ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಾಲ್ಕು ವರ್ಷ ಸಮಾಧಿಯಲ್ಲಿ ಇರುತ್ತೇನೆ, ಫೇಸ್‌ಬುಕ್‌ನಲ್ಲಿ ರಿಪ್ಲೈ ಮಾಡುತ್ತೇನೆ' ನಿತ್ಯಾನಂದ

|
Google Oneindia Kannada News

ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿದ್ದ ನಿತ್ಯಾನಂದ ಸ್ವಾಮಿ ದೇಶದಿಂದ ಪರಾರಿಯಾಗಿ ತನ್ನದೇ 'ಕೈಲಾಸ' ಎಂಬ ದೇಶ ಮಾಡಿಕೊಂಡು ಅದಕ್ಕೆ 'ಜಗತ್ತಿನ ಅತಿ ದೊಡ್ಡ ಡಿಜಿಟಲ್ ಹಿಂದೂ ದೇಶ' ಎಂಬ ಹೆಸರಿಟ್ಟಿರುವುದು ಗೊತ್ತೇ ಇದೆ. ವಿವಾದಿತ ಸ್ವಯಂಘೋಷಿತ ಸ್ವಾಮಿ ನಿತ್ಯಾನಂದ ಮತ್ತೆ ಸುದ್ದಿಯಲ್ಲಿದ್ದಾರೆ. ಈ ವೇಳೆ ನಿತ್ಯಾನಂದ ಮೃತಪಟ್ಟಿದ್ದಾರೆ ಎಂಬ ಸುಳ್ಳು ಸುದ್ದಿ ಹಬ್ಬಿದೆ. ಈ ವಿಚಾರ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿದ್ದು, ಎಲ್ಲೆಡೆ ವೈರಲ್ ಆಗಿದೆ. ಇದನ್ನು ತಿಳಿದ ನಿತ್ಯಾನಂದ ಸ್ವಾಮಿ ಫೇಸ್ ಬುಕ್ ವದಂತಿಗಳಿಗೆ ತೆರೆ ಎಳೆದಿದ್ದಾರೆ. ನಿತ್ಯಾನಂದ ಅವರು ತಮ್ಮ ಫೇಸ್ ಬುಕ್ ಪೇಜ್ 'ಕೈಲಾಸ್ ಅವತಾರ್ ಕ್ಲಿಕ್ಸ್'ನಲ್ಲಿ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಸದ್ಯ ನಿತ್ಯಾನಂದ ಸಮಾಧಿಯಲ್ಲಿದ್ದಾರೆ. ಹೌದು, ಅವರು ಸಮಾಧಿಯಿಂದ ಫೇಸ್‌ಬುಕ್ ಮೂಲಕ ರಪ್ಲೈ ಮಾಡಿದ್ದಾರೆ.

ನಿತ್ಯಾನಂದ ಸ್ವಾಮಿಯ 'ಕೈಲಾಸ'ದ ಹಿಂದೆ ಇರುವವರು ಯಾರು?: ಅಚ್ಚರಿ ಮೂಡಿಸುವ ಸಂಗತಿಗಳುನಿತ್ಯಾನಂದ ಸ್ವಾಮಿಯ 'ಕೈಲಾಸ'ದ ಹಿಂದೆ ಇರುವವರು ಯಾರು?: ಅಚ್ಚರಿ ಮೂಡಿಸುವ ಸಂಗತಿಗಳು

ಅತ್ಯಾಚಾರ, ಅಪಹರಣ ಸೇರಿದಂತೆ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ನಿತ್ಯಾನಂದ ದೇಶದಿಂದ ಹೊರಹೋಗಿದ್ದಾರೆ. ಬಳಿಕ ಅವರು ವಿವಾದಿತ ಹೇಳಿಕೆ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಸದ್ಯ ಅವರು ಕೈಲಾಸದಲ್ಲಿ ಅನಾರೋಗ್ಯದಿಂದ ಬಳಲಿ ಸಾವನ್ನಪ್ಪಿದ್ದಾರೆ ಎಂಬ ವದಂತಿಯನ್ನು ವಿರೋಧಿಗಳು ಹಬ್ಬಿಸಿದ್ದಾರೆ. ಇದನ್ನು ತಿಳಿದ ನಿತ್ಯಾನಂದ ಫೇಸ್ ಬುಕ್ ಮೂಲಕ ತಮ್ಮ ಭಕ್ತರಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ. ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿರುವ ನಿತ್ಯಾನಂದ ಅವರು ' ನಾಲ್ಕು ವರ್ಷ ಸಮಾಧಿಯಲ್ಲಿ ಇರುತ್ತೇನೆ, ಫೇಸ್‌ಬುಕ್‌ನಲ್ಲಿ ರಿಪ್ಲೈ ಮಾಡುತ್ತೇನೆ' ಎಂದಿದ್ದಾರೆ.

 Ill be in the grave for four years, Ill Reply in Facebook Nithyananda

ನಿತ್ಯಾನಂದ ಸ್ವಾಮೀಜಿಯ ಸಂದೇಶ ಹೀಗಿದೆ- 'ನಾನು ಸತ್ತು ಹೋಗಿದ್ದೇನೆಂದು ದ್ವೇಷಿಗಳು ವದಂತಿ ಹರಡಿದ್ದಾರೆ. ಆದ್ರೆ ನಾನು ಸತ್ತಿಲ್ಲ. ಎಲ್ಲಿಗೂ ಓಡಿ ಹೋಗಿಲ್ಲ. ಬದಲಿಗೆ ನಾನು ಸಮಾಧಿಯಲ್ಲಿದ್ದೇನೆ ಎಂದು ನನ್ನ ಶಿಷ್ಯರಿಗೆ ಹೇಳ ಬಯಸುತ್ತೇನೆ. ನಾನು ಸಮಾಧಿಯಲ್ಲಿ ನೆಲೆಸಿದಾಗ ಕೆಲವೊಮ್ಮೆ ನಿಮ್ಮ ಕಾಮೆಂಟ್ ನೋಡಿ ಪ್ರತಿಕ್ರಿಯೆ ನೀಡುತ್ತೇನೆ ಎಂದಿದ್ದಾರೆ.

 Ill be in the grave for four years, Ill Reply in Facebook Nithyananda

ಕಳೆದ ವರ್ಷ ನಿತ್ಯಾನಂದ ಪ್ರತಿಪಾದಿಸಿರುವ ಕೈಲಾಸ ಸಾಮ್ರಾಜ್ಯವು ನೈಜ ಜನಿತ್ಯಾನಂದ ಪ್ರಸ್ತುತ ಎಲ್ಲಿದ್ದಾರೆ ಎನ್ನುವುದು ಹೊರಜಗತ್ತಿಗೆ ಈಗಲೂ ತಿಳಿದಿಲ್ಲ. ಆದರೆ ಅವರು ಅಮೆರಿಕದಲ್ಲೆಡೆ ಓಡಾಡಿದ ಹೆಜ್ಜೆಗುರುತುಗಳು ಸಿಗುತ್ತವೆ ಎಂದು ಮಾಧ್ಯಮ ತಿಳಿಸಿದೆ. ಕೈಲಾಸ ಹಾಗೂ ನಿತ್ಯಾನಂದನೊಂದಿಗೆ ಅಮೆರಿಕವೊಂದರಲ್ಲಿಯೇ ಕಳೆದ ಒಂದು ವರ್ಷದಲ್ಲಿ ಕನಿಷ್ಠ ಹತ್ತು ಸಂಘಟನೆಗಳು ನಂಟು ಬೆಸೆದುಕೊಂಡಿವೆ. ಈ ಎಲ್ಲ ಸಂಘಟನೆಗಳೂ ಒಂದೋ ಲಾಭ ರಹಿತ, ಇಲ್ಲವೇ ಸಾರ್ವಜನಿಕ ಅನುಕೂಲದ ಸಂಸ್ಥೆಗಳಾಗಿವೆ. ಹವಾಯ್ ದ್ವೀಪದಲ್ಲಿರುವ ಒಂದು ಸಂಸ್ಥೆ ಮಾತ್ರ ಲಾಭ ರಹಿತವಲ್ಲ. ಹವಾಯಿ ದ್ವೀಪದ ಪಶ್ಚಿಮ ಕರಾವಳಿಯ ಪಟ್ಟಣವೊಂದರಲ್ಲಿ 'ಕೈಲಾಸ ಆನ್ ಹವಾಯಿ ಐಲ್ಯಾಂಡ್' ಎಂದು ಅಧಿಕೃತವಾಗಿ ನೋಂದಣಿ ಮಾಡಿರುವ ಸಂಸ್ಥೆಯು ಅಮೆರಿಕದ ಆಂತರಿಕ ಲಾಭ ಉದ್ದೇಶದ ಸಂಸ್ಥೆಯಾಗಿದೆ.

 Ill be in the grave for four years, Ill Reply in Facebook Nithyananda

ಹೊರಜಗತ್ತಿನಲ್ಲಿ ನೆಲೆಯೂರಿರುವ ಅನೇಕ ಖಾಸಗಿ ಕಂಪೆನಿಗಳು ಮತ್ತು ಲಾಭ ರಹಿತ ಸಂಸ್ಥೆಗಳ (ಎನ್‌ಜಿಒ) ಬೃಹತ್ ಜಾಲದ ಬೆಂಬಲ ಹೊಂದಿದೆ ಎನ್ನಲಾಗುತ್ತದೆ. ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿಯೊಂದಿಗೆ ನಂಟು ಹೊಂದಿರುವ ಅಂತಹ 13 ಸಂಸ್ಥೆಗಳ ವಿವರಗಳನ್ನು ಕಲೆ ಹಾಕಲಾಗಿದೆ. ಸಮಾಜೋ-ಆರ್ಥಿಕ ಗುಂಪುಗಳ ತಂಡಗಳು ನಿತ್ಯಾನಂದ ಹೇಳಿಕೊಳ್ಳುತ್ತಿರುವ ಕೈಲಾಸ ಸೆಮಿ ಡಿಜಿಟಲ್ ದೇಶಕ್ಕೆ ಬುನಾದಿಯನ್ನು ಮತ್ತು ಬ್ಯಾಂಕ್ ಹಾಗೂ ಶಿಕ್ಷಣ ಸಂಸ್ಥೆಗಳಂತಹ ಅಭಿವೃದ್ಧಿ ಚಟುವಟಿಕೆಗಳಿಗೆ ಬೆಂಬಲವನ್ನು ನೀಡುತ್ತಿವೆ ಎನ್ನಲಾಗಿದೆ.

English summary
Controversial self-proclaimed Swami Nityananda wrote on Facebook, "I will be in the grave for four years and replay on Facebook.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X