ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳು : ಬ್ರಿಟನ್‌ನಲ್ಲಿ ನರೇಂದ್ರ ಮೋದಿ

|
Google Oneindia Kannada News

ಲಂಡನ್, ನವೆಂಬರ್ 13 : ಮೂರು ದಿನಗಳ ಬ್ರಿಟನ್ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುವಾರ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಭಾರತ ಮತ್ತು ಬ್ರಿಟನ್‌ನ ಹಲವು ಕಂಪನಿಗಳ ನಡುವೆ ಸುಮಾರು 90 ಸಾವಿರ ಕೋಟಿ ಮೊತ್ತದ ಯೋಜನೆಗಳ ಸಹಭಾಗಿತ್ವ ಏರ್ಪಟ್ಟಿದೆ.

ಗುರುವಾರ ಬ್ರಿಟನ್‌ನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ನರೇಂದ್ರ ಮೋದಿ ಅವರು, ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರ ಜೊತೆ ಸುಮಾರು 90 ನಿಮಿಷಗಳ ಕಾಲ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ವೇಳೆ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಯಿತು. [ಮೋದಿ ಬ್ರಿಟನ್ ಪ್ರವಾಸ ಆರಂಭ, ಕಾರ್ಯಕ್ರಮಗಳು]

ಡೇವಿಡ್ ಕ್ಯಾಮರೂನ್ ಮತ್ತು ನರೇಂದ್ರ ಮೋದಿ ಅವರು ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಬ್ರಿಟನ್‌ನಲ್ಲಿ ಶಾಂತಿ ಸಂದೇಶ ಸಾರಿದ ಮೋದಿ,'ಗೌತಮ ಬುದ್ಧ, ಮಹಾತ್ಮ ಗಾಂಧಿ ಅವರ ನೆಲೆವೀಡು ಭಾರತ. ಅಸಹಿಷ್ಣುತೆಯ ಯಾವ ಘಟನೆಯನ್ನು ನಾವು ಸಹಿಸುವುದಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾವು ಕಾಪಾಡುತ್ತೇವೆ' ಎಂದು ಹೇಳಿದರು.

ನಾಗರಿಕ ಪರಮಾಣು ಒಪ್ಪಂದ, ರಕ್ಷಣೆ, ರೈಲ್ವೆ, ಸೈಬರ್ ಭದ್ರತೆ ಸೇರಿದಂತೆ ಹಲವು ಹಲವು ಮಹತ್ವದ ಒಪ್ಪಂದಗಳಿಗೆ ಭಾರತ ಮತ್ತು ಬ್ರಿಟನ್ ಸಹಿ ಹಾಕಿವೆ. ಚಿತ್ರಗಳಲ್ಲಿ ನೋಡಿ ಮೋದಿ ಬ್ರಿಟನ್ ಭೇಟಿ.......[ಪಿಟಿಐ ಚಿತ್ರಗಳು]

ಬ್ರಿಟನ್ ಪ್ರವಾಸದಲ್ಲಿ ನರೇಂದ್ರ ಮೋದಿ

ಬ್ರಿಟನ್ ಪ್ರವಾಸದಲ್ಲಿ ನರೇಂದ್ರ ಮೋದಿ

ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ನರೇಂದ್ರ ಮೋದಿ ಅವರು ಬ್ರಿಟನ್ ಪ್ರವಾಸ ಕೈಗೊಂಡಿದ್ದಾರೆ. ಮೂರು ದಿನಗಳ ಕಾಲ ಮೋದಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. 9 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಬ್ರಿಟನ್‌ಗೆ ಭೇಟಿ ನೀಡಿದ್ದಾರೆ.

ಹಲವು ಒಪ್ಪಂದಗಳಿಗೆ ಸಹಿ

ಹಲವು ಒಪ್ಪಂದಗಳಿಗೆ ಸಹಿ

ಗುರುವಾರ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರ ಜೊತೆ 92 ನಿಮಿಷಗಳ ಕಾಲ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಭಾರತ ಮತ್ತು ಬ್ರಿಟನ್‌ನ ವಿವಿಧ ಕಂಪನಿಗಳ ನಡುವೆ ಸುಮಾರು 90 ಸಾವಿರ ಕೋಟಿ ಮೊತ್ತದ ಯೋಜನೆಗಳ ಸಹಭಾಗಿತ್ವ ಏರ್ಪಟ್ಟಿದೆ.

ಕೃತಜ್ಞತೆ ಸಲ್ಲಿಸಿದ ನರೇಂದ್ರ ಮೋದಿ

ಕೃತಜ್ಞತೆ ಸಲ್ಲಿಸಿದ ನರೇಂದ್ರ ಮೋದಿ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಪಡೆಯುವ ಭಾರತದ ಪ್ರಯತ್ನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಕ್ಕಾಗಿ ನರೇಂದ್ರ ಮೋದಿ ಅವರು ಬ್ರಿಟನ್ ಪ್ರಧಾನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಅಸಹಿಷ್ಣುತೆ ಸಹಿಸುವುದಿಲ್ಲ

ಅಸಹಿಷ್ಣುತೆ ಸಹಿಸುವುದಿಲ್ಲ

ಡೇವಿಡ್ ಕ್ಯಾಮರೂನ್ ಅವರ ಜೊತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಮೋದಿ, 'ಅಸಹಿಷ್ಣುತೆ ಸಹಿಸುವುದಿಲ್ಲ ಎಂದು ಹೇಳಿದ್ದಾರೆ. ನಾಗರಿಕರ ಜೀವ ರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ನಾಗರಿಕರ ವಿರುದ್ಧದ ಅಸಹಿಷ್ಣುತೆ ಪ್ರಕರಣಗಳನ್ನು ತಮ್ಮ ಸರ್ಕಾರ ಸಹಿಸುವುದಿಲ್ಲ' ಎಂದರು.

ಗಾಂಧಿಗೆ ನಮಿಸಿದ ಮೋದಿ

ಗಾಂಧಿಗೆ ನಮಿಸಿದ ಮೋದಿ

ಸಂಸತ್‌ನಲ್ಲಿ ಭಾಷಣ ಮಾಡುವುದಕ್ಕೂ ಮೊದಲು ಪಾರ್ಲಿಮೆಂಟ್‌ ಸ್ಕ್ವೇರ್‌ನಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಗೆ ನರೇಂದ್ರ ಮೋದಿ ನಮನ ಸಲ್ಲಿಸಿದರು.

ಸಂಸತ್ ಉದ್ದೇಶಿಸಿ ಭಾಷಣ

ಸಂಸತ್ ಉದ್ದೇಶಿಸಿ ಭಾಷಣ

ಬ್ರಿಟನ್ ಸಂಸತ್ತು ಉದ್ದೇಶಿಸಿ ಮಾತನಾಡಿದ ಮೋದಿ 'ಭಾರತದ ಬಹುತೇಕ ಚರಿತ್ರೆ ಬ್ರಿಟಿಷ್ ಸಂಸತ್ ಜೊತೆ ತಳಕು ಹಾಕಿಕೊಂಡಿದೆ' ಎಂದು ಹೇಳಿದರು. 'ಭಾರತದ ಅನೇಕ ಸ್ವತಂತ್ರ್ಯ ಹೋರಾಟಗಾರರು ತನ್ನ ಜೀವನದ ದಿಕ್ಕುಗಳನ್ನು ಬ್ರಿಟನ್ ವಿದ್ಯಾಸಂಸ್ಥೆಗಳಲ್ಲಿ ಕಂಡುಕೊಂಡರು' ಎಂದು ಮೋದಿ ಬಣ್ಣಿಸಿದರು.

English summary
Narendra Modi in Britain : Indian Prime Minister Narendra Modi in Britain for his three-day visit. On Thursday in London Modi signed a civil nuclear cooperation agreement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X