ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಅಜಿಥ್ರೋಮೈಸಿನ್ ದೇಹಕ್ಕೆ ಮಾರಕ ಎಂದ ಅಧ್ಯಯನ!

|
Google Oneindia Kannada News

ಮಾರಣಾಂತಿಕ ಕೋವಿಡ್-19 ಚಿಕಿತ್ಸೆಗಾಗಿ ಪ್ರಸ್ತಾಪಿಸಲಾಗಿರುವ ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಅಜಿಥ್ರೋಮೈಸಿನ್ ಕಾಂಬಿನೇಷನ್ ಮನುಷ್ಯನ ದೇಹಕ್ಕೆ ಮಾರಕವಾಗಿದ್ದು, ಇವುಗಳಿಂದ ಕಾರ್ಡಿಯೋ ವ್ಯಾಸ್ಕ್ಯುಲಾರ್ ಸಿಸ್ಟಮ್ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು ಎಂಬ ಅಂಶ ಅಧ್ಯಯನದ ಮೂಲಕ ತಿಳಿದುಬಂದಿದೆ.

Recommended Video

ಲಾಕ್‌ಡೌನ್ ನಂತರ ಹಾರಿದ ಮೊದಲ ವಿಮಾನದಲ್ಲಿನ ಕನ್ನಡದ ಗಗನಸಖಿ| Kannadati Air Hostess Explain Current situation

ವಾಂಡರ್ ಬಿಲ್ಟ್ ವಿಶ್ವವಿದ್ಯಾಲಯ ಮತ್ತು ಯು.ಎಸ್ ನ ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯದವರೂ ಸೇರಿದಂತೆ ಹಲವು ಸಂಶೋಧಕರು ಪ್ರತಿಕೂಲ ಡ್ರಗ್ ಪರಿಣಾಮಗಳ 21 ಮಿಲಿಯನ್ ಕೇಸ್ ರಿಪೋರ್ಟ್ ಗಳನ್ನು ಹೊತ್ತ ವಿಶ್ವ ಆರೋಗ್ಯ ಸಂಸ್ಥೆಯ ಡೇಟಾ ಬೇಸ್ ಮೇಲೆ ಗಮನ ಹರಿಸಿದ್ದು, ಕೋವಿಡ್-19 ರೋಗಕ್ಕೂ ಮೊದಲು ಅಂದ್ರೆ ನವೆಂಬರ್ 14, 1967 ರಿಂದ ಮಾರ್ಚ್ 1, 2020 ರ ನಡುವೆ 130 ಕ್ಕೂ ಹೆಚ್ಚು ದೇಶಗಳಲ್ಲಿನ ಔಷಧಿಗಳ ಕುರಿತಾದ ವರದಿಯನ್ನೂ ವಿಶ್ಲೇಷಿಸಿದ್ದಾರೆ.

ಅಧ್ಯಯನದಲ್ಲಿ ಕಂಡುಬಂದ ಅಂಶಗಳು

ಅಧ್ಯಯನದಲ್ಲಿ ಕಂಡುಬಂದ ಅಂಶಗಳು

ಸರ್ಕ್ಯುಲೇಷನ್ ಎಂಬ ಜರ್ನಲ್ ನಲ್ಲಿ ಈ ಕುರಿತಾದ ಅಧ್ಯಯನ ಪ್ರಕಟಗೊಂಡಿದ್ದು, ಅದರಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್, ಅಜಿಥ್ರೋಮೈಸಿನ್ ಅಥವಾ ಎರಡೂ ಔಷಧಿಗಳ ಕಾಂಬಿನೇಷನ್ ಪಡೆದವರ ಹೃದಯರಕ್ತನಾಳದಲ್ಲಾದ ಪ್ರತಿಕೂಲ ಪರಿಣಾಮವನ್ನು ಡೇಟಾ ಬೇಸ್ ನಲ್ಲಿರುವ ಇತರೆ ಕಾರ್ಡಿಯೋ ವ್ಯಾಸ್ಕ್ಯುಲಾರ್ ಔಷಧಿಗಳನ್ನು ಪಡೆದವರೊಂದಿಗೆ ಹೋಲಿಕೆ ಮಾಡಲಾಗಿದೆ.

HCQ ಔಷಧ ಸೇವನೆ ನಿಲ್ಲಿಸಿದ ಟ್ರಂಪ್, ಕಾರಣ ಬಹಿರಂಗ!HCQ ಔಷಧ ಸೇವನೆ ನಿಲ್ಲಿಸಿದ ಟ್ರಂಪ್, ಕಾರಣ ಬಹಿರಂಗ!

ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಅಜಿಥ್ರೋಮೈಸಿನ್ ಪಡೆದವರಲ್ಲಿ ಅನಿಯಮಿತ ಹೃದಯ ಲಯಗಳನ್ನು ಉತ್ತೇಜಿಸುವ ಮಾರಣಾಂತಿಕ ಪ್ರೋಅರ್ರಿಥ್ಮೋಜೆನಿಕ್ ಪರಿಣಾಮಗಳು ಉಂಟಾಗಿರುವುದು ಕಂಡುಬಂದಿದೆ.

ಎರಡೂ ಕಾಂಬಿನೇಷನ್ ಪಡೆದವರಲ್ಲಿ ಇನ್ನೂ ಬಲವಾದ ಪ್ರತಿಕೂಲ ಪರಿಣಾಮ ಉಂಟಾಗಿರುವುದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಹೃದಯ ವೈಫಲ್ಯ ಸಂಭವಿಸುವ ಸಾಧ್ಯತೆ

ಹೃದಯ ವೈಫಲ್ಯ ಸಂಭವಿಸುವ ಸಾಧ್ಯತೆ

ಹಲವಾರು ತಿಂಗಳುಗಳ ಕಾಲ (ದೀರ್ಘಕಾಲದವರೆಗೆ) ಹೈಡ್ರಾಕ್ಸಿಕ್ಲೋರೋಕ್ವಿನ್ ಸೇವಿಸುವುದರಿಂದ ಹೃದಯ ವೈಫಲ್ಯ ಸಂಭವಿಸಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

ಅಂಕಿ-ಅಂಶ

ಅಂಕಿ-ಅಂಶ

ಪ್ರತಿಕೂಲ ಡ್ರಗ್ ಪರಿಣಾಮಗಳ 21 ಮಿಲಿಯನ್ ಕೇಸ್ ರಿಪೋರ್ಟ್ ಗಳ ಪೈಕಿ 76,822 ಕೇಸ್ ಗಳು ಹೈಡ್ರಾಕ್ಸಿಕ್ಲೋರೋಕ್ವಿನ್ ಗೆ ಸಂಬಂಧಪಟ್ಟಿದ್ದರೆ, 89,692 ಕೇಸ್ ಗಳು ಅಜಿಥ್ರೋಮೈಸಿನ್ ಗೆ ಸಂಬಂಧಿಸಿದೆ. ಎರಡರ ಕಾಂಬಿನೇಷನ್ ನಿಂದ 607 ಪ್ರತಿಕೂಲ ಪರಿಣಾಮ ಪ್ರಕರಣ ದಾಖಲಾಗಿದೆ.

ಕೊರೊನಾ ಕದನದ ನಡುವೆ 2ನೇ ವಿಶ್ವಯುದ್ಧದ ಲಸಿಕೆ ಟ್ರೆಂಡ್ಕೊರೊನಾ ಕದನದ ನಡುವೆ 2ನೇ ವಿಶ್ವಯುದ್ಧದ ಲಸಿಕೆ ಟ್ರೆಂಡ್

ಹಾರ್ಟ್ ಫೇಲ್ಯೂರ್ ಗೂ ಹೈಡ್ರಾಕ್ಸಿಕ್ಲೋರೋಕ್ವಿನ್ ಗೂ ಸಂಬಂಧ

ಹಾರ್ಟ್ ಫೇಲ್ಯೂರ್ ಗೂ ಹೈಡ್ರಾಕ್ಸಿಕ್ಲೋರೋಕ್ವಿನ್ ಗೂ ಸಂಬಂಧ

ಕನ್ಡಕ್ಷನ್ ಡಿಸಾರ್ಡರ್ ಮತ್ತು ಹಾರ್ಟ್ ಫೇಲ್ಯೂರ್ ಗೂ ಹೈಡ್ರಾಕ್ಸಿಕ್ಲೋರೋಕ್ವಿನ್ ಗೂ ಸಂಬಂಧ ಇದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್-19 ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್: WHO ಕಡೆಯಿಂದ ಬಂತು ಎಚ್ಚರಿಕೆ!ಕೋವಿಡ್-19 ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್: WHO ಕಡೆಯಿಂದ ಬಂತು ಎಚ್ಚರಿಕೆ!

ಸದ್ಯ ಕೋವಿಡ್-19 ರೋಗಿಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ನೀಡದಂತೆ ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದೆ.

English summary
According to Study, Hydroxychloroquine and Azithromycin are potentially lethal combination.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X