ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಬೈ,ಸಿಂಗಾಪುರದಿಂದ ಆಕ್ಸಿಜನ್ ಕಂಟೇನರ್‌ಗಳ ಏರ್‌ಲಿಫ್ಟ್ ಮಾಡಿದ ಭಾರತೀಯ ವಾಯುಪಡೆ

|
Google Oneindia Kannada News

ನವದೆಹಲಿ, ಏಪ್ರಿಲ್ 28: ಭಾರತಕ್ಕೆ ದುಬೈ ಹಾಗೂ ಸಿಂಗಾಪುರದಿಂದ ಕ್ರಯೋಜೆನಿಕ್ ಆಕ್ಸಿಜನ್ ಕಂಟೇನರ್‌ಗಳನ್ನು ಭಾರತೀಯ ವಾಯುಪಡೆ ಏರ್‌ಲಿಫ್ಟ್ ಮಾಡಿದೆ.

ಒಟ್ಟು 9 ಕಂಟೇನರ್‌ಗಳನ್ನು ಏರ್‌ಲಿಫ್ಟ್ ಮಾಡಲಾಗಿದೆ, ಅವುಗಳನ್ನು ಪಶ್ಚಿಮ ಬಂಗಾಳದ ಪಾನಾಗಡ ವಾಯು ನೆಲೆಗೆ ತರಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕೊರೊನಾ ಎದುರಿಸಲು ಭಾರತಕ್ಕೆ ನೆರವು ನೀಡಿದ ರಾಷ್ಟ್ರಗಳ ವಿವರ ಕೊರೊನಾ ಎದುರಿಸಲು ಭಾರತಕ್ಕೆ ನೆರವು ನೀಡಿದ ರಾಷ್ಟ್ರಗಳ ವಿವರ

ಭಾರತದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ತೀವ್ರತೆಯಿಂದಾಗಿ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಹಲವು ರಾಜ್ಯಗಳ ಆಸ್ಪತ್ರೆಗಳಿಗೆ ವೈದ್ಯಕೀಯ ಆಕ್ಸಿಜನ್ ಕೊರತೆ ಎದುರಾಗಿದೆ. ಆಕ್ಸಿಜನ್ ಕಂಟೇನರ್‌ಗಳ ಭರ್ತಿ ಪ್ರಕ್ರಿಯೆ ಮತ್ತು ಪೂರೈಕೆಗೆ ವೇಗ ನೀಡುವ ನಿಟ್ಟಿನಲ್ಲಿ ಭಾರತೀಯ ವಾಯುಪಡೆಯು ಖಾಲಿ ಆಕ್ಸಿಜನ್ ಕಂಟೇನರ್‌ಗಳನ್ನು ಆಕ್ಸಿಜನ್ ಭರ್ತಿ ಮಾಡುವ ಕೇಂದ್ರಗತಳಿಗೆ ತಲುಪಿಸುತ್ತಿವೆ.

IAF Airlifts 9 Cryogenic Oxygen Containers From Dubai, Singapore

ಹೈದರಾಬಾದ್‌ನಿಂದ ಭುವನೇಶ್ವರಕ್ಕೆ 8 ಕಂಟೇನರ್‌ಗಳು, ಭೋಪಾಲ್‌ನಿಂದ ರಾಂಚಿಗೆ 2 ಕಂಟೇನರ್‌ಗಳು ಹಾಗೂ ಚಂಡೀಗಢದಿಂದ ರಾಂಚಿಗೆ 2 ಕಂಟೇನರ್‌ಗಳನ್ನು ತಲುಪಿಸಲಾಗಿದೆ.

ಇದರೊಂದಿಗೆ ಭಾರತೀಯ ವಾಯುಪಡೆಯು ಸಿ-17 ವಿಮಾನಗಳು ಮಂಗಳವಾರ ಎರಡು ಕ್ರಯೋಜೆನಿಕ್ ಆಕ್ಸಿಜನ್ ಕಂಟೇನರ್‌ಗಳನ್ನು ಇಂದೋರ್‌ನಿಂದ ಜಾಮ್‌ನಗರಕ್ಕೆ , ಜೋಧಪುರಕ್ಕೆ ಹಾಗೂ ಉದಯ್‌ಪುರದಿಂದ ಜಾಮ್‌ನಗರಕ್ಕೆ ಹಾಗೂ ಹಿಂಡನ್‌ನಿಂದ ರಾಂಚಿಗೆ ಕಳುಹಿಸಿಕೊಡಲಾಗಿದೆ.

ಸಿ-17 ವಿಮಾನಗಳ ಮೂಲಕ ದುಬೈ ಪಾನಾಗಢ ವಾಯುನೆಲೆಗೆ 6 ಕ್ರಯೋಜೆನಿಕ್ ಆಕ್ಸಿಜನ್ ಕಂಟೇನರ್‌ಗಳು ಹಾಗೂ ಸಿಂಗಾಪುರದಿಂದ ಮೂರು ಕಂಟೇನರ್‌ಗಳನ್ನು ತರಲಾಗಿದೆ ಎಂದು ತಿಳಿಸಲಾಗಿದೆ.

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಗೆ ಸಿಲುಕಿ ನಲುಗಿದ ಭಾರತಕ್ಕೆ ಜಗತ್ತಿನ ಹಲವು ರಾಷ್ಟ್ರಗಳು ಸಹಾಯಹಸ್ತ ಚಾಚಿವೆ. ವೈದ್ಯಕೀಯ ಆಮ್ಲಜನಕ ಸಾಂದ್ರಕ, ವೆಂಟಿಲೇಟರ್, ಸರ್ಜಿಕಲ್ ಮಾಸ್ಕ್ ಸೇರಿದಂತೆ ವೈದ್ಯಕೀಯ ಸಾಮಗ್ರಿಗಳನ್ನು ಸರಬರಾಜು ಮಾಡುತ್ತಿವೆ.

ಯುನೈಟೆಡ್ ಕಿಂಗ್ ಡಮ್, ಫ್ರಾನ್ಸ್, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ, ಸೌದಿ ಅರೇಬಿಯಾ ಮತ್ತು ದುಬೈ ರಾಷ್ಟ್ರಗಳು ಕೊರೊನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಭಾರತಕ್ಕೆ ನೆರವು ನೀಡುವುದಾಗಿ ಘೋಷಿಸಿವೆ.

English summary
The IAF has also been airlifting empty oxygen tankers and containers to various filling stations across the country to speed up distribution of the much-needed medical oxygen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X