ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಮ್ರಾನ್ ಖಾನ್ ಪ್ರಮಾಣವಚನ ಸಮಾರಂಭಕ್ಕೆ ಮೋದಿಗೆ ಆಹ್ವಾನ ಸಾಧ್ಯತೆ

|
Google Oneindia Kannada News

ಲಾಹೋರ್, ಜುಲೈ 31: ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಅಧಿಕಾರ ಹಿಡಿಯಲಿರುವ ಇಮ್ರಾನ್ ಖಾನ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಆಹ್ವಾನ ನೀಡುವ ಸಾಧ್ಯತೆ ಇದೆ.

ಮೋದಿ ಸೇರಿದಂತೆ ಸಾರ್ಕ್ ಸದಸ್ಯ ದೇಶಗಳ ನಾಯಕರನ್ನು ಸಮಾರಂಭಕ್ಕೆ ಆಹ್ವಾನಿಸಲು ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ (ಪಿಟಿಐ) ಉದ್ದೇಶಿಸಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

ಪಾಕಿಸ್ತಾನದ ಸಂಭಾವ್ಯ ಪ್ರಧಾನಿಗೆ ಕರೆ ಮಾಡಿದ ನರೇಂದ್ರ ಮೋದಿಪಾಕಿಸ್ತಾನದ ಸಂಭಾವ್ಯ ಪ್ರಧಾನಿಗೆ ಕರೆ ಮಾಡಿದ ನರೇಂದ್ರ ಮೋದಿ

ನರೇಂದ್ರ ಮೋದಿ ಅವರನ್ನು ಒಳಗೊಂಡಂತೆ ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘದ (ಸಾರ್ಕ್) ಎಲ್ಲ ಮುಖಂಡರನ್ನು ಆಹ್ವಾನಿಸಲು ಪಕ್ಷದ ಕೋರ್ ಕಮಿಟಿಯು ಪರಿಗಣಿಸುತ್ತಿದೆ. ಅದರ ಬಗ್ಗೆ ಶೀಘ್ರದಲ್ಲಿಯೇ ನಿರ್ಧಾರ ಪ್ರಕಟವಾಗಲಿದೆ ಎಂದು ಅವರು ಹೇಳಿದ್ದಾರೆ.

imran khan oath taking pti considering narendra modi to invite with saarc leaders

ಇಮ್ರಾನ್ ಖಾನ್ ಅವರಿಗೆ ಮೋದಿ ಅವರು ಕರೆ ಮಾಡಿ ಅಭಿನಂದಿಸಿರುವುದು ಉಭಯ ದೇಶಗಳ ಬಾಂಧವ್ಯದ ಹೊಸ ಅಧ್ಯಾಯ ಬರೆಯುವ ಸೂಚನೆಯಾಗಿದೆ ಎಂದು ವಿಶ್ಲೇಷಿಸಿದ್ದಾರೆ.

ಇಮ್ರಾನ್ ಖಾನ್ ಗೆ ಅಜರುದ್ದೀನ್ ನೀಡಿದ ಎಚ್ಚರಿಕೆ ಸಂದೇಶಇಮ್ರಾನ್ ಖಾನ್ ಗೆ ಅಜರುದ್ದೀನ್ ನೀಡಿದ ಎಚ್ಚರಿಕೆ ಸಂದೇಶ

ಜುಲೈ 25ರಂದು ನಡೆದು ಸಾರ್ವತ್ರಿಕ ಚುನಾವಣೆಯಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಇತರೆ ಪಕ್ಷಗಳ ಸಹಾಯದಿಂದ ಇಮ್ರಾನ್ ಖಾನ್ ಸರ್ಕಾರ ರಚಿಸಲಿದ್ದು, ಆಗಸ್ಟ್ 11ರಂದು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

English summary
Imran Khan's Pakistan Tehreek-i-Insaf considering invting the leaders of the SAARC countries including Narendra Modi to his oath taking ceremony.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X