ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನ ಪ್ರಧಾನಿಯಿಂದಲೇ ಮಾಜಿ ಪ್ರಧಾನಿ ಪುತ್ರಿಗೆ ಜೀವ ಬೆದರಿಕೆ?

|
Google Oneindia Kannada News

ಇಸ್ಲಾಮಾಬಾದ್, ಮಾರ್ಚ್ 12: ಪುತ್ರಿ ಮರ್ಯಂ ಪ್ರಾಣಕ್ಕೆ ಏನಾದರೂ ಆದಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕಾರಣ ಎಂದು ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಗಂಭೀರ ಆರೋಪ ಮಾಡಿದ್ದಾರೆ.

ಇಮ್ರಾನ್ ಖಾನ್ ಸರ್ಕಾರ ಹಾಗೂ ಸೇನೆಯ ವಿರುದ್ಧ ಮಾತನಾಡುತ್ತಿದ್ದಾರೆ ಎನ್ನುವ ಏಕೈಕ ಕಾರಣಕ್ಕೆ ಮರ್ಯಂ ಅವರನ್ನು ನಿಯಂತ್ರಿಸಲು ಎಲ್ಲಿಲ್ಲದ ಪ್ರಯೋಗ ಮಾಡಲಾಗುತ್ತಿದೆ.

ಪಾಕ್ ಮಾಜಿ ಪ್ರಧಾನಿ ನವಾಜ್‌ ಷರೀಫ್‌ರನ್ನು ನರಿಗೆ ಹೋಲಿಸಿದ ಇಮ್ರಾನ್ ಖಾನ್ಪಾಕ್ ಮಾಜಿ ಪ್ರಧಾನಿ ನವಾಜ್‌ ಷರೀಫ್‌ರನ್ನು ನರಿಗೆ ಹೋಲಿಸಿದ ಇಮ್ರಾನ್ ಖಾನ್

ಈ ಮೂಲಕ ಮರಿಯಂ ಅವರ ಹಿಂದೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಾಜ್ವಾ, ಐಎಸ್ ಐ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ಹಾಗೂ ಜನರಲ್ ಇರ್ಫಾನ್ ಮಲಿಕ್ ಬಿದ್ದಿದ್ದಾರೆ.

 If Anything Happens To Daughter Nawaz Sharif Targets Pak PM, Army

ಇವರಿಂದ ಆಕೆಯ ಜೀವಕ್ಕೆ ಅಪಾಯವಿದೆ, ಕರಾಚಿ ಹೋಟೆಲ್‌ನಲ್ಲಿ ಆಕೆ ವಾಸಿಸುತ್ತಿದ್ದ ರೂಮ್ ಒಳಗೆ ಪ್ರವೇಶಿಸಿ ಒಡೆದು ಹಾಕಿದ್ದಾರೆ ಎಂದು ನವಾಜ್ ಷರೀಶ್ ಆರೋಪಿಸಿದ್ದಾರೆ.

ಸಧ್ಯ ಲಂಡನ್‌ನಲ್ಲಿ ನೆಲೆಸಿರುವ ನವಾಜ್ ಷರೀಫ್ ತಮ್ಮ ಟ್ವಿಟ್ಟರ್ ಖಾತೆ ಮೂಲಕ ಈ ಆರೋಪದ ವಿಡಿಯೋವನ್ನು ಪೋಸ್ಟ್‌ ಮಾಡಿದ್ದಾರೆ.

ಇಮ್ರಾನ್ ಖಾನ್ ಪ್ರಧಾನಿಯಾದ ಬಳಿಕ ಉಭಯ ನಾಯಕರ ನಡುವಿನ ವಾಗ್ವಾದ ತಾರಕಕ್ಕೇರಿದೆ. 2019ರಲ್ಲಿ ನವಾಜ್ ಷರೀಶ್ ಅವರನ್ನು ಭ್ರಷ್ಟಾಚಾರದ ಆರೋಪದ ಮೇಲೆ ಅಪರಾಧಿ ಎಂದು ಪರಿಗಣಿಸಿ ಜೈಲಿಗೆ ಕಳುಹಿಸಲಾಗಿತ್ತು.

ಅನಾರೋಗ್ಯದ ಹಿನ್ನೆಲೆಯಲ್ಲಿ ಜಾಮೀನು ಪಡೆದು ಲಂಡನ್‌ಗೆ ಹೋಗಿರುವ ಷರೀಫ್ ಅಲ್ಲಿಂದಲೇ ತಮ್ಮ ಪಕ್ಷ ಪಿಎಂಎಲ್‌ಎನ್‌ ಅನ್ನು ನಿಯಂತ್ರಿಸುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ನವಾಜ್ ಷರೀಫ್ ಪುತ್ರಿ ಮರ್ಯಂ ಇಮ್ರಾನ್ ಖಾನ್ ಸರ್ಕಾರ ಹಾಗೂ ಸೇನೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕಾರಣದಿಂದ ಮತ್ತೆ ಷರೀಫ್ ಹಾಗೂ ಖಾನ್ ನಡುವಿನ ತಿಕ್ಕಾಟ ತಾರಕಕ್ಕೇರಿದೆ.

ಪುತ್ರಿ ಮರ್ಯಂ ಪ್ರಾಣಕ್ಕೆ ಏನಾದರೂ ಆದಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕಾರಣ ಎಂದು ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಗಂಭೀರ ಆರೋಪ ಮಾಡಿದ್ದಾರೆ.

ಇಮ್ರಾನ್ ಖಾನ್ ಸರ್ಕಾರ ಹಾಗೂ ಸೇನೆಯ ವಿರುದ್ಧ ಮಾತನಾಡುತ್ತಿದ್ದಾರೆ ಎನ್ನುವ ಏಕೈಕ ಕಾರಣಕ್ಕೆ ಮರಿಯಮ್ ಅವರನ್ನು ನಿಯಂತ್ರಿಸಲು ಎಲ್ಲಿಲ್ಲದ ಪ್ರಯೋಗ ಮಾಡಲಾಗುತ್ತಿದೆ.

English summary
Pakistan's former prime minister, Nawaz Sharif, has accused the country's powerful military establishment of threatening his daughter Maryam Nawaz, warning that if anything happens to her Prime Minister Imran Khan and the three top generals would be responsible for it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X