ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌದಿ ರಾಜನ ವಿಶೇಷ ವಿಮಾನದಲ್ಲಿ ಅಮೆರಿಕಕ್ಕೆ ತೆರಳಿದ ಇಮ್ರಾನ್ ಖಾನ್

|
Google Oneindia Kannada News

ಇಸ್ಲಾಮಾಬಾದ್, ಸೆಪ್ಟೆಂಬರ್ 22: ಸೌದಿ ರಾಜ ಮೊಹ್ಮದ್ ಬಿನ್ ಸಲ್ಮಾನ್ ಗೆ ಸೇರಿದ 'ವಿಶೇಷ ವಿಮಾನ'ದಲ್ಲಿ ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಶನಿವಾರ ಅಮೆರಿಕವನ್ನು ತಲುಪಿದ್ದಾರೆ. ಮೂಲಗಳ ಪ್ರಕಾರ, ವಾಣಿಜ್ಯ ವಿಮಾನದಲ್ಲಿ ಇಮ್ರಾನ್ ಖಾನ್ ರನ್ನು ತೆರಳಲು ಬಿಡದ ಸೌದಿ ರಾಜ ಮೊಹ್ಮದ್ ಬಿನ್ ಸಲ್ಮಾನ್, "ನೀವು ನಮ್ಮ ವಿಶೇಷ ಅತಿಥಿ ಮತ್ತು ನಮ್ಮ ವಿಶೇಷ ವಿಮಾನದಲ್ಲಿ ಅಮೆರಿಕಕ್ಕೆ ತೆರಳುತ್ತಿದ್ದೀರಿ" ಎಂದಿದ್ದಾರೆ.

ಮಾಧ್ಯಮದವರ ಜತೆಗೆ ಮಾತನಾಡಿದ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಶಿ, ಇಮ್ರಾನ್ ಖಾನ್ ಅಮೆರಿಕ ತಲುಪಿದ್ದಾರೆ. ಏಳು ದಿನಗಳ ಈ ಪ್ರವಾಸದ ವೇಳೆ ಕಾಶ್ಮೀರದಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಜಗತ್ತಿನ ಗಮನ ಸೆಳೆಯುವುದೇ ಉದ್ದೇಶ ಎಂದು ಹೇಳಿದ್ದಾರೆ.

'ಭಾರತದ ಎದುರು ಪಾಕ್ ಸಾಂಪ್ರದಾಯಿಕ ಯುದ್ಧ ಸೋಲಬಹುದು, ಆದರೆ...''ಭಾರತದ ಎದುರು ಪಾಕ್ ಸಾಂಪ್ರದಾಯಿಕ ಯುದ್ಧ ಸೋಲಬಹುದು, ಆದರೆ...'

ಅಮೆರಿಕಕ್ಕೆ ತೆರಳುವ ಮುಂಚೆ ಇಮ್ರಾನ್ ಖಾನ್ ಎರಡು ದಿನಗಳ ಪ್ರವಾಸಕ್ಕಾಗಿ ಸೌದಿ ಅರೇಬಿಯಾಕ್ಕೆ ತೆರಳಿದ್ದು, ಕಾಶ್ಮೀರ ವಿಚಾರವಾಗಿ ಬೆಂಬಲಕ್ಕೆ ಯತ್ನಿಸಿದ್ದಾರೆ. ಸೌದಿ ಅರೇಬಿಯಾದಲ್ಲಿ ವ್ಯಾಪಾರ, ಹೂಡಿಕೆ ಹಾಗೂ ಆರ್ಥಿಕ ಸಂಬಂಧಗಳನ್ನು ಹೊರತುಪಡಿಸಿ ಕಾಶ್ಮೀರ ಸಂಗತಿಯನ್ನೂ ಇಮ್ರಾನ್ ಖಾನ್ ಚರ್ಚಿಸಿದ್ದಾರೆ.

Imran Khan Left To New York By Saudi Crown Special Flight

ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ಸೌದಿ ಅರೇಬಿಯಾದಿಂದ ಶನಿವಾರ ನ್ಯೂಯಾರ್ಕ್ ಗೆ ತೆರಳಿದ್ದಾರೆ. ಸೆಪ್ಟೆಂಬರ್ ಇಪ್ಪತ್ತೇಳರಂದು ಸಾಮಾನ್ಯ ಸಭೆಯಲ್ಲಿ ಇಮ್ರಾನ್ ಖಾನ್ ಕಾಶ್ಮೀರ ವಿಚಾರವಾಗಿ ಭಾರತದ ನಡೆ ಬಗ್ಗೆ ಮಾತನಾಡಲಿದ್ದಾರೆ.

English summary
Pakistan PM Imran Khan left to New York from Saudi Arabia in crown Mohammad Bin Salman's special flight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X