ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮೀಕ್ಷೆ ವರದಿ: ಸದ್ದಿಲ್ಲದೆ ಸಾಯಿಸುತ್ತಿದೆ ಮತ್ತೊಂದು ವೈರಸ್..!

By ಅನಿಕೇತ್
|
Google Oneindia Kannada News

ಬೆಂಗಳೂರು, ಜುಲೈ 09: ಕೊರೊನಾ.. ಕೊರೊನಾ.. ಕೊರೊನಾ.. ಎಲ್ಲೆಲ್ಲೂ ಈ ಡೆಡ್ಲಿ ವೈರಸ್‌ನದ್ದೇ ಚರ್ಚೆ. ಹೀಗೆ ಇಡೀ ಭೂಮಂಡಲವನ್ನೇ ಆವರಿಸಿರುವ ಕೊರೊನಾ ಎಲ್ಲರಲ್ಲೂ ಭಯ ಹುಟ್ಟುಹಾಕಿದೆ. ಆದ್ರೆ ಸುಳಿವನ್ನೇ ನೀಡದಂತೆ ಮತ್ತೊಂದು ಮಹಾ ವೈರಸ್ ಮನುಕುಲವನ್ನು ನಾಶಪಡಿಸುತ್ತಿದೆ. ಕೊರೊನಾ ಸಂಕಷ್ಟದ ನಡುವೆ ಹಸಿವು ಅನ್ನೋ ವೈರಸ್, 'ಕೊರೊನಾ'ಗಿಂತಲೂ ಭಯಾನಕ ಸ್ವರೂಪ ತಾಳಿದೆ ಎಂದು ಸಮೀಕ್ಷೆಯೊಂದು ಹೇಳಿದೆ.

ಅಂತಾರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆ (Oxfam) ವರದಿ ಪ್ರಕಾರ, ಕೊರೊನಾ ವೈರಸ್ ಹಾವಳಿಗಿಂತ ಹಸಿವಿನಿಂದಲೇ ಜನ ಹೆಚ್ಚಾಗಿ ಸಾವನ್ನಪ್ಪುತ್ತಿದ್ದಾರಂತೆ. ಸದ್ಯದ ಮಟ್ಟಿಗೆ ಕೊರೊನಾ ವೈರಸ್‌ನಿಂದ ಪ್ರತಿನಿತ್ಯ ಸರಾಸರಿ 5 ಸಾವಿರಕ್ಕೂ ಹೆಚ್ಚು ಜನ ಮೃತಪಡುತ್ತಿದ್ದಾರೆ. ಆದರೆ ಮುಂದಿನ ಕೆಲವೇ ದಿನಗಳಲ್ಲಿ ಹಸಿವಿನಿಂದ ಪ್ರತಿದಿನ ಸಾಯುವವರ ಸಂಖ್ಯೆ 12 ಸಾವಿರವನ್ನೂ ಮೀರಿಸಲಿದೆ ಅಂತಾ ಅಂದಾಜಿಸಲಾಗಿದೆ.

Hunger will kill more people than COVID-19: Oxfam

ಕೊರೊನಾ ಸಮುದಾಯಕ್ಕೆ ಹರಡುತ್ತಿದೆಯಾ: ಐಸಿಎಂಆರ್ ಮಹತ್ವದ ರಿಪೋರ್ಟ್ ಕೊರೊನಾ ಸಮುದಾಯಕ್ಕೆ ಹರಡುತ್ತಿದೆಯಾ: ಐಸಿಎಂಆರ್ ಮಹತ್ವದ ರಿಪೋರ್ಟ್

ಯುದ್ಧಪೀಡಿತರ ನಾಡು ಅಯೋಮಯ
ಇನ್ನು ಹಸಿವಿನಿಂದ ಸಾಯುವವರ ಪೈಕಿ ಯುದ್ಧಪೀಡಿತ ದೇಶಗಳು ಮುಂಚೂಣಿಯಲ್ಲಿವೆ. ಇದರಲ್ಲಿ ಯೆಮೆನ್, ಸಿರಿಯಾ, ಇಥಿಯೋಪಿಯಾ, ದಕ್ಷಿಣ ಸುಡಾನ್,ಹೈತಿ, ಆಫ್ಘಾನಿಸ್ತಾನ ಹಾಗೂ ಡೆಮಾಕ್ರಟಿಕ್ ಕಾಂಗೋ ದೇಶಗಳ ಸ್ಥಿತಿ ಅಯೋಮಯವಾಗಲಿದೆ ಅಂತಾ ವರದಿಯಲ್ಲಿ ಹೇಳಲಾಗಿದೆ. ಇಷ್ಟೇ ಅಲ್ಲ, ಆಫ್ರಿಕಾದ ಬಹುತೇಕ ಬಡ ರಾಷ್ಟ್ರಗಳು ಹಾಗೂ ಏಷ್ಯಾದ ಬಡ ರಾಷ್ಟ್ರಗಳ ಪರಿಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿ ಇರಲಾರದು. ಈಗಾಗಲೇ ಹಸಿವು ಎಂಬ ಕೂಪಕ್ಕೆ ಬಿದ್ದು ನರಳಾಡುತ್ತಿರುವ ಬಡ ರಾಷ್ಟ್ರಗಳಿಗೆ 'ಕೊರೊನಾ' ಅನ್ನೋ ಹೆಮ್ಮಾರಿ ಬಹುದೊಡ್ಡ ಪೆಟ್ಟು ಕೊಟ್ಟಿದೆ. ಇದು 2ನೇ ಮಹಾಯುದ್ಧದ ನಂತರ ಇಡೀ ಜಗತ್ತಿಗೆ ಎದುರಾಗಿರುವ ಮಹಾ ಸಂಕಷ್ಟವಾಗಿದೆ.

Hunger will kill more people than COVID-19: Oxfam

ದಾನಿಗಳ ಕೊರತೆಯೇ ಕಾರಣ
ಅಂದಹಾಗೆ ಯುದ್ಧಪೀಡಿತ ದೇಶಗಳು ಹಾಗೂ ಬಡ ರಾಷ್ಟ್ರಗಳಿಗೆ ಶ್ರೀಮಂತ ರಾಷ್ಟ್ರಗಳಿಂದ ಹರಿದುಬರುವ ದಾನಿಗಳ ಅನುದಾನವೇ ಆಧಾರವಾಗಿತ್ತು. ಆದರೆ ಸದ್ಯದ ಸ್ಥಿತಿ ಶ್ರೀಮಂತ ರಾಷ್ಟ್ರಗಳನ್ನೇ ಜರ್ಜರಿತವಾಗಿಸಿದೆ. ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಲಾಕ್‌ಡೌನ್ ಹೇರಲಾಗಿದ್ದು, ಅಮೆರಿಕ, ಯುರೋಪ್ ಸೇರಿದಂತೆ ಹಲವು ರಾಷ್ಟ್ರಗಳು ಸ್ತಬ್ಧವಾಗಿವೆ. ಹೀಗೆ ಆಫ್ರಿಕಾ, ಏಷ್ಯಾ ಸೇರಿದಂತೆ ಹಲವು ಬಡ ರಾಷ್ಟ್ರಗಳಿಗೆ ದಾನಿಗಳ ಡೊನೇಷನ್ ಹಣ ಹರಿದುಬರುತ್ತಿಲ್ಲ. ಇದು ಹಸಿವಿನಿಂದ ಸಾಯುವವರ ಪ್ರಮಾಣ ಹೆಚ್ಚಿಸಿದ್ದು, ಮುಂಬರುವ ಕರಾಳ ದಿನಗಳಿಗೆ ಮುನ್ನುಡಿ ಬರೆದಿದೆ.

English summary
Twelve thousand people each day across the globe are predicted to die from hunger linked to the coronavirus pandemic by the end of the year states Oxfam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X