ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಾಸಮತ ಕಳೆದುಕೊಂಡ ಮೊದಲ ಪ್ರಧಾನಿ, ದಾಖಲೆ ಬರೆದ ಇಮ್ರಾನ್ ಖಾನ್

|
Google Oneindia Kannada News

ಇಸ್ಲಾಮಾಬಾದ್, ಏಪ್ರಿಲ್ 10: ''ಕ್ರಿಕೆಟ್ ಆಟದಂತೆ ಕೊನೆ ಓವರ್ ಕೊನೆ ಎಸೆತದ ತನಕ ಆಟ ಮುಂದುವರೆಯಲಿದೆ'' ಎಂಬರ್ಥದಲ್ಲಿ ಹೇಳಿಕೆ ನೀಡಿದ್ದ ವಿಶ್ವಕಪ್ ವಿಜೇತ ನಾಯಕ, ಮಾಜಿ ಕ್ರಿಕೆಟರ್ ಈಗ ಮಾಜಿ ಪ್ರಧಾನಿಯಾಗಿ ಕೂಡಾ ಹೊಸ ದಾಖಲೆ ಬರೆದಿದ್ದಾರೆ. ಅವಿಶ್ವಾಸ ನಿರ್ಣಯದ ಮೂಲಕ ಪ್ರಧಾನಿ ಪಟ್ತ ಕಳೆದುಕೊಂಡ ಮೊಟ್ಟ ಮೊದಲ ಪ್ರಧಾನಿ ಎಂದೆನಿಸಿಕೊಂಡಿದ್ದಾರೆ. ಪ್ರಧಾನಿ ಕಚೇರಿಯಿಂದ ಇಮ್ರಾನ್ ರನ್ನು ಹೊರ ಹಾಕಲು ವಿಪಕ್ಷಗಳೆಲ್ಲವೂ ಒಂದಾಗಿದ್ದು ಕೂಡಾ ವಿಶೇಷ ಎನ್ನಬಹುದು.

ಇಮ್ರಾನ್ ವಿರುದ್ದ ನಿಂತು, ಸರ್ಕಾರದ ಪತನಕ್ಕೆ ಸಮಾಜವಾದಿ, ಉದಾರವಾದಿ ಮತ್ತು ಧಾರ್ಮಿಕ ಪಕ್ಷಗಳ ಒಕ್ಕೂಟದ ನೇತೃತ್ವ ವಹಿಸಿಕೊಂಡಿರುವ ಪಾಕಿಸ್ತಾನ್ ಮುಸ್ಲಿಂ ಲೀಗ್ (ಪಿಎಂಎಲ್- ಎನ್) ಕಾರಣವಾಗಿದೆ. ಅವಿಶ್ವಾಸ ನಿರ್ಣಯ ಪ್ರಕ್ರಿಯೆ ಆರಂಭಕ್ಕೂ ಮುನ್ನ ಸಂಸತ್ ಸಭಾಪತಿ ಅಸದ್ ಕೈಸರ್ ಹಾಗೂ ಉಪ ಸಭಾಪತಿ ಖಾಸಿಂ ಇಬ್ಬರೂ ಇಮ್ರಾನ್ ಖಾನ್ ಪರ ತಮ್ಮ ನಿಷ್ಠೆ ಪ್ರದರ್ಶಿಸಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ವಿಪಕ್ಷ ನಾಯಕ ಅಯಾಜ್ ಸಾದಿಕ್ ಅವರು ಸಂಸತ್ ಕಲಾಪ ಮುನ್ನಡೆಸಿದರು.

ಪ್ರಧಾನಿ ಪಟ್ಟ ಕಳೆದುಕೊಂಡ ಇಮ್ರಾನ್, ವಿಶ್ವಾಸಮತದಲ್ಲಿ ಪಿಟಿಐಗೆ ಸೋಲುಪ್ರಧಾನಿ ಪಟ್ಟ ಕಳೆದುಕೊಂಡ ಇಮ್ರಾನ್, ವಿಶ್ವಾಸಮತದಲ್ಲಿ ಪಿಟಿಐಗೆ ಸೋಲು

342 ಸದಸ್ಯರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ 174 ಸದಸ್ಯರು ಸರ್ಕಾರದ ವಿರುದ್ಧ ಮತ ಹಾಕಿದ್ದು, ಪ್ರಧಾನ ಮಂತ್ರಿಯನ್ನು ಪದಚ್ಯುತಗೊಳಿಸಲು ಅಗತ್ಯವಿದ್ದ 172 ಮತಗಳನ್ನು ಪಿಟಿಐ ಪಡೆಯುವುದಿಲ್ಲ ಎಂಬುದನ್ನು ಖಾತ್ರಿ ಪಡಿಸಿದವು. ಶನಿವಾರ ತಡರಾತ್ರಿ ಹೈಡ್ರಾಮಾ ನಂತರ ಇಮ್ರಾನ್ ಖಾನ್ ಪ್ರಧಾನಿ ಪಟ್ಟ ಕಳೆದುಕೊಂಡರು. ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಪ್ರಕ್ರಿಯೆ ನಡೆಯುವುದಕ್ಕೂ ಮುಂಚಿತವಾಗಿಯೇ ಪ್ರಧಾನಿ ಕಚೇರಿಯನ್ನು ಇಮ್ರಾನ್ ತೊರೆದು ಹೊರ ನಡೆದಿದ್ದರು.

Imran Khan Is First Pakistan Prime Minister To Lose No-Trust Vote

ಭಾನುವಾರ(ಏಪ್ರಿಲ್ 10) ಮಧ್ಯಾಹ್ನ 2 ಗಂಟೆ ನಂತರ ಪಿಎಂಎಲ್- ಎನ್ ಒಕ್ಕೂಟ ಸಭೆ ಸೇರಲಿದ್ದು, ನೂತನ ಪ್ರಧಾನಿ ಆಯ್ಕೆ ಮಾಡಲಿದೆ. ಬಹುತೇಕ ಶಹಬಾಜ್ ಷರೀಫ್ ಅವರು ಮುಂದಿನ ಪ್ರಧಾನಿಯಾಗುವ ಸಾಧ್ಯತೆ ಕಂಡು ಬಂದಿದೆ.

ಮಾರ್ಚ್ 8ರಂದು ಪಾಕಿಸ್ತಾನದ ವಿಪಕ್ಷಗಳ ಪರವಾಗಿ ಶೆಹಬಾಜ್ ಶರೀಫ್ ಅವರು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಏಪ್ರಿಲ್ 3ರಂದು ಅವಿಶ್ವಾಸ ನಿರ್ಣಯ ಮತದಾನ ಎಂದು ನಿಗದಿಯಾಗಿತ್ತು. ಆದರೆ, ಡೆಪ್ಯುಟಿ ಸ್ಪೀಕರ್ ಖಾಸಿಂ ಸುರಿ ಅವರು ಈ ಅವಿಶ್ವಾಸಮತವನ್ನು ಅಸಾಂವಿಧಾನಿಕ ಎಂದು ತೀರ್ಮಾನಿಸಿ ತಿರಸ್ಕರಿಸಿದರು. ಅದಾದ ಬಳಿಕ ಇಮ್ರಾನ್ ಖಾನ್ ಅವರು ಅಲ್ಲಿನ ಲೋಕಸಭೆಯನ್ನೇ ವಿಸರ್ಜಿಸಿ ಚುನಾವಣೆಗೆ ಹೋಗುವ ಪ್ರಯತ್ನ ಮಾಡಿದರು.

ಐದು ಸದಸ್ಯರ ನ್ಯಾಯಪೀಠವು ಮಹತ್ವದ ತೀರ್ಪು ನೀಡಿ, ಅವಿಶ್ವಾಸಮತ ತಿರಸ್ಕರಿಸಿದ್ದು ಮತ್ತು ಲೋಕಸಭೆ ವಿಸರ್ಜನೆ ಮಾಡಿದ್ದು ಅಸಿಂಧು ಎಂದು ತೀರ್ಮಾನಿಸಿತು. ಈಗ ನ್ಯಾಯಾಲಯದ ನಿರ್ದೇಶನದ ಮೇರೆಗೆ ಇಮ್ರಾನ್ ಖಾನ್ ಅವರು ಅವಿಶ್ವಾಸ ಮತ ಎದುರಿಸಬೇಕಾಗಿತ್ತು.

Imran Khan Is First Pakistan Prime Minister To Lose No-Trust Vote

ಪಾಕಿಸ್ತಾನ ಸಂವಿಧಾನದ 63A ವಿಧಿಯ ಮೇಲೆ ತನ್ನ ನಿರ್ಧಾರದಿಂದ ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಪ್ರಧಾನಿ ಇಮ್ರಾನ್ ಖಾನ್ ಸಂವಿಧಾನಕ್ಕೆ ಬದ್ಧರಾಗಿದ್ದಾರೆ, ಆದ್ದರಿಂದ ಅವರು ಪ್ರಾಂತೀಯ ಸಂಸತ್ತುಗಳನ್ನು ವಿಸರ್ಜಿಸುವಂತೆ ಅಧ್ಯಕ್ಷ ಆರಿಫ್ ಅಲ್ವಿ ಅವರಿಗೆ ಸಲಹೆ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

"ನಯಾ ಪಾಕಿಸ್ತಾನ" ಭರವಸೆಯೊಂದಿಗೆ ಅಧಿಕಾರಕ್ಕೆ

2018ರಲ್ಲಿ ಇಮ್ರಾನ್ ಖಾನ್ "ನಯಾ ಪಾಕಿಸ್ತಾನ" ಭರವಸೆಯೊಂದಿಗೆ ಅಧಿಕಾರಕ್ಕೆ ಬಂದರು. ಆದರೆ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದು, ಆಡಳಿತ ನಿರ್ವಹಣೆಯಲ್ಲಿ ಅವರು ವಿಫಲವಾದರು. ಪ್ರತಿಪಕ್ಷಗಳು ಅವರ ಸರ್ಕಾರದ ವಿರುದ್ಧ ಸಿಡಿದೆದ್ದವು.

69 ವರ್ಷದ ಇಮ್ರಾನ್ ಖಾನ್ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿದ್ದಾರೆ. 155 ಸದಸ್ಯರನ್ನು ಹೊಂದಿರುವ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಅಧಿಕಾರದಲ್ಲಿ ಉಳಿಯಲು ಕನಿಷ್ಠ 172 ಶಾಸಕರ ಅಗತ್ಯವಿತ್ತು. ಆದರೆ, ವಿರೋಧ ಪಕ್ಷಕ್ಕೆ 175 ಶಾಸಕರ ಬೆಂಬಲವಿದ್ದು, ಪ್ರಧಾನಿ ರಾಜೀನಾಮೆ ನೀಡಬೇಕು ಎಂದು ಜಮಿಯತ್ ಉಲೇಮಾ-ಇ-ಇಸ್ಲಾಮಾ ಫಝಲ್ (ಜೆಯುಐ-ಎಫ್) ಮುಖ್ಯಸ್ಥ ಮೌಲಾನಾ ಫಜ್ಲುರ್ ರೆಹಮಾನ್ ಹೇಳಿದ್ದರು. ಆದರೆ, ಇಮ್ರಾನ್ ಖಾನ್ ರಾಜೀನಾಮೆ ನೀಡಲಿಲ್ಲ, ವಿಶ್ವಾಸ ಮತ ಕಳೆದುಕೊಂಡು, ಪ್ರಧಾನಿ ಪಟ್ಟದಿಂದ ಕೆಳಗಿಳಿದಿದ್ದಾರೆ.

English summary
Imran Khan, the cricketer-turned-politician, has become the first sitting prime minister in the history of Pakistan to be removed from office through a no-confidence motion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X