ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ಪತ್ನಿಯಿಂದ ಭಾರಿ ಆರೋಪ: ಇಕ್ಕಟ್ಟಿನಲ್ಲಿ ಇಮ್ರಾನ್ ಖಾನ್

|
Google Oneindia Kannada News

ಇಸ್ಲಾಮಾಬಾದ್, ಅಕ್ಟೋಬರ್ 15: ಇಮ್ರಾನ್ ಖಾನ್ ಮಾಜಿ ಪತ್ನಿ ರೆಹಮ್ ಖಾನ್ ಅವರು ಇಮ್ರಾನ್ ಖಾನ್ ಮೇಲೆ ಬಹು ದೊಡ್ಡ ಆರೋಪವೊಂದನ್ನು ಮಾಡಿದ್ದಾರೆ.

ಸೋಮವಾರ ಟ್ವಿಟ್ಟರ್‌ನಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿರುವ ರೆಹಮ್ ಖಾನ್ 'ಇಮ್ರಾನ್ ಖಾನ್ ವಿದೇಶದಿಂದ ಅಕ್ರಮ ಹಣ ಪಡೆದಿದ್ದಾರೆ' ಎಂದು ಆರೋಪಿಸಿದ್ದಾರೆ.

ಕಪ್ಪುಪಟ್ಟಿಗೆ ಹೋಗದಿದ್ದರೂ ಪಾಕಿಸ್ತಾನಕ್ಕೆ ಅಮೆರಿಕದಿಂದ ಭಾರೀ ಆಘಾತ!ಕಪ್ಪುಪಟ್ಟಿಗೆ ಹೋಗದಿದ್ದರೂ ಪಾಕಿಸ್ತಾನಕ್ಕೆ ಅಮೆರಿಕದಿಂದ ಭಾರೀ ಆಘಾತ!

ಇಮ್ರಾನ್ ಖಾನ್ ಅಕ್ರಮ ಹಣ ಪಡೆದಿರುವ ಬ್ಯಾಂಕ್ ಹೆಸರು, ಖಾತೆ ಸಂಖ್ಯೆ, ವ್ಯವಹಾರದ ಸಂಖ್ಯೆ, ಪಡೆದಿರುವ ಹಣದ ಮೊತ್ತ ಎಲ್ಲವನ್ನೂ ರೆಹಮ್ ಖಾನ್ ಹೇಳಿದ್ದಾರೆ.

Imran Khans Ex Wife Alleged That Imran Khan Took Illeagel Funds

ಇಮ್ರಾನ್ ಖಾನ್ ಅಮೆರಿಕದ ಎರಡು ಬ್ಯಾಂಕ್‌ಗಳಿಂದ ಅಕ್ರಮವಾಗಿ ಹಣವನ್ನು ಪಡೆದಿದ್ದಾರೆ ಎಂದು ರೆಹಮ್ ಖಾನ್ ಆರೋಪಿಸಿದ್ದು, ಒಂದು ಬ್ಯಾಂಕ್ ಖಾತೆಯಿಂದ 1,998,700 ಡಾಲರ್ ಹಣ ಮತ್ತೊಂದು ಬ್ಯಾಂಕ್ ಖಾತೆಯಿಂದ 6,69,000 ಡಾಲರ್ ಹಣ ಪಡೆದಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ಸೂಕ್ತ ದಾಖಲೆಗಳೂ ತಮ್ಮ ಬಳಿ ಇರುವುದಾಗಿ ಹೇಳಿದ್ದಾರೆ.

ಸಾಲ ಮಾಡುವುದರಲ್ಲಿ ದಾಖಲೆ ಬರೆದ ಇಮ್ರಾನ್ ಖಾನ್ ಸರ್ಕಾರ ಸಾಲ ಮಾಡುವುದರಲ್ಲಿ ದಾಖಲೆ ಬರೆದ ಇಮ್ರಾನ್ ಖಾನ್ ಸರ್ಕಾರ

ಅಕ್ಬರುದ್ದೀನ್ ಎಂಬುವರು ಹಾಕಿರುವ ಪಿಟಿಷನ್ ಬಗ್ಗೆಯೂ ಉಲ್ಲೇಖಿಸಿರುವ ಅವರು, ಇಮ್ರಾನ್ ಖಾನ್ ಆಸ್ಟ್ರೇಲಿಯಾದಲ್ಲಿನ ಸಂಸ್ಥೆಯೊಂದರಿಂದಲೂ 35,200 ಡಾಲರ್ ಹಣ ಪಡೆದಿದ್ದು ಇದೂ ಸಹ ಅಕ್ರಮ ಹಣವಾಗಿದೆ, ಆಸ್ಟ್ರೇಲಿಯಾದಲ್ಲಿ ಇನ್ಸಾಫ್ ಆಸ್ಟ್ರೇಲಿಯಾ ಹೆಸರಿನೊಂದಿಗೆ ಅವರು ಅಕ್ರಮ ಹಣ ಪಡೆದಿದ್ದಾರೆ ಎಂದು ಹೇಳಲಾಗಿದೆ.

ಜಮ್ಮು- ಕಾಶ್ಮೀರ ವಿಚಾರದಲ್ಲಿ ಪಾಕ್ ಬೆಂಬಲಿಸಿದ 58 ದೇಶ ಯಾವುದು? ಸಿಟ್ಟಿಗೆ ಇಷ್ಟು ಸಾಕುಜಮ್ಮು- ಕಾಶ್ಮೀರ ವಿಚಾರದಲ್ಲಿ ಪಾಕ್ ಬೆಂಬಲಿಸಿದ 58 ದೇಶ ಯಾವುದು? ಸಿಟ್ಟಿಗೆ ಇಷ್ಟು ಸಾಕು

ರಾಜಕಾರಣಿಗಳು ಮಾಡುವ ಆರ್ಥಿಕ ಅಪರಾಧಗಳನ್ನು ಪಾಕಿಸ್ತಾನದಲ್ಲಿ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಮಾಜಿ ಪತ್ನಿಯ ಆರೋಪ ಇಮ್ರಾನ್ ಖಾನ್‌ಗೆ ತಲೆಬಿಸಿ ತಂದಿದೆ.

English summary
Pakistan PM Imran Khan's former wife Reham Khan alleged that Imran Khan took illeagel funds from America and Australia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X