• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಡ್ಡಾಯ ಕೋವಿಡ್ ಲಸಿಕೆಗೆಯನ್ನು ವಿರೋಧಿಸುತ್ತೇನೆ ಎಂದ ರಷ್ಯಾ ಅಧ್ಯಕ್ಷ ಪುಟಿನ್

|
Google Oneindia Kannada News

ಮಾಸ್ಕೋ, ಜೂ.30: ರಷ್ಯಾದಲ್ಲಿ ಕೊರೊನಾ ಸೋಂಕುಗಳ ಉಲ್ಬಣವಾಗುತ್ತಿರುವ ಮತ್ತು ಕೊರೊನಾ ಲಸಿಕೆ ಹಾಕಿಸಿಕೊಂಡವರ ಪ್ರಮಾಣ ಕಡಿಮೆಯಾಗುತ್ತಿದ್ದರೂ, ರಷ್ಯಾದಲ್ಲಿ ಲಸಿಕೆಯನ್ನು ಕಡ್ಡಾಯಗೊಳಿಸುವುದು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬುಧವಾರ ವಿರೋಧಿಸಿದ್ದಾರೆ.

"ನಾನು ಕಡ್ಡಾಯ ವ್ಯಾಕ್ಸಿನೇಷನ್‌ ನಿಯಮವನ್ನು ಬೆಂಬಲಿಸುವುದಿಲ್ಲ," ಎಂದು ಪುಟಿನ್ ದೂರದರ್ಶನದಲ್ಲಿ ತನ್ನ ವಾರ್ಷಿಕ ಫೋನ್-ಇನ್ ಪ್ರಸಾರದಲ್ಲಿ ರಷ್ಯನ್ನರಿಗೆ ತಿಳಿಸಿದ್ದಾರೆ.

ಮೋದಿ, ಜಿನ್‌ಪಿಂಗ್‌ ಜವಾಬ್ದಾರಿಯುತ ನಾಯಕರು ಚೀನಾ-ಭಾರತ ಸಮಸ್ಯೆ ಪರಿಹರಿಸಬಹುದು: ರಷ್ಯಾ ಅಧ್ಯಕ್ಷ ಮೋದಿ, ಜಿನ್‌ಪಿಂಗ್‌ ಜವಾಬ್ದಾರಿಯುತ ನಾಯಕರು ಚೀನಾ-ಭಾರತ ಸಮಸ್ಯೆ ಪರಿಹರಿಸಬಹುದು: ರಷ್ಯಾ ಅಧ್ಯಕ್ಷ

ಹೊಸ ರಾಷ್ಟ್ರವ್ಯಾಪಿ ಲಾಕ್‌ಡೌಲ್‌ ಅನ್ನು ಬೆಂಬಲಿಸುತ್ತಾರೆಯೇ ಎಂದು ಕೇಳಿದಾಗ, "ಪ್ರಾದೇಶಿಕ ಅಧಿಕಾರಿಗಳು ಸ್ಥಳೀಯ ಕಡ್ಡಾಯ ಲಸಿಕೆಗಳನ್ನು ಮತ್ತು ಮತ್ತೆ ಕ್ವಾರಂಟೈನ್‌ ಅನ್ನು ತಪ್ಪಿಸಲು ಇತರ ಕ್ರಮಗಳನ್ನು ಉತ್ತೇಜಿಸುತ್ತಿದ್ದಾರೆ" ಎಂದು ಹೇಳಿದರು.

ರಷ್ಯಾವು ಬುಧವಾರ 24 ಗಂಟೆಗಳಲ್ಲಿ 669 ಕೊರೊನಾ ವೈರಸ್ ಸಾವುಗಳನ್ನು ವರದಿಯಾಗಿದೆ. ಇದು ಸತತ ಎರಡನೇ ದಿನವೂ ಸಾವಿನ ದಾಖಲೆಯಾಗಿದೆ ಎಂದು ಸರ್ಕಾರದ ಲೆಕ್ಕಾಚಾರದಲ್ಲಿ ತಿಳಿಸಲಾಗಿದೆ.

ಹೆಚ್ಚು ಸಾಂಕ್ರಾಮಿಕ ಡೆಲ್ಟಾ ರೂಪಾಂತರದಿಂದ ಉಂಟಾದ ಸೋಂಕುಗಳ ಹೆಚ್ಚಳದಿಂದ ದೇಶದಲ್ಲಿ ಆತಂಕ ಸೃಷ್ಟಿಯಾಗಿದೆ. ಅಧಿಕಾರಿಗಳು ಲಸಿಕೆ ಪಡೆಯಲು ರಷ್ಯನ್ನರನ್ನು ಮನವೊಲಿಸಲು ಹೆಣಗಾಡುತ್ತಿದ್ದಾರೆ. ಈ ನಡುವೆ ರಷ್ಯಾ ಅಧ್ಯಕ್ಷ ಪುಟಿನ್ ಹೇಳಿಕೆಯು ಅಧಿಕಾರಿಗಳಿಗೆ ಮತ್ತಷ್ಟು ತಲೆನೋವಾಗಿ ಪರಿಣಮಿಸಲಿದೆ ಎಂದು ಹೇಳಲಾಗಿದೆ.

ಸಾಂಕ್ರಾಮಿಕ ಹಾಟ್‌ಸ್ಪಾಟ್‌ಗಳಲ್ಲಿ ಒಂದಾದ ಸೇಂಟ್ ಪೀಟರ್‍ಸ್‌ಬರ್ಗ್ ನಗರವು ಶುಕ್ರವಾರ ಯುರೋ 2020 ಕ್ವಾರ್ಟರ್-ಫೈನಲ್ ಪಂದ್ಯವನ್ನು ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಆಯೋಜಿಸಲಿದ್ದು, ಹಲವಾರು ಮಂದಿ ಪಂದ್ಯಕ್ಕಾಗಿ ವಿದೇಶದಿಂದ ಬಂದಿದ್ದಾರೆ.

ಬೈಡನ್ 'ಹಂತಕ' ಎಂದು ಕರೆದಿದ್ದಕ್ಕೆ ಪುಟಿನ್ ಪ್ರತಿಕ್ರಿಯೆ ಏನು?ಬೈಡನ್ 'ಹಂತಕ' ಎಂದು ಕರೆದಿದ್ದಕ್ಕೆ ಪುಟಿನ್ ಪ್ರತಿಕ್ರಿಯೆ ಏನು?

''ಸುಮಾರು 23 ಮಿಲಿಯನ್ ರಷ್ಯನ್ನರು ಲಸಿಕೆ ಸ್ವೀಕರಿಸಿದ್ದಾರೆ. ವಿದೇಶಿ ಪರ್ಯಾಯಗಳಿಗಿಂತ ದೇಶದ ಸ್ವದೇಶಿ ಲಸಿಕೆಗಳು ಉತ್ತಮವಾಗಿವೆ,'' ಎಂದು ಬುಧವಾರ ಹೇಳಿರುವ ಪುಟಿನ್ ಅಸ್ಟ್ರಾಜೆನೆಕಾ ಮತ್ತು ಫಿಜರ್ ಎಂದು ಹೆಸರು ಉಲ್ಲೇಖ ಮಾಡಿದ್ದಾರೆ. "ನಾವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ," ಎಂದು ಕೂಡಾ ಹೇಳಿದ್ದಾರೆ.

68 ವರ್ಷದ ನಾಯಕ ದೇಶದಲ್ಲಿ ವ್ಯಾಪಕವಾದ ಲಸಿಕೆ ಬಗ್ಗೆಗಿನ ಸಂದೇಹದ ಬಗ್ಗೆ ಮಾತನಾಡಿ, ರಷ್ಯನ್ನರು "ತಜ್ಞರನ್ನು" ಕೇಳುವಂತೆ ಮನವಿ ಮಾಡಿದರು. "ಈ ಬಗ್ಗೆ ಸ್ವಲ್ಪ ಅರ್ಥಮಾಡಿಕೊಂಡು ವದಂತಿಗಳನ್ನು ಹರಡುವ ಜನರು ತಜ್ಞರಿಂದ ಮಾಹಿತಿ ಪಡೆಯುವುದು ಉತ್ತಮ," ಎಂದು ರಷ್ಯನ್ನರಿಗೆ ತಿಳಿಸಿದರು.

ಇತ್ತೀಚಿನ ತಿಂಗಳುಗಳಲ್ಲಿ ಪುಟಿನ್ ರಷ್ಯನ್ನರಿಗೆ ಲಸಿಕೆ ಹಾಕಿಸಿಕೊಳ್ಳವಂತೆ ಮನವಿ ಮಾಡಿದ್ದಾರೆ. ಈ ವರ್ಷದ ಆರಂಭದಲ್ಲಿ ದೇಶದ ನಾಲ್ಕು ಲಸಿಕೆಗಳಲ್ಲಿ ಯಾವುದು ಎಂದು ಸ್ಪಷ್ಟಪಡಿಸದೆ, ನಾನು ಲಸಿಕೆ ಪಡೆದಿದ್ದೇನೆ ಎಂದು ಪುಟಿನ್‌ ಹೇಳಿದ್ದರು. ಬುಧವಾರ ರಷ್ಯಾದಲ್ಲಿ ನೋಂದಾಯಿತ ಮೊದಲ ಲಸಿಕೆ ಸ್ಪುಟ್ನಿಕ್ ವಿ ಯನ್ನು ತಾನು ಹಾಕಿಸಿಕೊಂಡಿರುವುದಾಗಿ ಘೋಷಿಸಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
President Vladimir Putin said Wednesday he opposed introducing mandatory vaccinations in Russia despite a surge in coronavirus infections in the country and sluggish inoculation rates. "I do not support mandatory vaccinations," Putin told Russians during his annual phone-in broadcast on television.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X