ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಕ್ತಪಾತ ಆಗುತ್ತೆ ಅಂತ ಸುಮ್ಮನಾದೆ: ಇಮ್ರಾನ್ ಖಾನ್

|
Google Oneindia Kannada News

ಇಸ್ಲಾಮಾಬಾದ್, ಮೇ 31: ತಮ್ಮ ಪಕ್ಷದ ಕಾರ್ಯಕರ್ತರು ಮತ್ತು ಪೊಲೀಸರ ಮಧ್ಯೆ ಭೀಕರ ಸಂಘರ್ಷ ಏರ್ಪಟ್ಟು ರಕ್ತಪಾತ ಆಗುವುದನ್ನು ತಪ್ಪಿಸಲು 'ಆಜಾದಿ ಮೆರವಣಿಗೆ' (Azadi March) ನಿಲ್ಲಿಸಿದೆ ಎಂದು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಕಳೆದ ವಾರ ಮೇ 25ರಂದು ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್‌ಗೆ ಪಿಟಿಐ ಪಕ್ಷದ ಕಾರ್ಯಕರ್ತರು 'ಆಜಾದಿ ಮೆರವಣಿಗೆ' ಮೂಲಕ ಮುತ್ತಿಗೆ ಹಾಕಬೇಕಿತ್ತು. ಆದರೆ, ಮಾಜಿ ಪ್ರಧಾನಿ ಹಠಾತ್ತನೇ ಪ್ರತಿಭಟನಾ ಮೆರವಣಿಗೆಯನ್ನು ನಿಲ್ಲಿಸುವ ನಿರ್ಧಾರ ಮಾಡಿ ಅಚ್ಚರಿ ಹುಟ್ಟಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಇಮ್ರಾನ್ ಖಾನ್, ತಾವೇನಾದರೂ ರ‍್ಯಾಲಿ ರದ್ದು ಮಾಡದೇ ಹೋಗಿದ್ದರೆ ಪೊಲೀಸರು ಮತ್ತು ಪಕ್ಷದ ಕಾರ್ಯಕರ್ತರ ಮಧ್ಯೆ ತೀವ್ರ ಸಂಘರ್ಷವೇ ಆಗಿಹೋಗುತ್ತಿತ್ತು ಎಂದಿದ್ದಾರೆ.

ಒಂದು ವೇಳೆ ಪ್ರತಿಭಟನೆಯನ್ನು ನಾವು ಮುಂದುವರಿಸಿದ್ದರೆ ಹಿಂಸಾಚಾರವಾಗುತ್ತಿತ್ತು. ಅದರಿಂದ ಕಾನೂನು ಸುವ್ಯವಸ್ಥೆಗೆ ಭಂಗವಾಗಿ ಆ ಪರಿಸ್ಥಿತಿಯ ಲಾಭವನ್ನು ಶಾಹಬಾಜ್ ಷರೀಫ್ ಸರಕಾರ ಪಡೆದುಕೊಳ್ಳುತ್ತಿತ್ತು ಎಂಬುದು ಪಿಟಿಐ ಪಕ್ಷದ ಮುಖ್ಯಸ್ಥರೂ ಆಗಿರುವ ಅವರು ಅಭಿಪ್ರಾಯಪಟ್ಟಿದ್ದಾರೆ.

Video: ಪಾಕಿಸ್ತಾನದಲ್ಲಿ ಮೆಟ್ರೋ ನಿಲ್ದಾಣಕ್ಕೆ ಬೆಂಕಿ ಹಚ್ಚಿದ ಇಮ್ರಾನ್ ಖಾನ್ ಬೆಂಬಲಿಗರು!Video: ಪಾಕಿಸ್ತಾನದಲ್ಲಿ ಮೆಟ್ರೋ ನಿಲ್ದಾಣಕ್ಕೆ ಬೆಂಕಿ ಹಚ್ಚಿದ ಇಮ್ರಾನ್ ಖಾನ್ ಬೆಂಬಲಿಗರು!

"ಪೊಲೀಸರ ಬಗ್ಗೆ ಅದಾಗಲೇ ಕಾರ್ಯಕರ್ತರಿಗೆ ದ್ವೇಷ ತೀವ್ರಗೊಳ್ಳತೊಡಗಿತ್ತು. ನನ್ನನ್ನು ಕಂಡಿದ್ದರೆ ಅವರು ಇನ್ನೂ ಉದ್ರೇಕಗೊಳ್ಳುತ್ತಿದ್ದರು... ಬುಲೆಟ್ ಫೈರಿಂಗ್ ಆಗುತ್ತೆ ಅಂತ ನೂರಕ್ಕೆ ನೂರು ನನಗೆ ಗೊತ್ತಿತ್ತು. ನಮ್ಮ ಕಡೆಯಲ್ಲೂ ಕೆಲ ಜನರು ಪಿಸ್ತೂಲ್ ಇಟ್ಟುಕೊಂಡು ಸಿದ್ಧವಾಗಿದ್ದರು. ಇದರಿಂದ ಪೊಲೀಸರು, ಸೇನೆ ವಿರುದ್ಧ ಇನ್ನಷ್ಟು ದ್ವೇಷ ಹೆಚ್ಚಿ, ದೇಶದೊಳಗೆ ಒಡಕುಗಳಿಗೆ ಎಡೆ ಮಾಡಿಕೊಡುತ್ತಿತ್ತು" ಎಂದು ಮಾಧ್ಯಮ ಸಂದರ್ಶನವೊಂದರಲ್ಲಿ ಇಮ್ರಾನ್ ಖಾನ್ ಹೇಳಿದ್ಧಾರೆ.

ಆಜಾದಿ ಮೆರವಣಿಗೆ

ಆಜಾದಿ ಮೆರವಣಿಗೆ

ಇಮ್ರಾನ್ ಖಾನ್ ದಿಢೀರ್ ಬೆಳವಣಿಗೆಯಲ್ಲಿ ಅಧಿಕಾರ ಕಳೆದುಕೊಂಡ ಬಳಿಕ ಅವರ ಪಿಟಿಐ ಪಕ್ಷದ ಕಾರ್ಯಕರ್ತರು ಹಲವೆಡೆ ಪ್ರತಿಭಟನೆಗಳನ್ನು ನಡೆಸಿದ್ದರು. 2014 ಮತ್ತು 2019ರಲ್ಲಿ ಇಮ್ರಾನ್ ಖಾನ್ ಆಜಾದಿ ಜಾಥಾ ನಡೆಸಿ ಯಶಸ್ವಿಯಾಗಿದ್ದರು. ಅದೇ ತಂತ್ರವನ್ನು ಈ ಬಾರಿಯೂ ಮಾಡಲು ಅವರು ಸಿದ್ಧವಾಗಿದ್ದರು. ಮಾರ್ಚ್ 25ರಂದು ರಾಜಧಾನಿನಗರಿ ಇಸ್ಲಾಮಾಬಾದ್‌ಗೆ ಮುತ್ತಿಗೆ ಹಾಕುವಂತೆ ಅವರು ಅದಕ್ಕೆ ಮೂರು ದಿನಗಳ ಹಿಂದೆ ತಮ್ಮ ಕಾರ್ಯಕರ್ತರಿಗೆ ಕರೆ ನೀಡಿದ್ದರು. ಅದರಂತೆ ಪಾಕಿಸ್ತಾನಾದ್ಯಂತ ಪಿಟಿಐ ಕಾರ್ಯಕರ್ತರು ವಿವಿಧ ವಾಹನಗಳಲ್ಲಿ ಇಸ್ಲಾಮಾಬಾದ್‌ಗೆ ಆಗಮಿಸತೊಡಗಿದರು. ಇದು ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಕ್ಯಾಪಿಟಲ್ ಹಿಲ್‌ಗೆ ಮುತ್ತಿಗೆ ಹಾಕಿದ ರೀತಿಯಲ್ಲಿ ಪಾಕಿಸ್ತಾನದಲ್ಲಿ ಪರಿಸ್ಥಿತಿ ಉದ್ಭವವಾಗುವ ಸಾಧ್ಯತೆ ಇತ್ತು.

ಪಾಕಿಸ್ತಾನ ಸರಕಾರ ಅಲ್ಲಲ್ಲಿ ಪ್ರತಿಭಟನಾಕಾರರನ್ನು ತಡೆಯಲು ಕ್ರಮ ಕೈಗೊಂಡಿತು. ಹಲವು ಮಂದಿಯನ್ನು ಬಂಧಿಸಿತು. ರ‍್ಯಾ ತಡೆಗಟ್ಟಲು ದೊಡ್ಡ ದೊಡ್ಡ ಕಂಟೇನರ್‌ಗಳನ್ನು ಮಾರ್ಗಮಧ್ಯೆ ಹಾಕಲಾಗಿತ್ತು. ಆ ಕಂಟೇನರ್‌ಗಳನ್ನು ಬದಿಗೆ ಸರಿಸಲು ಪಿಟಿಐ ಕಾರ್ಯಕರ್ತರು ಕ್ರೇನ್‌ಗಳನ್ನೇ ತಂದರು.
ಹಲವೆಡೆ ಹಿಂಸಾಚಾರಗಳಾದವು. ಪಂಜಾಬ್, ಲಾಹೋರ್, ಕರಾಚಿ ಸೇರಿದಂತೆ ಹಲವು ಕಡೆ ಪೊಲೀಸರು ಮತ್ತು ಪಿಟಿಐ ಕಾರ್ಯಕರ್ತರ ಮಧ್ಯೆ ಘರ್ಷಣೆಯಾಯಿತು. ಕೆಲವೆಡೆ ಪೊಲೀಸರು ಫೈರಿಂಗ್ ಕೂಡ ಮಾಡಿದರು.

ಶೀಘ್ರವೇ ಚುನಾವಣೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದ ಇಮ್ರಾನ್ ಖಾನ್ಶೀಘ್ರವೇ ಚುನಾವಣೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದ ಇಮ್ರಾನ್ ಖಾನ್

ಎಲ್ಲೆ ಮೀರಿದ ಪಿಟಿಐ

ಎಲ್ಲೆ ಮೀರಿದ ಪಿಟಿಐ

ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷದ ಕಾರ್ಯಕರ್ತರು ಸಾಕಷ್ಟು ಸಂಖ್ಯೆಯಲ್ಲಿ ಮೇ 25ರಂದು ಇಸ್ಲಾಮಾಬಾದ್ ನಗರ ಪ್ರವೇಶಿಸಿದ್ದರು. ನಗರದ ನಿರ್ದಿಷ್ಟ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಆದರೆ, ಅದನ್ನು ಮೀರಿ ಡಿ-ಚೌಕ್ ಪ್ರದೇಶದತ್ತ ಪ್ರತಿಭಟನಾಕಾರರು ಧಾವಿಸಿದ್ದರು.

ಡಿ ಚೌಕ್ ವಿಶೇಷತೆ

ಡಿ ಚೌಕ್ ವಿಶೇಷತೆ

ಡಿ-ಚೌಕ್ ಎಂಬುದು ಡೆಮಾಕ್ರಸಿ ಚೌಕ್. ಅಂದರೆ ಡೆಮಾಕ್ರಸಿ ಸರ್ಕಲ್. ಸಂಸತ್ತು, ಸುಪ್ರೀಂ ಕೋರ್ಟ್, ಅಧ್ಯಕ್ಷೀಯ ಗೃಹ, ಪ್ರಧಾನಿ ಕಾರ್ಯಾಲಯ ಇತ್ಯಾದಿ ಇರುವ ಪ್ರದೇಶ ಇದು. ಕಳೆದ ವರ್ಷ ಭಾರತದಲ್ಲಿ ರಾಜಧಾನಿ ದೆಹಲಿಗೆ ಸಿಖ್ ಪ್ರತಿಭಟನಾಕಾರರು ನುಗ್ಗಿದ ರೀತಿಯಲ್ಲಿತ್ತು ಪಿಟಿಐ ಕಾರ್ಯಕರ್ತರ ಪಥ. ಪ್ರತಿಘಟನಾಕಾರರು ಡಿ ಚೌಕ್ ಪ್ರವೇಶ ಮಾಡುವುದನ್ನು ತಡೆಯಲು ಬಿಗಿಕ್ರಮ ಕೈಗೊಂಡರು. ಇದರಿಂದ ಇನ್ನೂ ಹೆಚ್ಚಿನ ಹಿಂಸಾಚಾರ ಆಗುತ್ತಿತ್ತು.

ಮೆರವಣಿಗೆ ನಿಲ್ಲಿಸಿದ ಇಮ್ರಾನ್

ಮೆರವಣಿಗೆ ನಿಲ್ಲಿಸಿದ ಇಮ್ರಾನ್

ಇಸ್ಲಾಮಾಬಾದ್‌ನಲ್ಲಿ ಪರಿಸ್ಥಿತಿ ಇನ್ನೂ ವಿಕೋಪಕ್ಕೆ ಹೋಗುವ ಎಲ್ಲಾ ಸಾಧ್ಯತೆ ಇತ್ತು. ಈ ಹಂತದಲ್ಲಿ ಇಮ್ರಾನ್ ಖಾನ್ 'ಆಜಾದಿ ಜಾಥಾ'ವನ್ನು ನಿಲ್ಲಿಸಿದರು. "ಈ ಪರಿಸ್ಥಿತಿಯಲ್ಲಿ ದೇಶ ಅರಾಜಕತೆಗೆ ಹೋಗುತ್ತಿದ್ದುದು ನಿಶ್ಚಿತ ಎಂಬಂತಿತ್ತು" ಎಂದು ಇಮ್ರಾನ್ ಖಾನ್ ಹೇಳುತ್ತಾರೆ.

ಪ್ರತಿಭಟನಾ ಮೆರವಣಿಗೆ ಹಿಂಪಡೆದ ಬಳಿಕ ಇಮ್ರಾನ್ ಖಾನ್ ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯ ಮಧ್ಯಪ್ರವೇಶಿಸಿ ನ್ಯಾಯತೀರ್ಮಾನ ಮಾಡಬೇಕೆಂದು ಮನವಿ ಮಾಡಿದರು.

ಮಾರ್ಯಂ ಟೀಕೆ

ಮಾರ್ಯಂ ಟೀಕೆ

ಆಡಳಿತಾರೂಢ ಪಿಎಂಎಲ್(ಎನ್) ಪಕ್ಷದವರು ಇಮ್ರಾನ್ ಖಾನ್ ಅವರನ್ನು ತೀವ್ರವಾಗಿ ಟೀಕಿಸಿದ್ದಾರೆ. ಇಮ್ರಾನ್ ಖಾನ್‌ರ ಕೊಳಕು ರಾಜಕೀಯ ವಿಚಾರಕ್ಕೆ ಸುಪ್ರೀಂ ಕೋರ್ಟ್ ಸ್ಪಂದಿಸಬಾರದು ಎಂದು ಮಾಜಿ ಪ್ರಧಾನಿ ನವಾಜ್ ಷರೀಫ್ ಪುತ್ರಿ ಮಾರ್ಯಂ ಷರೀಫ್ ಮನವಿ ಮಾಡಿದ್ದಾರೆ.

"ಯಾವ ಸುಪ್ರೀಂ ಕೋರ್ಟ್ ಮೂಲಕ ನೀವು ಯಾವ ಕ್ರಾಂತಿಯನ್ನು ತರಬೇಕೆಂದಿದ್ದರೋ ಅದೇ ಕ್ರಾಂತಿಯನ್ನು ಅದೇ ಸುಪ್ರೀಂ ಕೋರ್ಟ್ ಮತ್ತು ದೇಶದ ಜನತೆ ಸೇರಿಕೊಂಡು ತಡೆಯುತ್ತಾರೆ" ಎಂದು ಇಮ್ರಾನ್ ಖಾನ್‌ಗೆ ಮಾರ್ಯಂ ಎಚ್ಚರಿಕೆ ನೀಡಿದ್ದಾರೆ.

Recommended Video

Vladimir Putin ಬಗ್ಗೆ ಕೇಳಿ ಬಂದ ಆ ವಿಚಿತ್ರ ಸುದ್ದಿ ಏನು | OneIndia Kannada

English summary
Pakistand ex PM Imran Khan has revealed the reason for calling off his party's Azadi March last week. Took decision to avoid imminent bloodshed, said Imran Khan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X