ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟರ್ಕಿ ಮೇಲೆ ಸಿರಿಯಾ ವೈಮಾನಿಕ ದಾಳಿ: 34 ಟರ್ಕಿ ಸೈನಿಕರು ಬಲಿ

|
Google Oneindia Kannada News

ಡಮಾಸ್ಕಸ್ , ಫೆಬ್ರವರಿ 28: ಸಿರಿಯಾವು ಟರ್ಕಿ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಟರ್ಕಿಯ 34 ಸೈನಿಕರು ಸಾವನ್ನಪ್ಪಿದ್ದಾರೆ.

ಸಿರಿಯಾದ ವಾಯುವ್ಯ ಪ್ರಾಂತ್ಯದ ಇಡ್ಲಿಬ್‌ನಲ್ಲಿ ಬಂಡುಕೋರರ ವಶದಲ್ಲಿರುವ ಪ್ರದೇಶಗಳ ಮೇಲೆ ಸಿರಿಯಾ ಸೇನೆ ವೈಮಾನಿಕ ದಾಳಿ ನಡೆಸಿದ್ದು, ಈ ವೇಳೆ ಕನಿಷ್ಛ 34 ಟರ್ಕಿ ಸೈನಿಕರು ಸಾವನ್ನಪ್ಪಿರುವುದಾಗಿ ಯುದ್ಧ ಮಾನಿಟರ್ ವರದಿ ಮಾಡಿದೆ.

ಟರ್ಕಿ ಗಡಿಯಲ್ಲಿ ಸಿರಿಯಾ ಸೇನೆ ನಡೆಸಿದ ವಾಯುದಾಳಿಯಲ್ಲಿ ಕನಿಷ್ಟ 34 ಮಂದಿ ಟರ್ಕಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

In Idlib 34 Turkish Soldiers Killed In Syrian Air Raid

ದಾಳಿಗೆ ಕಾರಣ ಇದಾಗಿರಬಹುದು: ಇಡ್ಲಿಬ್‌ನಲ್ಲಿನ ಬಂಡುಕೋರರಿಗೆ ಟರ್ಕಿ ಸೇನೆ ವಿಮಾನ ನಿಗ್ರಹ ಮೊಬೈಲ್ ರಾಕೆಟ್ ಲಾಂಚರ್ ಗಳನ್ನು ನೀಡುತ್ತಿದೆ ಎಂಬ ರಷ್ಯಾದ ಗಂಭೀರ ಆರೋಪದ ಮೇರೆಗೆ ಸಿರಿಯಾ ಸೇನೆ ಈ ವಾಯುದಾಳಿ ನಡೆಸಿದೆ ಎನ್ನಲಾಗಿದೆ. ಪ್ರಸ್ತುತ ಸಿರಿಯಾ ಮತ್ತು ಟರ್ಕಿ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಲೆಸಿದ್ದು, ಟರ್ಕಿ ಸೇನೆ ಕೂಡ ತಿರುಗೇಟು ನೀಡುವ ಎಚ್ಚರಿಕೆ ನೀಡಿದೆ.

ರಷ್ಯಾ ಮತ್ತು ಸಿರಿಯನ್ ವೈಮಾನಿಕ ದಾಳಿಗಳು ಇಡ್ಲಿಬ್ ಗ್ರಾಮಾಂತರ ಪ್ರದೇಶದಲ್ಲಿರುವ ಬಾರಾ ಮತ್ತು ಬಿಲಿಯನ್ ಪಟ್ಟಣಗಳ ನಡುವಿನ ಪ್ರದೇಶವನ್ನು ಗುರಿಯಾಗಿಸಿಕೊಂಡು ನಡೆಸಿದ್ದು ಹೆಚ್ಚಿನ ಸಾವುನೋವುಗಳ ವರದಿಗಳ ನಡುವೆಯೂ 34 ಟರ್ಕಿಶ್ ಸೈನಿಕರನ್ನು ದಾಳಿಯಲ್ಲಿ ಕೊಂದಿವೆ ಎಂದು ಸಿರಿಯನ್ ಮಾನವ ಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.

English summary
At least 34 Turkish soldiers were killed in an air strike by Syrian government forces in northwestern Idlib province as Turkey vowed "to respond in kind" with attacks on "all" their positions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X