ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌದಿ ಅರೇಬಿಯಾದಲ್ಲಿ ಮುಸ್ಲಿಂ ಮಹಿಳೆ ಇಂದಿಗೂ ಪಂಜರ ಹಕ್ಕಿ

By ಮಕ್ಸೂದ್
|
Google Oneindia Kannada News

ರಿಯಾದ್, ಜೂನ್ 25 : ಕೇವಲ ಕಾರನ್ನು ಓಡಿಸಲು ಪರವಾನಗಿ ಸಿಕ್ಕಿದೆಯೆಂದ ಮಾತ್ರಕ್ಕೆ, ಕಟ್ಟಳೆಯ ಸಂಕೋಲೆಯಲ್ಲಿ ಸಿಲುಕಿರುವ ಸೌದಿ ಅರೇಬಿಯಾದ ಮಹಿಳೆಯರಿಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿದೆಯೆಂತಲ್ಲ. ಈ ಶ್ರೀಮಂತ ರಾಷ್ಟ್ರದಲ್ಲಿ ನಿಬಂಧನೆಗಳ ನೆರಳಿನಡಿಯಲ್ಲಿಯೇ ಮಹಿಳೆಯರು ಬದುಕಬೇಕಾಗಿದೆ.

ಮಹಿಳೆಯರಿಗೆ ಕಾರ್ ಡ್ರೈವ್ ಮಾಡಲು ಅನುಮತಿ ನೀಡಿರುವುದು ಆ ರಾಷ್ಟ್ರದ ಪಾಲಿಗೆ ಕ್ರಾಂತಿಕಾರಕ ಮತ್ತು ಐತಿಹಾಸಿಕ ನಿರ್ಧಾರ ಆಗಿರಬಹುದು. ಆದರೆ, ಇತರ ಮುಸ್ಲೀಮೇತರ ರಾಷ್ಟ್ರಗಳಿಗೆ ಹೋಲಿಸಿದರೆ ಸೌದಿ ಅರೇಬಿಯಾ ಇನ್ನೂ ಬಹುದೂರ ಸಾಗಬೇಕಾಗಿದೆ. ಮುಸ್ಲಿಂ ಮಹಿಳೆ ಇಂದಿಗೆ ಕೂಡ ಪಂಜರದ ಹಕ್ಕಿಯಾಗಿದ್ದಾರೆ.

ಸೌದಿ ಅರೇಬಿಯಾದ ಸಾರಿಗೆ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೌದಿ ಅರೇಬಿಯಾದ ಸಾರಿಗೆ ಕ್ಷೇತ್ರದಲ್ಲಿ ಹೊಸ ಇತಿಹಾಸ

ಇಲ್ಲಿಯತನಕ, ಸೌದಿ ಮಹಿಳೆಯರು ಎಲ್ಲಿಯಾದರೂ ಕಾರಿನಲ್ಲಿ ಸಂಚರಿಸಬೇಕಾಗಿದ್ದರೆ, ಗಂಡ, ತಂದೆ, ಸಹೋದರ ಅಥವಾ ಡ್ರೈವರ್ ಅವರನ್ನೇ ಅವಲಂಬಿಸಬೇಕಾಗಿತ್ತು. ಈಗ ಆ ಅವಲಂಬನೆಯಿಂದ ಸೌದಿ ಮಹಿಳೆಯರು ಮುಕ್ತರಾದಂತಾಗಿದೆ. ಆದರೆ, ನೆನಪಿಡಿ. ಇನ್ನೂ ಹಲವಾರು ಸಂಗತಿಗಳು ಮಹಿಳೆಯರನ್ನು ಕಟ್ಟಿಹಾಕಿವೆ. ಅದರತ್ತ ಒಂದು ನೋಟ ಇಲ್ಲಿದೆ.

ನಮ್ಮ ಭಾರತದಲ್ಲಿ ಮುಸ್ಲಿಂ ಮಹಿಳೆಯರಿಗೆ ಸ್ವಾತಂತ್ರ್ಯವಿಲ್ಲ ಎಂದು ಬೊಬ್ಬೆ ಹೊಡೆಯುವವರು ಸೌದಿ ಅರೇಬಿಯಾದಲ್ಲಿ ಮುಸ್ಲಿಂ ಮಹಿಳೆಯರಿಗೆ ಎಂಥ ಸ್ಥಿತಿಯಿದೆ ಎಂಬುದನ್ನು ನೋಡಬೇಕು. ಅಲ್ಲಿ ಅಕ್ಷರಶಃ ಮುಸ್ಲಿಂ ಮಹಿಳೆಯರು ಪುರುಷರ ಮೇಲೆ ಎಲ್ಲಕ್ಕೂ ಅವಲಂಬಿಸಬೇಕಾಗಿದೆ. ಪಾಸ್ಪೋರ್ಟ್ ಪಡೆಯಲು, ವೈದ್ಯಕೀಯ ಚಿಕಿತ್ಸೆ ಪಡೆಯಲು, ವಿಚ್ಛೇದನ ಪಡೆಯಲು ಕೂಡ ಪುರುಷರ ಅನುಮತಿಯಿಲ್ಲದೆ ಅವರು ಏನನ್ನೂ ಮಾಡುವಂತಿಲ್ಲ. ಇದು ಎಂದು ಬದಲಾಗುವುದೋ?

ವಿಚ್ಛೇದನಕ್ಕೂ ಬೇಕು ಪುರುಷರ ಅನುಮತಿ

ವಿಚ್ಛೇದನಕ್ಕೂ ಬೇಕು ಪುರುಷರ ಅನುಮತಿ

ಮದುವೆ ಮತ್ತು ವಿಚ್ಛೇದನ ಎಂಬುದು ಮುಸ್ಲಿಂ ಸಮುದಾಯದಲ್ಲಿ ಕ್ಲಿಷ್ಟಕರವಾದದ್ದೇ. ಸೌದಿ ಅರೇಬಿಯಾದಲ್ಲಿ ಇದು ಇನ್ನೂ ಸಂಕೀರ್ಣವಾಗಿದೆ. ಅದೇನೆಂದರೆ, ಮುಸ್ಲಿಂ ಮಹಿಳೆಯರು ಮದುವೆಯಾಗಬೇಕಾದರೆ ಅಥವಾ ಗಂಡನಿಂದ ವಿಚ್ಛೇದನ ಪಡೆಯಬೇಕಾದರೆ ಕುಟುಂಬದಲ್ಲಿರುವ ಪುರುಷ ಪೋಷಕರ ಅನುಮತಿ ಪಡೆದೇ ಮದುವೆಯಾಗಬಹುದು ಅಥವಾ ವಿಚ್ಛೇದನ ಪಡೆದುಕೊಳ್ಳಬಹುದು. ಒಂದು ವೇಳೆ ವಿಚ್ಛೇದನೆಗೆ ಮುಸ್ಲಿ ಮಹಿಳೆಯರು ಒಳಪಟ್ಟರೆ, ಮಗನ ವಯಸ್ಸು 7 ಮತ್ತು ಮಗಳ ವಯಸ್ಸು 9 ಇದ್ದರೆ, ಅವರು, ಅಮ್ಮನ ಸುಪರ್ದಿಯಲ್ಲಿರುವಂತಿಲ್ಲ.

ಪುರುಷರೊಂದಿಗೆ ಸಾಮಾಜಿಕ ಸಂಪರ್ಕ ಹೊಂದುವಂತಿಲ್ಲ

ಪುರುಷರೊಂದಿಗೆ ಸಾಮಾಜಿಕ ಸಂಪರ್ಕ ಹೊಂದುವಂತಿಲ್ಲ

ಇದಕ್ಕಿಂತಲೂ ಅನಾಹುತಕಾರಿಯಾದ ಸಂಕೋಲೆಯೇನೆಂದರೆ, ಸೌದಿ ಅರೇಬಿಯಾದ ಮಹಿಳೆಯರು ತಮ್ಮ ಕುಟುಂಬದ ಹೊರತಾಗಿ ಇತರ ಪುರುಷರೊಡನೆ ಯಾವುದೇ ಸಾಮಾಜಿಕ ಸಂಪರ್ಕವನ್ನು ಹೊಂದುವಂತಿಲ್ಲ. ಹೊಂದಿರುವುದು ತಿಳಿದುಬಂದರೆ, ವಿಚಾರಣೆಯಾಗಿ ಅವರನ್ನು ಜೈಲಿಗೆ ಕೂಡ ತಳ್ಳಬಹುದಾಗಿದೆ. ಈ ಕಟ್ಟಳೆಯ ಮುಂದೆ ಕಾರು ಓಡಿಸಲು ಪರವಾನಗಿ ನೀಡಿರುವುದು ಯಾವ ಲೆಕ್ಕ? ಅಲ್ಲದೆ, ಪುರುಷ ಪೋಷಕರ ಅನುಮತಿಯಿಲ್ಲದೆ ಪಾಸ್ಪೋರ್ಟ್ ಪಡೆಯುವಂತಿಲ್ಲ, ಬ್ಯಾಂಕ್ ಖಾತೆ ತೆರೆಯುವಂತಿಲ್ಲ, ವೈದ್ಯಕೀಯ ಚಿಕಿತ್ಸೆಯನ್ನೂ ಪಡೆಯುವಂತಿಲ್ಲ.

ಹೋಟೆಲುಗಳಲ್ಲಿ ಮುಕ್ತವಾಗಿ ತಿನ್ನುವಂತೆ ಇಲ್ಲ

ಹೋಟೆಲುಗಳಲ್ಲಿ ಮುಕ್ತವಾಗಿ ತಿನ್ನುವಂತೆ ಇಲ್ಲ

ಈ ಇಸ್ಲಾಮ್ ರಾಷ್ಟ್ರದಲ್ಲಿ ಮುಸ್ಲಿಂ ಮಹಿಳೆಯರು ಹೋಟೆಲುಗಳಲ್ಲಿ ಮುಕ್ತವಾಗಿ ತಿನ್ನುವಂತೆಯೂ ಇಲ್ಲ. ರೆಸ್ಟಾರೆಂಟ್ ಗಳಲ್ಲಿ ಕುಟುಂಬಗಳಿಗೆ ಪ್ರತ್ಯೇಕವಾದ ಸ್ಥಳ ಕಾಯ್ದಿರಿಸಿದ್ದರೆ ಮಾತ್ರ ಮುಸ್ಲಿಂ ಮಹಿಳೆಯರು ಅಂಥ ಹೋಟೆಲುಗಳಲ್ಲಿ ಹೊಟ್ಟೆಗೇನಾದರೂ ಹಾಕಿಕೊಳ್ಳಬಹುದು. ಪ್ರತ್ಯೇಕ ಸ್ಥಳದಲ್ಲಿ ಅಲ್ಲದೆ ಬೇರೆಡೆ ತಿಂದರೆ ಅದು ಕೂಡ ಅಪರಾಧವಾಗುತ್ತದೆ. ಇಲ್ಲಿಯೂ ಕೂಡ ಮಹಿಳೆಯರು ಅಡುಗೆ ಮನೆಗೆ ಸೀಮಿತ.

ಮುಸ್ಲಿಂ ಮಹಿಳೆ ಸಾರ್ವಜನಿಕವಾಗಿ ಮುಖ ತೋರುವಂತಿಲ್ಲ

ಮುಸ್ಲಿಂ ಮಹಿಳೆ ಸಾರ್ವಜನಿಕವಾಗಿ ಮುಖ ತೋರುವಂತಿಲ್ಲ

ಸೌದಿ ಅರೇಬಿಯಾದಲ್ಲಿ ಮುಸ್ಲಿಂ ಮಹಿಳೆಯರು, ಈ ಅತ್ಯಾಧುನಿಕ ಕಾಲದಲ್ಲಿ ಕೂಡ, ಶಿರದಿಂದ ಪಾದದವರೆಗೆ 'ಅಬಾಯಾ' ಅಥವಾ ಸ್ಕಾರ್ಫ್ ಅಥವಾ ಬುರ್ಖಾ ತೊಡಲೇಬೇಕು. ಇನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಮುಸ್ಲಿಂ ಮಹಿಳೆಯರು ಬುರ್ಖಾದಿಂದ ಮುಖವನ್ನು ಕೂಡ ಸಂಪೂರ್ಣವಾಗಿ ಮುಚ್ಚಿಕೊಳ್ಳಬೇಕು. ಆದರೆ, ರಿಯಾದ್ ನಂಥ ಸಂಪ್ರದಾಯದಿಂದ ಸ್ವಲ್ಪವಾಗಿ ಹೊರಬರುತ್ತಿರುವ ನಗರಗಳಲ್ಲಿ ಮಹಿಳೆಯರು ಮುಖ ತೋರಿಸುತ್ತಿದ್ದಾರೆ.

ಮುಸ್ಲೀಮೇತರ ಪುರುಷನನ್ನು ಮದುವೆಯಾಗುವಂತಿಲ್ಲ

ಮುಸ್ಲೀಮೇತರ ಪುರುಷನನ್ನು ಮದುವೆಯಾಗುವಂತಿಲ್ಲ

ಮುಸ್ಲಿಂ ಧಾರ್ಮಿಕ ಕಟ್ಟಳೆಯ ಪ್ರಕಾರ ಮುಸ್ಲಿಂ ಮಹಿಳೆ ಮುಸ್ಲೀಮೇತರ ಪುರುಷನನ್ನು ಮದುವೆಯಾಗುವಂತೆಯೇ ಇಲ್ಲ. ಇದು ಸೌದಿ ಅರೇಬಿಯಾದಲ್ಲಿ ಕಡ್ಡಾಯವಾಗಿದೆ. ಅಲ್ಲದೆ, ಸುನ್ನಿ ಮಹಿಳೆ ಶಿಯಾ ಪುರುಷನನ್ನು ಅಥವಾ ಕಮ್ಯೂನಿಸ್ಟ್ ಹಿನ್ನೆಲೆಯ ಪುರುಷನನ್ನು ಕೂಡ ಮದುವೆಯಾಗುವಂತಿಲ್ಲ. ಅಲ್ಲದೆ, ಶಿಯಾ ವಂಶಪಾರಂಪರ್ಯ ಕಾನೂನಿನ ಪ್ರಕಾರ, ಹಿಂದೂಗಳಂತೆ ಪುರುಷರಿಗೆ ಸರಿಸಮಾನ ಆಸ್ತಿ ಸಿಗುವುದಿಲ್ಲ. ಸಹೋದರರಿಗೆ ಸಿಗುವ ಅರ್ಧದಷ್ಟು ಮಾತ್ರ ಆಸ್ತಿ ಮಹಿಳೆಯರಿಗೆ ದಕ್ಕುತ್ತದೆ.

ಕಾನೂನಿನ ಕಟಕಟೆಯಲ್ಲಿಯೂ ಹಲವಾರು ಕಟ್ಟಳೆ

ಕಾನೂನಿನ ಕಟಕಟೆಯಲ್ಲಿಯೂ ಹಲವಾರು ಕಟ್ಟಳೆ

ಕಾನೂನಿನ ಕಟಕಟೆಯಲ್ಲಿಯೂ ಹಲವಾರು ಕಟ್ಟಳೆಗಳು ಮುಸ್ಲಿಂ ಮಹಿಳೆಯರ ಸ್ವಾತಂತ್ರ್ಯವನ್ನು ಕಿತ್ತುಕೊಂಡಿವೆ. ಒಬ್ಬ ಪುರುಷ ನೀಡುವ ಹೇಳಿಕೆ ಇಬ್ಬರು ಮಹಿಳೆಯರು ನೀಡುವ ಹೇಳಿಕೆಗಳಿಗೆ ಸಮಾನ. ಒಬ್ಬ ಅಪ್ರಾಪ್ತನಿಗೆ ನೀಡುವ ಸ್ಥಾನಮಾನ ಮುಸ್ಲಿಂ ಮಹಿಳೆಗೆ ಕಾನೂನಿನಡಿಯಲ್ಲಿ ದೊರಕುತ್ತದೆ. ಯಾವ ಹಕ್ಕೂ ಇಲ್ಲ, ಹೇಳಿಕೆಗಳಿಗೆ ಅಷ್ಟು ಪ್ರಾಧಾನ್ಯತೆಯೂ ಇಲ್ಲ. ಹಾಗಾಗಿ, ಮುಸ್ಲಿಂ ಮಹಿಳೆಯರಿಗೆ ಅವರ ಮೇಲೆಯೇ ಹೆಚ್ಚಿನ ಅಧಿಕಾರ ಇರುವುದಿಲ್ಲ.

English summary
Though Saudi Arabia has given permission for women to drive car, there are several things which Saudi women cannot do without the permission of male in the family. What are they? Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X