ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಥ್ಯೂ ಚಂಡಮಾರುತ: 20 ಲಕ್ಷ ಮಂದಿ ಸ್ಥಳಾಂತರ!

|
Google Oneindia Kannada News

ಫ್ಲೋರಿಡಾ, ಅಕ್ಟೋಬರ್ 6: ಮಾಥ್ಯೂಸ್ ಚಂಡಮಾರುತದ ಭೀತಿ ಹಿನ್ನೆಲೆಯಲ್ಲಿ ಅಮೆರಿಕಾದ ಆಗ್ನೇಯ ಕರಾವಳಿಯಿಂದ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಲಾಗಿದೆ. ಫ್ಲೋರಿಡಾದ ರಾಜ್ಯಪಾಲರು ಈ ಬಗ್ಗೆ ಅಲ್ಲಿನ ನಿವಾಸಿಗಳಿಗೆ ಎಚ್ಚರಿಕೆ ನೀಡಿದ್ದು, ಚಂಡಮಾರುತದ ಪರಿಣಾಮವನ್ನು ಎದುರಿಸಲು ಸಿದ್ಧರಾಗಿ ಎಂದಿದ್ದಾರೆ.

ಜಾರ್ಜಿಯಾ, ದಕ್ಷಿಣ ಕರೋಲಿನಾ ಮತ್ತು ಫ್ಲೋರಿಡಾದ ನಿವಾಸಿಗಳು ಸಂಭವನೀಯ ಅಪಾಯ ಎದುರಿಸಲು ಅಗತ್ಯ ವಸ್ತುಗಳನ್ನು ಒಟ್ಟು ಮಾಡಿಕೊಂಡು ಸಿದ್ಧರಾಗಿದ್ದಾರೆ ಎಂದು ಬುಧವಾರ ಎಬಿಸಿ ನ್ಯೂಸ್ ವರದಿ ಮಾಡಿದೆ. ಗುರುವಾರ ಸಂಜೆ ವೇಳೆಗೆ ಫ್ಲೋರಿಡಾದ ಅಟ್ಲಾಂಟಿಕ್ ತೀರಕ್ಕೆ ಮಾಥ್ಯೂ ಹತ್ತಿರವಾಗಲಿದೆ.[ಚಿತ್ರಗಳು: ಆಂಧ್ರದಲ್ಲಿ ಭಾರೀ ಮಳೆ ತಂದ ಅವಾಂತರ]

Hurricane Matthew: Two million persons were ordered to evacuate

ಅದ್ದರಿಂದ ಇನ್ನೂ ಹೆಚ್ಚು ಜನರನ್ನು ಸ್ಥಳಾಂತರ ಮಾಡುವಂತೆ ದಕ್ಷಿಣ ಕರೋಲಿನಾದ ರಾಜ್ಯಪಾಲ ನಿಕಿ ಹಾಲೆ ಕರೆ ನೀಡಿದ್ದಾರೆ. ಫ್ಲೋರಿಡಾದ 15 ಲಕ್ಷ ಮಂದಿಯನ್ನು ಕಡಲ ತೀರ ಬಿಟ್ಟು ಹೊರಡುವಂತೆ ತಿಳಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಜಾರ್ಜಿಯಾದಲ್ಲಿ ಜನಸಂಖ್ಯೆ ಐವತ್ತು ಸಾವಿರ ಸಮೀಪದಲ್ಲಿದೆ.

ಪ್ರಬಲ ಚಂಡಮಾರುತ ಆದ್ದರಿಂದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ ಅಂದರೆ ಪ್ರಾಣ ಹಾನಿ, ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ರಾಷ್ಟ್ರೀಯ ಹವಾಮಾನ ಸೇವೆಯು ಎಚ್ಚರಿಕೆ ನೀಡಿದೆ. ದುರಂತದಿಂದ ದೊಡ್ಡ ಮಟ್ಟದ ನಷ್ಟ ಸಂಭವಿಸುವ ಸಾಧ್ಯತೆ ಇದೆ. ಆ ನಂತರ ಕೆಲವು ವಾರಗಳ ಕಾಲ ಈ ಪ್ರದೇಶದಲ್ಲಿ ವಾಸವೇ ಸಾಧ್ಯವಿಲ್ಲ ಎಂದು ಬುಧವಾರ ಘೋಷಿಸಲಾಗಿದೆ.[ಮಳೆಗೆ ತತ್ತರಿಸಿರುವ ಚೆನ್ನೈ ಜನತೆಗೆ ವಾಯುಸೇನೆ ಆಸರೆ]

Hurricane Matthew: Two million persons were ordered to evacuate

ಬಹಮಸ್ ಗೆ ಚಂಡಮಾರುತ ಬಡಿದು ಹೈಟಿಯಲ್ಲಿ 22 ಮಂದಿ, ಡೊಮಿನಿಕನ್ ರಿಪಬ್ಲಿಕ್ ನಲ್ಲಿ ನಾಲ್ವರು ಮಂಗಳವಾರ ಸಾವನ್ನಪ್ಪಿದ್ದಾರೆ. ಆ ನಂತರ ಚಂಡಮಾರುತ ದುರ್ಬಲವಾಗಿದೆ. ಜೀವ ಕಂಟಕವಾದ ಮಾಥ್ಯೂ ಗಂಟೆಗೆ 190 ಕಿ.ಮೀ ವೇಗದಲ್ಲಿ ಬಹಮಸ್ ಹಾದುಹೋಗಿದೆ. ಹೈಟಿಯಲ್ಲಿ ಪರಿಹಾರ ಕಾರ್ಯಕ್ಕಾಗಿ ಅಮೆರಿಕ ಸೇನೆಯು ಒಂಬತ್ತು ಹೆಲಿಕಾಪ್ಟರ್ ಹಾಗೂ ನೂರು ಮಂದಿಯನ್ನು ಕಳಿಸಲಿದೆ.

Hurricane Matthew: Two million persons were ordered to evacuate

'ಸರಕಾರಿ ವರದಿ ಪ್ರಕಾರ ಹೈಟಿಯಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಅಂದಾಜಿನ ಪ್ರಕಾರ ಕನಿಷ್ಠ ಮೂರೂವರೆ ಲಕ್ಷ ಮಂದಿಗೆ ತುರ್ತಾಗಿ ನೆರವಿನ ಅಗತ್ಯವಿದೆ' ಎಂದು ವಿಶ್ವಸಂಸ್ಥೆ ಕಾರ್ಯದರ್ಶಿ ವಕ್ತಾರ ಡುಜಾರಿಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಏಳು ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯಿರುವ ಹೈಟಿಯಲ್ಲಿ ಶೇ 80ರಷ್ಟು ಮನೆಗಳಿಗೆ ಹಾನಿಯಾಗಿದೆ ಎಂದು ವಿಶ್ವಸಂಸ್ಥೆ ಅಧಿಕಾರಿಗಳ ಸಭೆಯಲ್ಲಿ ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ.['ರೋನು' ಅಬ್ಬರಕ್ಕೆ ರೋದಿಸುತ್ತಿರುವ ತಮಿಳುನಾಡು]

ಹನ್ನೊಂದು ಸಾವಿರ ಮಂದಿ ಈ ಪ್ರಾಂತ್ಯದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ.

English summary
Ahead of the landing of Hurricane Matthew, Over two million persons were ordered to evacuate from the US southeastern coastline. Florida's Governor warning residents to 'prepare for a direct hit'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X