ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನಿಷ್ಠ 17 ದೇಶಗಳಲ್ಲಿ ಭಾರತದ ರೂಪಾಂತರಿ ಕೊರೊನಾ ಪತ್ತೆ:WHO

|
Google Oneindia Kannada News

ಭಾರತದ ರೂಪಾಂತರಿ ಕೊರೊನಾ ಸೋಂಕು ವಿಶ್ವದ 17ಕ್ಕೂ ಅಧಿಕ ದೇಶಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.

ಈಗಾಗಲೇ ಕೆನಡಾ, ಆಸ್ಟ್ರೇಲಿಯಾ ಸೇರಿ ಹಲವು ರಾಷ್ಟ್ರಗಳು ಭಾರತದಿಂದ ಬರುವ ಪ್ರಯಾಣಿಕ ವಿಮಾನಗಳಿಗೆ ನಿರ್ಬಂಧ ಹೇರಿವೆ.ಈಗಾಗಲೇ ಅನೇಕ ದೇಶಗಳಲ್ಲಿ ರೂಪಾಂತರಿ ಕೊರೊನಾ ಸೋಂಕು ಹರಡುತ್ತಿರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಕೊರೊನಾ ಎದುರಿಸಲು ಭಾರತಕ್ಕೆ ನೆರವು ನೀಡಿದ ರಾಷ್ಟ್ರಗಳ ವಿವರ ಕೊರೊನಾ ಎದುರಿಸಲು ಭಾರತಕ್ಕೆ ನೆರವು ನೀಡಿದ ರಾಷ್ಟ್ರಗಳ ವಿವರ

ಕೋವಿಡ್-19 ನ ಬಿ.1.617 ಕೊರೊನಾ ರೂಪಾಂತರಿ ಮೊದಲಿಗೆ ಭಾರತದಲ್ಲಿ ಪತ್ತೆಯಾದ ನಂತರ ನಿನ್ನೆಯ ಹೊತ್ತಿಗೆ ಕನಿಷ್ಠ 17 ದೇಶಗಳಲ್ಲಿ 1,200 ಕ್ಕೂ ಹೆಚ್ಚು ಅನುಕ್ರಮಗಳಲ್ಲಿ ಪತ್ತೆಯಾಗಿದೆ.

ಇದು ಬೇರೆ ರೂಪಾಂತರಿ ಕೊರೊನಾಕ್ಕಿಂತ ಹೆಚ್ಚು ಅಪಾಯಕಾರಿ ಮತ್ತು ವೇಗವಾಗಿ ಹರಡುತ್ತಿದೆ. ಅವುಗಳಲ್ಲಿ ಅತಿ ಹೆಚ್ಚು ಭಾರತ, ಇಂಗ್ಲೆಂಡ್, ಅಮೆರಿಕ ಮತ್ತು ಸಿಂಗಾಪುರಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸಾಂಕ್ರಾಮಿಕ ಕುರಿತ ವರದಿಯಲ್ಲಿ ತಿಳಿಸಿದೆ.

ರೆಮ್ಡೆಸಿವಿರ್ ಖಾಸಗಿ ವ್ಯಕ್ತಿಗಳಿಗೆ ಸಿಗುವುದು ಹೇಗೆ?; ವಿವರಣೆ ಕೇಳಿದ ಕೋರ್ಟ್ ರೆಮ್ಡೆಸಿವಿರ್ ಖಾಸಗಿ ವ್ಯಕ್ತಿಗಳಿಗೆ ಸಿಗುವುದು ಹೇಗೆ?; ವಿವರಣೆ ಕೇಳಿದ ಕೋರ್ಟ್

ಮೊದಲ ಕೊರೊನಾವೈರಸ್‌ಗಿಂತಲೂ ಹೆಚ್ಚು ಅಪಾಯಕಾರಿ

ಮೊದಲ ಕೊರೊನಾವೈರಸ್‌ಗಿಂತಲೂ ಹೆಚ್ಚು ಅಪಾಯಕಾರಿ

ಕೊರೊನಾ ರೂಪಾಂತರಿ ಮೂದಲ ಕೊರೊನಾ ವೈರಸ್‌ಗಿಂತಲೂ ಹೆಚ್ಚು ಅಪಾಯಕಾರಿಯಾಗಿದ್ದು ಅತಿ ವೇಗವಾಗಿ ಜನರಿಂದ ಜನರಿಗೆ ಹರಡುತ್ತಿದೆ. ಲಸಿಕೆಯಿಂದ ಸ್ವಲ್ಪ ಮಟ್ಟಿಗೆ ರಕ್ಷಣೆಯನ್ನು ಪಡೆಯಬಹುದಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಅಧ್ಯಯನ ಅಗತ್ಯವಿದೆ

ಅಧ್ಯಯನ ಅಗತ್ಯವಿದೆ

ಬಿ.1.617 ಕೊರೊನಾ ರೂಪಾಂತರಿ ಮತ್ತು ಬೇರೆ ರೂಪಾಂತರಿ ಕೊರೋನಾ ಬಗ್ಗೆ ಬಗ್ಗೆ ಇನ್ನಷ್ಟು ಅಧ್ಯಯನದ ಅವಶ್ಯಕತೆಯಿದ್ದು, ಅವುಗಳು ಹೇಗೆ ಹಬ್ಬುತ್ತಿವೆ, ಅವುಗಳ ಹರಡುವಿಕೆಯ ಪರಿಣಾಮವೇನು, ತೀವ್ರತೆ, ಸೋಂಕಿನ ಅಪಾಯಗಳನ್ನು ತುರ್ತಾಗಿ ತಿಳಿದುಕೊಳ್ಳುವ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ವಿಶ್ವದಲ್ಲಿರುವ ಪ್ರಕರಣಗಳು

ವಿಶ್ವದಲ್ಲಿರುವ ಪ್ರಕರಣಗಳು

ವಿಶ್ವದಲ್ಲಿ ಸದ್ಯ 147.7 ಮಿಲಿಯನ್ ಕೇಸುಗಳಿವೆ. ಜಗತ್ತಿನಾದ್ಯಂತ ಕೊರೋನಾ ವೈರಸ್ ಗೆ 3.1 ಮಿಲಿಯನ್ ಗಿಂತಲೂ ಅಧಿಕ ಮಂದಿ ಬಲಿಯಾಗಿದ್ದಾರೆ.

ಭಾರತದಲ್ಲಿ ಮತ್ತೆ 3.60 ಲಕ್ಷ ಕೊರೊನಾ ಸೋಂಕಿತರು

ಭಾರತದಲ್ಲಿ ಮತ್ತೆ 3.60 ಲಕ್ಷ ಕೊರೊನಾ ಸೋಂಕಿತರು

ಭಾರತದಲ್ಲಿ ಕೊರೊನಾ ವೈರಸ್ ಅಬ್ಬರ ಮುಂದುವರೆದಿದ್ದು, ದೇಶದಲ್ಲಿಂದು 3,60,960 ಹೊಸ ಸೋಂಕಿತರು ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1,79,97,267ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ಮಾಹಿತಿ ನೀಡಿದೆ.
ಇನ್ನು ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 3293 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 2,01,187ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ದೈನಂದಿನ ಸೋಂಕಿತರ ಸಂಖ್ಯೆ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 29,78,709ಕ್ಕೆ ಏರಿಕೆಯಾಗಿದೆ.
ಈ ನಡುವೆ ಕಳೆದ 24 ಗಂಟೆಗಳಲ್ಲಿ 2,61,162 ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೂ ಚೇತರಿಸಿಕೊಂಡವರ ಸಂಖ್ಯೆ 1,48,17,371ಕ್ಕೆ ತಲುಪಿದೆ.
ಇನ್ನು ಭಾರತದಲ್ಲಿ ಒಂದೇ ದಿನ 17,23,912 ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು, ಈವರೆಗೂ 28,27,03,789 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

English summary
The World Health Organization said Tuesday that a variant of Covid-19 feared to be contributing to a surge in coronavirus cases in India has been found in over a dozen countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X