ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹವಾಮಾನ ಬದಲಾವಣೆ ದುಷ್ಪರಿಣಾಮಕ್ಕೆ ತುತ್ತಾದ ವಿಶ್ವದ ಮೊದಲ ರೋಗಿ ಪತ್ತೆ

|
Google Oneindia Kannada News

ಹವಾಮಾನ ಬದಲಾವಣೆಯಿಂದ ಬಳಲುತ್ತಿರುವ ಮೊದಲ ರೋಗಿಯನ್ನು ಕೆನಡಾದ ಮಹಿಳೆ ಎಂದು ಗುರುತಿಸಲಾಗಿದೆ.

70 ಹರೆಯದ ಕೆನಾಡದ ಮಹಿಳೆ ಹವಾಮಾನ ಬದಲಾವಣೆಯಿಂದ ಬಳಲುತ್ತಿರುವುದನ್ನು ರೋಗ ನಿರ್ಣಯದ ಮೂಲಕ ಪತ್ತೆ ಹಚ್ಚಲಾಗಿದೆ.

ಹವಾಮಾನ ವೈಪರೀತ್ಯದಿಂದ ಭಾರತ, ಚೀನಾ ಬಹಳಷ್ಟು ಬಳಲಿದೆ: ವಿಶ್ವಸಂಸ್ಥೆ ವರದಿಹವಾಮಾನ ವೈಪರೀತ್ಯದಿಂದ ಭಾರತ, ಚೀನಾ ಬಹಳಷ್ಟು ಬಳಲಿದೆ: ವಿಶ್ವಸಂಸ್ಥೆ ವರದಿ

ಕೆನಡಾದ ಈ ಮಹಿಳೆ ಎಲ್ಲ ಆರೋಗ್ಯ ಸಮಸ್ಯೆಗಳು ತುಂಬಾ ಗಂಭೀರವಾಗಿದೆ ಮತ್ತು ಅವರು ನೈಜವಾಗಿ ನಿರ್ಜಲೀಕರಣದಿಂದ ಹೆಣಗಾಡುತ್ತಿದ್ದಾರೆ. ತುರ್ತು ಚಿಕಿತ್ಸಾ ವಿಭಾಗದಲ್ಲಿ ಈ ನಿರ್ಜಲೀಕರಣದಿಂದ ಬಳಲುತ್ತಿರುವ ದೇಹವನ್ನು ತಂಪು ಮಾಡುವ ಕುರಿತಂತೆ ನಾವು ಲೆಕ್ಕಾಚಾರ ಮಾಡಬೇಕಿತ್ತು ಎಂದು ತಿಳಿಸಿದ್ದಾರೆ.

 In Canada, World’s First Patient Diagnosed With Climate Change

ಜನರು ನೀರು ಸಿಂಪಡಣೆ (ಸ್ಪ್ರೇ) ಬಾಟಲಿಗಳನ್ನು ಖರೀದಿಸಲು ಮುಗಿ ಬೀಳುತ್ತಿದ್ದಾರೆ. ಏಕೆಂದರೆ ಕೆನಡಾ ಮತ್ತು ಅಮೆರಿಕದ ಕೆಲ ಭಾಗಗಳಲ್ಲಿ ದಾಖಲೆ ಶಾಖದ ಕಿರಣಗಳು ನೂರಾರು ಜನರ ಸಾವಿಗೆ ಕಾರಣವಾಗಿದೆ.

ವರ್ಷದ ಆರಂಭದಲ್ಲಿ ಮಾರಣಾಂತಿಕ ಶಾಖದ ಸೂರ್ಯನ ಕಿರಣಗಳು ಅವರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ವೈದ್ಯರು ತಿಳಿಸಿದ್ದಾರೆ. ರೋಗಿಯನ್ನು ಪತ್ತೆ ಹಚ್ಚಿದ ಕೊಟನ್‌ಲೇಕ್ ಆಸ್ಪತ್ರೆಗೆ ಡಾ. ಖೈಲ್ ಮೆರಿಟ್ ಏಕ ಕಾಲದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡುವ ರೋಗಿಗಳ ಮೇಲೆ ಸೂರ್ಯ ಕಿರಣದ ಶಾಖದ ಅಲೆಗಳು ಗಂಭೀರ ಪರಿಣಾಮ ಉಂಟು ಮಾಡುವುದಾಗಿ ಅವರು ತಿಳಿಸಿದ್ದಾರೆ.

ಬ್ರಿಟಿಷ್ ಕೊಲಂಬಿಯಾದಲ್ಲಿ 233 ಮಂದಿ ಸಾವು: ಬ್ರಿಟಿಷ್ ಕೊಲಂಬಿಯಾದಲ್ಲಿ ಈ ಕಿರಣಗಳಿಂದ ಕನಿಷ್ಠ 233 ಜನ ಸಾವನ್ನಪ್ಪಿದ್ದಾರೆ. ಹವಾಮಾನ ಶಾಸ್ತ್ರಜ್ಞರು ವಾಯುವ್ಯದ ಮೇಲೆ ಹೆಚ್ಚು ಒತ್ತಡ ಉಂಟು ಮಾಡಿದ್ದರಿಂದ ತುರ್ತು ಪರಿಸ್ಥಿತಿ ಉಂಟು ಮಾಡುತ್ತಿದೆ. ಇದು ಮಾನವರು ಮಾಡುತ್ತಿರುವ ಹವಾಮಾನ ಬದಲಾವಣೆಯಿಂದ ಉಂಟಾಗುತ್ತಿರುವ ತೀವ್ರ ತೆರೆನಾದ ಪರಿಣಾಮ ಇದರಿಂದ ವಿಪರೀತ ಹವಾಮಾನಕ್ಕೆ ಸಂಬಂಧಿಸಿದಂತಹ ಅನಾಹುತಗಳು ಹೆಚ್ಚಾಗಲಿವೆ ಮತ್ತು ತೀವ್ರಗೊಳ್ಳಲಿವೆ.

ಹವಾಮಾನ ಬದಲಾವಣೆಯಿಂದ ಸೂರ್ಯ ಕಿರಣಗಳು ತೀವ್ರತೆ ಹೊಂದಿದ್ದು, ಅವಧಿ ಹೆಚ್ಚಳಗೊಳ್ಳಲಿದೆ. ಸಾಮಾನ್ಯ ಉಷ್ಣಾಂಶಕ್ಕಿಂತ ಹೊಸ ತಾಪಮಾನ ಗರಿಷ್ಠ ತಾಪಮಾನ ಪ್ರಕರಣ ತಲುಪಲಿದೆ ಎಂಬ ಅಂಶವನ್ನು ಪತ್ತೆ ಹಚ್ಚಲಾಗಿದೆ. ಹೆಚ್ಚು ತಾಪಮಾನ ಮತ್ತು ಹೆಚ್ಚು ತೇವಾಂಶ ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟು ಮಾಡಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಆರೋಗ್ಯ ಕ್ಷೀಣ: ಮಹಿಳೆಯ ಆರೋಗ್ಯ ಪರಿಸ್ಥಿತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಆರೋಗ್ಯವಾಗಿರಲು ಅದರಲ್ಲೂ ಹೈಡ್ರೇಟ್ ಆಗಿರಲು ಆ ಮಹಿಳೆ ಸಾಕಷ್ಟು ಕಷ್ಟಪಡುತ್ತಿದ್ದಾಳೆ ಎಂದು ಡಾ.ಕೈಲ್ ಮೆರ್ರಿಟ್ ಹೇಳಿದ್ದಾರೆ.

ಕೆನಡಾದಲ್ಲಿ ಈ ವರ್ಷದಲ್ಲಿ ದಾಖಲೆಯ ಮಟ್ಟದಲ್ಲಿ ಬೀಸಿದ ಬಿಸಿ ಗಾಳಿ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಇದೇ ವರ್ಷದಲ್ಲಿ ಉಷ್ಣಾಂಶ 49.5 ಡಿಗ್ರಿ ಸೆಲ್ಸಿಯಸ್​ಗೂ ಮುಟ್ಟಿತ್ತು. ಹೀಗಾಗಿಯೇ ಅಲ್ಲಿ ಜನರು ತೊಂದರೆಗೆ ಒಳಗಾಗುತ್ತಿದ್ದಾರೆ.

ಉಸಿರಾಟ ಸಮಸ್ಯೆ ಎಂದು ಹೇಳಿಕೊಂಡು ಬಂದ ವ್ಯಕ್ತಿಗೆ ಆ ಸಮಸ್ಯೆಯ ಮೂಲ ಜಾಗತಿಕ ಹವಾಮಾನ ಬದಲಾವಣೆ ಎಂದು ವೈದ್ಯರು ಪತ್ತೆ ಹಚ್ಚಿದ್ದಾರೆ. ಇತ್ತೀಚೆಗೆ ಬ್ರಿಟಿಷ್‌ ಕೊಲಂಬಿಯಾ ಪ್ರಾಂತ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ಆ ಬಳಿಕ ಈ ವ್ಯಕ್ತಿಯಲ್ಲಿ ಆಸ್ತಮಾ ಉಲ್ಬಣವಾಗಿ ಉಸಿರಾಟದ ಸಮಸ್ಯೆ ತೀವ್ರವಾಗಿತ್ತು. ಇದಕ್ಕೆ ಹವಾಮಾನ ಬದಲಾವಣೆಯೇ ಮುಖ್ಯ ಕಾರಣ ಎನ್ನುತ್ತಿದ್ದಾರೆ ವೈದ್ಯರು.

ಬ್ರಿಟಿಷ್‌ ಕೊಲಂಬಿಯಾ ಪ್ರಾಂತ್ಯದಲ್ಲಿ ಕಳೆದ ಹಣಕಾಸು ವರ್ಷದಲ್ಲಿ 1600 ಕಾಡ್ಗಿಚ್ಚು ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ವಾತಾವರಣದಲ್ಲಿ ಉಷ್ಣ ಗಾಳಿ ಸೃಷ್ಟಿಯಾಗಿ ಮಧುಮೇಹ, ಹೃದ್ರೋಗದಂತಹ ಸಮಸ್ಯೆಗಳು ಉಲ್ಬಣವಾಗುತ್ತಿವೆ ಎಂದು ವೈದ್ಯರಾದ ಡಾ| ಕೈಲ್‌ ಮೆರಿಟ್‌ ತಿಳಿಸಿದ್ದಾರೆ.

ಭೂಮಿಯ ಅಂದಾಜು ತಾಪಮಾನ ಏರಿಕೆ: ಇನ್ನೊಂದು ದಶಕದಲ್ಲಿ ಭೂಮಿಯ ತಾಪಮಾನ ಅಂದಾಜು ಮಟ್ಟಕ್ಕಿಂತ ಏರಿಕೆಯಾಗಲಿದೆ ಎಂದು ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆ ವರದಿ ಎಚ್ಚರಿಸಿದ ಬೆನ್ನಲ್ಲೇ, ಶತಮಾನದ (2100ನೇ ಇಸವಿ) ಒಳಗಾಗಿ ಮಂಗಳೂರು ಸೇರಿದಂತೆ ಭಾರತದ ಸಮುದ್ರದಂಚಿನ 12 ನಗರಗಳು ಮುಳುಗಲಿವೆ ಎಂಬ ಮತ್ತೊಂದು ಆಘಾತಕಾರಿ ಎಚ್ಚರಿಕೆ ಸಂದೇಶ ಬಂದಿದೆ. ವಿಶ್ವಸಂಸ್ಥೆಯ ವರದಿಯನ್ನಾಧರಿಸಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಈ ವರದಿ ಬಿಡುಗಡೆ ಮಾಡಿದೆ.

ಮಂಗಳೂರು, ಮುಂಬೈ, ಮರ್ಮಗೋವಾ, ಕೊಚ್ಚಿ, ಪಾರಾದೀಪ್‌, ಖಿದೀರ್‌ಪುರ, ವಿಶಾಖಪಟ್ಟಣಂ, ಚೆನ್ನೈ, ತೂತ್ತುಕುಡಿ, ಕಾಂಡ್ಲಾ, ಒಖಾ, ಭಾವನಗರ ಅಪಾಯದಲ್ಲಿವೆ. ಜಗತ್ತಿನಾದ್ಯಂತ ಸಮುದ್ರ ಮಟ್ಟದಲ್ಲಾಗುತ್ತಿರುವ ಬದಲಾವಣೆಯನ್ನು ಆಧರಿಸಿ ಈ ವರದಿ ನೀಡಲಾಗಿದೆ. ಈಗಿನ ಟ್ರೆಂಡ್‌ ಪ್ರಕಾರ ಸಮುದ್ರ ಏರಿದರೆ 2 ಅಡಿಯಷ್ಟುಏರಲಿದೆ. ಶತಮಾನದ ಅಂತ್ಯದೊಳಗೆ ಇದು ಮತ್ತಷ್ಟುತೀವ್ರಗೊಂಡರೆ, 2100ರ ಅಂತ್ಯಕ್ಕೆ 3 ಅಡಿಯಷ್ಟು ಸಮುದ್ರ ಮಟ್ಟಏರಿಕೆಯಾಗಿ ಈ ನಗರಗಳು ಮುಳುಗಲಿವೆ ಎಂದು ತಿಳಿಸಿದೆ.

English summary
A doctor in Canada’s British Columbia province has diagnosed a patient who came in with breathing trouble as suffering from “climate change”, possibly the first such case recorded till date.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X