ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ 5.4 ರೂ. ಏರಿಕೆ

|
Google Oneindia Kannada News

ಇಸ್ಲಾಮಾಬಾದ್, ಜುಲೈ 16: ಪಾಕಿಸ್ತಾನದಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ಗೆ 5.4ರೂ. ಏರಿಕೆ ಮಾಡಿ ಇಮ್ರಾನ್ ಖಾನ್ ಸರ್ಕಾರ ಆದೇಶ ಹೊರಡಿಸಿದೆ.

ಕೊರೊನಾ ಲಾಕ್‌ಡೌನ್‌ಗೂ ಮುನ್ನವೂ ಪಾಕಿಸ್ತಾನ ಸರ್ಕಾರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿತ್ತು, ಆದರೆ ಕೊರೊನಾ ಸೋಂಕಿನಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯನ್ 5.4 ರೂ.ಗೆ ಏರಿಕೆ ಮಾಡಿ, ಡೀಸೆಲ್ ಬೆಲೆ 2.54ರಷ್ಟು ಹೆಚ್ಚಿಸಿದೆ.

ಜುಲೈ 15ರಂದು ದೇಶದ ಪ್ರಮುಖ ನಗರಗಳಲ್ಲಿ ಇಂಧನ ದರ ಏರಿಕೆಜುಲೈ 15ರಂದು ದೇಶದ ಪ್ರಮುಖ ನಗರಗಳಲ್ಲಿ ಇಂಧನ ದರ ಏರಿಕೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಪೆಟ್ರೋಲಿಯಂಉತ್ಪನ್ನಗಳ ಬೆಲೆ ಏರಿಕೆಯಾಗಿರುವುದರಿಂದ ಪೆಟ್ರೋಲ್ ದರವನ್ನು ಪ್ರತಿ ಲೀಟರ್‌ಗೆ 11.4 ರೂ. ಹೆಚ್ಚಿಸುವಂತೆ ಒಜಿಆರ್‌ಎ ಶಿಫಾರಸು ಮಾಡಿತ್ತು.

Imran Khan Govt Hikes Petrol Price By Rs 5.4 per Litre In Pakistan

ಪ್ರಧಾನಿ ಇಮ್ರಾನ್ ಖಾನ್ ಸಾರ್ವಜನಿಕ ಹಿತದೃಷ್ಟಿಯಿಂದ ಒಜಿಆರ್‌ಎ ಶಿಫಾರಸುಗಳಿಗೆ ವಿರುದ್ಧವಾಗಿ ಪ್ರತಿ ಲೀಟರ್‌ಗೆ 5.40 ರೂ. ಮಾತ್ರವೇ ಹೆಚ್ಚಿಸಲು ಅನುಮೋದನೆ ನೀಡಿದ್ದಾರೆ.

ಕಳೆದ 15 ದಿನಗಳಲ್ಲಿ ಪೆಟ್ರೋಲ್ ಬೆಲೆಯನ್ನು ಎರಡನೇ ಅಲ ಹೆಚ್ಚಿಸಲಾಗಿದೆ. ಸರ್ಕಾರ ಈ ತಿಂಗಳ ಆರಂಭದಲ್ಲಿ ಎಲ್ಲಾ ರೀತಿಯ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನುಶೇ.4.7ರಷ್ಟು ಹೆಚ್ಚಿಸಿತ್ತು.

ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಫವಾದ್ ಚೌಧರಿ, ಅಂತಾರಾಷ್ಟ್ರೀಯ ಮಾರುಕಟ್ಟೆ ದರಕ್ಕನುಗುಣವಾಗಿ ತೈಲ ಬೆಲೆ ಹೆಚ್ಚಿಸದೆ ಸರ್ಕಾರದ ಬಳಿ ಬೇರೆ ಆಯ್ಕೆ ಇಲ್ಲ ಎಂದಿದ್ದಾರೆ.

ಸರ್ಕಾರವು ಪಾಕಿಸ್ತಾನದಲ್ಲಿ ಗುರುವಾರ ಇಂಧನ ದರ ಏರಿಕೆ ಮಾಡಿರುವ ಬಗ್ಗೆ ಡಾನ್ ವರದಿ ಮಾಡಿದೆ. ಸದ್ಯ ದೇಶದಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 118.09 ರೂ. ಪ್ರತಿ ಲೀಟರ್ ಡೀಸೆಲ್‌ಗೆ 116.5 ರೂ. ಇದೆ ಎಂದು ಉಲ್ಲೇಖಿಸಲಾಗಿದೆ.

ಹಾಗೆಯೇ ಸೀಮೆಎಣ್ಣೆ ಮತ್ತು ಲೈಟ್ಡೀಸೆಲ್ ಕ್ರಮವಾಗಿ 1.39 ರೂ, 1.27 ರೂ. ಹೆಚ್ಚಳಗೊಂಡಿದೆ. ಪರಿಷ್ಕೃತ ದರದಂತೆ ಸೀಮೆಎಣ್ಣೆ ಬೆಲೆ 87.14 ರೂ. ಹಾಗೂ ಲೈಟ್ ಡೀಸೆಲ್ ದರ 84.67ರೂ. ಆಗಿದೆ.

English summary
As the country's economy has been dwindling, the Imran Khan-led Pakistan government has increased petrol price by Rs 5.40 per litre and the high-speed diesel (HSD) by Rs 2.54 per litre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X