ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ನೆಲದಲ್ಲಿ ನಿಂತು ಲಡಾಖ್ ಬಗ್ಗೆ ಉಲ್ಲೇಖಿಸಿದ ಜೈಶಂಕರ್

|
Google Oneindia Kannada News

ನವದೆಹಲಿ, ಆಗಸ್ಟ್ 19: ಲಡಾಖ್‌ನ ಗಡಿಯಲ್ಲಿ ಬೀಜಿಂಗ್‌ನ ಕ್ರಮಗಳು ಭಾರತ ಮತ್ತು ಚೀನಾ ನಡುವಿನ ಸಂಬಂಧವನ್ನು "ಅತ್ಯಂತ ಕಠಿಣ ಹಂತ"ಕ್ಕೆ ತೆಗೆದುಕೊಂಡು ಹೋಗುತ್ತಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ರಷ್ಯಾದ ತೈಲವನ್ನು ಖರೀದಿಸುವ ಭಾರತದ ನಿರ್ಧಾರದ ಬಗ್ಗೆ ಅವರು ಉಲ್ಲೇಖಿಸಿದ್ದಾರೆ. ಕಳೆದ ವರ್ಷದ ಧಂಗೆ ನಂತರ ಮ್ಯಾನ್ಮಾರ್‌ನ ಜುಂಟಾದೊಂದಿಗಿನ ದೇಶದ ಒಪ್ಪಂದವನ್ನು ಜೈಶಂಕರ್ ಸಮರ್ಥಿಸಿಕೊಂಡರು. ಥಾಯ್ಲೆಂಡ್‌ನ ಚುಲಾಂಗ್‌ಕಾರ್ನ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಸಂವಾದದ ಸಂದರ್ಭದಲ್ಲಿ ಅವರು ಮಾತನಾಡಿದರು.

just in: ಡೊನಾಲ್ಡ್ ಟ್ರಂಪ್ ಭಾರತ ಭೇಟಿಗೆ ಖರ್ಚಾಗಿದ್ದು ಎಷ್ಟು ಗೊತ್ತೆ!?just in: ಡೊನಾಲ್ಡ್ ಟ್ರಂಪ್ ಭಾರತ ಭೇಟಿಗೆ ಖರ್ಚಾಗಿದ್ದು ಎಷ್ಟು ಗೊತ್ತೆ!?

ಚೀನಾ ಮತ್ತು ಭಾರತದ ನಡುವಿನ ಸಂಬಂಧ ಎರಡು ಕಡೆ ಹಿತಾಸಕ್ತಿಗಳನ್ನು ಹೇಗೆ ಸಮನ್ವಯಗೊಳಿಸುತ್ತವೆ ಎಂಬುದರ ಮೇಲೆ ಅವಲಂಬಿತವಾಗಿದೆ. ಭಾರತ ಮತ್ತು ಚೀನಾ ಒಟ್ಟಿಗೆ ಸೇರಿದಾಗ 'ಏಷಿಯನ್ ಸೆಂಚೂರಿ' ಆಗುತ್ತದೆ ಎಂಬ ಚೀನಾದ ನಾಯಕ ಡೆಂಗ್ ಕ್ಸಿಯೋಪಿಂಗ್ ಹೇಳಿಕೆಯನ್ನು ನೆನಪಿಸಿಕೊಂಡರು. "ಆದರೆ ಭಾರತ ಮತ್ತು ಚೀನಾ ಒಟ್ಟಿಗೆ ಬರದಿದ್ದರೆ ಏಷಿಯನ್ ಸೆಂಚೂರಿ ಏನಾಗುತ್ತದೆ ಎಂಬುದು ಕಷ್ಟಕರವಾಗಿರುತ್ತದೆ. ಭಾರತ-ಚೀನಾ ಸಂಬಂಧಗಳು ಎಲ್ಲಿಗೆ ಹೋಗುತ್ತಿವೆ ಎಂಬುದೇ ಇಂದಿನ ದೊಡ್ಡ ಪ್ರಶ್ನೆಗಳಲ್ಲಿ ಒಂದಾಗಿದೆ" ಎಂದು ಹೇಳಿದರು.

India and China will ties going through difficult phase, says Jaishankar

ಲಡಾಖ್ ವಿವಾದದ ಬಗ್ಗೆ ಉಲ್ಲೇಖಿಸಿದ ಜೈಶಂಕರ್:

ಕಳೆದ ಎರಡು ವರ್ಷಗಳಿಂದ ಲಡಾಖ್ ಸೆಕ್ಟರ್‌ನಲ್ಲಿ ಚೀನಾದ ನಡುವಳಿಕೆಗಳು ಬಿಕ್ಕಟ್ಟು ಸೃಷ್ಟಿಸುತ್ತಿವೆ. ನಮ್ಮ ಗಡಿ ಪ್ರದೇಶಗಳಲ್ಲಿ ಚೀನೀಯರು ಏನು ಮಾಡಿದರು ಎಂಬುದನ್ನು ಗಮನಿಸಿದಾಗ ಎರಡು ರಾಷ್ಟ್ರಗಳ ನಡುವಿನ ಸಂಬಂಧವು ಕಷ್ಟಕರ ಹಂತಕ್ಕೆ ತಲುಪಿರುವುದು ಗೊತ್ತಾಗುತ್ತದೆ ಎಂದರು.

ವಾಸ್ತವಿಕ ಗಡಿಯಲ್ಲಿನ ಪರಿಸ್ಥಿತಿಯನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕಿದೆ ಎಂದು ಹೇಳಿದ್ದಾರೆ. ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ಇಲ್ಲದೆ ಒಟ್ಟಾರೆ ಸಂಬಂಧವನ್ನು ಸಾಮಾನ್ಯೀಕರಿಸಲು ಸಾಧ್ಯವಿಲ್ಲ ಎಂದು ಜೈಶಂಕರ್ ಇತ್ತೀಚಿನ ತಿಂಗಳುಗಳಲ್ಲಿ ಪದೇ ಪದೇ ಹೇಳುತ್ತಿದ್ದಾರೆ.

ಇತರ ದೇಶಗಳ ಟೀಕೆಗಳ ಹೊರತಾಗಿಯೂ ರಷ್ಯಾದ ತೈಲವನ್ನು ಖರೀದಿಸುವ ಭಾರತದ ನಿರ್ಧಾರದ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೈಶಂಕರ್, ಈ ವಿಷಯದಲ್ಲಿ ವಿಭಿನ್ನ "ತೀರ್ಪಿನ ಮಾನದಂಡಗಳು" ಮತ್ತು "ಕೆಲವೊಮ್ಮೆ ಎರಡು ರೀತಿಯ ಮಾನದಂಡಗಳು" ಇರುತ್ತವೆ ಎಂದು ಹೇಳಿದರು. "ನಾವು ಕೇವಲ ತೈಲ ಆಮದುದಾರರಲ್ಲ ಮತ್ತು ತೈಲದ ಮೇಲೆ ಯಾವುದೇ ನಿರ್ಬಂಧಗಳಿಲ್ಲ. ಇತರ ದೇಶಗಳು ಮತ್ತು ಪ್ರದೇಶಗಳು ಈ ವಿಷಯದ ಬಗ್ಗೆ ಬಹಳ ಸ್ಪಷ್ಟವಾಗಿದೆ. ಆದರೆ ಕೆಲವು ರಾಷ್ಟ್ರಗಳು ತಮ್ಮ ಸ್ವಂತ ಹಿತಾಸಕ್ತಿಗಳನ್ನು ನೋಡಿಕೊಂಡಿವೆ ಎಂದರು.

"ನಮ್ಮ ಹಿತಾಸಕ್ತಿಗಳನ್ನು ನೋಡಿಕೊಳ್ಳಲು ನಮಗೆ ಅವಕಾಶ ನೀಡುವುದು ಸಮಂಜಸವಾಗಿದೆ ಎಂದು ನಾನು ಭಾವಿಸುತ್ತೇನೆ. ವಿಶೇಷವಾಗಿ ನಾವು ಕಡಿಮೆ ಆದಾಯದ ಸಮಾಜವನ್ನು ಹೊಂದಿರುವುದರಿಂದ ನಮಗೆ ಇಂಧನ ಬೆಲೆಗಳ ಹೆಚ್ಚಳವು ನಿಜವಾಗಿಯೂ ಆತಂಕವನ್ನು ಉಂಟು ಮಾಡುತ್ತದೆ," ಎಂದು ಜೈಶಂಕರ್ ಹೇಳಿದರು.

English summary
India and China will ties going through difficult phase: Why external affairs minister Jaishankar comment like this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X