ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗೆ ಗುಂಡಿಕ್ಕಿ ಹತ್ಯೆ

|
Google Oneindia Kannada News

ಕಾನ್ಸಾಸ್, ಜುಲೈ 8: ಕನ್ಸಾಸ್‌ನ ರೆಸ್ಟೋರೆಂಟ್ ಒಂದರಲ್ಲಿ ಶುಕ್ರವಾರ ಅಪರಿಚಿತ ಬಂದೂಕುಧಾರಿಗಳು ಹೈದರಾಬಾದ್‌ನ ವಿದ್ಯಾರ್ಥಿ ಶರತ್ ಕೊಪ್ಪು (26) ಎಂಬುವವರನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆ.

ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ ಕೂಡಲೇ ಶರತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ತೀವ್ರ ರಕ್ತಸ್ರಾವದಿಂದಾಗಿ ಅವರು ಬದುಕುಳಿಯಲಿಲ್ಲ.

ರೈನೊ ಬೇಟೆಯಾಡಲು ಹೋಗಿ ಸಿಂಹಗಳಿಗೆ ಭೋಜನವಾದರು ಮೂರು ಮಂದಿ!ರೈನೊ ಬೇಟೆಯಾಡಲು ಹೋಗಿ ಸಿಂಹಗಳಿಗೆ ಭೋಜನವಾದರು ಮೂರು ಮಂದಿ!

ಕನ್ಸಾಸ್ ಬಾರ್‌ ಒಂದರಲ್ಲಿ 2017ರ ಫೆಬ್ರುವರಿಯಲ್ಲಿ ಹೈದರಾಬಾದ್‌ನ ಟೆಕಿ ಶ್ರೀನಿವಾಸ್‌ ಕುಚಿಭೋಟ್ಲಾ ಅವರನ್ನು ಅವರನ್ನು ಹತ್ಯೆ ಮಾಡಿದ ಘಟನೆ ಇನ್ನೂ ಹಸಿರಾಗಿ ಇರುವಾಗಲೇ ಈ ಕೃತ್ಯ ನಡೆದಿದೆ.

ಆ ಘಟನೆ ನಡೆದ ಕೇವಲ 41 ಕಿ.ಮೀ. ದೂರದಲ್ಲಿ ಶುಕ್ರವಾರದ ದಾಳಿ ನಡೆದಿದೆ. ಎರಡು ತಿಂಗಳ ಹಿಂದಷ್ಟೇ ಅಮೆರಿಕಕ್ಕೆ ತೆರಳಿದ್ದ ಶರತ್, ಕನ್ಸಾಸ್‌ನ ಮಿಸ್ಸೋರಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದರು.

Hyderabad student shot in america

ಹೈದರಾಬಾದ್‌ನಲ್ಲಿರುವ ಶರತ್ ಅವರ ಪೋಷಕರು ಅವರ ಸ್ನೇಹಿತರು ಮತ್ತು ಅಮೆರಿಕ ಮಾಧ್ಯಮಗಳ ಮೂಲಕ ಮಗನ ಸಾವಿನ ವಿಚಾರವನ್ನು ತಿಳಿದುಕೊಂಡಿದ್ದಾರೆ. ಕನ್ಸಾಸ್ ಪೊಲೀಸರಾಗಲೀ, ಅಮೆರಿಕ ವಿದೇಶಾಂಗ ಸಚಿವಾಲಯವಾಗಲೀ ಅವರನ್ನು ಸಂಪರ್ಕಿಸಿಲ್ಲ.

ಶರತ್ ಅವರ ಹತ್ಯೆಯು ಶುಕ್ರವಾರ ಸಂಜೆ 7 ಗಂಟೆ (ಸ್ಥಳೀಯ ಕಾಲಮಾನ) ಸುಮಾರಿಗೆ ಜೆಎಸ್ ಫಿಶ್ ಮತ್ತು ಚಿಕನ್ ಮಾರುಕಟ್ಟೆಯಲ್ಲಿ ನಡೆದಿದೆ ಎಂದು ಕನ್ಸಾಸ್ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಬಂದೂಕುಧಾರಿಗಳು ಹೇಗೆ ತಪ್ಪಿಸಿಕೊಂಡರು ಎಂಬ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿಲ್ಲ. ದುಷ್ಕರ್ಮಿಗಳ ಬಗ್ಗೆ ಮಾಹಿತಿ ನೀಡುವಂತೆ ಅವರು ಸಾರ್ವಜನಿಕರನ್ನು ಕೋರಿದ್ದಾರೆ.

ಹೇರ್ ಕಟ್‌ಗೆ ಬಾಳೆಹಣ್ಣು, ಟ್ಯಾಕ್ಸಿಗೆ ಸಿಗರೇಟ್ ಪ್ಯಾಕ್: ಇದು ವೆನಿಜುವೆಲಾ ಪರಿಸ್ಥಿತಿಹೇರ್ ಕಟ್‌ಗೆ ಬಾಳೆಹಣ್ಣು, ಟ್ಯಾಕ್ಸಿಗೆ ಸಿಗರೇಟ್ ಪ್ಯಾಕ್: ಇದು ವೆನಿಜುವೆಲಾ ಪರಿಸ್ಥಿತಿ

ಶಂಕಿತರ ಬಗ್ಗೆ ಹಾಗೂ ಶರತ್ ಅವರ ಕೊಲೆಯ ಕಾರಣದ ಕುರಿತು ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ಕನ್ಸಾಸ್ ಪೊಲೀಸರು ಹೇಳಿದ್ದಾಗಿ ಕನ್ಸಾಸ್ ಸಿಟಿ ಸ್ಟಾರ್ ವರದಿ ತಿಳಿಸಿದೆ.

ಗುಂಡಿನ ದಾಳಿ ನಡೆದ ಕೂಡಲೇ ಪೊಲೀಸರು ಶರತ್ ಅವರನ್ನು ಆಸ್ಪತ್ರೆಗೆ ಸಾಗಿಸಿ ಬದುಕಿಸಲು ಪ್ರಯತ್ನಿಸಿದ್ದಾರೆ. ಆದರೆ ಅದು ವಿಫಲವಾಗಿದೆ. ಸುಮಾರು ಐದು ಗುಂಡಿನ ಸದ್ದು ಕೇಳಿಸಿದ್ದಾಗಿ ಸಮೀಪದ ಹೋಟೆಲ್‌ನಲ್ಲಿದ್ದ ವ್ಯಕ್ತಿಗಳು ತಿಳಿಸಿದ್ದಾರೆ.

ರೆಸ್ಟೋರೆಂಟ್‌ನಲ್ಲಿ ಹತ್ಯೆಗೆ ಒಳಗಾದ ಯುವಕ ತಮ್ಮ ಮಗನೇ ಅಥವಾ ಅಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಶರತ್ ಅವರ ತಂದೆ ಕೆ. ರಾಮಮೋಹನ್ ಹೈದರಾಬಾದ್ ಪೊಲೀಸ್ ನಿರ್ದೇಶಕರನ್ನು ಭೇಟಿ ಮಾಡಿ ನೆರವು ಕೋರಿದ್ದಾರೆ.

ಹೈದರಾಬಾದ್‌ನ ವಾಸವಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ಪೂರೈಸಿದ್ದ ಶರತ್, ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು.

ವಾರಂಗಲ್‌ನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ್ದ ಅವರು, ಅಮೆರಿಕಕ್ಕೆ ಹೋಗುವ ಮೊದಲು ಬೆಂಗಳೂರಿನಲ್ಲಿರುವ ಪೆಗಾಸಿಸ್ಟಂ ವರ್ಲ್ಡ್‌ ವೈಡ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ ಸಾಫ್ಟ್‌ವೇರ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದರು. ಜನವರಿಯಲ್ಲಿ ಉದ್ಯೋಗ ತ್ಯಜಿಸಿದ್ದರು.

English summary
A Student from Hyderabad, Sharath Koppu was shot dead by unidentified gunmen on Friday inside a restaurant in Kansas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X