ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ವಿರುದ್ಧ ಹೋರಾಡಲು ಹೊಸ ಹೀರೋ ಎಂಟ್ರಿ

|
Google Oneindia Kannada News

ಕೊರೊನಾ ಸೋಂಕು ಹರಡಲು ಆರಂಭವಾದ ದಿನದಿಂದ ಆಂಟಿಬಾಡಿ ಎನ್ನುವ ಶಬ್ದವನ್ನು ಪದೇ ಪದೇ ಕೇಳಿದ್ದೇವೆ. ಅದು ಕೊರೊನಾ ವೈರಸ್‌ನ್ನು ನಮ್ಮ ದೇಹದಿಂದ ದೂರ ಇರಿಸುತ್ತದೆ ಎನ್ನುವುದು ಸತ್ಯ ಆದರೆ ಟಿ ಸೆಲ್ಸ್‌ಎನ್ನುವ ಮತ್ತೊಂದು ಹೀರೋ ಎಂಟ್ರಿ ಆಗಿದೆ.

Recommended Video

Sonu Sood : ವಲಸೆ ಕಾರ್ಮಿಕರಿಗಾಗಿ ಹೊಸ ಯೋಜನೆ ರೂಪಿಸಿದ ಬಾಲಿವುಡ್ ಸ್ಟಾರ್ | Oneindia Kannada

ನಮ್ಮ ದೇಹಕ್ಕೆ ಸೋಂಕು ತಗುಲಿದಾಗ ರಚನೆಯಾಗುವ ಪ್ರತಿರೋಧಕ ಶಕ್ತಿಯ ಭಾಗವಾಗಿ ಟಿ ಸೆಲ್ ಮತ್ತು ಆ್ಯಂಟಿಬಾಡಿ ಇವೆ. ಟಿ ಸೆಲ್ ಎಂಬುದು ಬಿಳಿ ರಕ್ತ ಕಣಗಳಾಗಿದ್ದು, ವೈರಸ್​ನಿಂದ ಸೋಂಕಿತವಾದ ಕೋಶಗಳನ್ನು ಇದು ನೇರವಾಗಿ ನಾಶ ಮಾಡುತ್ತದೆ.

ಭಾರತದಲ್ಲಿ ಆಕ್ಸ್‌ಫರ್ಡ್ ಕೊರೊನಾ ಲಸಿಕೆ ಪ್ರಯೋಗ ಯಾವಾಗ?ಭಾರತದಲ್ಲಿ ಆಕ್ಸ್‌ಫರ್ಡ್ ಕೊರೊನಾ ಲಸಿಕೆ ಪ್ರಯೋಗ ಯಾವಾಗ?

ಕೊರೊನಾ ಲಸಿಕೆ ಕುರಿತು ವರದಿಯಲ್ಲಿ ಈ ಟಿ ಸೆಲ್ಸ್‌ಗಳ ಕುರಿತು ಮಾಹಿತಿ ನೀಡಲಾಗಿದೆ. ಆಸ್ಟ್ರಾಜೆನೆಕಾ , ಪಿಫೈಜರ್, ಬಯೋ ಎನ್ ಟೆಕ್ ಹಾಗೆಯೇ ಚೀನಾದ ಕ್ಯಾನ್‌ಸಿನೋ ಬಯೋಲಾಜಿಕ್ಸ್ ಇಂಕ್ ಈ ಎಲ್ಲಾ ಲಸಿಕೆಗಳಲ್ಲಿ ಬಿಳಿ ರಕ್ತಕಣಗಳಿವೆ. ಇದು ಕೊರೊನಾ ವೈರಸ್ ಗುಣಮಾಡುವ ಭರವಸೆಯನ್ನು ನೀಡುತ್ತದೆ.

In Coronavirus, Antibodies May Wane, T-Cells Are The New Hero

ಈ ಟಿ ಸೆಲ್ಸ್‌ಗಳು ದೇಹದಲ್ಲಿ ಆಯುಧಗಳಂತೆ ಕೆಲಸ ಮಾಡುತ್ತದೆ. ಹಾಗೆಯೇ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.ಆಸ್ಟ್ರೇಲಿಯಾದಲ್ಲಿ ಎರಡು ಬಗೆಯ ಕೊವಿಡ್ 19 ಲಸಿಕೆ ತಯಾರಾಗುತ್ತಿದೆ. ಆದರೆ ಈ ರೋಗವನ್ನು ಪೂರ್ಣ ಪ್ರಮಾಣದಲ್ಲಿ ಅಧ್ಯಯನ ಮಾಡಲು ಸಾಧ್ಯವಾಗಿಲ್ಲ.

ಲಸಿಕೆಯು ಪ್ರಯೋಗವಾದ ವ್ಯಕ್ತಿಗಳ ದೇಹದಲ್ಲಿ ಪ್ರಬಲ ಪ್ರತಿಕಾಯ (Antibody) ಮತ್ತು ಟಿ ಸೆಲ್​ಗಳನ್ನ ಸೃಷ್ಟಿಯಾಗಿದೆ. ಲಸಿಕೆಯನ್ನು ಹಾಕಿದ 14 ದಿನದೊಳಗೆ ಟಿ ಸೆಲ್​ಗಳ ಸ್ಪಂದನೆಯಾಗಿದೆ. ಹಾಗೆಯೇ, 28 ದಿನದೊಳಗೆ ಪ್ರತಿಕಾಯ ಸ್ಪಂದನೆಯಾಗಿದೆ ಎಂದು ದಿ ಲ್ಯಾನ್ಸೆಟ್ ಎಂಬ ಜರ್ನಲ್​ನಲ್ಲಿ ವಿವರ ಪ್ರಕಟವಾಗಿದೆ.

ಈವರೆಗಿನ ಕ್ಲಿನಿಕಲ್ ಟ್ರಯಲ್​ನಲ್ಲಿ ಯಾವುದೇ ಋಣಾತ್ಮಕ ಸ್ಪಂದನೆ ಸಿಕ್ಕಿಲ್ಲ. ಪ್ರಯೋಗ ಮಾಡಲಾದ ಎಲ್ಲಾ ವ್ಯಕ್ತಿಗಳ ದೇಹದಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ಇನ್ನಷ್ಟು ತೀವ್ರ ತರದಲ್ಲಿ ಪ್ರಯೋಗಗಳನ್ನ ಮಾಡಲಾಗುವುದು ಎಂದು ಆಕ್ಸ್​ಫರ್ಡ್ ವಿವಿ ಹೇಳಿದೆ.

English summary
Antibodies have become a familiar word in the pandemic era, perhaps suggesting they're the best hope for keeping the deadly coronavirus at bay. But when crucial vaccine data was released this week, the spotlight panned to an unsung immune player: T cells.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X