ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾತು ಮುರಿದರೆ ಸಮರಾಭ್ಯಾಸ ಮತ್ತೆ ಶುರು: ಉ. ಕೊರಿಯಾಗೆ ಟ್ರಂಪ್ ಎಚ್ಚರಿಕೆ

|
Google Oneindia Kannada News

ವಾಷಿಂಗ್ಟನ್, ಜೂನ್ 18: ದಕ್ಷಿಣ ಕೊರಿಯಾ ಜತೆಗಿನ ಜಂಟಿ ಸೇನಾ ಸಮರಾಭ್ಯಾಸವನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮರ್ಥಿಸಿಕೊಂಡಿದ್ದು, ಒಂದು ವೇಳೆ ಉತ್ತರ ಕೊರಿಯಾ ಒಪ್ಪಂದ ಉಲ್ಲಂಘಿಸಿದರೆ ಮತ್ತೆ ಸಮರಾಭ್ಯಾಸ ಶುರುಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗಷ್ಟೇ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರೊಂದಿಗೆ ಮಾತುಕತೆ ನಡೆಸುವ ಮೂಲಕ ಸುದೀರ್ಘ ಕಾಲದ ವೈರತ್ವವನ್ನು ಕೊನೆಗಾಣಿಸುವ ಭರವಸೆ ಮೂಡಿಸಿದ್ದ ಟ್ರಂಪ್, ಕೊಟ್ಟ ಮಾತಿಗೆ ತಪ್ಪಿ ನಡೆದರೆ ಮತ್ತೆ ಅದೇ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದಿದ್ದಾರೆ.

ಐತಿಹಾಸಿಕ ಮೈಲಿಗಲ್ಲು: ಸಂಪೂರ್ಣ ಅಣ್ವಸ್ತ್ರ ನಿಷೇಧಕ್ಕೆ ಕಿಮ್ ಒಪ್ಪಿಗೆಐತಿಹಾಸಿಕ ಮೈಲಿಗಲ್ಲು: ಸಂಪೂರ್ಣ ಅಣ್ವಸ್ತ್ರ ನಿಷೇಧಕ್ಕೆ ಕಿಮ್ ಒಪ್ಪಿಗೆ

ವಾರ್ ಗೇಮ್‌ಗಳು ದುಂದುವೆಚ್ಚದ್ದು ಮತ್ತು ಪ್ರಚೋದನಾಕಾರಿಯಾದದ್ದು ಎಂದು ಟ್ರಂಪ್ ಟ್ವೀಟ್‌ನಲ್ಲಿ ದಕ್ಷಿಣ ಕೊರಿಯಾದೊಂದಿಗಿನ ಜಂಟಿ ಸಮರಾಭ್ಯಾಸವನ್ನು ವಿಶ್ಲೇಷಿಸಿದ್ದಾರೆ ಮಾಡಿದ್ದಾರೆ.

If North Korea breaks talks will start military exercise again: trump

ವಾರ್‌ ಗೇಮ್‌ಗಳನ್ನು ಹಿಂದಕ್ಕೆ ಪಡೆಯುವುದು ಮಾತುಕತೆಯ ವೇಳೆ ನನ್ನ ಕೋರಿಕೆಯಾಗಿತ್ತು. ಏಕೆಂದರೆ ಅದು ತೀರಾ ದುಬಾರಿಯಾದದ್ದು. ಅಲ್ಲದೆ, ಉತ್ತಮ ನಂಬಿಕೆಯ ಸಭೆ ನಡೆಸುವಾಗ ಅದು ಪ್ರತಿಕೂಲ ಅನುಭವ ನೀಡುತ್ತದೆ. ಜತೆಗೆ ಹೆಚ್ಚು ಪ್ರಚೋದನಾಕಾರಿ ಕೂಡ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಒಂದು ವೇಳೆ ಮಾತುಕತೆ ಮುರಿದುಬಿದ್ದರೆ ತಕ್ಷಣವೇ ಅದನ್ನು ಪುನರಾರಂಭಿಸುತ್ತೇವೆ. ಆ ಸನ್ನಿವೇಶ ಎದುರಾಗಲಾರದು ಎಂದು ವಿಶ್ವಾಸವಿದೆ.

'ಶತಮಾನದ ಭೇಟಿ': ಉತ್ತರ ಕೊರಿಯಾ ಮಾಧ್ಯಮ ಶ್ಲಾಘನೆ'ಶತಮಾನದ ಭೇಟಿ': ಉತ್ತರ ಕೊರಿಯಾ ಮಾಧ್ಯಮ ಶ್ಲಾಘನೆ

ಸಿಂಗಪುರದಲ್ಲಿ ಕಿಮ್ ಅವರೊಂದಿಗಿನ ಒಂದು ಭೇಟಿಯಲ್ಲಿಯೇ ಉತ್ತರ ಕೊರಿಯಾಕ್ಕೆ ಸಾಕಷ್ಟು ಕೊಡುಗೆಗಳನ್ನು ಕೊಟ್ಟಿರುವುದಾಗಿ ಹಬ್ಬಿರುವ ಸುಳ್ಳು ಸುದ್ದಿಗಳ ವಿರುದ್ಧ ಟ್ರಂಪ್ ಹರಿಹಾಯ್ದಿದ್ದಾರೆ.

English summary
US President Donald Trump warned North Korea if it breaks the talks, US will start military exercises with South Korea immediately.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X