ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನ್ ಗೆದ್ದು ತೋರಿಸಿ ನೋಡೋಣ: ಇಮ್ರಾನ್ ಸವಾಲು

|
Google Oneindia Kannada News

ಇಸ್ಲಮಾಬಾದ್‌, ಜೂ. 13: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಆಡಳಿತಾರೂಢ ಶಹಬಾಜ್‌ ಷರೀಫ್‌ ನೇತೃತ್ವದ ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಗೆದ್ದು ತೋರಿಸುವಂತೆ ಸವಾಲು ಹಾಕಿದ್ದಾರೆ.

ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಇಮ್ರಾನ್‌ ಖಾನ್‌, ''ತೆಹರಿಕ್‌ ಇ ಇನ್ಸಾಫ್‌ ಈಗಾಗಲೇ ಮುಂದಿನ ಚುನಾವಣೆಗೆ ಸಂಪೂರ್ಣ ತಯಾರಿ ಮಾಡಿಕೊಂಡಿದ್ದು, ಪ್ರಸಕ್ತ ಸರ್ಕಾರ ಆಡಳಿತ ನಡೆಸಲು ಹೆಣಗಾಡುತ್ತಿದೆ. ಇದು ನಮ್ಮ ಪಕ್ಷದೊಂದಿಗೆ ಕಣದಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ. ಮೇ 25ರ ಅಜಾದಿ ಮೆರವಣಿಗೆಯನ್ನು ಆಡಳಿತಾರೂಢ ಶಹಬಾಜ್ ಷರೀಫ್ ಸರ್ಕಾರ ಹತ್ತಿಕ್ಕಿದೆ ಎಂದು ಎಂದು ಹೇಳಿದರು.

ಕಳೆದ ತಿಂಗಳು ಇಸ್ಲಮಾ ಬಾದ್‌ನಲ್ಲಿ ನಡೆದ ಅಜಾದಿ ರ್‍ಯಾಲಿಯಲ್ಲಿ ಭಾಗವಹಿಸಿದ್ದ ಪಾಕಿಸ್ತಾನ್‌ ತೆಹರಿಕ್‌ ಇ ಇನ್ಸಾಫ್‌ ಪಕ್ಷ ಕಾರ್ಯಕರ್ತರ ವಿರುದ್ಧ ಶಹಬಾದ್‌ ಸರ್ಕಾರ ಪ್ರಕರಣ ದಾಖಲಿಸಿದೆ. ಸರ್ಕಾರ ತನ್ನ ಮುಳ್ಳಾಗುವವರ ವಿರುದ್ಧ ಈ ಸರ್ಕಾರ ತೆಗದು ಬಿಸಾಕುತ್ತಿದೆ ಎಂದು ಹೇಳಿದರು.

imran khan challenge to opposition to won the next election

ಇದೇ ವೇಳೆ ಇಮ್ರಾನ್‌ ಅವರು ಶಹಬಾಜ್‌ ಸರ್ಕಾರ ಜೂ. 9ರಂದು ಜಾರಿಗೆ ತಂದಿರುವ ರಾಷ್ಟ್ರೀಯ ಹೊಣೆಗಾರಿಕೆ ತಿದ್ದುಪಡಿ ಕಾಯ್ದೆಯನ್ನು ಸರ್ಕಾರ ಮಾಜಿ ಅಧ್ಯಕ್ಷ ಆರಿಫ್‌ ಆಲ್ವಿ ಅವರಿಂದ ಗೌಪ್ಯವಾಗಿ ತಂದಿದೆ ಎಂದು ಹೇಳಿದರು. ಇದೇ ವೇಳೆ ಅಭಿವೃದ್ಧಿ ಯೋಜನೆಗಳನ್ನು ಟೀಕಿಸಿ, ಈ ಬಗ್ಗೆ ಸುಪ್ರೀಂ ಕೋರ್ಟ್‌ ಮೊರೆ ಹೋಗಲಾಗುವುದು ಎಂದರು.

imran khan challenge to opposition to won the next election

Recommended Video

ಯೂಟ್ಯೂಬ್ ಯಾವಾಗ ಸ್ಟಾರ್ಟ್ ಆಯ್ತು? ಯಾವ ವಿಡಿಯೋ ಮೊದಲು ಅಪ್ಲೋಡ್ ಆಯ್ತು? | Oneindia Kannada

ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್‌ ಬಗ್ಗೆ ಮಾತನಾಡಿದ ಇಮ್ರಾನ್ ಈ ಯೋಜನೆಗಳು ಕೋವಿಡ್ ಕಾರಣಗಳಿಂದ ಸ್ಥಗಿತಗೊಂಡಿವೆ. ಹೀಗಾಗಿ ಪಾಕಿಸ್ತಾನ ಸೇನಾ ಮುಖ್ಯಸ್ಥ ಜಾವದ್‌ ಬಾಜ್ವಾ ಅವರು ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್‌ನ ಬಲೂಚಿಸ್ತಾನ ಪ್ರದೇಶದಲ್ಲಿ ಕೆಲಸ ಮಾಡುವ ಪಾಕಿಸ್ತಾನದ ಜನರ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು. ಚೀನಾ ದೇಶ ಪಾಕಿಸ್ತಾನದ ಅಧಿಕಾರಿಗಳೊಂದಿಗೆ ತಮ್ಮ ಬೇಡಿಕೆಗಳನ್ನು ಇಟ್ಟಿದ್ದು, ಅಂತಾರಾಷ್ಟ್ರೀಯ ಹಾಗೂ ದೇಶೀಯಾ ಭದ್ರತೆ ಬಗ್ಗೆ ತಮ್ಮ ನಿಲುವುಗಳನ್ನು ತಿಳಿಸಿದೆ ಎಂದು ವರದಿ ಹೇಳಿದೆ.

English summary
Former Pakistan Prime Minister Imran Khan has challenged the ruling Shahbaz Sharif-led government to win the next election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X