ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಯೋಲ್‌ನಲ್ಲಿ ಕೊರೊನಾ ಸೋಂಕು ಹೆಚ್ಚಳ: ದಕ್ಷಿಣ ಕೊರಿಯಾಗೆ ಆತಂಕ

|
Google Oneindia Kannada News

ಸಿಯೋಲ್, ಆಗಸ್ಟ್ 21: ದಕ್ಷಿಣ ಕೊರಿಯಾ ಸಿಯೋಲ್‌ನಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿವೆ. ಒಂದೇ ದಿನ ಸಿಯೋಲ್‌ ಒಂದರಲ್ಲೇ 324 ಪ್ರಕರಣಗಳು ಪತ್ತೆಯಾಗಿವೆ.

Recommended Video

Sumalatha ಸೊಂಟಕ್ಕೆ ಕೈ ಹಾಕಿದ Yediyurappa | Onendia Kannada

ಬಹುತೇಕ ಪ್ರಕರಣಗಳು ಅತಿ ಹೆಚ್ಚು ಜನಸಂಖ್ಯೆಯಿರುವ ಸಿಯೋಲ್‌ನಲ್ಲಿ ಇದೆ. ಶಾಲೆ, ಚರ್ಚ್, ರೆಸ್ಟೋರೆಂಟ್, ಕಚೇರಿಗಳು ಸೋಂಕು ಹರಡುವ ಪ್ರಮುಖ ಸ್ಥಳಗಳಾಗಿವೆ.ಶುಕ್ರವಾರ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗಿವೆ. ಬುಸನ್, ಗ್ವಾಂಗ್ಜು, ಡೇಜಿಯಾನ್, ಸೀಜಾಂಗ್, ಡೇಗೂನಲ್ಲಿ ಹೆಚ್ಚು ಪ್ರಕರಣಗಳಿವೆ. ಒಟ್ಟು 16,6670 ಪ್ರಕರಣಗಳಿವೆ. 309 ಮಂದಿ ಸಾವನ್ನಪ್ಪಿದ್ದಾರೆ.

ಕೊರೊನಾ ಹೋರಾಟ ಗೆದ್ದಿದ್ದ ದಕ್ಷಿಣ ಕೊರಿಯಾ ಮತ್ತೆ ಅಕ್ಷರಶಃ ಬೆಚ್ಚಿ ಬೀಳಿತು!ಕೊರೊನಾ ಹೋರಾಟ ಗೆದ್ದಿದ್ದ ದಕ್ಷಿಣ ಕೊರಿಯಾ ಮತ್ತೆ ಅಕ್ಷರಶಃ ಬೆಚ್ಚಿ ಬೀಳಿತು!

ಸಿಯೋಲ್‌ನಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗಲು ಚರ್ಚ್‌ಗಳು ಮುಖ್ಯ ಕಾರಣ, ನೈಟ್‌ ಕ್ಲಬ್, ಕರಾವೋಕ್ ಬಾರ್ಸ್, ಬಫೆಟ್ ರೆಸ್ಟೋರೆಂಟ್‌ಗಳು, ಕಂಪ್ಯೂಟರ್‌ ಗೇಮಿಂಗ್ ಕೆಫೆಗಳನ್ನು ಮತ್ತೆ ಬಂದ್ ಮಾಡಲಾಗಿದೆ.

In Seoul Covid-19 Cases Are High, Appears To Spread Around South Korea

ಜಿಯಾಂಗ್‌ನಲ್ಲಿ ಪ್ರತಿನಿತ್ಯ 50 ಸಾವಿರ ಪರೀಕ್ಷೆಗಳನ್ನು ಮಾಡಿಸಲಾಗುತ್ತಿದೆ. ಈ ಮೊದಲು ದಿನಕ್ಕೆ 20 ಸಾವಿರ ಟೆಸ್ಟ್‌ಗಳನ್ನು ಮಾತ್ರ ಮಾಡಲಾಗುತ್ತಿತ್ತು.

ಒಂದು ಹಂತದಲ್ಲಿ ಕೊರೊನಾ ವೈರಸ್ ಕೇಂದ್ರವಾಗಿದ್ದ ದಕ್ಷಿಣ ಕೊರಿಯಾ, ವಿಶಿಷ್ಟ ವೈದ್ಯಕೀಯ ಪ್ರಯೋಗವನ್ನು ನಡೆಸುವ ಮೂಲಕ ವೈರಾಣುವನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿತ್ತು.

ಏಕಕಾಲದಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಸೋಂಕಿತರನ್ನು ಪರೀಕ್ಷೆಗೆ ಒಳಪಡಿಸುವುದು ಮತ್ತು 24ಗಂಟೆಯಲ್ಲಿ ಪರೀಕ್ಷಾ ವರದಿಯನ್ನು ತರಿಸಿ, ಸೂಕ್ತ ಚಿಕಿತ್ಸೆಯನ್ನು ನೀಡುವ ಮೂಲಕ, ಒಂದು ಹಂತಕ್ಕೆ ಕೊರೊನಾ ವಿರುದ್ದ ದಕ್ಷಿಣ ಕೊರಿಯಾ ಗೆದ್ದಿತ್ತು. ಎರಡು ತಿಂಗಳ ಹಿಂದೆ ಅತಿಹೆಚ್ಚು ಸೋಂಕಿತರನ್ನು ಹೊಂದಿದ್ದ ದಕ್ಷಿಣ ಕೊರಿಯಾ, ಮೊನ್ನೆಮೊನ್ನೆಯವರೆಗೆ ಸುಮಾರು ಐದು ಲಕ್ಷಕ್ಕೂ ಹೆಚ್ಚು ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿತ್ತು.

English summary
South Korea added its most new virus cases in months on Friday, driven by a surge around the capital that appears to be spreading nationwide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X