ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಒಂದು ವಿಚಾರಕ್ಕೆ ಚೀನಾವನ್ನು ಬೆಂಬಲಿಸುತ್ತೇನೆ ಎಂದ ಇಮ್ರಾನ್ ಖಾನ್

|
Google Oneindia Kannada News

ಇಸ್ಲಾಮಾಬಾದ್, ಜುಲೈ 02: ಒಂದು ವಿಚಾರದಲ್ಲಿ ಚೀನಾ ನಡೆಯನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಬೆಂಬಲಿಸುವುದಾಗಿ ಹೇಳಿದ್ದಾರೆ.

ಉಯಿಘರ್ ಮುಸ್ಲಿಮರನ್ನು ಕಾನ್ಸಂಟ್ರೇಶನ್ ಕ್ಯಾಂಪ್ ಗಳಲ್ಲಿ ಚೀನಾ ಬಂಧಿಸಿರುವ ಬಗ್ಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಪ್ರತಿಕ್ರಿಯಿಸಿದ್ದಾರೆ.

ತಪ್ಪು ತಿದ್ದಿಕೊಳ್ಳದ ಪಾಕ್, FATFನ ಬೂದುಪಟ್ಟಿಯಲ್ಲೇ ಮುಂದುವರಿಕೆತಪ್ಪು ತಿದ್ದಿಕೊಳ್ಳದ ಪಾಕ್, FATFನ ಬೂದುಪಟ್ಟಿಯಲ್ಲೇ ಮುಂದುವರಿಕೆ

ಚೀನಾದ ಪತ್ರಕರ್ತರೊಂದಿಗೆ ಮಾತನಾಡಿ, ಉಯಿಘರ್ ಮುಸ್ಲಿಮರ ವಿಷಯದಲ್ಲಿ ಪಾಶ್ಚಿಮಾತ್ಯ ಮಾಧ್ಯಮಗಳು ಅತಿರಂಜಿತ ವರದಿ ಮಾಡುತ್ತಿವೆ. ಮಾಧ್ಯಮ ವರದಿಗಳಿಗೆ ಸಂಪೂರ್ಣ ಭಿನ್ನ ವಾತಾವರಣವಿದೆ ಎಂದು ಅವರು ಹೇಳಿದರು.

Imran Khan Says Pakistan Accepts ‘Chinese Version’ Of Treatment Of Uyghur Muslims

ಹಲವಾರು ಮಂದಿ ಉಯಿಘರ್ ಮುಸ್ಲಿಮರನ್ನು ನಿರ್ಬಂಧಿಸಿ, ಬೆದರಿಕೆ ಹಾಕುತ್ತಿರುವ ಬಗ್ಗೆ ಅಮೆರಿಕಾ ಕಾಂಗ್ರೆಸ್ ಆಯೋಗ ವರದಿಯನ್ನು ಬಿಡುಗಡೆ ಮಾಡಿದೆ. ಉಯಿಘರ್ ಮುಸ್ಲಿಮರ ವಿಷಯದಲ್ಲಿ ಚೀನಾ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದೆ ಎಂದು ಆಯೋಗ ಹೇಳಿದೆ.

ಚೀನಾದೊಂದಿಗೆ ನಾವು ನಿಕಟ ಸಂಬಂಧ ಹೊಂದಿದ್ದೇವೆ. ಹಾಗಾಗಿ ಈ ವಿಷಯದಲ್ಲಿ ಚೀನಾ ದೃಷ್ಟಿಕೋನವನ್ನು ನಾವು ಬೆಂಬಲಿಸಲಿದ್ದೇವೆ ಎಂದು ಇಮ್ರಾನ್ ಪ್ರತಿಕ್ರಿಯಿಸಿದ್ದಾರೆ.

ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ವ್ಯಾಪಕವಾಗಿದೆ. ಆದರೆ ಮಾಧ್ಯಮಗಳು ಅವುಗಳನ್ನು ನಿರ್ಲಕ್ಷಿಸಿ ಕೇವಲ ಹಾಂಗ್ ಕಾಂಗ್ ಬಗ್ಗೆ ಗಮನ ಹರಿಸುತ್ತಿವೆ. ಇದು ಸಂಪೂರ್ಣ ವಂಚನೆ ಎಂದು ದೂರಿದ್ದಾರೆ.

ಕಾಶ್ಮೀರದಂತಹ ಪ್ರದೇಶದಲ್ಲಿ ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ. ಆದರೆ ಪಾಶ್ಚಿಮಾತ್ಯ ಮಾಧ್ಯಮಗಳು ಅದರ ಬಗ್ಗೆ ಬಾಯಿಬಿಡುತ್ತಿಲ್ಲ ಎಂದು ಇಮ್ರಾನ್ ಅಸಮಧಾನ ವ್ಯಕ್ತಪಡಿಸಿದ್ದಾರೆ.

English summary
Pakistan Prime Minister Imran Khan on Thursday said Islamabad accepts the “Chinese version” of the treatment of Uyghur Muslims because of its “extreme proximity and relationship” with Beijing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X