ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಇಂದು ಕುಲಭೂಷಣ್ ಜಾಧವ್ ತೀರ್ಪು

|
Google Oneindia Kannada News

ದಿ ಹೇಗ್, ಜುಲೈ 17: ಭಾರತದ ಗೂಢಾಚಾರಿ ಎಂದು ತಪ್ಪಾಗಿ ಅರ್ಥೈಸಿ ಕುಲಭೂಷಣ್ ಜಾಧವ್‌ಗೆ ನೀಡಿರುವ ಗಲ್ಲು ಶಿಕ್ಷೆ ಕುರಿತು ಇಂದು ಅಂತಾರಾಷ್ಟ್ರೀಯ ಕೋರ್ಟ್ ಮಹತ್ವದ ಆದೇಶ ನೀಡಲಿದೆ.

2016ರಲ್ಲಿ ಪಾಕಿಸ್ತಾನ ಸೇನೆ ಕುಲಭೂಷಣ್ ಜಾಧವ್ ಅವರನ್ನು ಬಂಧಿಸಿತ್ತು. ದೇಶದ್ರೋಹ ಹಾಗೂ ಭಯೋತ್ಪಾದನಾ ಚಟುವಟಿಕೆಯಲ್ಲಿ ಜಾಧವ್ ಭಾಗಿಯಾಗಿದ್ದಾರೆ ಎಂದು ಆರೋಪಿಸಿ 2016ರ ಏಪ್ರಿಲ್‌ನಲ್ಲಿ ಪಾಕಿಸ್ತಾನ ಮಿಲಿಟರಿ ಕೋರ್ಟ್‌ ಜಾಧವ್‌ಗೆ ಗಲ್ಲು ಶಿಕ್ಷೆ ವಿಧಿಸಿತ್ತು.

ಇದನ್ನು ಪ್ರಶ್ನಿಸಿ ಭಾರತ ಸರ್ಕಾರವು ದಿ ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮರಣ ದಂಡನೆ ಜಾರಿಗೆ ತಡೆಯಾಜ್ಞೆ ನೀಡಿತ್ತು.

ಪಾಕ್‌ನಲ್ಲಿರುವ ಜಾಧವ್‌ಗೆ ಗಲ್ಲುಶಿಕ್ಷೆಯೇ? ಬಿಡುಗಡೆಯೇ?: ಬುಧವಾರ ನಿರ್ಧಾರ ಪಾಕ್‌ನಲ್ಲಿರುವ ಜಾಧವ್‌ಗೆ ಗಲ್ಲುಶಿಕ್ಷೆಯೇ? ಬಿಡುಗಡೆಯೇ?: ಬುಧವಾರ ನಿರ್ಧಾರ

ಹೀಗಾಗಿ ಬುಧವಾರ ನೀಡುವ ತೀರ್ಪು ಭಾರತ ಹಾಗೂ ಪಾಕಿಸ್ತಾನಕ್ಕೆ ಮಹತ್ವದ್ದಾಗಿದೆ. ಅಂತಾರಾಷ್ಟ್ರೀಯ ಕೋರ್ಟ್ ಆದೇಶವನ್ನು ಪಾಲಿಸಲೇಬೇಕು ಎಂಬ ನಿಯಮವೇನಿಲ್ಲ ಆದರೆ ಆದೇಶ ಪಾಲಿಸದಿದ್ದರೆ ರಾಜತಾಂತ್ರಿಕವಾಗಿ ಆದೇಶಕ್ಕೆ ಹಿನ್ನಡೆಯಾಗಲಿದೆ.

ICJ will pass the verdict on Kulbhushan Jadhav today

ಕುಲಭೂಷಣ್ ಜಾಧವ್ ಮರಣದಂಡನೆ ರದ್ದಾಗಲಿದೆ ಹಾಗೂ ಭಾರತಕ್ಕೆ ಅವರು ವಾಪಸಾಗುವಂತೆ ಆದೇಶವಾಗುವ ನಿರೀಕ್ಷೆಯನ್ನು ಭಾರತ ಸರ್ಕಾರ ಹಾಗೂ ಕೋಟ್ಯಂತರ ಜನ ಹೊಂದಿದ್ದಾರೆ.

English summary
International court of justice will pass the order of Kulbhushan jadhav death penalty row. India seeks safe return of Jadhav.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X