ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾವೈರಸ್ ಚಿಕಿತ್ಸೆಗೆ ಹೆಚ್ಚು ಆ್ಯಂಟಿಬಯೋಟಿಕ್ಸ್ ಬಳಸಿದರೆ ಸಾವು ಹೆಚ್ಚಾಗುತ್ತದೆ: WHO ಎಚ್ಚರಿಕೆ

|
Google Oneindia Kannada News

ಜಿನೇವಾ, ಜೂನ್ 2: ವಿಶ್ವದಲ್ಲಿ ಕೊರೊನಾವೈರಸ್ ಸೋಂಕು ಹೆಚ್ಚಾಗದಂತೆ ತಪ್ಪಿಸಲು ಪ್ರತಿಜೀವಕಗಳ (ಆ್ಯಂಟಿಬಯೋಟಿಕ್ಸ್) ಬಳಕೆಯು ಹೆಚ್ಚಗಿದೆ. ಈ ಕುರಿತು ಆತಂಕ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ (WHO) ಕೊರೊನಾವೈರಸ್ ವಿರುದ್ಧ ಹೆಚ್ಚುತ್ತಿರುವ ಪ್ರತಿಜೀವಕಗಳ ಬಳಕೆ ಮಾರಕವಾಗಬಹುದು ಎಂದು ಎಚ್ಚರಿಕೆ ನೀಡಿದೆ.

ಪ್ರತಿಜೀವಕ ತೆಗೆದುಕೊಳ್ಳುವ ಅಡ್ಡಪರಿಣಾಮಗಳು ಸಾಂಕ್ರಾಮಿಕ ಸಮಯದಲ್ಲಿ ಮಾತ್ರವಲ್ಲ ಮತ್ತು ಸಾಂಕ್ರಾಮಿಕ ರೋಗ ಮುಗಿದ ನಂತರವೂ ಕಾಣಿಸಿಕೊಳ್ಳಬಹುದು. ಅಂದರೆ ಕೊರೊನಾವೈರಸ್ ಅವಧಿಯಲ್ಲಿ ಪ್ರತಿಜೀವಕಗಳನ್ನು ತೆಗೆದುಕೊಳ್ಳುವುದು ಮಾರಕವಾಗಬಹುದು. ಬ್ಯಾಕ್ಟೀರಿಯಾದ ಸೋಂಕುಗಳಿಗೆ ಚಿಕಿತ್ಸೆ ನೀಡಲು ಈ ಹಿಂದೆ ಬಳಸಿದ ಔಷಧಿಗಳು ಇನ್ನು ಮುಂದೆ ಕಾರ್ಯನಿರ್ವಹಿಸುವುದಿಲ್ಲ ಎಂದು ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟ್ರೇಡ್ಸ್ ಅಧಾನೊಮ್ ಘೆಬ್ರೆಯಾಸಸ್ ಹೇಳಿದ್ದಾರೆ.

ಕೊವಿಡ್ 19: ಭಾರತದಲ್ಲಿ 'ರೆಮ್‌ಡೆಸಿವಿರ್' ಔಷಧಕ್ಕೆ ಸಿಕ್ಕಿತು ಅನುಮತಿಕೊವಿಡ್ 19: ಭಾರತದಲ್ಲಿ 'ರೆಮ್‌ಡೆಸಿವಿರ್' ಔಷಧಕ್ಕೆ ಸಿಕ್ಕಿತು ಅನುಮತಿ

ಪತ್ರಿಕಾಗೋಷ್ಠಿಯಲ್ಲಿ ಡೈರೆಕ್ಟರ್ ಜನರಲ್ ಟ್ರೆಡೋಸ್‌ ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಪ್ರತಿಜೀವಕಗಳ ಬಳಕೆ ಹೆಚ್ಚಾಗಿದೆ, ಇದು ಬ್ಯಾಕ್ಟೀರಿಯಾದ ಪ್ರತಿರಕ್ಷೆಯನ್ನು ಹೆಚ್ಚಿಸುತ್ತದೆ ಮತ್ತು ರೋಗವು ಶೀಘ್ರವಾಗಿ ಗುಣವಾಗುವುದಿಲ್ಲ ಮತ್ತು ಇದು ಸಾವಿನ ಸಂಖ್ಯೆಯನ್ನು ಹೆಚ್ಚಿಸುತ್ತದೆ ಎಂದರು.

 Increased Use Of Antibiotics Amid Covid-19 Can Lead To More Deaths: WHO

ಕೊರೊನಾ ವೈರಸ್ 'ಅಸ್ತಿತ್ವದಲ್ಲಿಲ್ಲ' ಎಂದ ಇಟಲಿಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆಕೊರೊನಾ ವೈರಸ್ 'ಅಸ್ತಿತ್ವದಲ್ಲಿಲ್ಲ' ಎಂದ ಇಟಲಿಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಕೊರೊನಾವೈರಸ್ನ ಎಲ್ಲಾ ರೋಗಿಗಳಿಗೆ ಸೋಂಕಿನ ವಿರುದ್ಧ ಹೋರಾಡಲು ಪ್ರತಿಜೀವಕಗಳ ಅಗತ್ಯವಿಲ್ಲ ಎಂದು ಟ್ರೆಡೋಸ್ ತಿಳಿಸಿದರು. ಅಲ್ಲದೆ ಪ್ರತಿಜೀವಕಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಹೊಸ ಮಾರ್ಗಸೂಚಿಗಳನ್ನು ಸಹ ಬಿಡುಗಡೆ ಮಾಡಿದೆ. ಅದರಂತೆ ಕೋವಿಡ್-19 ರೋಗಿಗಳ ಮೇಲೆ ಪ್ರತಿಜೀವಕ ಚಿಕಿತ್ಸೆ ಅಥವಾ ರೋಗನಿರೋಧಕವನ್ನು ಬಳಸದಂತೆ ಸಂಸ್ಥೆ ಸೂಚಿಸಿದೆ.

English summary
The World Health Organization on Monday said that the increased use of antibiotics during Covid-19 can be dangerous and can lead to more deaths.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X