ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಬಾಂಗ್ಲಾ ಪ್ರವಾಸದ ಪ್ರಮುಖ ಕ್ಷಣಗಳು

By Mahesh
|
Google Oneindia Kannada News

ಢಾಕಾ, ಜೂ.07: ಎರಡು ದಿನಗಳ ಬಾಂಗ್ಲಾದೇಶ ಪ್ರವಾಸ ಮುಗಿಸಿಕೊಂಡು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಸಂಜೆ ಭಾರತಕ್ಕೆ ಹಿಂತಿರುಗುತ್ತಾರೆ. ಬಾಂಗ್ಲಾದಲ್ಲಿ ಗಡಿ ಸಮಸ್ಯೆಗೆ ಪರಿಹಾರ, ಐತಿಹಾಸಿಕ ಸ್ಥಳಗಳಿಗೆ ಭೇಟಿ, ಅಟಲ್ ಜೀ ಪರವಾಗಿ ಉನ್ನತ ಗೌರವ ಸ್ವೀಕಾರ, ಮಹತ್ವದ ಒಪ್ಪಂದಗಳಿಗೆ ಅಂಕಿತ ಸೇರಿದಂತೆ ಕೆಲ ಪ್ರಮುಖ ಕ್ಷಣಗಳು ಚಿತ್ರಗಳಲ್ಲಿ ದಾಖಲಾಗಿವೆ.

ಬಾಂಗ್ಲಾದೇಶದ ಪರಮೋಚ್ಛ ಗೌರವ 'ಲಿಬರೇಶನ್ ವಾರ್' ಗೌರವ ಪ್ರಶಸ್ತಿಯನ್ನು ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಬಾಂಗ್ಲಾದೇಶದ ಅಧ್ಯಕ್ಷ ಅಬ್ದುಲ್ ಹಮೀದ್ ಅವರು ಬಾಂಗ್ಲಾಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು. [ಐತಿಹಾಸಿಕ ದೇಗುಲದಲ್ಲಿ ಮೋದಿಗೆ ದಿವ್ಯಾನುಭವ]

ಇದೇ ಸಂದರ್ಭದಲ್ಲಿ 'ಇದು ರಾಷ್ಟ್ರದ ಗೆಳೆಯ'ನಿಗೆ ನೀಡಲಾಗುತ್ತಿರುವ ಗೌರವ ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಹೇಳಿದರು. [ವಾಜಪೇಯಿಗೆ ಬಾಂಗ್ಲಾದೇಶದಿಂದ ಸನ್ಮಾನ]

ನನ್ನಂತಹ ಹಲವಾರು ಮಂದಿಗೆ ಸ್ಪೂರ್ತಿ ನೀಡಿದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಬಾಂಗ್ಲಾದೇಶ ಗೌರವಿಸುತ್ತಿದೆ. ಇದು ಭಾರತೀಯರಿಗೆ ಹೆಮ್ಮೆಯ ಕ್ಷಣ ಎಂದು ಪ್ರಧಾನಿ ಮೋದಿ ಹೇಳಿದರು. ಮೋದಿ ಭಾಷಣ ಹಾಗೂ ಎರಡು ದಿನಗಳ ಪ್ರಮುಖ ಘಟನಾವಳಿಗಳ ಚಿತ್ರಗಳು ಇಲ್ಲಿವೆ...

ಎರಡನೇ ದಿನದ ಪ್ರವಾಸ ಪೂಜೆಯೊಂದಿಗೆ ಶುರು

ಎರಡನೇ ದಿನದ ಪ್ರವಾಸ ಪೂಜೆಯೊಂದಿಗೆ ಶುರು

ಢಾಕಾದ ನಗರ ದೇವತೆ 12ನೇ ಶತಮಾನದ ಢಾಕೇಶ್ವರಿ ದೇಗುಲದಲ್ಲಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ. ಚಿತ್ರ : ಪಿಟಿಐ

ಢಾಕೇಶ್ವರಿ ದೇಗುಲದಲ್ಲಿ ಮೋದಿ

ಢಾಕೇಶ್ವರಿ ದೇಗುಲದಲ್ಲಿ ಮೋದಿ

ಢಾಕೇಶ್ವರಿ ದೇಗುಲದಲ್ಲಿ ಮೋದಿ, ದೇವಿಗೆ ಆರತಿ ಬೆಳಗುತ್ತಿದ್ದಾರೆ.

ದೇಗುಲದ ಎದುರು ಗ್ರೂಪ್ ಫೋಟೊ

ದೇಗುಲದ ಎದುರು ಗ್ರೂಪ್ ಫೋಟೊ

ದೇಗುಲದ ಎದುರು ಭಾರತ ಹಾಗೂ ಬಾಂಗ್ಲಾ ಪ್ರತಿನಿಧಿಗಳ ಜೊತೆ ಮೋದಿ ಗ್ರೂಪ್ ಫೋಟೊ.

ರಾಮಕೃಷ್ಣ ಮಿಷನ್ ನಲ್ಲಿ ಮೋದಿ

ರಾಮಕೃಷ್ಣ ಮಿಷನ್ ನಲ್ಲಿ ಮೋದಿ

ರಾಮಕೃಷ್ಣ ಮಿಷನ್ ನಲ್ಲಿ ಮೋದಿ ಅವರು ಪ್ರಾರ್ಥನೆ ಸಲ್ಲಿಸಿದ ನಂತರ ಸಾಧುಗಳ ಗ್ರೂಪ್ ಫೋಟೊ.

’ಲಿಬರೇಶನ್ ವಾರ್’ ಗೌರವ ಪ್ರಶಸ್ತಿ

’ಲಿಬರೇಶನ್ ವಾರ್’ ಗೌರವ ಪ್ರಶಸ್ತಿ

ಬಾಂಗ್ಲಾದೇಶದ ಪರಮೋಚ್ಛ ಗೌರವ 'ಲಿಬರೇಶನ್ ವಾರ್' ಗೌರವ ಪ್ರಶಸ್ತಿಯನ್ನು ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು

’ಲಿಬರೇಶನ್ ವಾರ್’ ಗೌರವ ಸ್ವೀಕರಿಸಿ ಮೋದಿ ಭಾಷಣ

ವಾಜಪೇಯಿ ಪರವಾಗಿ 'ಲಿಬರೇಶನ್ ವಾರ್' ಗೌರವ ಸ್ವೀಕರಿಸಿ ಮೋದಿ ಭಾಷಣ ಮಾಡಿದ್ದು ಹೀಗೆ...

ಢಾಕಾ ಅಧ್ಯಕ್ಷ ಹಮೀದ್ ಜೊತೆ ಮೋದಿ

ಢಾಕಾ ಅಧ್ಯಕ್ಷ ಹಮೀದ್ ಜೊತೆ ಮೋದಿ

ಢಾಕಾ ಅಧ್ಯಕ್ಷ ಮೊಹಮ್ಮದ್ ಅಬ್ದುಲ್ ಹಮೀದ್ ಜೊತೆ ಮೋದಿ ಸಮಾಲೋಚನೆ.

ಬೇಗಂ ಖಲೀದಾ ಭೇಟಿ ಮಾಡಿದ ಮೋದಿ

ಮಾಜಿ ಪ್ರಧಾನಿ ಬೇಗಂ ಖಲೀದಾ ಭೇಟಿ ಮಾಡಿದ ಮೋದಿ ಅವರು ನಂತರ ಎಡಪಕ್ಷದ ನಾಯಕರು, ವಿಪಕ್ಷ ನಾಯಕಿಯನ್ನು ಕೂಡಾ ಭೇಟಿ ಮಾಡಿ ಮಾತುಕತೆ ನಡೆಸಿದರು.

ಬಾಂಗ್ಲಾದೇಶದ ಮುಖ್ಯಸ್ಥರೊಂದಿಗೆ ಮೋದಿ

ಬಾಂಗ್ಲಾದೇಶದ ಮುಖ್ಯಸ್ಥರೊಂದಿಗೆ ಮೋದಿ

ಬಾಂಗ್ಲಾದೇಶದ ಪ್ರಧಾನಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಹಾಗೂ ಬಾಂಗ್ಲಾದೇಶದ ಅಧ್ಯಕ್ಷ ಅಬ್ದುಲ್ ಹಮೀದ್ ಜೊತೆ ಪ್ರಧಾನಿ ಮೋದಿ.

ಬಂಗಬಂಧು ಮ್ಯೂಸಿಯಂನಲ್ಲಿ ಮೋದಿ

ಬಂಗಬಂಧು ಮ್ಯೂಸಿಯಂನಲ್ಲಿ ಮೋದಿ

ಬಂಗಬಂಧು ಮ್ಯೂಸಿಯಂನಲ್ಲಿ ಮೋದಿ ಅವರು ಶನಿವಾರ ಕಂಡು ಬಂದಿದ್ದು ಹೀಗೆ

ಮೋದಿಗೆ ಸಿಕ್ಕ ಸ್ವಾಗತ ಹೀಗಿತ್ತು

ಮೋದಿಗೆ ಸಿಕ್ಕ ಸ್ವಾಗತ ಹೀಗಿತ್ತು

ಬಾಂಗ್ಲಾ ಪ್ರವಾಸಕ್ಕೆ ಆಗಮಿಸಿದ ಭಾರತದ ಪ್ರಧಾನಿ ಮೋದಿ ಅವರನ್ನು ಇಲ್ಲಿನ ಪ್ರಧಾನಿ ಶೇಖ್ ಹಸೀನಾ ಅವರು ಹಜರತ್ ಷಹಜಲಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕುಮಿಟೋಲಾ ,ಢಾಕಾದಲ್ಲಿ ಸ್ವಾಗತಿಸಿದರು.

ಮೋದಿ ಅವರಿಗೆ ಗೌರವ ಶ್ರೀರಕ್ಷೆ

ಮೋದಿ ಅವರಿಗೆ ಗೌರವ ಶ್ರೀರಕ್ಷೆ

ಹಜರತ್ ಷಹಜಲಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಗ್ಲಾ ಯೋಧರಿಂದ ಮೋದಿ ಅವರಿಗೆ ಗೌರವ ಶ್ರೀರಕ್ಷೆ ನೀಡಲಾಯಿತು.

ರಾಷ್ಟ್ರೀಯ ಸ್ಮಾರಕದ ಬಳಿ ಮೋದಿ

ರಾಷ್ಟ್ರೀಯ ಸ್ಮಾರಕದ ಬಳಿ ಮೋದಿ

ಬಾಂಗ್ಲಾದೇಶದ ರಾಷ್ಟ್ರೀಯ ಸ್ಮಾರಕದ ಬಳಿ ಅಗಲಿದ ಹುತಾತ್ಮರಿಗೆ ನಮನ ಸಲ್ಲಿಸಿದ ಮೋದಿ

ಹಲವು ಮಹತ್ವದ ಒಪ್ಪಂದಗಳಿಗೆ ಸಹಿ

ಹಲವು ಮಹತ್ವದ ಒಪ್ಪಂದಗಳಿಗೆ ಸಹಿ

* ಭಾರತದಿಂದ ಬಾಂಗ್ಲಾಕ್ಕೆ 2 ಶತಕೋಟಿ ಡಾಲರ್‌ಗಳ ಸಾಲದ ನೆರವು ಘೋಷಣೆ.
* 500 ಮೆಗಾವ್ಯಾಟ್ ವಿದ್ಯುತ್ ಪೂರೈಕೆ ಮಿತಿ 1 ಸಾವಿರ ಮೆಗಾವ್ಯಾಟ್‌ ಗೆ ಏರಿಕೆ.
* ನೌಕಾಯಾನ ಸುರಕ್ಷತೆ ಹಾಗೂ ಮಾನವಕಳ್ಳಸಾಗಣೆ ಮತ್ತು ನಕಲಿ ಕರೆನ್ಸಿ ತಡೆ ಕ್ರಮ
* ಒಟ್ಟು 22 ಪ್ರಮುಖ ಒಪ್ಪಂದಗಳಿಗೆ ಉಭಯ ದೇಶಗಳಿಂದ ಅಂಕಿತ.
* ಕೋಲ್ಕತಾ-ಢಾಕಾ- ಅಗರ್ತಲಾ ಹಾಗೂ ಢಾಕಾ-ಶಿಲ್ಲಾಂಗ್-ಗುವಾಹಟಿ ಬಸ್ ಸೇವೆಗಳಿಗೆ ಹಸಿರು ನಿಶಾನೆ.
* ಎಲ್ಲಕ್ಕಿಂತ ಮುಖ್ಯವಾಗಿ ಗಡಿ ಒಪ್ಪಂದ ಪ್ರಕಾರ ಭಾರತವು 10 ಸಾವಿರ ಎಕರೆ ಭೂಮಿಯನ್ನು ಅಧಿಕೃತವಾಗಿ ಬಾಂಗ್ಲಾಕ್ಕೆ ಹಸ್ತಾಂತರಿಸಲಿದೆ ಮತ್ತು ಬಾಂಗ್ಲಾ 510 ಎಕರೆ ಜಮೀನನ್ನು ಭಾರತಕ್ಕೆ ಒಪ್ಪಿಸಲಿದೆ.

ಐತಿಹಾಸಿಕ ಭೇಟಿಯನ್ನು ಹಾಡಿ ಹೊಗಳಿದ ಪತ್ರಿಕೆಗಳು

ಮೋದಿ ಅವರ ಐತಿಹಾಸಿಕ ಭೇಟಿಯನ್ನು ಹಾಡಿ ಹೊಗಳಿದ ಸ್ಥಳೀಯ ಪತ್ರಿಕೆಗಳು

English summary
In Pics: PM Narendra Modi's a two-day visit to Bangladesh is deemed as historic because he is the first Prime Minister to visit Bangladesh after the settlement of the four-decade-long boundary dispute.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X