• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಪ್ಪಾಯ್ತು ಕ್ಷಮಿಸಿ ಎಂದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್..!

|

ಇಷ್ಟು ದಿನ ಬರೀ ಯುದ್ಧ, ನ್ಯೂಕ್ಲಿಯರ್ ಬಾಂಬ್, ಮಿಸೈಲ್ ಬಗ್ಗೆಯೇ ಮಾತನಾಡುತ್ತಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ಮೊದಲ ಬಾರಿಗೆ ಜಗತ್ತಿನ ಎದುರು ಕ್ಷಮೆ ಕೇಳಿದ್ದಾನೆ. ಹೀಗೆ ಕಿಮ್ ಕ್ಷಮೆ ಕೇಳಿದ ತಕ್ಷಣ ಆತನಿಗೆ ಒಳ್ಳೇ ಬುದ್ಧಿ ಬಂದಿದೆ ಎಂದಲ್ಲ. ಬದಲಾಗಿ ತಮ್ಮ ಅಧಿಕಾರಿಗಳು ಮಾಡಿದ್ದ ಕೊಲೆ ಮುಚ್ಚಿಹಾಕಲು ಕಿಮ್ ಹೀಗೆ ನಾಟಕ ಶುರುಮಾಡಿದ್ದಾನೆ.

ದಕ್ಷಿಣ ಕೊರಿಯಾ ಅಧಿಕಾರಿಯೊಬ್ಬರು ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಮೀನುಗಾರಿಕಾ ಪ್ರದೇಶದ ತಪಾಸಣೆಯಲ್ಲಿದ್ದಾಗ ನಾಪತ್ತೆಯಾಗಿದ್ದ ಆ ಅಧಿಕಾರಿಯ ಸುಳಿವು ಸಿಕ್ಕಿರಲಿಲ್ಲ.

ಚಿಕ್ಕಪ್ಪನ ತಲೆ ಕತ್ತರಿಸಿ ಪ್ರದರ್ಶನಕ್ಕೆ ಇಟ್ಟಿದ್ದ ಸರ್ವಾಧಿಕಾರಿ..!

ಸೋಮವಾರ ಈ ಘಟನೆ ನಡೆದಿತ್ತು. ಬಳಿಕ ದಕ್ಷಿಣ ಕೊರಿಯಾ ಅಧಿಕಾರಿ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕೊಲೆ ಮಾಡಿದ್ದು ಯಾರೆಂಬುದು ಯಕ್ಷ ಪ್ರಶ್ನೆಯಾಗಿದ್ದಾಗ, ಉತ್ತರ ಕೊರಿಯಾದ ನಟೋರಿಯಸ್ ಅಧಿಕಾರಿಗಳ ಬಣ್ಣ ಬಯಲಾಗಿತ್ತು. ಸಾಕ್ಷಿ ಸಮೇತ ಕಿಮ್ ಗ್ಯಾಂಗ್‌ ಲಾಕ್ ಆಗಿತ್ತು.

ದಕ್ಷಿಣ ಕೊರಿಯಾ ಅಧಿಕಾರಿಯನ್ನು ಉತ್ತರ ಕೊರಿಯಾದ ಕಿಮ್ ಅಧಿಕಾರಿಗಳೇ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಅಲ್ಲದೆ ಶವದ ಗುರುತು ಸಿಗಬಾರದು ಎಂದು ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದರು. ಈ ವಿಚಾರ ಜಗತ್ತಿನಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿರುವಾಗಲೇ ಕಿಮ್ ಜಾಂಗ್ ಉನ್ ಕ್ಷಮೆ ಯಾಚಿಸಿದ್ದಾನೆ.

90 ನಿಮಿಷ ಕಿಮ್‌ ಜಾಂಗ್ ಗುಣಗಾನ ಕಡ್ಡಾಯ, ಹೀಗೊಂದು ವಿಚಿತ್ರ ಆದೇಶ

10 ಗುಂಡು ದೇಹ ಹೊಕ್ಕಿದೆ

10 ಗುಂಡು ದೇಹ ಹೊಕ್ಕಿದೆ

ಸ್ವತಃ ಉತ್ತರ ಕೊರಿಯಾ ಸರ್ಕಾರವೇ ನಡೆಸಿರುವ ತನಿಖೆಯಲ್ಲಿ, ಮೃತಪಟ್ಟಿರುವ ಅಧಿಕಾರಿಯ ದೇಹದಲ್ಲಿ 10 ಗುಂಡುಗಳು ಪತ್ತೆಯಾಗಿವೆ. ಆದರೆ ನಾವು ಆ ಅಧಿಕಾರಿಯನ್ನು ಸುಟ್ಟಿಲ್ಲ ಎಂದು ಕಿಮ್ ಸಮಜಾಯಿಶಿಯನ್ನೂ ನೀಡಿದ್ದಾನೆ. ಉತ್ತರ ಕೊರಿಯಾ ಹಾಗೂ ದಕ್ಷಿಣ ಕೊರಿಯಾ ಹಾವು-ಮುಂಗಸಿಯಂತೆ ಕಿತ್ತಾಡುತ್ತಾ ಬದುಕಿವೆ. ಆದರೆ ಕೆಲ ವರ್ಷಗಳ ಹಿಂದೆ ನಡೆದ ಸಂಧಾನದ ಬಳಿಕ ಎರಡೂ ರಾಷ್ಟ್ರಗಳ ಮಧ್ಯೆ ಸ್ನೇಹ ಮೂಡಿತ್ತು. ಬಳಿಕ ರಾಜತಾಂತ್ರಿಕ ಸಂಬಂಧವೂ ಪುನಾರಂಭವಾಗಿತ್ತು. ಆದರೆ ಇಷ್ಟೆಲ್ಲಾ ಒಡನಾಟ ಬೆಳೆದಿರುವಾಗ ಕಿಮ್ ಗ್ಯಾಂಗ್ ತನ್ನ ಬುದ್ಧಿ ತೋರಿಸಿದೆ. ದಕ್ಷಿಣ ಕೊರಿಯಾ ಅಧಿಕಾರಿಯನ್ನು ಭೀಕರವಾಗಿ ಹತ್ಯೆ ಮಾಡಿದೆ.

ಗಡಿ ದಾಟಿ ಬಂದರೆ ಕೊಲೆ ಮಾಡ್ತಾರೆ..!

ಗಡಿ ದಾಟಿ ಬಂದರೆ ಕೊಲೆ ಮಾಡ್ತಾರೆ..!

ದಕ್ಷಿಣ ಕೊರಿಯಾ ಪ್ರಜಾಪ್ರಭುತ್ವ ಮೌಲ್ಯಗಳನ್ನ ಅಳವಡಿಸಿಕೊಂಡಿದೆ. ಉತ್ತರ ಕೊರಿಯಾದಲ್ಲಿ ಸರ್ವಾಧಿಕಾರಿ ಕಿಮ್ ಆಡಳಿತವಿದೆ. ಒಂದ್ಕಡೆ ಪ್ರಜೆಗಳು ನೆಮ್ಮದಿಯಾಗಿ, ಸ್ವತಂತ್ರವಾಗಿ ಬಾಳುತ್ತಿದ್ದಾರೆ. ಇನ್ನೊಂದೆಡೆ ಕಿಮ್ ಆಡಳಿತದಲ್ಲಿ ಎಲ್ಲವೂ ಅಯೋಮಯ. ಅಲ್ಲಿನ ಜನ ಗಡಿ ದಾಟುವ ಹಾಗಿಲ್ಲ, ಹಾಗೇ ಗಡಿ ದಾಟಿ ಯಾರೂ ಉತ್ತರ ಕೊರಿಯಾ ಒಳಗೆ ಬರುವಂತಿಲ್ಲ. ಇದೇ ಕಾರಣಕ್ಕೆ ದಕ್ಷಿಣ ಕೊರಿಯಾ ಅಧಿಕಾರಿಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಈ ಹಿಂದೆ ಉತ್ತರ ಕೊರಿಯಾ ಸೈನಿಕನೊಬ್ಬ ಗಡಿ ದಾಟಿ ಬರುವಾಗ, ಅವನದ್ದೇ ದೇಶದ ಯೋಧರು ಅವನ ಮೇಲೆ ಗುಂಡಿನ ದಾಳಿ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಯುದ್ಧದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಸರ್ವಾಧಿಕಾರಿ ಕಿಮ್

ಚಿಕ್ಕಪ್ಪನ ತಲೆ ಕತ್ತರಿಸಿದ್ದ ಪಾಪಿ ಕಿಮ್

ಚಿಕ್ಕಪ್ಪನ ತಲೆ ಕತ್ತರಿಸಿದ್ದ ಪಾಪಿ ಕಿಮ್

ಕೆಲ ದಿನಗಳ ಹಿಂದೆ ಜಗತ್ತೇ ಬೆಚ್ಚಿಬೀಳುವಂತಹ ಸಂಗತಿಯನ್ನ ಟ್ರಂಪ್ ಹೇಳಿದ್ದರು. ಚಿಕ್ಕಪ್ಪನ ತಲೆ ಕತ್ತರಿಸಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ದೇಹವನ್ನು ಪ್ರದರ್ಶನಕ್ಕೆ ಇಟ್ಟಿದ್ದ ಅಂತಾ ಅಮೆರಿಕ ಅಧ್ಯಕ್ಷ ಟ್ರಂಪ್ ತಿಳಿಸಿದ್ದರು. ಈ ವಿಚಾರವನ್ನ ಸ್ವತಃ ಟ್ರಂಪ್ ನನ್ನ ಬಳಿ ಹೇಳಿದ್ದರು ಎಂದು ಪತ್ರಕರ್ತ ಬಾಬ್‌ ವುಡ್ವರ್ಡ್‌ ತಮ್ಮ ‘ರೇಜ್‌' ಕೃತಿಯಲ್ಲಿ ಬರೆದುಕೊಂಡಿದ್ದರು. ಕಿಮ್ ಜಾಂಗ್ ಉನ್ ಎಂತಹ ಕ್ರೂರಿ ಎಂಬ ವಿಚಾರ ಪತ್ರಕರ್ತ ಬಾಬ್‌ ವುಡ್ವರ್ಡ್‌ ಕೃತಿಯಲ್ಲಿ ಮತ್ತೊಮ್ಮೆ ಬಯಲಾಗಿತ್ತು.

ಅಧಿಕಾರಿಗಳನ್ನು ಕೊಲೆ ಮಾಡುವುದು ಮಾಮೂಲು..!

ಅಧಿಕಾರಿಗಳನ್ನು ಕೊಲೆ ಮಾಡುವುದು ಮಾಮೂಲು..!

ತನ್ನ ವಿರೋಧಿಗಳನ್ನು ಕೊಲೆ ಮಾಡಿಸುವುದು ಕಿಮ್ ಜಾಂಗ್ ಉನ್‌ಗೆ ನೀರು ಕುಡಿದಷ್ಟೇ ಸುಲಭ. ಏಕೆಂದರೆ ಉತ್ತರ ಕೊರಿಯಾದಲ್ಲಿ ಸರ್ವಾಧಿಕಾರಿ ಆಡಳಿತ ಇದೆ. ಹೀಗಾಗಿ ಕಿಮ್ ನಿರ್ಧಾರ ಪ್ರಶ್ನೆ ಮಾಡಲು ಯಾರೂ ಮುಂದಾಗುವುದಿಲ್ಲ. ಈ ಭಯವನ್ನೇ ಬಂಡವಾಳ ಮಾಡಿಕೊಂಡಿರುವ ಕಿಮ್ ಜಾಂಗ್ ಉನ್ ಮತ್ತವನ ಪಟಾಲಂ ಕಂಡ ಕಂಡವರನ್ನು ಹತ್ಯೆ ಮಾಡುತ್ತದೆ. ಈ ಹಿಂದೆ ಸಭೆಯಲ್ಲಿ ನಿದ್ದೆ ಮಾಡಿದ್ದ ಎಂಬ ಕಾರಣಕ್ಕೆ ಅಧಿಕಾರಿಯೊಬ್ಬನನ್ನು ಕಿಮ್ ಬರ್ಬರವಾಗಿ ಕೊಲೆ ಮಾಡಿಸಿದ್ದ. ಅಲ್ಲದೆ ಕೊರೊನಾ ಶಂಕೆ ಹಿನ್ನೆಲೆಯಲ್ಲಿ ಕ್ವಾರಂಟೈನ್‌ನಲ್ಲಿದ್ದ ಅಧಿಕಾರಿ ಆದೇಶ ಮೀರಿ ಸ್ವಿಮ್ಮಿಂಗ್ ಮಾಡಿದ್ದಕ್ಕೆ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು.

  Whatsapp ಹಳೆಯ ಸಂದೇಶಗಳು ಅಷ್ಟು ಸುಲಭವಾಗಿ ಸಿಗುತ್ತಾ ? | Oneindia Kannada
  ‘ಕೊರೊನಾ’ಗಿಂತಲೂ ಕಿಮ್ ಕ್ರೂರಿ..!

  ‘ಕೊರೊನಾ’ಗಿಂತಲೂ ಕಿಮ್ ಕ್ರೂರಿ..!

  ಉತ್ತರ ಕೊರಿಯಾದಲ್ಲಿ ಕೊರೊನಾ ಸೋಂಕನ್ನು ಕಂಟ್ರೋಲ್‌ಗೆ ತರಲು ಕಿಮ್ ಜಾಂಗ್ ಉನ್ ರಾಕ್ಷಸನ ರೀತಿ ವರ್ತಿಸಿದ್ದ ಎಂಬ ಆರೋಪವಿದೆ. ಅಲ್ಲದೆ ಕೊರೊನಾ ಸೋಂಕಿತರನ್ನು ಬರ್ಬರವಾಗಿ ಕೊಲೆ ಮಾಡಿದ ಉದಾಹರಣೆಗಳೂ ಇವೆ. ಹೀಗೆ ಕಿಮ್ ತನ್ನ ದೇಶದ ಅಧಿಕಾರಿಗಳು ಸೇರಿದಂತೆ ಸಾವಿರಾರು ಅಮಾಯಕರ ಪ್ರಾಣ ತೆಗೆದಿದ್ದಾನೆ. ಆದರೆ ಸರ್ವಾಧಿಕಾರಿ ವರ್ತನೆ ಪಶ್ನಿಸುವವರು ಇಲ್ಲದಿರುವುದೇ ದುರಂತದ ಸಂಗತಿ.

  English summary
  North Korea's leader Kim Jong-un has issued a rare personal apology for the killing of a South Korean official.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X