ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ತೆಗಳುವ ಭರದಲ್ಲಿ ಪಾಕ್ ಮಾಡಿದ ಎಡವಟ್ಟು ಇದು!

|
Google Oneindia Kannada News

Recommended Video

ನಮ್ಮ ಭಾರತವನ್ನ ಪಾಕ್ ತೆಗಳಲು ಹೋಗಿ ಮಾಡಿಕೊಂಡ ಎಡವಟ್ಟು ನೋಡಿ

ವಿಶ್ವಸಂಸ್ಥೆ, ಸೆಪ್ಟೆಂಬರ್ 25: ವಿಶ್ವ ಸಂಸ್ಥೆಯ ಮಹಾ ಅಧಿವೇಶನದಲ್ಲಿ ಭಾರತವನ್ನು ತೆಗಳಲು ಹೋದ ಪಾಕಿಸ್ತಾನ, ಭಾರೀ ಮಖಭಂಗ ಅನುಭವಿಸಿದೆ.

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಶಾಶ್ವತ ಪ್ರತಿನಿಧಿಯಾಗಿರುವ ಮಲೀಲಾ ಲೋಧಿ ಅವರು, ವಿಶ್ವಸಂಸ್ಥೆಯಲ್ಲಿ ಭಾನುವಾರ ಮಾಡಿದ ಭಾಷಣದಲ್ಲಿ ಮಹಾ ಪ್ರಮಾದ ಎಸಗಿದ್ದಾರೆ. ತಮ್ಮ ಭಾಷಣದಲ್ಲಿ, ಬಾಂಬ್ ಸ್ಫೋಟವೊಂದಕ್ಕೆ ಸಿಲುಕಿ ಮುಖವೆಲ್ಲಾ ಗಾಯ ಮಾಡಿಕೊಂಡ ಯುವತಿಯೊಬ್ಬಳ ಫೋಟೋವನ್ನು ಸಮ್ಮೇಳನದಲ್ಲಿ ಪ್ರದರ್ಶಿಸಿದ ಅವರು, ''ಇದು ಕಾಶ್ಮೀರದಲ್ಲಿ ಭಾರತೀಯ ಸೇನೆಯು ಕಾಶ್ಮೀರಿಗಳಿಗೆ ನೀಡುತ್ತಿರುವ ಹಿಂಸೆಗೆ ಸಾಕ್ಷಿ'' ಎಂದು ಬಣ್ಣಿಸಿದ್ದರು.

In a bid to allege India regarding Kashmir Pak receive massive blow in UN

ಆದರೆ, ಅವರ ಭಾಷಣ ಮುಗಿದ ಕೆಲವೇ ಹೊತ್ತಿನಲ್ಲಿ ಈ ಫೋಟೋ ಅಸಲಿತನವನ್ನು ಮಾಧ್ಯಮಗಳು ಬಯಲು ಮಾಡಿದವು. ಅಸಲಿಗೆ ಈ ಫೋಟೋ ಮಲೀಲಾ ಅವರು ಹೇಳಿದಂತೆ ಕಾಶ್ಮೀರದಲ್ಲಿ ನಡೆದ ಸೇನೆಯಿಂದಾದ ದಾಳಿಯಲ್ಲಿ ನಲುಗಿದ ಯುವತಿಯದ್ದಾಗಿರಲಿಲ್ಲ. ಬದಲಿಗೆ, ಅದು 2014ರಲ್ಲಿ ಪ್ಯಾಲೆಸ್ತೀನ್ ನಲ್ಲಿ ಇಸ್ರೇಲ್ ನಡೆಸಿದ್ದ ವೈಮಾನಿಕ ದಾಳಿಗೆ ಸಿಲುಕಿ ಮುಖದ ತುಂಬೆಲ್ಲಾ ಗಾಯ ಮಾಡಿಕೊಂಡಿದ್ದ ಯುವತಿಯ ಫೋಟೋ.

ಈ ಫೋಟೋವನ್ನು ಪ್ರತಿಷ್ಠಿತ ಸುದ್ದಿಸಂಸ್ಥೆಗಳಾದ ನ್ಯೂಯಾರ್ಕ್ ಟೈಮ್ಸ್ ಹಾಗೂ ಗಾರ್ಡಿಯನ್ ಸೇರಿದಂತೆ 2014ರಲ್ಲೇ ಜಗತ್ತಿನ ನಾನಾ ಸುದ್ದಿ ಸಂಸ್ಥೆಗಳು ಉಪಯೋಗಿಸಿವೆ.

ಹೀಗೆ, ಯಾವುದೋ ಫೋಟೋವನ್ನು ತೋರಿಸಿ ಭಾರತದ ಮೇಲೆ ಗೂಬೆ ಕೂರಿಸಲು ಮುಂದಾದ ಪಾಕಿಸ್ತಾನ ಈಗ ತೀವ್ರ ಮುಜುಗರಕ್ಕೆ ಒಳಗಾಗಿದೆ. ಅಲ್ಲದೆ, ಭಾರತದ ಮೇಲಿನ ತನ್ನ ಆರೋಪಗಳನ್ನು ಸಾಬೀತುಪಡಿಸಲು ಅಸಂಬದ್ಧ ಸಾಕ್ಷ್ಯಾಧಾರಗಳನ್ನು ಕಲೆಹಾಕುವ ಗುಣವನ್ನು ಪಾಕಿಸ್ತಾನ ತಾನೇ ಜಗಜ್ಜಾಹೀರು ಮಾಡಿಕೊಂಡಿದೆ.

English summary
The photo of a girl -- her face bearing multiple bruises -- which Pakistan's Maleeha Lodhi brandished at the United Nations on Saturday evening as an example of "Indian brutality" in Kashmir turns out to be of a resident of Palestine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X