿ ಬೆಂಬಲ ನೀಡುತ್ತದೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗಚಿ ನಿನ್ನೆ ಮಂಗಳವಾರ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ನಮ್ಮ ನೆರೆಹೊರೆಯವರಿಗೆ ಮೊದಲ ಆದ್ಯತೆ ಎಂಬ ನಮ್ಮ ನೀತಿಗೆ ಅನುಗುಣವಾಗಿ ಶ್ರೀಲಂಕಾದ ಜನತೆಗೆ 3.5 ಬಿಲಿಯನ್ ಡಾಲರ್ (27 ಸಾವಿರ ಕೋಟಿ ರೂ) ಗೂ ಹೆಚ್ಚು ಮೌಲ್ಯದ ನೆರವನ್ನು ಭಾರತ ಈ ಒಂದು ವರ್ಷದಲ್ಲೇ ನೀಡಿದೆ. ಆಹಾರ, ಔಷಧ ಮೊದಲಾದ ಅಗತ್ಯ ವಸ್ತುಗಳ ಕೊರತೆ ನೀಗಿಸಲು ಭಾರತದ ಜನತೆ ನೆರವು ಒದಗಿಸಿದ್ದಾರೆ," ಎಂದು ಅರಿಂದಮ್ ಬಾಗಚಿ ತಿಳಿಸಿದ್ದಾರೆ.

Sri Lanka Crisis Live Updates:ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು, ಗಲಭೆSri Lanka Crisis Live Updates:ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು, ಗಲಭೆ

ಆದರೆ, ಮೇ 3ರಂದು ಭಾರತೀಯ ರಾಯಭಾರ ಕಚೇರಿ ನೀಡಿದ ಹೇಳಿಕೆ ತುಸು ಭಿನ್ನವಾಗಿತ್ತು. ಅದರಲ್ಲಿ ಶ್ರೀಲಂಕಾ ಸರಕಾರವನ್ನು ಪ್ರಸ್ತಾಪ ಮಾಡಲಾಗಿತ್ತು. ಈಗ ವಿದೇಶಾಂಗ ವ್ಯವಹಾರಗಳ ಸಚಿವಾಲಯ ನೀಡಿರುವ ಹೇಳಿಕೆಯಲ್ಲಿ ಲಂಕಾ ಸರಕಾರವಾಗಲೀ ರಾಜಪಕ್ಸೆ ಕುಟುಂದವರ ಹೆಸರಾಗಲೀ ಪ್ರಸ್ತಾಪಿಸದೇ ಇರುವುದು ಕುತೂಹಲ ಮೂಡಿಸಿದೆ.

 India Express Support to People of Sri Lanka and Democratic Process

ಮಹಿಂದಾ ಭಾರತಕ್ಕೆ ಹಾರಿದರಾ?
ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರಧಾನಿ ಸ್ಥಾನಕ್ಕೆ ಮಹಿಂದಾ ರಾಜಪಕ್ಸೆ ರಾಜೀನಾಮೆ ನೀಡಿದ ಬೆನ್ನಲ್ಲೇ ಶ್ರೀಲಂಕಾದಲ್ಲಿ ಎಲ್ಲೆಡೆ ಹಿಂಸಾಚಾರ ಭುಗಿಲೆದ್ದ ಘಟನೆ ನಡೆಯಿತು. ಇಬ್ಬರು ಸಂಸದರು ಸೇರಿ ಹಲವರು ಬಲಿಯಾದರು. ಅದೇ ಹೊತ್ತಲ್ಲಿ ಮಹಿಂದಾ ರಾಜಪಕ್ಸೆ ಭಾರತಕ್ಕೆ ದೌಡಾಯಿಸಿ ಆಶ್ರಯ ಪಡೆದಿದ್ದಾರೆಂಬ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿತ್ತು.

ಆದರೆ, ಕೊಲಂಬೋದಲ್ಲಿರುವ ಭಾರತದ ರಾಯಭಾರ ಕಚೇರಿ ರಾಜಪಕ್ಸೆ ಭಾರತಕ್ಕೆ ಹೋಗಿರುವ ಸುದ್ದಿಯನ್ನು ನಿರಾಕರಿಸಿದ್ದಾರೆ. ಈ ಸಂಬಂಧ ಭಾರತೀಯ ಹೈಕಮಿಷನ್ ಸ್ಪಷ್ಟಪಡಿಸಿ ಟ್ವೀಟ್ ಮಾಡಿದೆ.

ಆದರೆ, ರಾಜಪಕ್ಸೆ ಕುಟುಂಬದವರು ಕೊಲಂಬೋದಿಂದ ಹೆಲಿಕಾಪ್ಟರುಗಳ ಮೂಲಕ ಹೊರಗೆ ಹೋದ ಬಗ್ಗೆ ಬಹಳ ವರದಿಗಳು ಬಂದಿವೆ. ಮಹಿಂದಾ ರಾಜಪಕ್ಸೆ ಮೊದಲಾದವರು ಹೆಲಿಕಾಪ್ಟರ್ ಮೂಲಕ ನೌಕಾನೆಲೆಯೊಂದಕ್ಕೆ ಹೋಗಿದ್ದಾರೆಂಬ ಸುದ್ದಿಯೂ ಇದೆ. ಈ ಬಗ್ಗೆ ಖಚಿತತೆ ಇಲ್ಲ.

(ಒನ್ಇಂಡಿಯಾ ಸುದ್ದಿ)

English summary
India Tuesday sought to distance itself from the Rajapaksa family-led Sri Lankan government and pledged support to the “people of Sri Lanka”.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X