ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಪೆಕ್ ನಿಂದ ಹೊರಬಂದ ಕತಾರ್ : ತೈಲ ಮಾರುಕಟ್ಟೆಯಲ್ಲಿ ಆಗುವುದಾ ಏರುಪೇರು?

|
Google Oneindia Kannada News

ದೋಹಾ (ಕತಾರ್), ಡಿಸೆಂಬರ್ 03 : ಐವತ್ತೇಳು ವರ್ಷಗಳಿಂದ ಪೆಟ್ರೋಲಿಯಂ ರಫ್ತುದಾರ ರಾಷ್ಟ್ರಗಳ ಒಕ್ಕೂಟದಲ್ಲಿದ್ದು ಇದೀಗ ಇದ್ದಕ್ಕಿದ್ದಂತೆ ಕತಾರ್ ಹೊರಬರಲು ನಿರ್ಧರಿಸಿರುವುದು ಪೆಟ್ರೋಲಿಯಂ ರಫ್ತು ವಹಿವಾಟಿನ ಮೇಲೆ ಏನಾದರೂ ಪರಿಣಾಮ ಬೀರಲಿದೆಯಾ? ಎಂಬುದು ಸದ್ಯದ ಚರ್ಚೆ.

ಈ ಪ್ರಶ್ನೆ ಏಕೆಂದರೆ, ಪೆಟ್ರೋಲಿಯಂ ರಫ್ತಿನಲ್ಲಿ ಕತಾರ್ 17ನೇ ಸ್ಥಾನದಲ್ಲಿದ್ದರೂ, ತನ್ನ ಶತ್ರು ರಾಷ್ಟ್ರ ಸೌದಿ ಅರೇಬಿಯಾಗೆ ಹೋಲಿಸಿದರೆ ಪೆಟ್ರೋಲಿಯಂ ರಫ್ತಿನ ಪ್ರಮಾಣ ಅತೀ ಕಡಿಮೆಯಾಗಿದ್ದರೂ, ಜಾಗತಿಕ ತೈಲ ನಿಕ್ಷೇಪದ ಪ್ರಮಾಣದಲ್ಲಿ ಕೇವಲ ಶೇ.2ರಷ್ಟು ಮಾತ್ರ ಕತಾರ್ ಹೊಂದಿದ್ದರೂ, ಓಪೆಕ್ ನಿಂದ ಹೊರಬಂದಿರುವುದರ ಪರಿಣಾಮ ಏನಾಗಲಿದೆ?

ಹಾಗೆ ನೋಡಿದರೆ, ಕತಾರ್ ನಲ್ಲಿ ಪ್ರತಿ ವ್ಯಕ್ತಿಯ ತಲಾ ಆದಾಯ ಇಡೀ ವಿಶ್ವದಲ್ಲಿಯೇ ಎಲ್ಲಕ್ಕಿಂತ ಹೆಚ್ಚಾಗಿದೆ. ಮಾನವ ಸಂಪನ್ಮಾಲ ಅಭಿವೃದ್ಧಿಯ ದೃಷ್ಟಿಯಿಂದಲೂ ಕತಾರ್ ಅತ್ಯಂತ ಮುಂದುವರಿದ ಅರಬ್ ರಾಷ್ಟ್ರ ಎಂದು ವಿಶ್ವಸಂಸ್ಥೆಯಿಂದಲೇ ಪ್ರಶಂಸೆಗೆ ಪಾತ್ರವಾಗಿದೆ. ಅಲ್ಲದೆ, ವಿಶ್ವದಲ್ಲಿಯೇ 3ನೇ ಅತೀದೊಡ್ಡ ನೈಸರ್ಗಿಕ ಅನಿಲದ ನಿಕ್ಷೇಪ ಮತ್ತು ತೈಲ ನಿಕ್ಷೇಪ ಹೊಂದಿರುವ ಶ್ರೀಮಂತ ರಾಷ್ಟ್ರ ಕತಾರ್.

ಪೆಟ್ರೋಲಿಯಂ ರಫ್ತುದಾರ ರಾಷ್ಟ್ರಗಳ ಒಕ್ಕೂಟದಿಂದ ಹೊರಬಂದ ಕತಾರ್ ಪೆಟ್ರೋಲಿಯಂ ರಫ್ತುದಾರ ರಾಷ್ಟ್ರಗಳ ಒಕ್ಕೂಟದಿಂದ ಹೊರಬಂದ ಕತಾರ್

ಹೀಗಿರುವಾಗ, ಪೆಟ್ರೋಲಿಯಂ ರಫ್ತುದಾರ ರಾಷ್ಟ್ರಗಳ ಒಕ್ಕೂಟದಿಂದ ಹೊರಬಂದಿರುವುದು ಸುಮ್ಮನೆ ಮಾತಾ? ಈ ನಿರ್ಧಾರದ ಹಿಂದೆ ಯಾವುದೇ ರಾಜಕೀಯ ದುರುದ್ದೇಶ ಇಲ್ಲ ಎಂದು 'ಮಿಸ್ಟರ್ ಗ್ಯಾಸ್' ಎಂದು ತಮ್ಮನ್ನು ತಾವೇ ಸಂಬೋಧಿಸಿಕೊಳ್ಳುವ ಕತಾರ್ ನ ಇಂಧನ ಖಾತೆ ರಾಜ್ಯ ಸಚಿವ ಮತ್ತು ಕತಾರ್ ಪೆಟ್ರೋಲಿಯಂ ಕಂಪನಿಯ ಮಾಲಿಕರನಾಗಿರವ ಸಾದ್ ಅಲ್-ಕಾಬಿ ಅವರು ಸೋಮವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಭಯೋತ್ಪಾದನೆಗೆ ಬೆಂಬಲದ ಆರೋಪ

ಭಯೋತ್ಪಾದನೆಗೆ ಬೆಂಬಲದ ಆರೋಪ

ಇದರ ಹಿಂದೆ ಸೌದಿ ಅರೇಬಿಯಾ ಮತ್ತಿರ ರಾಷ್ಟ್ರಗಳೊಂದಿಗೆ ಕತಾರ್ ಹೊಂದಿರುವ ಸಂಘರ್ಷ ಕಾರಣವಿಲ್ಲ ಎಂದು ಹೇಳಲಾಗದು. ವಿಶ್ವದ ಅತೀದೊಡ್ಡ ಪೆಟ್ರೋಲಿಯಂ ರಫ್ತುದಾರ ರಾಷ್ಟ್ರವಾಗಿರುವ ಸೌದಿ ಅರೇಬಿಯಾ 2017ರ ಜೂನ್ ನಿಂದಲೇ ಕತಾರ್ ಜೊತೆಗಿನ ರಾಜತಾಂತ್ರಿಕ ಸಂಬಂಧವನ್ನು ಕಡೆದುಕೊಂಡಿದೆ. ಇದರಿಂದಾಗಿ ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ಮತ್ತು ಕತಾರ್ ನ ರಾಜಧಾನಿ ದೋಹಾ ನಡುವೆ ತೀವ್ರ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ಕತಾರ್ ಭಯೋತ್ಪಾದನೆಗೆ ಇಂಬು ನೀಡುತ್ತಿದೆ ಮತ್ತು ಇರಾನ್ ಜೊತೆ ಹತ್ತಿರದ ಸಂಬಂಧ ಇಟ್ಟುಕೊಂಡಿದೆ ಎಂಬುದು ಬಹರೇನ್ ಮತ್ತು ಈಜಿಪ್ಟ್ ಸೇರಿದಂತೆ ಸೌದಿ ನೇತೃತ್ವದ ರಾಷ್ಟ್ರಗಳ ಗುರುತರ ಆರೋಪ. ಈ ಆರೋಪಗಳನ್ನು ಕತಾರ್ ಸಾರಾಸಗಟಾಗಿ ತಳ್ಳಿ ಹಾಕಿದೆ.

ಮೋದಿ-ರಾಜಕುಮಾರ ಭೇಟಿ: ಭಾರತದಲ್ಲಿ ಸೌದಿ ಹೂಡಿಕೆ ಹೆಚ್ಚಳ ನಿರೀಕ್ಷೆ ಮೋದಿ-ರಾಜಕುಮಾರ ಭೇಟಿ: ಭಾರತದಲ್ಲಿ ಸೌದಿ ಹೂಡಿಕೆ ಹೆಚ್ಚಳ ನಿರೀಕ್ಷೆ

ಏಕರೂಪದ ನೀತಿ ರೂಪಿಸುವ ಉದ್ದೇಶ

ಏಕರೂಪದ ನೀತಿ ರೂಪಿಸುವ ಉದ್ದೇಶ

1960ರಲ್ಲಿ ಸ್ಥಾಪಿತವಾದ ಪೆಟ್ರೋಲಿಯಂ ರಫ್ತುದಾರ ರಾಷ್ಟ್ರಗಳ ಒಕ್ಕೂಟ (ಓಪೆಕ್), ಸದಸ್ಯ ರಾಷ್ಟ್ರಗಳಲ್ಲಿ ಏಕರೂಪದ ನೀತಿ ರೂಪಿಸುವ ಮತ್ತು ಉತ್ಪಾದಕ ರಾಷ್ಟ್ರಗಳಲ್ಲಿ ರಫ್ತು ದರವನ್ನು ನಿಯಂತ್ರಿಸುವ ಉದ್ದೇಶದಿಂದ ಸ್ಥಾಪಿತವಾಗಿತ್ತು. ಅಲ್ಲದೆ, ಪೆಟ್ರೋಲಿಯಂ ಉತ್ಪನ್ನಗಳನ್ನು ರಾಷ್ಟ್ರಗಳಿಗೆ ಆರ್ಥಿಕವಾಗಿ, ಪರಿಣಾಮಕಾರಿಯಾಗಿ ಮತ್ತು ನಿಯಮಿತವಾಗಿ ಪೂರೈಸುವ ಉದ್ದೇಶವನ್ನೂ ಓಪೆಕ್ ಹೊಂದಿದೆ. ಜೊತೆಗೆ, ಪೆಟ್ರೋಲಿಯಂ ರಫ್ತು ರಾಷ್ಟ್ರಗಳಿಗೆ ಲಾಭ ದೊರಕಿಸಿಕೊಡುವ ವಾಗ್ದಾನವನ್ನೂ ಮಾಡಿತ್ತು. 1980ರಿಂದೀಚೆಗೆ ಪೆಟ್ರೋಲಿಯಂ ರಫ್ತುದಾರ ರಾಷ್ಟ್ರಗಳು ಸಾಕಷ್ಟು ಏರಿಳಿತ ಕಂಡಿವೆ. ಭಾರೀ ಇಳಿಕೆ ಕಾಣದಿದ್ದರೂ, 1970 ಮತ್ತು 1980ರ ದಶಕದಲ್ಲಿ ಕಂಡಿದ್ದ ಏರಿಕೆಯನ್ನು ಕಾಣಲು ವಿಫಲವಾಗಿವೆ.

ಏರುತ್ತಲೇ ಇದೆ ತೈಲಬೆಲೆ: ಮೋದಿ ಸಭೆಯಿಂದ ಮೋಡಿಯಾಗುತ್ತಾ ಕಾದು ನೋಡಿ! ಏರುತ್ತಲೇ ಇದೆ ತೈಲಬೆಲೆ: ಮೋದಿ ಸಭೆಯಿಂದ ಮೋಡಿಯಾಗುತ್ತಾ ಕಾದು ನೋಡಿ!

ಚಿಕ್ಕ ರಾಷ್ಟ್ರವಾದರೂ ಕತಾರ್ ಪ್ರಭಾವಶಾಲಿ

ಚಿಕ್ಕ ರಾಷ್ಟ್ರವಾದರೂ ಕತಾರ್ ಪ್ರಭಾವಶಾಲಿ

ಕತಾರ್ ಸಣ್ಣರಾಷ್ಟ್ರವಾಗಿದ್ದರೂ, ಓಪೆಕ್ ನಿಂದ ಹೊರಬಂದಿರುವುದರಿಂದ ತೈಲ ಮಾರುಕಟ್ಟೆಯಲ್ಲಿ ಇಳಿತ ಕಾಣಬಹುದು ಎಂದು ಅಜರ್ ಬೈಜಾನ್ ನ ಮಾಜಿ ಮುಖ್ಯಸ್ಥ ಸಬಿತ್ ಬಾಘಿರೋವ್ ಅಂದಾಜಿಸಿದ್ದಾರೆ. ತೈಲ ಬೆಲೆಗಳು ಸಾಕಷ್ಟು ಏರಿಳಿತ ಕಾಣುತ್ತಿವೆ ಮತ್ತು ಇದಕ್ಕೆ ರಾಜಕೀಯ ಅಂಶಗಳು ಕೂಡ ಕಾರಣ. ಕತಾರ್ ಓಪೆಕ್ ನಿಂದ ಹೊರಬಂದಿರುವುದು ತೈಲ ಮಾರುಕಟ್ಟೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಮತ್ತು ಇದನ್ನು ಎದುರಿಸಲು ಓಪೆಕ್ ರಾಷ್ಟ್ರಗಳು ಸಿದ್ಧವಾಗಿವೆ ಎಂದು ನಂಬಲು ಸಾಧ್ಯವಿಲ್ಲ ಎಂದಿದ್ದಾರೆ. ಒಂದು ಮಾತಂತೂ ನಿಜ, ಕತಾರ್ ಚಿಕ್ಕ ರಾಷ್ಟ್ರವಾದರೂ ಇಂಧನ ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಭಾವ ಹೊಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದ್ವೀಪವಾಗಿ ಬದಲಾಗಲಿದೆ ಕತಾರ್!: ನೆರೆ ದೇಶವನ್ನು ಹಣಿಯಲು ಸೌದಿಯ ಯೋಜನೆ ದ್ವೀಪವಾಗಿ ಬದಲಾಗಲಿದೆ ಕತಾರ್!: ನೆರೆ ದೇಶವನ್ನು ಹಣಿಯಲು ಸೌದಿಯ ಯೋಜನೆ

ತುರು ಏರಿಕೆ ಕಂಡಿರುವ ಕಚ್ಚಾ ತೈಲ ಬೆಲೆ

ತುರು ಏರಿಕೆ ಕಂಡಿರುವ ಕಚ್ಚಾ ತೈಲ ಬೆಲೆ

ಅಮೆರಿಕ ಮತ್ತು ಚೀನಾ ರಾಷ್ಟ್ರಗಳು 90 ದಿನಗಳ ಕಿತ್ತಾಟಕ್ಕೆ ಮಂಗಳ ಹಾಡಿದ್ದರಿಂದ ಸೋಮವಾರ ಇಂಧನ ಬೆಲೆಯಲ್ಲಿ ಶೇ.5ರಷ್ಟು ಏರಿಕೆ ಕಂಡುಬಂದಿದೆ. ಅಕ್ಟೋಬರ್ ನಲ್ಲಿ ಪ್ರತಿ ಬ್ಯಾರೆಲ್ ಕಚ್ಚಾ ತೈಲದ ಬೆಲೆ ಗರಿಷ್ಠ ಮಟ್ಟಕ್ಕೆ ಅಂದರೆ 86 ಡಾಲರ್ ಗೆ ತಲುಪಿತ್ತು. ಅದು 50 ಡಾಲರ್ ಆಸುಪಾಸಿನಲ್ಲಿ ಕೆಲ ದಿನಗಳ ಹಿಂದೆ ತಲುಪಿತ್ತು. ಇದೀಗ ತುಸು ಏರಿಕೆ ಕಂಡು ಪ್ರತಿ ಬ್ಯಾರೆಲ್ ಗೆ 62 ಡಾಲರ್ ಬಂದು ಮುಟ್ಟಿದೆ. ಈಗ ಕತಾರ್ ಕೂಡ ಹೊರಬಂದಿರುವುದರಿಂದ ಇದು ಇನ್ನಷ್ಟು ಏರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

English summary
What will be the impact of of Qatar coming out of OPEC? Qatar, one of the smallest country in exporting oil in Organization of the Petroleum Exporting Countries (OPEC) has decided to withdraw from OPEC from January 2019 and focus on liquified natural gas (LPG) export.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X