• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಂಗಳ ಗ್ರಹದಲ್ಲಿನ ಹಿಮದ ಕುಳಿಯ ಅದ್ಭುತ ಚಿತ್ರ ನೋಡಿ

|

ವಾಷಿಂಗ್ಟನ್, ಡಿಸೆಂಬರ್ 24: ಕೆಂಪು ಗ್ರಹದ ಅಂಗಳದಲ್ಲಿ ಹಸಿರು ಚಿಗುರೊಡೆಯಲು ಸಾಧ್ಯವೇ? ಅಥವಾ ಈಗಲೇ ಹಸಿರು ಇದೆಯೇ? ಅಲ್ಲಿಯೂ ಮನುಷ್ಯ ಬದುಕಲು ಸಾಧ್ಯವೇ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನದಲ್ಲಿರುವ ವಿಜ್ಞಾನಿಗಳ ಹುಮ್ಮಸ್ಸು ಹೆಚ್ಚಿಸುವ ಸುದ್ದಿಯೊಂದು ಸಿಕ್ಕಿದೆ.

ಮಂಗಳ ಗ್ರಹದ ಅಧ್ಯಯನಕ್ಕೆ ತೆರಳಿರುವ 'ಮಾರ್ಸ್ ಎಕ್ಸ್‌ಪ್ರೆಸ್' ನೌಕೆ ಹಿಮದಿಂದ ಕೂಡಿರುವ ಬೃಹತ್ ಕುಳಿಯೊಂದರ ಅದ್ಭುತ ಚಿತ್ರವೊಂದನ್ನು ಸೆರೆ ಹಿಡಿದಿದೆ.

ಅಂಗಾರಕನ ಉತ್ತರ ಧ್ರುವದ ತುದಿಯಲ್ಲಿ ಕೊರೊಲೆವ್ ಕುಳಿ ಎಂದು ಕರೆಯಲಾಗುವ ಸ್ಥಳದಲ್ಲಿ 81.4 ಕಿ.ಮೀ (50.6 ಮೈಲು) ವಿಶಾಲವಾಗಿ ಹರಡಿಕೊಂಡಿರುವ ಕುಳಿಯನ್ನು ಹೆಚ್ಚೂಕಡಿಮೆ ಹಿಮದ ತುಣುಕುಗಳು ತುಂಬಿಕೊಂಡಿರುವ ಮನಮೋಹಕ ಚಿತ್ರ ವಿಜ್ಞಾನಿಗಳನ್ನು ಚಕಿತಗೊಳಿಸಿದೆ.

ಕೆಂಪು ಗ್ರಹಕ್ಕೆ ಗಗನಯಾತ್ರಿಕರ ರವಾನೆಗೆ ನೆರವಾಗಲಿದೆ 'ಇನ್‌ಸೈಟ್'

ಮಂಗಳ ಗ್ರಹದಲ್ಲಿ ನೀರಿನ ಅಂಶಗಳಿವೆ ಎನ್ನುವುದನ್ನು ಈಗಾಗಲೇ ಸಂಶೋಧನೆಗಳು ಕಂಡುಕೊಂಡಿವೆ. ಅದರಲ್ಲಿಯೂ ಹಿಮದ ಪ್ರಮಾಣ ಅಲ್ಲಲ್ಲಿ ಪತ್ತೆಯಾಗಿವೆ. ಆದರೆ, ಸರೋವರಗಳಷ್ಟು ವಿಶಾಲವಾದ ಬೃಹತ್ ಕುಳಿಗಳಲ್ಲಿ ಇಷ್ಟು ಹಿಮ ಕಂಡಿರುವುದು ಇದೇ ಮೊದಲು.

ಮಂಗಳದಲ್ಲಿ 'ಕಾಲ' ಬದಲಾಗುತ್ತದೆ

ಭೂಮಿಯಂತೆಯೇ ಮಂಗಳ ಗ್ರಹದಲ್ಲಿಯೂ ಹವಾಮಾನ ಅವಧಿಗೆ ಅನುಗುಣವಾಗಿ ಬದಲಾಗುತ್ತದೆ. ಬೇಸಿಗೆಯಲ್ಲಿ ಇಲ್ಲಿ ಕರಗುವಂತೆ, ಅಲ್ಲಿಯೂ ಹಿಮದ ಪ್ರಮಾಣ ಕಡಿಮೆಯಾಗುತ್ತದೆ. ಆದರೆ, ಯಾವುದೋ ಕಾಲದಲ್ಲಿ ಮಂಗಳ ಗ್ರಹದಲ್ಲಿನ ಯಾವುದೋ ಘಟನೆಯಿಂದ ಸೃಷ್ಟಿಯಾದ ಕೊರೊಲೆವ್ ಕುಳಿಯಲ್ಲಿ ಹಿಮದ ಪ್ರಮಾಣ ಹಾಗೆಯೇ ಇದೆ. ಅಂದಹಾಗೆ ಈ ಕುಳಿಗೆ ನಾಮಕರಣ ಮಾಡಿರುವುದು ಸೋವಿಯತ್‌ನ ರಾಕೆಟ್ ಎಂಜಿನಿಯರ್ ಸರ್ಜೈ ಕೊರೊಲೆವ್ ಅವರ ಹೆಸರನ್ನು.

ವಿಜ್ಞಾನ ಲೋಕದಲ್ಲಿ ಮಹತ್ತರ ಸಾಧನೆ: ಮಂಗಳ ಗ್ರಹಕ್ಕೆ ಕಾಲಿಟ್ಟ ನಾಸಾದ ರೋಬೋಟ್

60 ಕಿ.ಮೀ. ವಿಸ್ತೀರ್ಣದ ಕುಳಿ

60 ಕಿ.ಮೀ. ವಿಸ್ತೀರ್ಣದ ಕುಳಿ

'ಕೋಲ್ಡ್ ಟ್ರ್ಯಾಪ್' ಎಂದು ಕರೆಯಲಾಗುವ ಭೌಗೋಳಿಕ ಲಕ್ಷಣವು ಈ ಕುಳಿಯಲ್ಲಿ ಕಂಡುಬಂದಿದೆ. ಈ ಕುಳಿಯು ಬಹಳ ಆಳವಾಗಿದ್ದು, ಮೇಲ್ಭಾಗದಿಂದ 2 ಕಿ.ಮೀ.ಗೂ ಅಧಿಕವಿದೆ. ನೆಲಮಟ್ಟದಿಂದ ಇರುವ ನೀರಿನ ಹಿಮವು 1.8 ಕಿ.ಮೀ. ಎತ್ತರದವರೆಗೂ ತುಂಬಿಕೊಂಡಿದ್ದು, 60 ಕಿ.ಮೀ. (37.3 ಮೈಲು) ವಿಸ್ತೀರ್ಣ ವ್ಯಾಪಿಸಿದೆ.

ಇದರಲ್ಲಿನ ಹಿಮದ ಪ್ರಮಾಣವು 2,200 ಕ್ಯುಬಿಕ್ ಕಿ.ಮೀಯಷ್ಟಿದೆ (ಮೈಲಿಗೆ 528 ಕ್ಯುಬಿಕ್ ಮೀಟರ್). ಜೊತೆಗೆ ಮಂಗಳದ ಅಂಗಳದಲ್ಲಿನ ದೂಳು ಸಹ ಇದೆ.

ಇಸ್ರೋದ ಮಂಗಳಯಾನಕ್ಕೆ ನಾಲ್ಕರ ಹರೆಯದ ಸಂಭ್ರಮ: ಕಣ್ಮನ ಸೆಳೆಯುವ ಚಿತ್ರಗಳು

ಹಿಮ ಕರಗಿಸದ ಗಾಳಿ

ಹಿಮ ಕರಗಿಸದ ಗಾಳಿ

ಹಿಮದ ಮೇಲೆ ಗಾಳಿ ಹಾಯುವಾಗ (ಮಂಗಳ ಗ್ರಹದಲ್ಲಿ ಗಾಳಿಯಿದೆ. ಆದರೆ ಅದು ತುಂಬಾ ತೆಳುವಾಗಿದ್ದು ಅದನ್ನು ಉಸಿರಾಡಲು ಸಾಧ್ಯವಾಗುವುದಿಲ್ಲ) ತಣ್ಣಗಾಗಿ ಅದರಲ್ಲಿ ಲೀನವಾಗುತ್ತದೆ. ಕೊನೆಗೆ ತಣ್ಣಗಿನ ಗಾಳಿಯ ಪದರವಾಗಿ ಹಿಮದ ಮೇಲೆಯೇ ಸೇರಿಕೊಳ್ಳುತ್ತದೆ. ಈ ಗಾಳಿಯು ಉಷ್ಣವನ್ನು ಸರಿಯಾಗಿ ಪ್ರವಹಿಸದ ಕಾರಣ ಬಿಸಿ ಗಾಳಿಯಿಂದ ಹಿಮವನ್ನು ಕಾಪಾಡುವ ಇನ್ಸುಲೇಟರ್‌ನಂತೆ ಕಾರ್ಯನಿರ್ವಹಿಸುತ್ತದೆ. ಈ ಕಾರಣದಿಂದ ಹಿಮ ಕರಗದಂತೆ ತಡೆಯುತ್ತದೆ.

ಇದೇ ರೀತಿಯ ಚಟುವಟಿಕೆಯು ಮಂಗಳ ಗ್ರಹದ ಉತ್ತರ ಧ್ರುವದಲ್ಲಿಯೇ ಇರುವ 36 ಕಿ.ಮೀ. (22.4 ಮೈಲು) ವಿಸ್ತೀರ್ಣದ ಲೌತ್ ಕುಳಿಯಲ್ಲಿಯೂ ನಡೆಯುತ್ತದೆ.

ಬಾಹ್ಯಾಕಾಶದ ಚಿತ್ರ ಕ್ಲಿಕ್ಕಿಸಿ ರವಾನಿಸಿದ ನಾಸಾದ ಸೋಲಾರ್ ಪ್ರೋಬ್ ನೌಕೆ

ಮಾರ್ಸ್ ಎಕ್ಸ್‌ ಪ್ರೆಸ್‌ಗೆ 15ರ ಹರೆಯ

ಮಾರ್ಸ್ ಎಕ್ಸ್‌ಪ್ರೆಸ್ ನೌಕೆಯು ಡಿಸೆಂಬರ್ 25ರಂದು (ಮಂಗಳವಾರ) ಮಂಗಳ ಗ್ರಹದ ಕಕ್ಷೆಯಲ್ಲಿ ತನ್ನ 15 ವರ್ಷದ 'ಹುಟ್ಟುಹಬ್ಬ'ವನ್ನು ಆಚರಿಸಿಕೊಳ್ಳುತ್ತಿದೆ. ಅದಕ್ಕೂ ಮುನ್ನವೇ ಈ ಸೊಗಸಾದ ಚಿತ್ರವನ್ನು ಕ್ಲಿಕ್ಕಿಸಿದೆ.

ಕಳೆದ ವರ್ಷ ಕೊರೊಲೆವ್ ಕುಳಿಯ ಸುತ್ತ ಹಲವು ಬಾರಿ ಹಾದು ಹೋಗಿದ್ದ ಮಾರ್ಸ್ ಎಕ್ಸ್‌ ಪ್ರೆಸ್, ಡಿಎಸ್ ಎಲ್ ಆರ್ ಅಧಿಕ ರೆಸೊಲ್ಯೂಷನ್ ಸ್ಟಿರಿಯೋ ಕ್ಯಾಮೆರಾ (ಎಚ್ ಆರ್ ಎಸ್ ಸಿ) ಬಳಸಿ ಈ ಚಿತ್ರಗಳ ಸರಣಿಯನ್ನು ಸೆರೆಹಿಡಿದಿದೆ.

English summary
Mars orbiter Mars express captured stunning photos of korolev crater which filled with ice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X