ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ರಾನ್ಸ್‌ನಲ್ಲಿ ಕಳೆದ 24 ಗಂಟೆಯಲ್ಲಿ 30 ಸಾವಿರ ಕೊರೊನಾ ಸೋಂಕಿತರು ಪತ್ತೆ

|
Google Oneindia Kannada News

ಫ್ರಾನ್ಸ್, ಅಕ್ಟೋಬರ್ 16: ಫ್ರಾನ್ಸ್‌ನಲ್ಲಿ ಕಳೆದ 24 ಗಂಟೆಯಲ್ಲಿ 30 ಸಾವಿರ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಪ್ರಧಾನಿ ಜೀನ್ ಕ್ಯಾಸ್ಟೆಕ್ಸ್ ಟ್ವೀಟ್ ಮಾಡಿದ್ದು, ಫ್ರೆಂಚ್ ನಾಗರಿಕರಿಗೆ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ನಮ್ಮನ್ನು ನಾವು ಕಾಪಾಡಿಕೊಳ್ಳಬೇಕು ಎನ್ನುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಹಾಗೆಯೇ ನಿಧಾನವಾಗಿ ಬೇರೆಯವರನ್ನೂ ನಮ್ಮ ಜತೆಯಲ್ಲಿ ಕಾಪಾಡುತ್ತೇವೆ ಎನ್ನುವ ಮನಸ್ಥಿತಿಗೆ ಬರಬೇಕು ಇದರಿಂದ ಕೊರೊನಾ ಸೋಂಕು ಹರಡುವುದನ್ನು ತಪ್ಪಿಸಬಹುದಾಗಿದೆ ಎಂದು ಹೇಳಿದ್ದಾರೆ.

In 24 Hours France Registers 30,000 New Coronavirus Cases

ಫ್ರಾನ್ಸ್‌ನಲ್ಲಿ ನಾಲ್ಕು ವಾರಗಳ ಆರೋಗ್ಯ ತುರ್ತುಪರಿಸ್ಥಿತಿಯನ್ನು ಘೋಷಿಸಲಾಗಿದೆ. ಒಂದೊಮ್ಮೆ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದರೆ ಅದನ್ನು ವಿಸ್ತರಿಸಲಾಗುವುದು ಎಂದು ಪ್ರಧಾನಿ ತಿಳಿಸಿದ್ದಾರೆ.

ಪ್ಯಾರಿಸ್ ಹಾಗೂ ಇತರೆ 8 ಮೆಟ್ರೋಪೊಲಿಟನ್ ಸಿಟಿಗಳಲ್ಲಿ ಶನಿವಾರ ಮಧ್ಯರಾತ್ರಿಯಿಂದ ಕರ್ಫ್ಯೂ ಜಾರಿಗೆ ಬರಲಿದೆ.ಜರ್ಮನಿ, ಇಟಲಿ, ಪೋಲೆಂಡ್ ಮತ್ತು ನೆದರ್ಲ್ಯಾಂಡ್ಸ್ ಹೊಸ ವೈಯಕ್ತಿಕ ದಾಖಲೆಗಳನ್ನು ನಿರ್ಮಿಸಿದ ರಾಷ್ಟ್ರಗಳಲ್ಲಿ ಸೇರಿವೆ, ಏಕೆಂದರೆ ಅವುಗಳು COVID-19 ನ ಸಾವಿರಾರು ಹೊಸ ಸೋಂಕುಗಳನ್ನು ನಿತ್ಯ ದಾಖಲಿಸುತ್ತಿವೆ.

ಜರ್ಮನಿಯಲ್ಲಿ 6,638 ಪ್ರಕರಣಗಳು ದಾಖಲಾಗಿದ್ದು, ಇದು ಮಾರ್ಚ್ 28 ರಂದು ದಾಖಲಾದ ದಾಖಲೆಗಿಂತ 344 ಪ್ರಕರಣಗಳು ಹೆಚ್ಚಿದ್ದರೆ, ಇಟಲಿಯಲ್ಲಿ 8804 ಪ್ರಕರಣಗಳು ಪತ್ತೆಯಾಗಿವೆ.

ಮೊದಲ ಪ್ರಕರಣ ಕಂಡುಬಂದಿದ್ದ ದಿನದಿಂದಲೇ ಪರೀಕ್ಷಾ ಸಾಮೃರ್ಥ್ಯವನ್ನು ಹೆಚ್ಚಿಸಲಾಗಿದೆ. ಸ್ವಿಡ್ಜರ್‌ಲೆಂಡ್‌ನಲ್ಲಿ 2613 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ನೆದರ್‌ಲೆಂಡ್‌ನಲ್ಲಿ 7500 ಪ್ರಕರಣಗಳು ಪತ್ತೆಯಾಗಿದ್ದರು, ಪೋಲೆಂಡ್‌ನಲ್ಲಿ 8000 ಸಾವಿರ ಪ್ರಕರಣಗಳು ಪತ್ತೆಯಾಗಿವೆ.

Recommended Video

Chris Gayle ಮೊದಲ ಪಂದ್ಯದಲ್ಲೇ ಸುನಾಮಿ | Oneindia Kannada

ಲಂಡನ್‌ನಲ್ಲಿ ಕೂಡ ಹೊಸ ನಿರ್ಬಂಧವನ್ನು ಘೋಷಿಸಲಾಗಿದ್ದು, ಶುಕ್ರವಾರ ರಾತ್ರಿಯಿಂದ ಚಾಲ್ತಿಗೆ ಬರಲಿದೆ. ಯುರೋಪ್‌ನಲ್ಲಿ ಒಂದೊಮ್ಮೆ ಶೇ.95ರಷ್ಟು ಮಂದಿ ಮಾಸ್ಕ್ ಧರಿಸಿದರೆ ಫೆಬ್ರವರಿ ಅಷ್ಟೊತ್ತಿಗೆ 280,000 ಮಂದಿ ಜೀವವನ್ನು ಉಳಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

English summary
France has announced a record 30,000 new COVID-19 cases in a day,Prime Minister Jean Castex made the revelation on Twitter, calling on French citizens to understand the seriousness of the situation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X