ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ : ಆಫ್ರಿಕಾದಲ್ಲಿ ಪ್ರಧಾನಿ ನರೇಂದ್ರ ಮೋದಿ

By Madhusoodhan
|
Google Oneindia Kannada News

ಡರ್ಬನ್, ಜುಲೈ, 09: ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಅನೇಕ ಅಂಶಗಳನ್ನು ಮತ್ತೆ ಮತ್ತೆ ಉಲ್ಲೇಖ ಮಾಡಿದ್ದಾರೆ.

ಎಂಟು ಪ್ರಮುಖ ಒಪ್ಪಂದಗಳಿಗೆ ಪರಸ್ಪರ ಸಹಿ ಸಹ ಬಿದ್ದಿದೆ. ಮಹಾತ್ಮ ಗಾಂಧೀಜಿಯವರ ದಕ್ಷಿಣ ಆಫ್ರಿಕಾ ಹೋರಾಟದ ದಿನಗಳನ್ನು ಮೋದಿ ಮತ್ತೆ ಮೆಲುಕು ಹಾಕಿದ್ದಾರೆ.[ಮಹಾತ್ಮ ಗಾಂಧೀಜಿ ಹತ್ತಿದ ಟ್ರೇನ್‌ನಲ್ಲಿ ಮೋದಿ ಸುತ್ತಾಟ]

ದಕ್ಷಿಣ ಆಫ್ರಿಕಾಕ್ಕೆ ಎಲ್ಲಾ ಸಂದರ್ಭದಲ್ಲೂ ಔಷಧ ಪೂರೈಕೆ ಮಾಡಬೇಕು ಎಂಬ ವಿನಂತಿಯೂ ಮೋದಿ ಬಳಿ ಬಂದಿದೆ. ಎನ್ ಎಸ್ ಜಿ ಸದಸ್ಯತ್ವಕ್ಕೆ ದಕ್ಷಿಣ ಆಫ್ರಿಕಾದ ಬೆಂಬಲವನ್ನು ಪಡೆದುಕೊಂಡು ಮೋದಿ ಹಿಂದಿರುಗುತ್ತಿದ್ದಾರೆ. ಆಫ್ರಿಕಾದಲ್ಲಿ ನರೇಂದ್ರ ಮೋದಿ ಏನೇನು ಮಾಡಿದರು ಚಿತ್ರಗಳಲ್ಲಿ ನೋಡಿಕೊಂಡು ಬನ್ನಿ( ಪಿಟಿಐ ಚಿತ್ರಗಳು)

ಗಂಭೀರ ವೀಕ್ಷಣೆ

ಗಂಭೀರ ವೀಕ್ಷಣೆ

ಜೋಹಾನ್ಸ್ ಬರ್ಗ್ ನ ನೆಲ್ಸನ್ ಮಂಡೇಲಾ ಫೌಂಡೇಶನ್ ಗೆ ಭೇಟಿ ನೀಡಿದ ಮೋದಿ ದಿಗ್ಗಜರ ಹಸ್ತಾಕ್ಷರವಿದ್ದ ಕ್ರಿಕೆಟ್ ಬ್ಯಾಟ್ ನ್ನು ಕುತೂಹಲದಿಂದ ವೀಕ್ಷಿಸಿದರು.

ಮೋದಿ ಭಾಷಣ

ಮೋದಿ ಭಾಷಣ

ಜೋಹಾನ್ಸ್ ಬರ್ಗ್ ನಲ್ಲಿ ಭಾರತೀಯ ಮೂಲದವರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ.

ಸಂಭ್ರಮದ ವಾತಾವರಣ

ಸಂಭ್ರಮದ ವಾತಾವರಣ

ಜೋಹಾನ್ಸ್ ಬರ್ಗ್ ನಲ್ಲಿ ಭಾರತೀಯ ಮೂಲದವರು ನರೇಂದ್ರ ಮೋದಿ ಅವರನ್ನು ಬರಮಾಡಿಕೊಂಡ ಬಗೆ.

ಗಾಂಧೀಜೆಗೆ ನಮನ

ಗಾಂಧೀಜೆಗೆ ನಮನ

ಜೋಹಾನ್ಸ್ ಬರ್ಗ್ ನಲ್ಲಿನ ಮಹಾಥ್ಮ ಗಾಂದಿ ಪುತ್ಥಳಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ನಮನ.

ಟ್ರೇನ್ ನಲ್ಲಿ ಮೋದಿ

ಟ್ರೇನ್ ನಲ್ಲಿ ಮೋದಿ

ಶನಿವಾರ ಮೋದಿ ದಕ್ಷಿಣ ಆಫ್ರಿಕಾದ ಲೋಕಲ್ ಟ್ರೇನ್ ನಲ್ಲಿ ಸುತ್ತಾಟ ಮಾಡಿದ್ದಾರೆ. ಪೆನ್‌ಟ್ರಿಚ್ ನಿಂದ ಪೀಟರ್ ಮಾರಿಟ್ಜಬರ್ಗ್ ವರೆಗೆ ಮೋದಿ ರೈಲ್ವೆಯಲ್ಲಿ ಪ್ರಯಾಣ ಮಾಡಿದರು.

English summary
In Pics: Top business leaders from India and South Africa on Friday (July 8) signed eight Memoranda of Understanding (MoU) leading to increased cooperation in a wide range of areas between the two nations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X