ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶಿ ನಾಯಕರು ನೀಡಿದ್ದ ಉಡುಗೊರೆಗಳನ್ನು ಮಾರಿಕೊಳ್ತಿದ್ದಾರಂತೆ ಇಮ್ರಾನ್ ಖಾನ್

|
Google Oneindia Kannada News

ಇಸ್ಲಾಮಾಬಾದ್, ಅಕ್ಟೋಬರ್ 21:ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ವಿದೇಶಿ ನಾಯಕರು ನೀಡಿದ್ದ ಉಡುಗೊರೆಗಳನ್ನು ಮಾರಿಕೊಳ್ಳುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

'ಹಿಂದೂಸ್ತಾನ್ ಟೈಮ್ಸ್' ಈ ವರದಿ ಪ್ರಕಟಿಸಿದ್ದು, ವಿದೇಶ ಪ್ರವಾಸ ಕೈಗೊಂಡ ವೇಳೆ ಅಲ್ಲಿನ ನಾಯಕರು ನೀಡಿದ ದುಬಾರಿ ಬೆಲೆಯ ಉಡುಗೊರೆಗಳನ್ನು ಇಮ್ರಾನ್ ಖಾನ್ ಮಾರಾಟ ಮಾಡಿದ್ದಾರೆ, ಈ ಪೈಕಿ 7 ಕೋಟಿ ಬೆಲೆಯ ವಾಚ್‌ಕೂಡ ಮಾರಾಟಕ್ಕಿಟ್ಟಿದ್ದಾರೆ ಎನ್ನಲಾಗಿದೆ.

 ಶಾಂತಿಯ ಮಾತಾಡುವ ಪಾಕ್, ಭಯೋತ್ಪಾದಕರನ್ನು ಹುತಾತ್ಮರಂತೆ ವೈಭವೀಕರಿಸುತ್ತಿದೆ; ಭಾರತ ಶಾಂತಿಯ ಮಾತಾಡುವ ಪಾಕ್, ಭಯೋತ್ಪಾದಕರನ್ನು ಹುತಾತ್ಮರಂತೆ ವೈಭವೀಕರಿಸುತ್ತಿದೆ; ಭಾರತ

ಗಲ್ಫ್‌ ದೇಶದ ಪ್ರಿನ್ಸ್ 7 ಕೋಟಿ ಮೌಲ್ಯದ ದುಬಾರಿ ವಾಚ್‌ ಒಂದನ್ನು ಇಮ್ರಾನ್‌ ಖಾನ್‌ಗೆ ಉಡುಗೊರೆಯಾಗಿ ನೀಡಿದ್ದರು. ಈ ವಾಚ್‌ನ್ನು ದುಬೈನ ಇಮ್ರಾನ್ ಖಾನ್ ಆತ್ಮೀಯನಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ಹೀಗೆ ತಾನು ಗಿಫ್ಟ್‌ ಆಗಿ ಕೊಟ್ಟಿದ್ದನ್ನು ಇಮ್ರಾನ್ ಖಾನ್ ಮಾಡಿಕೊಂಡಿದ್ದಾರೆ ಎಂದು ಗಲ್ಫ್‌ ಪ್ರಿನ್ಸ್‌ಗೂ ಗೊತ್ತಾಗಿದೆ ಎನ್ನಲಾಗಿದೆ.

Imran Khan, Pakistan PM Has Been Accused Of Selling Gifts Recieved From Foreign Heads Of State

ಇನ್ನು ಪಾಕಿಸ್ತಾನ ಸರ್ಕಾರ ತಾನು ವಿದೇಶಗಳಿಂದ ಪಡೆದ ಉಡುಗೊರೆಗಳ ಪಟ್ಟಿಯನ್ನು ಬಹಿರಂಗಪಡಿಸಲು ನಿರಾಕರಿಸಿದ್ದು, ಇದು ದೇಶದ ಹಿತಕ್ಕೆ ಮಾರಕ ಎಂದು ಹೇಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಪಾಕಿಸ್ತಾನದ ಗಿಫ್ಟ್‌ ಡೆಪಾಸಿಟರಿ ರೂಲ್ಸ್ ಪ್ರಕಾರ ವಿದೇಶಿ ಗಣ್ಯರಿಂದ ಉಡುಗೊರೆಯಾಗಿ ಪಡೆದ ಆಸ್ತಿಯನ್ನು ದೇಶದ ಆಸ್ತಿಯನ್ನಾಗಿ ಇಡಬೇಕು ಅಥವಾ ಓಪನ್ ಮಾರ್ಕೆಟ್‌ನಲ್ಲಿ ಹರಾಜಿಗಿಡಬೇಕು. ಆದರೆ ಇಮ್ರಾನ್ ಖಾನ್ ವಿದೇಶಗಳಿಂದ ಪಡೆದ ಉಡುಗೊರೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ಪಿಎಂಎಲ್‌ವಿ ವೈಸ್ ಪ್ರೆಸಿಡೆಂಟ್ ಮರ್ಯಮ್ ನವಾಜ್ ಟ್ವೀಟ್ ಮಾಡಿದ್ದಾರೆ.

ಸಾಲದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನದ ಕೊನೆ ಆಶಾಕಿರಣ ಸಹ ದೂರವಾಗಿದೆ. ಇಂಟರ್ ನ್ಯಾಷನಲ್ ಮಾನಿಟರಿ ಫಂಡ್ ಐಎಂಎಫ್ ಪಾಕಿಸ್ತಾನಕ್ಕೆ 6 ಬಿಲಿಯನ್ ಡಾಲರ್ ಸಾಲ ನೀಡಲು ಹಿಂದೇಟು ಹಾಕಿದೆ. ಇದರ ಜೊತೆಗೆ ಪಾಕಿಸ್ತಾನಕ್ಕೆ ಮೊದಲ ಕಂತಿನಲ್ಲಿ ನೀಡುವ 1 ಬಿಲಿಯನ್ ಡಾಲರ್ ನೀಡಲ್ಲ ಆಗಲ್ಲ ಎಂಬುದನ್ನು ಐಎಂಎಫ್ ಸ್ಪಷ್ಟಪಡಿಸಿದೆ.

ವಾಷಿಂಗ್ಟನ್ ನಲ್ಲಿ ನಡೆಯುತ್ತಿರುವ ಐಎಂಎಫ್ ಮತ್ತ ಪಾಕಿಸ್ತಾನದ ಹಣಕಾಸು ಸಚಿವರ ಮಾತುಕತೆ ವಿಫಲವಾಗಿದೆ ಎಂದು ಪಾಕ್ ಮಾಧ್ಯಮಗಳು ವರದಿ ಬಿತ್ತರಿಸಿವೆ. ಆದರೆ ಇಮ್ರಾನ್ ಖಾನ್ ಸರ್ಕಾರ ಮಾತುಕತೆ ವಿಫಲವಾಗಿರೋದನ್ನು ದೃಢಪಡಿಸಿಲ್ಲ.

ವರದಿಗಳ ಪ್ರಕಾರ ಪಾಕಿಸ್ತಾನ ಸರ್ಕಾರ ಮತ್ತು ಐಎಂಎಫ್ ನಡುವಿನ ಮಾತುಕತೆ ಮುಂದೆಯೂ ನಡೆಯಲಿದೆಯಂತೆ. ಮುಂದಿನ ಸಭೆಗೆ ಯಾವುದೇ ಸಮಯ ನಿಗದಿಯಾಗಿಲ್ಲ. ಹಣಕಾಸು ಸಚಿವ ಶೌಕತ್ ಹಿಂದಿರುಗಿದ ಬಳಿಕ ಪಾಕಿಸ್ತಾನದಲ್ಲಿ ಈ ಸಂಬಂಧ ಚರ್ಚೆಗಳು ನಡೆಯಲಿವೆ. ಪಾಕ್ ಸರ್ಕಾರ ಆರ್ಥಿಕ ತಜ್ಞರ ಜೊತೆ ಚರ್ಚೆ ನಡೆಸಿದ ಬಳಿಕವೇ ಐಎಂಎಫ್ ಜೊತೆಗಿನ ಮುಂದಿನ ಸಭೆಯ ಸಮಯ ನಿಗದಿ ಮಾಡುವ ಸಾಧ್ಯತೆಗಳಿವೆ.

ಇಮ್ರಾನ್ ಖಾನ್ ಸರ್ಕಾರದ ನೀತಿಗಳ ತೆರಿಗೆ ಹೆಚ್ಚಿಸುವ ನಿಯಮಗಳಿಗೆ ಪೂರಕವಾಗಿಲ್ಲ. ಇದರಿಂದ ಪಾಕ್ ಅರ್ಥ ವ್ಯವಸ್ಥೆ ಚೇತರಿಕೆ ಕಾಣುತ್ತಿಲ್ಲ. ಇಂತಹ ಪಾಕಿಸ್ತಾನ ಆರ್ಥಿಕ ವ್ಯವಸ್ಥೆ ವಿನಾಶದ ಅಂಚಿನತ್ತ ಸಾಗುತ್ತಿದೆ. ಸಾಲಕ್ಕೆ ಸೌದಿ ಅರೇಬಿಯಾದ ನಂತರ ಚೀನಾ ಕೂಡ ಸಾಲಕ್ಕೆ ಖಾತರಿ ನೀಡುತ್ತಿಲ್ಲ ಎಂದು ಐಎಂಎಫ್ ಹೇಳಿಕೆ ಬಿಡುಗಡೆ ಮಾಡಿದೆ.

ನಾಲ್ಕು ತಿಂಗಳ ಹಿಂದೆ ಪಾಕಿಸ್ತಾನ ಮತ್ತು ಐಎಂಎಫ್ ಸಭೆ ನಡೆದಿತ್ತು. ಎರಡೂ ಕಡೆಗಳಿಂದಲೂ ಮಾತುಕತೆ ವಿಫಲವಾಗಿತ್ತು. ಮೊದಲ ಬಾರಿಗೆ ಜೂನ್ ನಲ್ಲಿ ಸಭೆ ನಡೆದಿತ್ತು. ಅಂದು ಸಹ ಪಾಕ್ ಸರ್ಕಾರ ವಿದ್ಯುತ್ ಬೆಲೆಯನ್ನು ಏರಿಕೆ ಮಾಡಿತ್ತು. ವಿದೇಶಿ ಸಾಲ ಹೊಂದಿರುವ ಪ್ರಮುಖ 10 ದೇಶಗಳಲ್ಲಿ ಪಾಕಿಸ್ತಾನ ಸಹ ಒಂದಾಗಿದೆ.

ಅಮೆರಿಕದಲ್ಲಿ ಪಾಕ್ ಹಣಕಾಸು ಸಚಿವ ಶೌಕತ್ ತರೀಕ್ ಅವರ ತಂಡ ಮತ್ತು ಐಎಂಎಫ್ ನಡುವೆ 11 ದಿನಗಳಿಂದ ಮಾತುಕತೆ ನಡೆದಿತ್ತು. ಆದ್ರೆ 11 ದಿನದ ಮಾತುಕತೆ ಯಾವುದೇ ಫಲಪ್ರದ ನೀಡಿಲ್ಲ. ಕೊನೆಯ ದಿನ ಕೇವಲ ಔಪಚಾರಿಕ ಸಭೆಯಾಗಿ ಅಂತ್ಯಗೊಂಡಿದೆ ಎಂದು ದಿ ಎಕ್ಸಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ಪಾಕಿಸ್ತಾನ ಮತ್ತು ಐಎಂಎಫ್ ನಡುವೆ ಅಕ್ಟೋಬರ್ 4 ರಿಂದ ಅಕ್ಟೋಬರ್ 15ರವರೆ ಸುದೀರ್ಘ ಮಾತುಕತೆ ನಡೆದಿತ್ತು.

ಶೌಕತ್ ಆ್ಯಂಡ್ ಟೀಂ ಅಮೆರಿಕದಲ್ಲಿದ್ದಾಗ ಪಾಕಿಸ್ತಾನ ಸರ್ಕಾರ ಒಂದು ಬಾರಿ ವಿದ್ಯುತ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಬೆಲೆಯನ್ನು ಏರಿಕೆ ಮಾಡಿತ್ತು. ಐಎಂಎಫ್ ಟೀಂ ತೆರಿಗೆ ಸಂಗ್ರಹ ಏರಿಕೆ ಮಾಡಲು ಮುಂದಾಗಿತ್ತು.

ಐಎಂಎಫ್ ನಿರಂತರವಾಗಿ ತೆರಿಗೆ ಸಂಗ್ರಹ ಹೆಚ್ಚಳ ಮಾಡುವಂತೆ ಪಾಕಿಸ್ತಾನ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದೆ. ಆದ್ರೆ ಪಾಕ್ ಸರ್ಕಾರ ಐಎಂಎಫ್ ಷರತ್ತುಗಳನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿರಲ್ಲ. ಇಮ್ರಾನ್ ಖಾನ್ ಸರ್ಕಾರ ತೆರಿಗೆ ಹೆಚ್ಚಿಸುವ ಸ್ಥಿತಿಯಲ್ಲಿಲ್ಲ. ಪಾಕಿಸ್ತಾನದ ಶ್ರೀಮಂತ ಉದ್ಯಮಿಗಳು ಭ್ರಷ್ಟರಾಗಿದ್ದು, ಅವರೆಲ್ಲರೂ ಇಮ್ರಾನ್ ಖಾನ್ ಆಳ್ವಿಕೆ ಆಡಳಿತದ ಒಂದು ಭಾಗವಾಗಿದ್ದಾರೆ.

ತೆರಿಗೆ ಹೆಚ್ಚಳ ಮಾಡಿದ್ರೆ ಇಮ್ರಾನ್ ಖಾನ್ ಸರ್ಕಾರ ಪತನವಾಗಲಿದೆ ಎಂದು ಪಾಕಿಸ್ತಾನ ಮೂಲದ ಉದ್ಯಮಿ ಸಾಜಿದ್ ತಾರದ್ ಮಾಧ್ಯಮಗಳ ಹೇಳಿಕೆ ನೀಡಿದ್ದಾರೆ. ತೆರಿಗೆ ಹೆಚ್ಚಿಸಲಾದ ಇಮ್ರಾನ್ ಸರ್ಕಾರ, ವಿದ್ಯುತ್ ಬಿಲ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಮಾಡುವ ಮೂಲಕ ಬಡವರನ್ನು ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ಸಾಜಿದ್ ತಾರದ್ ಆಕ್ರೋಶ ವ್ಯಕ್ತಪಡಿಸುತ್ತಾರೆ.

English summary
Pakistan's Opposition parties on Wednesday accused Prime Minister Imran Khan of selling gifts he received from other countries' heads, including an expensive watch worth USD 1 million.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X