ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದೊಂದು ಸಹಾಯ ಮಾಡಿ, ಜೀವನ ಪರ್ಯಂತ ನಿಮ್ಮನ್ನು ಮರೆಯುವುದಿಲ್ಲ: ಭಾರತಕ್ಕೆ ಪಾಕ್ ಕ್ರಿಕೆಟಿಗನ ಕೋರಿಕೆ

|
Google Oneindia Kannada News

ಇಸ್ಲಮಾಬಾದ್, ಏಪ್ರಿಲ್ 9: ಭಾರತ ಮಲೇರಿಯಾಕ್ಕೆ ನೀಡುವ ಹೈಡ್ರೋಕ್ಸಿಕ್ಲೋರೋಕ್ವಿನ್ ಲಸಿಕೆಗೆ ಎಲ್ಲಿಲ್ಲದ ಬೇಡಿಕೆ. ಈಗಾಗಲೇ, ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಮಾತ್ರೆಯನ್ನು ಪೂರೈಸಿದ್ದಕ್ಕೆ ಭಾರತವನ್ನು ಎಂದೂ ಮರೆಯುವುದಿಲ್ಲ ಎಂದಿದ್ದಾರೆ.

ಕೊರೊನಾ ಮರಣ ಮೃದಂಗದಿಂದ ತತ್ತರಿಸಿ ಹೋಗಿರುವ ಇಟೆಲಿ ಮತ್ತು ಸ್ಪೇನ್ ದೇಶಕ್ಕೂ ಭಾರತ ಈ ಲಸಿಕೆ ನೀಡುವ ಸಾಧ್ಯತೆಯಿದೆ. ಈ ನಡುವೆ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಭಾರತ ದೇಶಕ್ಕೆ ಮನವಿಯೊಂದನ್ನು ಮಾಡಿದ್ದಾರೆ.

ಮುಂದಿನ 4ದಿನ, ರಾಜ್ಯ ಸರಕಾರಕ್ಕೆ ಕಾನೂನು ಸುವ್ಯವಸ್ಥೆ ಕಾಪಾಡುವ ಅತ್ಯಂತ ಸವಾಲಿನ ದಿನ ಮುಂದಿನ 4ದಿನ, ರಾಜ್ಯ ಸರಕಾರಕ್ಕೆ ಕಾನೂನು ಸುವ್ಯವಸ್ಥೆ ಕಾಪಾಡುವ ಅತ್ಯಂತ ಸವಾಲಿನ ದಿನ

ಕ್ರಿಕೆಟ್ ವೃತ್ತಿ ಬದುಕಿನಿಂದ ನಿವೃತ್ತಿಗೊಂಡ ನಂತರ ತಮ್ಮ ಯುಟ್ಯೂಬ್ ಚಾನೆಲ್ ಮೂಲಕ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿರುವ ರಾವಲ್ಪಿಂಡಿ ಎಕ್ಸ್ ಪ್ರೆಸ್ ಶೋಯೆಬ್ ಅಖ್ತರ್, ಭಾರತ ಸರಕಾರಕ್ಕೆ ಮನವಿ ಮಾಡಿದ್ದಾರೆ.

If India can make 10,000 ventilators for us, Pakistan will remember this gesture forever, Shoaib Akhtar

"ಪಾಕಿಸ್ತಾನದಲ್ಲಿ ಕೊರೊನಾದಿಂದಾಗಿ ಸಂದಿಗ್ದ ಪರಿಸ್ಥಿತಿಯಿದೆ. ನಮಗೆ ತುರ್ತಾಗಿ ಹತ್ತು ಸಾವಿರ ವೆಂಟಿಲೇಟರ್ ಬೇಕಾಗಿದೆ. ಇದನ್ನು ಪೂರೈಸಲು ಭಾರತದಿಂದ ಮಾತ್ರ ಸಾಧ್ಯ. ದಯವಿಟ್ಟು ನಮಗೆ ಅದನ್ನು ತುರ್ತಾಗಿ ನೀಡಿ ಸಹಾಯ ಮಾಡಿ" ಎಂದು ಅಖ್ತರ್ ಮನವಿ ಮಾಡಿದ್ದಾರೆ.

"ನೀವು ಸಹಾಯ ಮಾಡಿದ್ದಲ್ಲಿ ಜೀವನಪರ್ಯಂತ ನಿಮ್ಮ ಸಹಾಯವನ್ನು ಮರೆಯುವುದಿಲ್ಲ. ವೆಂಟಿಲೇಟರ್ ನೀಡಿದರೆ ಭಾರತ ಮತ್ತು ಪಾಕಿಸ್ತಾನದ ಸಂಬಂಧ ಮತ್ತಷ್ಟು ವೃದ್ದಿಗೊಳ್ಳಲಿದೆ ಎನ್ನುವುದು ನನ್ನ ಅಭಿಪ್ರಾಯ" ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ.

ಬಿಜೆಪಿಯ ಲಜ್ಜೆಗೇಡಿ ರಾಜಕಾರಣಕ್ಕೆ ಧಿಕ್ಕಾರ ಎಂದ ಕುಮಾರಸ್ವಾಮಿ ಬಿಜೆಪಿಯ ಲಜ್ಜೆಗೇಡಿ ರಾಜಕಾರಣಕ್ಕೆ ಧಿಕ್ಕಾರ ಎಂದ ಕುಮಾರಸ್ವಾಮಿ

"ಭಾರತೀಯರು, ನಾನು ಆ ದೇಶಕ್ಕೆ ಹೋದಾಗ ನನ್ನ ಮೇಲೆ ತೋರಿದ ಪ್ರೀತಿಗೆ ನಾನು ಚಿರಖುಣಿ. ಎರಡು ರಾಷ್ಟ್ರಗಳ ಕ್ರಿಕೆಟ್ ಪಂದ್ಯ ಮುಂದುವರಿಯಲಿ ಎಂದಷ್ಟೇ ನಾನು ಕೋರಿಕೊಳ್ಳಬಹುದು. ಆದರೆ, ವೆಂಟಿಲೇಟರ್ ಸರಬರಾಜು ಮಾಡುವುದಕ್ಕೆ ಮನವಿ ಮಾಡಬೇಕೇ ಅಥವಾ ಬೇಡವೇ ಎಂದು ಪಾಕ್ ಅಧಿಕಾರಿಗಳು ನಿರ್ಧರಿಸಬೇಕು" ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ.

English summary
If India can make 10,000 ventilators for us, Pakistan will remember this gesture forever, Shoaib Akhtar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X