ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನಿಸ್ತಾನದಲ್ಲಿ ಸಚಿವಾಲಯ ಪ್ರವೇಶಕ್ಕೆ ಮಹಿಳಾ ಉದ್ಯೋಗಿಗಳಿಗೆ ನಿರ್ಬಂಧ

|
Google Oneindia Kannada News

ಕಾಬೂಲ್, ಸೆಪ್ಟೆಂಬರ್ 17: ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ಬೆನ್ನಲ್ಲೇ ತಾಲಿಬಾನ್ ಮಹಿಳೆಯರ ಹಕ್ಕುಗಳನ್ನು ಕಸಿದುಕೊಳ್ಳಲು ಶುರು ಮಾಡಿದೆ.

ಅಫ್ಘಾನಿಸ್ತಾನದ ಮಹಿಳಾ ವ್ಯವಹಾರಗಳ ಸಚಿವಾಲಯದೊಳಕ್ಕೆ ಮಹಿಳಾ ಉದ್ಯೋಗಿಗಳು ಪ್ರವೇಶಿಸದಂತೆ ತಾಲಿಬಾನ್ ನಿರ್ಬಂಧ ಹೇರಿದ್ದು, ಸಚಿವಾಲಯದೊಳಕ್ಕೆ ಕೇವಲ ಪುರುಷ ಉದ್ಯೋಗಿಗಳ ಪ್ರವೇಶಕ್ಕೆ ಮಾತ್ರ ಅನುಮತಿ ಕಲ್ಪಿಸಿಕೊಟ್ಟಿರುವ ಮಾಹಿತಿ ಲಭ್ಯವಾಗಿದೆ.

 ಅಫ್ಘಾನ್‌ ಮಹಿಳಾ ಹಕ್ಕುಗಳ ಮೇಲೆ 'ಭಯಾನಕ' ನಿರ್ಬಂಧ ಹೇರುತ್ತಿದೆ ತಾಲಿಬಾನ್‌: ವಿಶ್ವಸಂಸ್ಥೆ ಕಳವಳ ಅಫ್ಘಾನ್‌ ಮಹಿಳಾ ಹಕ್ಕುಗಳ ಮೇಲೆ 'ಭಯಾನಕ' ನಿರ್ಬಂಧ ಹೇರುತ್ತಿದೆ ತಾಲಿಬಾನ್‌: ವಿಶ್ವಸಂಸ್ಥೆ ಕಳವಳ

ಈ ಹಿಂದೆ, ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಇಸ್ಲಾಂ ತತ್ವಗಳ ಆಧಾರದ ಮೇಲೆ ಮಹಿಳೆಯರಿಗೆ ತಮ್ಮ ಹಕ್ಕುಗಳನ್ನು ನೀಡಲು ಬದ್ಧರಾಗಿರುವುದಾಗಿ ಜನರಿಗೆ ಭರವಸೆ ನೀಡಿದ್ದರು.

In Afghanistan Taliban Bans Female Employees From Entering Ministry Of Women Affairs

ಮಹಿಳೆಯರಿಗೆ ಆರೋಗ್ಯ ಕ್ಷೇತ್ರಗಳಲ್ಲಿ ಮತ್ತು ಇತರೆ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಅವಕಾಶ ನೀಡಲಾಗುವುದು ಮತ್ತು ಅವರ ವಿರುದ್ಧ ಯಾವುದೇ ತಾರತಮ್ಯ ಇರುವುದಿಲ್ಲ ಎಂದು ಅವರು ಹೇಳಿಕೊಂಡಿದ್ದರು.

ಅಫ್ಘಾನಿಸ್ತಾನದಲ್ಲಿ ಅಮೆರಿಕ ನೇತೃತ್ವದ ಮೈತ್ರಿ ಪಡೆ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ತಾಲಿಬಾನ್ ಅಸ್ತಿತ್ವ ಕಳೆದುಕೊಂಡಿತ್ತು. ಅಮೆರಿಕ ನೂತನ ಅಧ್ಯಕ್ಷ ಜೋ ಬೈಡನ್ ಅವರು ಅಫ್ಘಾನಿಸ್ತಾನದಲ್ಲಿನ ಅಮೆರಿಕ ಸೇನಾ ಪಡೆಯನ್ನು ವಾಪಸ್ ಕರೆಯಿಸಿಕೊಳ್ಳುವುದಾಗಿ ಘೋಷಿಸಿದ್ದರು. ಅಫ್ಘಾನಿಸ್ತಾನದಿಂದ ಅಮೆರಿಕ ಸೇನಾಪಡೆ ವಾಪಸ್ ಆಗುತ್ತಿದ್ದಂತೆಯೇ ತಾಲಿಬಾನ್ ಉಗ್ರರು ಅಫ್ಘನ್ ಆಡಳಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದರು.

ಈ ಬಗ್ಗೆ ರಷ್ಯಾ ಮೂಲದ ಸುದ್ದಿ ಸಂಸ್ಥೆ ಸ್ಪುಟ್ನಿಕ್ ನ್ಯೂಸ್ ಏಜೆನ್ಸಿ ವರದಿ ಮಾಡಿದ್ದು, 'ನಾಲ್ವರು ಮಹಿಳಾ ಉದ್ಯೋಗಿಗಳಿಗೆ ಸಚಿವಾಲಯದೊಳಕ್ಕೆ ಪ್ರವೇಶಿಸಲು ಅನುಮತಿ ನೀಡಿಲ್ಲ. ತಾಲಿಬಾನ್ ನಿರ್ಧಾರದ ವಿರುದ್ಧ ಮಹಿಳೆಯರು ಸಚಿವಾಲಯದ ಸಮೀಪ ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಇತ್ತೀಚೆಗಷ್ಟೇ ಉಗ್ರ ಸಂಘಟನೆಯ ವಕ್ತಾರರು ಮಾತ್ರ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ಮುಂದುವರೆಸಿದ್ದಾರೆ. ಮಹಿಳೆಯರ ಹಕ್ಕುಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ವಿವಾದಾತ್ಮಕ ಹೇಳಿಕೆ ನೀಡುತ್ತಾ ವ್ಯಾಪಕ ಟೀಕೆಗೆ ಗುರಿಯಾಗುತ್ತಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಾಲಿಬಾನ್ ವಕ್ತಾರ ಸಯ್ಯದ್ ಜೆಕ್ರುಲ್ಲಾ ಹಾಶಮಿ ಮಹಿಳೆಯರು ಮಂತ್ರಿಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಮಹತ್ವದ ಜವಾಬ್ದಾರಿಗಳನ್ನು ಹೆಣ್ಣುಮಕ್ಕಳಿಗೆ ವಹಿಸಿದರೆ ಅವರ ಕುತ್ತಿಗೆ ಮೇಲೆ ಹೆಚ್ಚಿನ ಭಾರವನ್ನು ಹೇರಿದಂತಾಗುತ್ತದೆ. ಹೀಗಾಗಿ ಮಹಿಳೆಯರು ಕೇವಲ ಜನ್ಮ ನೀಡಬೇಕಷ್ಟೇ ಎಂದು ಹೇಳಿದ್ದಾರೆ.

ಅಫ್ಘಾನ್ ಸರ್ಕಾರದ ವಿರುದ್ಧ ಮಹಿಳೆಯರು ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಈ ಮಹಿಳಾ ಪ್ರತಿಭಟನಾಕಾರರು ಅಫ್ಘಾನಿಸ್ತಾನದಲ್ಲಿ ಎಲ್ಲ ಮಹಿಳೆಯರನ್ನು ಪ್ರತಿನಿಧಿಸಲು ಸಾಧ್ಯವಿಲ್ಲ' ಎಂದಿದ್ದಾರೆ.

ಅಫ್ಘಾನ್ ಮಹಿಳೆಯರು ತಮ್ಮ ಜೀವವನ್ನು ಪಣಕ್ಕಿಟ್ಟು ದಂಗೆಕೋರ ಗುಂಪಿನ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವ ಸಮಯದಲ್ಲಿ ತಾಲಿಬಾನ್‌ನ ಈ ಹೇಳಿಕೆ ಬಂದಿದೆ. ಈ ಹೇಳಿಕೆಗಳು ತಾಲಿಬಾನ್ ತನ್ನ ಹಳೆಯ ದಾರಿಯತ್ತ ಸಾಗಬಹುದು ಎಂಬ ಆತಂಕವನ್ನು ಹುಟ್ಟುಹಾಕಿವೆ.

ಕಾಬೂಲ್‌ನಲ್ಲಿ ಅಫ್ಘಾನಿಸ್ತಾನದ ಹೊಸ ಮಧ್ಯಂತರ ಸರ್ಕಾರವನ್ನು ವಿರೋಧಿಸುತ್ತಿರುವ ಅಫ್ಘಾನ್ ಮಹಿಳೆಯರು ತಾಲಿಬಾನ್‌ನಿಂದ ದೂರ ಓಡಿಸಲ್ಪಟ್ಟರು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ತಾಲಿಬಾನ್ ಭಿನ್ನಮತವನ್ನು ಹತ್ತಿಕ್ಕುವಲ್ಲಿ ಮಹಿಳಾ ಪ್ರತಿಭಟನಾಕಾರರ ವಿರುದ್ಧ ಚಾಟಿ ಮತ್ತು ಲಾಠಿಗಳನ್ನು ಪ್ರಯೋಗ ಮಾಡಲಾಗಿದೆ ಎಂದು ವರಿಯಾಗಿದೆ.

1996 ರಿಂದ 2001ರವರೆಗೆ ತಾಲಿಬಾನ್ ಆಳ್ವಿಕೆಯಲ್ಲಿ ಮಹಿಳೆಯರಿಗೆ ಕೆಲಸ ಮಾಡಲು ಅವಕಾಶವಿರಲಿಲ್ಲ. ಯುವತಿಯರು ಶಾಲೆಗೆ ಹೋಗಲು ಸಾಧ್ಯವಿರಲಿಲ್ಲ. ಮಹಿಳೆಯರು ತಮ್ಮ ಮನೆಯಿಂದ ಹೊರಗೆ ಹೋಗಲು ಬಯಸಿದರೆ ಮುಖವನ್ನು ಮುಚ್ಚಿಕೊಳ್ಳಬೇಕಾಗಿತ್ತು.

ಈಗಾಗಲೇ ಅಪ್ಘಾನಿಸ್ತಾನದಲ್ಲಿ ಹೊಸ ಸರ್ಕಾರದ ಹುಮ್ಮಸ್ಸಿನಲ್ಲಿರುವ ತಾಲಿಬಾನ್ ನಾಯಕರು ಆಳ್ವಿಕೆ ನಡೆಸಲು ಸಜ್ಜಾಗಿದ್ದಾರೆ. ಶರಿಯಾ ಸೇರಿದಂತೆ ಅನೇಕ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸುವುದಾಗಿ ಹೇಳಿದ್ದಾರೆ. ಇದರಿಂದ ಭೀತಿಯಲ್ಲಿರುವ ಅಫ್ಘಾನ್ ಪ್ರಜೆಗಳು ದೇಶಬಿಟ್ಟು ತೆರಳಲು ಪ್ರಯತ್ನಿಸುತ್ತಿದ್ದಾರೆ.

English summary
Despite promising to respect women's rights, the Taliban has backtracked from its assurances. In a shocking development, the Taliban has banned the entry of female employees in the Ministry of Women Affairs in Kabul. A ministry employee has reportedly informed that only men would be allowed to enter the building of the ministry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X