ಗುರುದ್ವಾರಕ್ಕೆ ಶಿರಬಾಗಿ ನಮಸ್ಕರಿಸಿದ ಪ್ರಧಾನಿ ಮೋದಿ

Written By:
Subscribe to Oneindia Kannada

ನವದೆಹಲಿ, ಮೇ 23: 15 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಇರಾನ್‌ಗೆ ಭೇಟಿ ನೀಡಿದ್ದಾರೆ. ಪ್ರಧಾನಿ ಮೋದಿ ಅವರ ಭೇಟಿ ವಿದೇಶಿ ಸಂಬಂಧ ವೃದ್ಧಿಯಲ್ಲಿ ಮಹತ್ತರ ಪಾತ್ರ ನಿರ್ವಹಿಸಲಿದೆ.

ಮೋದಿ ಭಾನುವಾರ ರಾತ್ರಿ ಇರಾನ್ ತಲುಪಿದ್ದಾರೆ. ಟೆಹ್ರಾನ್ ನ ಗುರುದ್ವಾರಕ್ಕೆ ಭೇಟಿ ನೀಡಿದ ಪ್ರಧಾನಿಯನ್ನು ಖಡ್ಗ ನೀಡಿ ಗೌರವಿಸಲಾಯಿತು. ಮೋದಿ ಸಹ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದು ವಿಶೇಷ.[ಮೇ 29ರಂದು ದಾವಣಗೆರೆಯಲ್ಲಿ ಮೋದಿ ಸಮಾವೇಶ]

modi

ಮೆಹ್ರಾಬಾದ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ಇರಾನ್‌ ಸರ್ಕಾರದ ಪ್ರಮುಖರು ಸ್ವಾಗತಿಸಿದರು. ಇರಾನ್‌ ಪ್ರವಾಸದ ಆರಂಭದಲ್ಲಿ ಸ್ಥಳೀಯ ಸಿಖ್‌ ಸಮುದಾಯದವರನ್ನು ಪ್ರಧಾನಿ ಭೇಟಿಯಾಗಿ ಗುರುದ್ವಾರದ ದರ್ಶನ ಮಾಡಿದರು. [ಮೋದಿ ಕನಸುಗಳು: ಸ್ವಚ್ಛಭಾರತದಿಂದ ಡಿಜಿಟಲ್ ಇಂಡಿಯಾ ತನಕ]

ಸೋಮವಾರ ಪ್ರಧಾನಿ ಇರಾನ್‌ ಅಧ್ಯಕ್ಷ ಹಸನ್‌ ರೊಹಾನಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಪ್ರಧಾನಿ ಭೇಟಿ ವೇಳೆ ತೈಲ ವ್ಯಾಪಾರ, ಚಾಬಾರ್‌ ಬಂದರು ನಿರ್ಮಾಣ, ಮೂಲಸೌಕರ್ಯ ವೃದ್ಧಿ ವಿಚಾರಗಳ ಬಗ್ಗೆ ಚರ್ಚೆಯಾಗಲಿದೆ. ಪ್ರಧಾನಿ ಅವರಿಗೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌, ಸಾರಿಗೆ ಸಚಿವ ನಿತಿನ್‌ ಗಡ್ಕರಿ ಮತ್ತು ಧರ್ಮೇಂದ್ರ ಪ್ರಧಾನ್‌ ಸಾಥ್ ನೀಡಲಿದ್ದಾರೆ.

-
-
-
-
-
-
-
-
-

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prime Minister Narendra Modi left for a two day historic visit to Iran with an aim to rekindle a civilizational connect. PM on reaching Iran received red carpet welcome and he was received by Dr Ali Tayebnia, Iran's Minister of Economic Affairs and Finance. Before leaving for Bhai Ganga Singh Gurudwara in Tehran PM had a brief chat with Iran's Minister of Economic Affairs and Finance at the airport.
Please Wait while comments are loading...