• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫ್ಲೋರೆನ್ಸ್ ಅನಾಹುತಕ್ಕೆ ಪತರಗುಟ್ಟಿದ ಜನರು, ನೆರವಿಗಾಗಿ ಮನವಿ

|

ನಿರೀಕ್ಷಿಸಿದ್ದ ಅನಾಹುತ 'ಫ್ಲೋರೆನ್ಸ್' ಚಂಡಮಾರುತವು ಅಮೆರಿಕದ ಉತ್ತರ ಕರೋಲಿನಾಕ್ಕೆ ಅಪ್ಪಳಿಸಿದೆ. ಕ್ಷಣದಿಂದ ಕ್ಷಣಕ್ಕೆ ಹೆಚ್ಚುತ್ತಿರುವ ವೇಗ ಹಾಗೂ ರಭಸಕ್ಕೆ ಹಾನಿ ಪ್ರಮಾಣವನ್ನು ಕೂಡ ಭಾರೀ ಪ್ರಮಾಣದಲ್ಲೇ ಮಾಡುತ್ತಿದೆ. ಜತೆಗೆ ಸಾವಿರಾರು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉತ್ತರ ಕರೋಲಿನಾವೊಂದರಲ್ಲೇ ಪ್ರವಾಹ ಪರಿಸ್ಥಿತಿಗೆ ಸಿಲುಕಿದ ನೂರಾರು ಮಂದಿ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಕೆಟಗಿರಿ ಒಂದು ಎಂದು ಪರಿಗಣಿಸುವ ಈ ಚಂಡಮಾರುತವು ಗಂಟೆಗೆ ಮೂರು ಇಂಚಿನಷ್ಟು ಮಳೆ ಸುರಿಸುತ್ತಿದೆ. ವಿಲ್ಮಿಂಗ್ಟನ್ ಪೂರ್ವದ ರೈಟ್ಸ್ ವಿಲ್ಲೆ ಕಡಲ ಕಿನಾರೆಗೆ ಶುಕ್ರವಾರ ಬೆಳಗ್ಗೆ ಚಂಡಮಾರುತ ಅಪ್ಪಳಿಸಿದೆ. ಗಂಟೆಗೆ ತೊಂಬತ್ತು ಮೈಲಿ ವೇಗದಲ್ಲಿ ಗಾಳಿ ಬೀಸುತ್ತಿದೆ. ನ್ಯೂ ಬರ್ನ್ ನಗರದಲ್ಲಿ ಕಾರು, ಮನೆಯ ತಾರಸಿ, ಅಟ್ಟಗಳಲ್ಲಿ ಸಿಲುಕಿಕೊಂಡಿರುವ ನೂರಾರು ಮಂದಿಯ ರಕ್ಷಣೆಗೆ ತುರ್ತು ಪರಿಹಾರ ಕಾರ್ಯಪಡೆ ಮುಂದಾಗಿದೆ.

ಕ್ಯಾಲಿಫೋರ್ನಿಯಾವನ್ನು ಅಪ್ಪಳಿಸಲಿದೆ ಫ್ಲಾರೆನ್ಸ್ ಚಂಡಮಾರುತ

ಇಲ್ಲಿನ ನ್ಯೂಸ್ ನದಿ ಉಕ್ಕಿ ಹರಿಯುತ್ತಿದ್ದು, ನಗರದಲ್ಲಿ ಪ್ರವಾಹ ಪರಿಸ್ಥಿತಿ ಏರ್ಪಟ್ಟಿದೆ. ಈ ಚಂಡಮಾರುತ ತರುವ ಮಳೆಯು ಹೆಚ್ಚಿನ ಅನಾಹುತ ಮಾಡಬಹುದು ಎಂದು ಅಂದಾಜಿಸಲಾಗಿದೆ. ಅದು ಉತ್ತರಕ್ಕೆ ತಿರುಗುವ ಮುನ್ನ ನಿಧಾನವಾಗಿ ದಕ್ಷಿಣ ಕರೋಲಿನಾದ ನೈರುತ್ಯ ಭಾಗಕ್ಕೆ ತಲುಪುವ ಅಂದಾಜಿದೆ.

ನ್ಯೂ ಬರ್ನ್ ನಲ್ಲಿ ಗುರುವಾರ ರಾತ್ರಿ ಇನ್ನೂರು ಮಂದಿಯನ್ನು ರಕ್ಷಿಸಲಾಗಿದೆ. ಇನ್ನೂ ನೂರೈವತ್ತು ಮಂದಿಗೆ ಶುಕ್ರವಾರ ಬೆಳಗ್ಗೆ ನೆರವಿನ ಅಗತ್ಯವಿತ್ತು ಎಂದು ಅಲ್ಲಿನ ಮೇಯರ್ ಡನಾ ಔಟ್ಲೋ ತಿಳಿಸಿದ್ದಾರೆ. ಜಾಕ್ಸನ್ ವಿಲ್ಲೆ ಹೋಟೆಲ್ ನಿಂದ ಅರವತ್ತು ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ.

ಅಪ್ಪಳಿಸಲಿರುವ ಭೀಕರ ಫ್ಲೊರೆನ್ಸ್ ಚಂಡಮಾರುತದ ಭಯಾನಕ ವಿಡಿಯೋ

ನಲವತ್ತು ಇಂಚಿನಷ್ಟು ಮಳೆ ನಿರೀಕ್ಷಿಸಬಹುದು. ಇದರಿಂದ ಇನ್ನಷ್ಟು ನೆರೆ ಸ್ಥಿತಿ ಏರ್ಪಡಬಹುದು. ಈಗಾಗಲೇ ಉತ್ತರ ಕರೋಲಿನಾದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಮಂದಿ ಮನೆಗೆ ವಿದ್ಯುತ್ ಸಂಪರ್ಕವಿಲ್ಲ. ಜತೆಗೆ ಮನೆ, ಮಳಿಗೆಗಳಿಗೆ ಕೂಡ ಹಾನಿಯಾಗಿವೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hurricane Florence, lashing the North Carolina coast with strong winds and blinding rain, made landfall Friday morning having already driven dangerous storm surges of several feet into beach and river towns.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more