ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಎಫೆಕ್ಟ್: ವಿಶ್ವದ 2.5 ಕೋಟಿ ಕಾರ್ಮಿಕರ ಕೆಲಸಕ್ಕೆ ಕುತ್ತು

|
Google Oneindia Kannada News

ಬರ್ಲಿನ್, ಮಾರ್ಚ್ 19: ಕೊರೊನಾ ವೈರಸ್ ರುದ್ರನರ್ತನದಿಂದ ಜಗತ್ತಿನ ಆರ್ಥಿಕ ವಲಯಕ್ಕೆ ಭಾರಿ ಹಿನ್ನಡೆ ಆಗಿದೆ. ಮಾರಣಾಂತಿಕ ಕಾಯಿಲೆ ಕೊರೊನಾ ದಾಳಿಯಿಂದ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ವ್ಯವಹಾರ ಕ್ಷೇತ್ರ ನೆಲಕ್ಕೆ ಕುಸಿದಿದೆ. ಕೆಲವು ಕಂಪನಿಗಳು ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದರು, ನಿರೀಕ್ಷಿತ ಬಿಸಿನೆಸ್ ಮಾಡುತ್ತಿಲ್ಲ,

ವಿಶ್ವದ ಬಹುತೇಕ ದೊಡ್ಡ ದೊಡ್ಡ ಕಂಪನಿ, ಕಚೇರಿ, ಅಂಗಡಿಗಳು ಮುಚ್ಚಿವೆ. ಮಾಲ್, ಚಿತ್ರಮಂದಿರ, ಪಬ್, ಕ್ಲಬ್, ರೆಸ್ಟೋರೆಂಟ್, ಪಾರ್ಟಿ, ಹಾಲ್ ಸೇರಿದಂತೆ ಅನೇಕ ಉದ್ಯಮಗಳ ಮೇಲೆ ಕೊರೊನಾ ದುಷ್ಪರಿಣಾಮ ಬೀರಿದೆ.

ಪ್ರಯೋಗ ಫಲಪ್ರದ: ಕೊರೊನಾ ವೈರಸ್ ವಿರುದ್ಧ ಸೆಣಸಾಡಿ ಗೆದ್ದ Anti-HIV ಡ್ರಗ್ಸ್!ಪ್ರಯೋಗ ಫಲಪ್ರದ: ಕೊರೊನಾ ವೈರಸ್ ವಿರುದ್ಧ ಸೆಣಸಾಡಿ ಗೆದ್ದ Anti-HIV ಡ್ರಗ್ಸ್!

ಇದರಿಂದ ಕೋಟಿ ಕೋಟಿ ರೂಪಾಯಿ ನಷ್ಟ ಆಗಿದೆ. ಇದು ಆ ದೇಶದ ಆರ್ಥಿಕ ವ್ಯವಸ್ಥೆಗೆ ಅಪಾಯ ತಂದಿದೆ. ಇಂತಹ ಸಂದರ್ಭದಲ್ಲಿ ಅಂತರರಾಷ್ಟ್ರಿಯ ಕಾರ್ಮಿಕ ಸಂಸ್ಥೆ (ಐಎಲ್‌ಒ) ಆಘಾತಕಾರಿ ಸಂಗತಿಯೊಂದನ್ನು ಬಹಿರಂಗಪಡಿಸಿದೆ. ಮುಂದೆ ಓದಿ...

25 ಮಿಲಿಯನ್ ಕಾರ್ಮಿಕರಿಗೆ ಸಂಕಷ್ಟ

25 ಮಿಲಿಯನ್ ಕಾರ್ಮಿಕರಿಗೆ ಸಂಕಷ್ಟ

ಕೊರೊನಾ ವೈರಸ್‌ ರೋಗದ ಪರಿಣಾಮ ವಿಶ್ವದ ಆರ್ಥಿಕ ವ್ಯವಸ್ಥೆ ನೆಲಕಚ್ಚುವ ಸಾಧ್ಯತೆ ಇದೆ. ಒಂದು ವೇಳೆ ಸರ್ಕಾರಗಳು ಈ ಕುರಿತು ಜಾಗೃತರಾಗದಿದ್ದರೆ ಜಗತ್ತಿನಾದ್ಯಂತ 25 ಮಿಲಿಯನ್ (2.5 ಕೋಟಿ) ಕಾರ್ಮಿಕರು ತಮ್ಮ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂದು ಅಂತರರಾಷ್ಟ್ರಿಯ ಕಾರ್ಮಿಕ ಸಂಸ್ಥೆ ಎಚ್ಚರಿಕೆ ನೀಡಿದೆ.

ಮತ್ತೊಂದು ಆರ್ಥಿಕ ಕುಸಿತ

ಮತ್ತೊಂದು ಆರ್ಥಿಕ ಕುಸಿತ

2008-09ರಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟು ಸಂಭವಿಸಿತ್ತು. ಇದರಿಂದ ವಿಶ್ವದಾದ್ಯಂತ ನಿರುದ್ಯೋಗ ಸೃಷ್ಟಿಯಾಗಿತ್ತು. 1930ರ ಬಳಿಕ ಅಷ್ಟು ದೊಡ್ಡ ಮಟ್ಟದಲ್ಲಿ ಆರ್ಥಿಕ ಕುಸಿತ ಕಂಡಿದ್ದು ಈ ಸಮಯದಲ್ಲಿ ಎಂದು ಹೇಳಲಾಗುತ್ತೆ. ಇದೀಗ, ಕೊರೊನಾ ಹರಡುವಿಕೆಯ ವಿರುದ್ಧ ಸೂಕ್ತ ಕ್ರಮ ಜರುಗಿಸಿದಿದ್ದರೆ ಮತ್ತೊಂದು ಆರ್ಥಿಕ ಕುಸಿತಕ್ಕೆ ವಿಶ್ವ ಸಜ್ಜಾಗಬೇಕಿದೆ ಎಂಬ ಆತಂಕ ವ್ಯಕ್ತಪಡಿಸಿದೆ.

ಎಚ್ಚರಿಕೆ! ಈ ರಕ್ತ ಗುಂಪಿನವರಿಗೆ ಕೊರೊನಾವೈರಸ್ ಸೋಂಕು ಹೆಚ್ಚಳಎಚ್ಚರಿಕೆ! ಈ ರಕ್ತ ಗುಂಪಿನವರಿಗೆ ಕೊರೊನಾವೈರಸ್ ಸೋಂಕು ಹೆಚ್ಚಳ

ಕಾರ್ಮಿಕರನ್ನು ರಕ್ಷಿಸಿಕೊಳ್ಳಿ

ಕಾರ್ಮಿಕರನ್ನು ರಕ್ಷಿಸಿಕೊಳ್ಳಿ

ಭವಿಷ್ಯದಲ್ಲಿ ಇಂತಹ ಅರ್ಥಿಕ ಕುಸಿತ ಆಗಬಾರದು ಎಂಬ ನಿಟ್ಟಿನಲ್ಲಿ ತಮ್ಮ ಕಾರ್ಮಿಕರನ್ನು ರಕ್ಷಿಸಿಕೊಳ್ಳಲು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಕರೆ ನೀಡಿದೆ. ಆರ್ಥಿಕತೆಯನ್ನು ಉತ್ತೇಜಿಸಲು ಮತ್ತು ಉದ್ಯೋಗಗಳು ಮತ್ತು ಆದಾಯಗಳನ್ನು ಬೆಂಬಲಿಸಲು ತುರ್ತು, ದೊಡ್ಡ-ಪ್ರಮಾಣದ ಮತ್ತು ಸಂಘಟಿತ ಕ್ರಮಗಳನ್ನು ಕೈಗೊಳ್ಳುವಂತೆ ಕಾರ್ಮಿಕ ಸಂಸ್ಥೆ ಕರೆ ನೀಡಿದೆ.

2 ಲಕ್ಷಕ್ಕೂ ಅಧಿಕ ಕೊರೊನಾ ಕೇಸ್

2 ಲಕ್ಷಕ್ಕೂ ಅಧಿಕ ಕೊರೊನಾ ಕೇಸ್

172ಕ್ಕೂ ಅಧಿಕ ದೇಶಗಳು ಸಾಂಕ್ರಮಿಕ ರೋಗ ಕೊರೊನಾ ವೈರಸ್‌ಗೆ ತುತ್ತಾಗಿದೆ. ವಿಶ್ವದೆಲ್ಲೆಡೆ 2.2 ಲಕ್ಷಕ್ಕೂ ಹೆಚ್ಚು ಜನರು ಸೋಂಕಿನಿಂಬ ಬಳಲುತ್ತಿದ್ದಾರೆ. 8988ಕ್ಕೂ ಅಧಿಕ ಸಾವು ಸಂಭವಿಸಿದೆ. ಚೀನಾ, ಇಟಲಿ, ಇರಾನ್ ದೇಶಗಳಲ್ಲಿ ಹೆಚ್ಚು ಸಾವು ವರದಿಯಾಗಿದ್ದು, ಯೂರೋಪ್ ಮತ್ತು ಏಷ್ಯಾರಾಷ್ಟ್ರಗಳ ಮೇಲೆ ಪರಿಣಾಮ ಬೀರುತ್ತಿದೆ.

English summary
International Labour Organization warned on Wednesday that up to 25 million jobs could be lost globally due to the coronavirus pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X