ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಉಗ್ರರಿಗೆ ತರಬೇತಿ ನೀಡಿದ್ದು ನಾವೇ' ಇಮ್ರಾನ್ ಖಾನ್ ಶಾಕಿಂಗ್ ಹೇಳಿಕೆ!

|
Google Oneindia Kannada News

Recommended Video

ಪಾಕಿಸ್ತಾನದಲ್ಲಿ ಟೀ, ಕಾಫಿ, ಬಿಸ್ಕೆಟ್ ಬ್ಯಾನ್..? | Imran Khan

ಇಸ್ಲಾಮಾಬಾದ್, ಸೆಪ್ಟೆಂಬರ್ 13: "ಅಮೆರಿಕದ ಸೆಂಟ್ರಲ್ ಇಂಟಲಿಜೆನ್ಸ್ ಏಜೆನ್ಸಿ(ಸಿಐಎ)ಯ ನೆರವಿನ ಮೂಲಕ ನಾವೇ ಭಯೋತ್ಪಾದಕರಿಗೆ ತರಬೇತಿ ನೀಡಿದ್ದೆವು" ಎಂಬ ಶಾಕಿಂಗ್ ಹೇಳಿಕೆಯನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನೀಡಿದ್ದಾರೆ.

'ರಷ್ಯಾ ಟುಡೆ'ಗೆ ಇಮ್ರಾನ್ ಖಾನ್ ನೀಡಿದ ಸಂದರ್ಶನದಲ್ಲಿ ನೀಡಿದ ಈ ಹೇಳಿಕೆ ಅಮೆರಿಕದ ಕೆಂಗಣ್ಣಿಗೆ ಕಾರಣವಾಗಿದೆ.

ಕಾಶ್ಮೀರಕ್ಕಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೊಸ ತಂತ್ರಕಾಶ್ಮೀರಕ್ಕಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೊಸ ತಂತ್ರ

"80 ರ ದಶಕದಲ್ಲಿ ಸೋವಿಯತ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದಾಗ ಅವರ ವಿರುದ್ಧ ಜಿಹಾದ್ ಕೈಗೊಳ್ಳಲು ಅಮೆರಿಕದ ಸಿಐಎ ನೆರವಿನೊಂದಿಗೆ ನಾವು ಮುಜಾಹಿದೀನ್ ಗಳಿಗೆ ತರಬೇತಿ ನೀಡಿದ್ದೆವು. ಆದರೆ ಕ್ರಮೇಣ ಅವರು ನಮ್ಮ ದೇಶದ ವಿರುದ್ಧವೇ ತಿರುಗಿಬಿದ್ದರು" ಎಂದು ಇಮ್ರಾನ್ ಖಾನ್ ಹೇಳಿದ್ದರು.

ಈಗ ಜಿಹಾದಿಗಳಲ್ಲ, ಉಗ್ರರು!

ಈಗ ಜಿಹಾದಿಗಳಲ್ಲ, ಉಗ್ರರು!

"ಆಗ ಸೋವಿಯತ್ ವಿರುದ್ಧ ಹೋರಾಡಿದ್ದವರನ್ನು ಜಿಹಾದಿಗಳು ಎಂದು ಕರೆಯಲಾಗುತ್ತಿತ್ತು. ಆದರೆ ಇಂದು ಅವರನ್ನೇ ಭಯೋತ್ಪಾದಕರು ಎಂದು ಕರೆಯಲಾಗುತ್ತಿದೆ. ಇದು ನಿಜಕ್ಕೂ ವಿಪರ್ಯಾಸ. ಪಾಕಿಸ್ತಾನ ತಟಸ್ಥವಾಗಿ ಉಳಿಯಬೇಕಿತ್ತು. ನಾವು ಅವರ ವಿರುದ್ಧ ಹೋರಾಡಲು ಹೊರಟಿದ್ದರಿಂದ ಈಗ ನಮ್ಮ ವಿರುದ್ಧವೇ ಅವರು ತಿರುಗಿಬಿದ್ದಿದ್ದಾರೆ"- ಇಮ್ರಾನ್ ಖಾನ್

ತಮ್ಮ ಹಿನ್ನಡೆಗೆ ನಮ್ಮನ್ನು ಹಳಿಯಗುತ್ತಿದೆ ಅಮೆರಿಕ

ತಮ್ಮ ಹಿನ್ನಡೆಗೆ ನಮ್ಮನ್ನು ಹಳಿಯಗುತ್ತಿದೆ ಅಮೆರಿಕ

ಇದುವರೆಗೆ ಅಫ್ಘಾನಿಸ್ತಾನದಲ್ಲಿ ಉಗ್ರರ ವಿರುದ್ಧ ಹೋರಾಡಲು ಅಮೆರಿಕದೊಂದಿಗೆ ಸೇರಿದ್ದ ನಾವು 70000 ಕ್ಕೂ ಹೆಚ್ಚು ಜನರನ್ನು ಕಳೆದುಕೊಂಡಿದೆ. 100 ಬಿಲಿಯನ್ ಡಾಲರ್ ನಷ್ಟ ಅನುಭವಿಸಿದ್ದೇವೆ. ಇಷ್ಟೆಲ್ಲ ನಷ್ಟದ ನಡುವೆಯೂ ಅಫ್ಘಾನಿಸ್ತಾನದಲ್ಲಿ ತನ್ನ ಹಿನ್ನಡೆಗೆ ಅಮೆರಿಕ ನಮ್ಮನ್ನು ಹಳಿಯುತ್ತಿದೆ. ಇದು ನ್ಯಾಯವೇ?"- ಇಮ್ರಾನ್ ಖಾನ್

ಭಾರತ-ಪಾಕ್ ಗಡಿಗೆ ಇಮ್ರಾನ್ ಖಾನ್ ಭೇಟಿ ಹಿಂದಿರುವ ಕಾರಣವೇನು?

ಅಮೆರಿಕದಿಂದ ಎಚ್ಚರಿಕೆ

ಅಮೆರಿಕದಿಂದ ಎಚ್ಚರಿಕೆ

ತಾಲಿಬಾನಿಗಳ ಜೊತೆ ಶಾಂತಿ ಮಾತುಕತೆಯನ್ನು ಡೊನಾಲ್ಡ್ ಟ್ರಂಪ್ ರದ್ದುಗೊಳಿಸಿದ ನಂತರ ಇಮ್ರಾನ್ ಖಾನ್ ಈ ಹೇಳಿಕೆ ನೀಡಿದ್ದಾರೆ. ಅಮೆರಿಕ ಮತ್ತು ತಾಲಿಬಾನ್ ಪ್ರತಿನಿಧಿಗಳು ಈಗಾಗಲೇ 9 ಬಾರಿ ಶಾಂತಿ ಮಾತುಕತೆ ನಡೆಸಿದ್ದರು. ಭಯೋತ್ಪಾದನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನಕ್ಕೆ ಅಮೆರಿಕ ಪದೇ ಪದೇ ಎಚ್ಚರಿಕೆ ನೀಡುತ್ತಲೇ ಇದ್ದರೂ ಈ ಬಗ್ಗೆ ಪಾಕಿಸ್ತಾನದ ನಡೆ ಫಲಪ್ರದವಾಗಿಲ್ಲದ ಕಾರಣ ಟ್ರಂಪ್ ಈ ನಿರ್ಧಾರ ತೆಗೆದುಕೊಂಡಿದ್ದರು.

ಜಮಾತ್ ಉದ್ ದಾವಾಗೆ ಲಕ್ಷಗಟ್ಟಲೆ ವೆಚ್ಚ

ಜಮಾತ್ ಉದ್ ದಾವಾಗೆ ಲಕ್ಷಗಟ್ಟಲೆ ವೆಚ್ಚ

ಜಮಾತ್ ಉದ್ ದಾವಾ(ಜೆಯುಡಿ) ಗಾಗಿ ಪಾಕಿಸ್ತಾನವು ಲಕ್ಷಾಂತರ ರೂಪಾಯಿಯನ್ನು ವೆಚ್ಚ ಮಾಡುತ್ತಿದೆ. ಅವರನ್ನು ಮುಖ್ಯ ವಾಹಿನಿಗೆ ತರಲು ಈ ಪ್ರಯತ್ನ ಎಂದು ಪಾಕಿಸ್ತಾನದ ಸಚಿವರೊಬ್ಬರು ಗುರುವಾರ ಹೇಳಿಕೆ ನೀಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ಪಾಕ್ ಪ್ರಧಾನಿ ಕಾರ್ಯಾಲಯದಿಂದಲೇ 41 ಲಕ್ಷ ವಿದ್ಯುತ್ ಬಿಲ್ ಬಾಕಿಪಾಕ್ ಪ್ರಧಾನಿ ಕಾರ್ಯಾಲಯದಿಂದಲೇ 41 ಲಕ್ಷ ವಿದ್ಯುತ್ ಬಿಲ್ ಬಾಕಿ

English summary
In a Shocking move, Pakistan Prime Minister Imran Khan Friday admitted that the country trained terrorists with funds from the United States' Central Intelligence Agency
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X