• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಮರ್ಹಬಾ ನಮೋ' ಎಂದ ಮಧ್ಯಪ್ರಾಚ್ಯದ ಜನತೆ

By Mahesh
|

ದುಬೈ, ಆಗಸ್ಟ್ 18: ಭಾರತ ಹಾಗೂ ಪಾಕಿಸ್ತಾನದ ಕ್ರಿಕೆಟ್ ಮ್ಯಾಚ್ ಅಥವಾ ಆಸ್ಟ್ರೇಲಿಯಾ ವಿರುದ್ಧ ಮಾಸ್ಟರ್ ಬ್ಲಾಸ್ಟರ್ ಸಚಿನ್ ಇನ್ನಿಂಗ್ಸ್ ನಡೆದಾಗ ಇದ್ದ ವಾತಾವರಣವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮರು ಸೃಷ್ಟಿ ಮಾಡಿದರು.

ಯುನೈಟೆಡ್ ಅರಬ್ ಎಮಿರೇಟ್ಸ್ ಎರಡು ದಿನಗಳ ಪ್ರವಾಸದ ವೇಳೆ ನರೇಂದ್ರ ಮೋದಿ ಅವರು ಸಾಕಷ್ಟು ಭರವಸೆಗಳನ್ನು ಮೂಡಿಸಿದ್ದಾರೆ. ಪ್ರಿನ್ಸ್ ಮಹಮ್ಮದ್ ಬಿನ್ ಜಾಯೇದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರ ಆದಾರಾತಿಥ್ಯಕ್ಕೆ ಮನ ಸೋತಿರುವುದಾಗಿ ಮೋದಿ ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.[ಮೋದಿಗಾಗಿ ಸ್ಪೆಷಲ್ ಡಿನ್ನರ್, ಸಂಜೀವ್ ಕಪೂರ್ ಕೈಚಳಕ]

ಶೇಕ್ ಮೊಹಮ್ಮದ್ ಬಿನ್ ರಶೀದ್ ಅಲ್ ಮುಕ್ತೊಮ್ ಅವರ ಫ್ಯಾಷಸ್ ಆಫ್ ಥಾಟ್ ಪುಸ್ತಕದ ಹಿಂದಿ ಆವೃತ್ತಿಯನ್ನು ಪಡೆದುಕೊಂಡಿದ್ದರ ಬಗ್ಗೆ , ಅಕ್ಬರ್ ಸಾಹೇಬ್ ಅವರ ಕಲಾಕೃತಿ ಬಗ್ಗೆ ಎಂದು ಮೋದಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ 50 ಸಾವಿರ ಭಾರತೀಯರನ್ನು ಉದ್ದೇಶಿಸಿ ಪ್ರಖರವಾದ ಭಾಷಣ ಮಾಡಿ, ಎಲ್ಲರನ್ನು ಮೋಡಿಗೊಳಗಾಗಿಸಿದರು. [ಭಾಷಣದ ಮುಖ್ಯಾಂಶ ಇಲ್ಲಿದೆ ಓದಿ] ಮರ್ಹಬಾ ನಮೋ ಎಂಬ ಟ್ಯಾಗ್ ಟ್ರೆಂಡಿಂಗ್ ನಲ್ಲಿತ್ತು, ಟ್ವೀಟ್ಸ್, ಚಿತ್ರಗಳು ಇಲ್ಲಿವೆ...

#MarhabaNamo ಟ್ರೆಂಡಿಂಗ್ ಟ್ವೀಟ್ಸ್

#MarhabaNamo ಟ್ರೆಂಡಿಂಗ್ ಟ್ವೀಟ್ಸ್

ದುಬೈನಲ್ಲಿ ಭಾರತೀಯರಿಗೆ ದೇವರಂತೆ ಕಂಡ ನಮೋ. Marhaba ಎಂದರೆ God is love ಎಂಬ ಮೂಲಾರ್ಥವಿದೆ. ಆದರೆ, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಹಲೋ ಎಂದು ಸಾಮಾನ್ಯವಾಗಿ ಬಳಸಲಾಗುತ್ತದೆ. ನರೇಂದ್ರ ಮೋದಿ ಅವರಿಗೆ ನೀಡಿದ ಸ್ವಾಗತ ಎನ್ನಬಹುದು.

ಸ್ಟೇಡಿಯಂನಲ್ಲಿ ಮಿನಿ ವಿಶ್ವ ಕಂಡ ಮೋದಿ

ಸ್ಟೇಡಿಯಂನಲ್ಲಿ ಮಿನಿ ವಿಶ್ವ ಕಂಡ ಮೋದಿ

ಸ್ಟೇಡಿಯಂನಲ್ಲಿ ನಾನು ಮಿನಿ ವಿಶ್ವ ಕಾಣುತ್ತಿದ್ದೇನೆ, ದುಬೈ ಮಿನಿ ಭಾರತವಾಗಿರುವುದು ನಿಜ. ಅದರೆ, ವಿಶ್ವದೆಲ್ಲೆಡೆಯಿಂದ ಜನ ಈ ಸುಡು ಬಿಸಿಲಿನಲ್ಲೂ ಬದುಕು ಹಸನಾಗಿಸಲು ಬರುತ್ತಾರೆ ಎಂದರೆ ಇಲ್ಲಿನ ಜನರ ಆದರಾತಿಥ್ಯವೇ ಕಾರಣ ಎಂದ ಮೋದಿ.

ಮೋದಿ ಕಾರ್ಯಕ್ರಮದಲ್ಲಿ ದಾವಣಗೆರೆ ಮೂಲದ ಅರುಣ್

ಮೋದಿ ಕಾರ್ಯಕ್ರಮದಲ್ಲಿ ದಾವಣಗೆರೆ ಮೂಲದ ಅರುಣ್

ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಖುಷಿಯಲ್ಲಿ ದಾವಣಗೆರೆ ಮೂಲದ ಅರುಣ್ ಅವರು ಫೇಸ್ ಬುಕ್ ನಲ್ಲಿ ಚಿತ್ರ ಹಾಕಿಕೊಂಡಿದ್ದಾರೆ.

ಮಾತುಕತೆಯಿಂದ ಎಲ್ಲವೂ ಸಾಧ್ಯ ಎಂದ ಮೋದಿ

ಮಾತುಕತೆಯಿಂದ ಎಲ್ಲವೂ ಸಾಧ್ಯ ಎಂದ ಮೋದಿ

ಮಾತುಕತೆಯಿಂದ ಎಲ್ಲವೂ ಸಾಧ್ಯ, ನಾಗಾ ಬಂಡುಕೋರರ ಜೊತೆ ಸಂಧಾನ ಸಾಧ್ಯವಾಗಿದ್ದು ಶಾಂತಿ ಮಾತುಕತೆಯಿಂದ ಮಾತ್ರ, ನೆರೆ ಹೊರೆ ರಾಷ್ಟ್ರಗಳ ಕಷ್ಟ ಸುಖಕ್ಕೆ ಆಗಬೇಕಾದ್ದು ನಮ್ಮ ಕರ್ತವ್ಯ ಎಂದ ಮೋದಿ ಹೇಳಿದರು.

ಸ್ಟೇಡಿಯಂಗೆ ಹರಿದು ಬಂದ ಜನಸಾಗರ

ಸ್ಟೇಡಿಯಂಗೆ ಹರಿದು ಬಂದ ಜನಸಾಗರದ ಚಿತ್ರ.

ನಮಾಮಿ ಗಂಗೆ, ವಂದೇ ಮಾತರಂ ನಮೋ

ನಮಾಮಿ ಗಂಗೆ, ವಂದೇ ಮಾತರಂ ನಮೋ ಕಂಡು ಪುಳಕಿತರಾದ ಭಾರತೀಯ ಮೂಲದ ದುಬೈ ನಿವಾಸಿಗಳು.

ಭಾರತದಿಂದ ಅತಿ ಹೆಚ್ಚು ವಿಮಾನ ದುಬೈಗೆ

ಭಾರತದಿಂದ ಅತಿ ಹೆಚ್ಚು ವಿಮಾನ ದುಬೈಗೆ ಸಂಚರಿಸುತ್ತದೆ ಎಂಬ ಮೋದಿ ಅವರ ಮಾತಿಗೆ ಪ್ರತಿಕ್ರಿಯೆ. 700 ವಿಮಾನಗಳು ವಾರಕ್ಕೆ ಬರುತ್ತದೆ ನಿಜ. ಅದರೆ, 34 ವರ್ಷದಿಂದ ಯಾವ ಪ್ರಧಾನಿಯೂ ನಿಮ್ಮಂತೆ ನಮ್ಮನ್ನು ನೋಡಲು ಬರಲಿಲ್ಲ.

ಕೇರಳಿಗರಿಗೆ ಮಲೆಯಾಳಂನಲ್ಲಿ ಶುಭಹಾರೈಕೆ

ದುಬೈನಲ್ಲಿರುವ ಕೇರಳಿಗರಿಗೆ ಹೊಸ ವರ್ಷದ ಶುಭಹಾರೈಕೆಯನ್ನು ಮಲೆಯಾಳಂನಲ್ಲಿ ಹೇಳಿದ ಮೋದಿ. ಇದರಿಂದ ಥ್ರಿಲ್ ಆದ ಮಲೆಯಾಳಿಗಳು.

ಸಚಿನ್ ಬಿಟ್ಟರೆ ಸ್ಟೇಡಿಯಂ ತುಂಬಿಸಲು ನಮೋ ಬರಬೇಕು

ಸಚಿನ್ ಬಿಟ್ಟರೆ ಸ್ಟೇಡಿಯಂ ತುಂಬಿಸಲು ನರೇಂದ್ರ ಮೋದಿ ಅವರೇ ಬರಬೇಕಾಯಿತು

ಮೋದಿ ಭಾಷಣ ಕೇಳಲು ಸ್ಟೇಡಿಯಂಗೆ

ಮೋದಿ ಭಾಷಣ ಕೇಳಲು ಸ್ಟೇಡಿಯಂಗೆ ನುಗ್ಗಿದ ಜನತೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prime Minister Narendra Modi addressed Indian community at the Dubai International Cricket Stadium, on the second day of his UAE visit on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more