ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾ: ಭಾರತ-ಚೀನಾ ವಿದೇಶಾಂಗ ಸಚಿವರ ಮಾತುಕತೆ ಆರಂಭ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 10: ಗಡಿ ವಾಸ್ತವ ನಿಯಂತ್ರಣ ರೇಖೆಯಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ರಷ್ಯಾದ ಮಾಸ್ಕೋದಲ್ಲಿ ಸಭೆ ನಡೆಸುತ್ತಿವೆ.

ಶಾಂಘೈ ಸಹಕಾರ ಸಂಘ (ಎಸ್‌ಸಿಒ) ಸಮಾವೇಶದ ಸಂದರ್ಭದಲ್ಲಿ ಉಭಯ ದೇಶಗಳ ವಿದೇಶಾಂಗ ಸಚಿವರು ಗುರುವಾರ ಮೊದಲ ಬಾರಿ ಮುಖಾಮುಖಿ ಮಾತುಕತೆ ನಡೆಸುತ್ತಿದ್ದಾರೆ.

ಗಾಲ್ವಾನ್ ಸಂಘರ್ಷದ ಬಳಿಕ ಸೋಮವಾರ ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ಪಡೆಗಳ ನಡುವೆ ಮತ್ತೆ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಗಿದೆ. ಭಾರತೀಯ ಸೇನೆಯನ್ನು ಬೆದರಿಸಲು ಚೀನಾ ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಇದರಿಂದಾಗಿ ಎಲ್‌ಎಸಿಯ ಉದ್ವಿಗ್ನತೆ ತೀವ್ರಗೊಂಡಿದೆ.

India China Standoff Meeting In Moscow Has Begun Between Jaishankar And Wang Yi

ಗಡಿಯಲ್ಲಿನ ಭಾರತ-ಚೀನಾ ಸೇನೆಗಳ ಮುಖಾಮುಖಿ ಹಾಗೂ ಜಮಾವಣೆಯನ್ನು ಕಡಿಮೆ ಮಾಡುವ ಮೂಲಕ ಸಹಜ ಸ್ಥಿತಿ ಮರಳಿಸುವ ನಿಟ್ಟಿನಲ್ಲಿ ರಾಜತಾಂತ್ರಿಕ ಹಾಗೂ ಸೇನಾ ಮಟ್ಟದಲ್ಲಿ ಪ್ರಯತ್ನ ನಡೆಯುತ್ತಿದೆ.

ಗಾಲ್ವಾನ್ ಕಣಿವೆ ಸಂಘರ್ಷದ ಬಳಿಕ ಜೂನ್ 23ರಂದು ಜೈಶಂಕರ್ ಮತ್ತು ವಾಂಗ್ ಅವರು ಕೊನೆಯ ಬಾರಿ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿದ್ದರು. ಜೂನ್ 17ರಂದು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು.

Recommended Video

Indo China Clash : ಇದು ಅಪ್ಪಟ ಸುಳ್ಳು, ಇಲ್ಲಿದೆ ಸತ್ಯವಾದ ಕಥೆ | Oneindia Kannada

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಚೀನಾ ರಕ್ಷಣಾ ಸಚಿವ ವೀ ಫೆಂಘೆ ಅವರು ಎಸ್‌ಸಿಒ ಸಮಾವೇಶದ ಸಂದರ್ಭದಲ್ಲಿ ಕಳೆದ ಶುಕ್ರವಾರ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆದರೆ ಇದರಿಂದ ಯಾವುದೇ ಗಮನಾರ್ಹ ಫಲಿತಾಂಶ ಮೂಡಿರಲಿಲ್ಲ.

English summary
India-China standoff meeting between Foreign minister S Jaishankar and Chinese counterpart Wang Yi has begun in Mascow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X