ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಟೋಗ್ರಾಫ್ ಪ್ಲೀಸ್, ಮೋದಿಗೆ ಮುಗಿಬಿದ್ದ ಅಮೆರಿಕ ಸಂಸದರು

By Super Admin
|
Google Oneindia Kannada News

ವಾಷಿಂಗ್ ಟನ್, ಜೂನ್, 09: ದೂರದ ಅಮೆರಿಕದಲ್ಲಿ ಮೋದಿ ಮೇನಿಯಾ, ಮೋದಿ ಮೋಡಿ.. ಅಮೆರಿಕದ ಸಂಸತ್ ಉದ್ದೇಶಿಸಿ ಭಾಷಣ, ಅದಕ್ಕೂ ಮೊದಲು ಶ್ವೇತ ಭವನದಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಭೇಟಿ, ಅಮೂಲ್ಯ ಕಲಾಕೃತಿ ಹಸ್ತಾಂತರ ... ಒಂದೇ ಎರಡೇ..

ಮೆಕ್ಸಿಕೋಕ್ಕೂ ಭೇಟಿ ನೀಡಿ ಎನ್ಎಸ್ ಜಿ ಗೆ ಭಾರತದ ಸೇರ್ಪಡೆಗೆ ಬೆಂಬಲ ಪಡೆದುಕೊಂಡಿದ್ದು ಮೋದಿಯವರ ಮತ್ತೊಂದು ಸಾಧನೆ. ಅಮೆರಿದಲ್ಲಿ ಇದ್ದಷ್ಟು ಸಮಯ ಮೋದಿಯವರಿಗೆ ಭರ್ಜರಿ ಸ್ವಾಗತ, ಭಾಷಣದ ಸಂದರ್ಭದಲ್ಲಿ ಎದ್ದು ನಿಂತು ಗೌರವ. ಸ್ವಿಟ್ಜರ್ಲ್ಯಾಂಡ್, ಮೆಕ್ಸಿಕೋ, ಅಮೆರಿಕ, ಫ್ರಾನ್ಸ್, ಬ್ರಿಟನ್, ರಷ್ಯಾ ಸೇರಿದಂತೆ ಬಹುತೇಕ ರಾಷ್ಟ್ರಗಳು ಭಾರತದ ಎನ್ಎಸ್ ಜಿ ಸೇರ್ಪಡೆಗೆ ಬೆಂಬಲ ನೀಡಿದಂತೆ ಆಗಿದೆ.[ಭಾರತ-ಅಮೆರಿಕ ನಡುವೆ ಬಂಧ ಬೆಸೆದ ಯೋಗ-ಮೋದಿ]

ಪ್ರಧಾನಿಯಾದ ಬಳಿಕ ನಾಲ್ಕನೇ ಬಾರಿಗೆ ಅಮೆರಿಕಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಸಂಸತ್ ನ ಜಂಟಿ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಿದರು. ಆರ್ಥಿಕ ಅಭಿವೃದ್ಧಿ, ಉಭಯ ದೇಶಗಳ ನಡುವಿನ ಬಾಂಧವ್ಯ, ಅಮೆರಿಕ ಸಂವಿಧಾನ, ಭಯೋತ್ಪಾದನೆ ನಿಗ್ರಹ, ಉದ್ಯೋಗ ಅವಕಾಶ, ಪ್ರಜಾಪ್ರಭುತ್ವ, ಜಾಗತಿಕ ತಾಪಮಾನ ಸೇರಿದಂತೆ ಅನೇಕ ವಿಷಯಗಳ ಕುರಿತು ಮೋದಿ ಮಾತನಾಡಿದರು.

ಮೋದಿ ಅಮೆರಿಕ ಪ್ರವಾಸವನ್ನು ಚಿತ್ರಗಳ ಮೂಲಕ ನಾವು ಒಂದು ರೌಂಡ್ ಹಾಕಿಕೊಂಡು ಬರೋಣ....

 ಮೋದಿ ಭಾಷಣ

ಮೋದಿ ಭಾಷಣ

ಅಮೆರಿಕದ ಸಂಸತ್ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಆರಂಭ ಮಾಡಿದ ಮೋದಿ.

ಗಣ್ಯರೊಂದಿಗೆ ಮೋದಿ

ಗಣ್ಯರೊಂದಿಗೆ ಮೋದಿ

ಅಮೆರಿಕ ಕಾಂಗ್ರೆಸ್ ನ ಪ್ರಮುಖರೊಂದಿಗೆ ಒಂದು ಫೋಟೋ ಕ್ಲಿಕ್.

ಪ್ರಧಾನಿ ಭಾಷಣ

ಪ್ರಧಾನಿ ಭಾಷಣ

ಅಮೆರಿಕ ಕಾಂಗ್ರೆಸ್ ನ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ. ಹಾಜರಿದ್ದ ಸದಸ್ಯರು ಕಂಡಿದ್ದು ಹೀಗೆ.

ಮಹಾನ್ ಚೇತನಗಳು

ಮಹಾನ್ ಚೇತನಗಳು

ಸ್ವಾಮಿ ವೀವೇಕಾನಂದರು, ಅಂಬೇಡ್ಕರ್, ಗಾಂಧೀಜಿ, ಮಾರ್ಟಿನ್ ಲೂಥರ್ ಕಿಂಗ್ ಎಲ್ಲರ ಬದುಕು ನಮಗೆ ಆದರ್ಶ ಅವರ ಆದರ್ಶದ ಅಡಿಯಲ್ಲೇ ಸಾಗಬೇಕು ಎಂದಾಗ ಅಮೆರಿಕದ ಸಂಸತ್ ಸದಸ್ಯರು ಎದ್ದು ನಿಂತು ಸಂತಸ ವ್ಯಕ್ತಪಡಿಸಿದರು.

ಮೆಕ್ಸಿಕೋಕ್ಕೆ ಹೊರಟ ಪ್ರಧಾನಿ

ಮೆಕ್ಸಿಕೋಕ್ಕೆ ಹೊರಟ ಪ್ರಧಾನಿ

ವಾಷಿಂಗ್ ಟನ್ ನಿಂದ ಮೆಕ್ಸಿಕೋಕ್ಕೆ ಹೊರಟ ಪ್ರಧಾನಿಯನ್ನು ಬಿಗಿ ಭದ್ರತೆಯಲ್ಲಿ ಬಿಳ್ಕೊಡಲಾಯಿತು.

ಆಟೋಗ್ರಾಫ್ ಪ್ಲೀಸ್...

ಆಟೋಗ್ರಾಫ್ ಪ್ಲೀಸ್...

ಐತಿಹಾಸಿಕ ಭಾಷಣ ಮಾಡಿ ಹೊರಬಂದ ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತಾಕ್ಷರಕ್ಕೆ ಮುಗಿಬಿದ್ದ ಅಮೆರಿಕ ಸಂಸತ್ ಸದಸ್ಯರು.

ಭಾರತದ ಮೂಲದವರೊಂದಿಗೆ

ಭಾರತದ ಮೂಲದವರೊಂದಿಗೆ

ವಾಷಿಂಗ್ ಟನ್ ನಲ್ಲಿ ಭಾರತೀಯ ಮೂಲದವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು.

ವಂದನೆ-ಅಭಿನಂದನೆ

ವಂದನೆ-ಅಭಿನಂದನೆ

ಐತಿಹಾಸಿಕ ಭಾಷಣದ ನಂತರ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ ಅಮೆರಿಕ ಸಂಸತ್ ಸದಸ್ಯರು.

ಚಪ್ಪಾಳೆ ಸುರಿಮಳೆ

ಚಪ್ಪಾಳೆ ಸುರಿಮಳೆ

ಸುಮಾರು 40 ನಿಮಿಷ ಕಾಲ ಮಾತನಾಡಿದ ಪ್ರಧಾನಿ ಭಾಷಣದ ಪ್ರತಿ ಹಂತದಲ್ಲಿಯೂ ಚಪ್ಪಾಳೆಗಳ ಸುರಿಮಳೆ ಕೇಳಿಬಂತು.

ಶ್ವೇತ ಭವನದಲ್ಲಿ ಪ್ರಧಾನಿ

ಶ್ವೇತ ಭವನದಲ್ಲಿ ಪ್ರಧಾನಿ

ಐತಿಹಾಸಿಕ ಭಾಷಣಕ್ಕೂ ಮುನ್ನ ಅಮೆರಿಕದ ಶ್ವೇತಭವನಕ್ಕೆ ಭೇಟಿ ನೀಡಿದ್ದ ಪ್ರಧಾನಿ ವಿಸಿಟರ್ ಬುಕ್ ನಲ್ಲಿ ಹೆಸರು ದಾಖಲಿಸಿದರು.

English summary
Prime Minister Narendra Modi on Wednesday said that the India-US relations have gone way beyond diplomacy and now it is at a stage where the two countries can be forces of good for the world. The whole picture of Narendra Nodi tour in America
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X