ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಷೇಧ ಕೊನೆಗೊಳಿಸಿದ ತಾಲಿಬಾನ್: ಶಾಲೆಗೆ ಮರಳಿದ ನೂರಾರು ಆಫ್ಘನ್ ಹುಡುಗಿಯರು

|
Google Oneindia Kannada News

ಕಾಬೂಲ್ ಮಾರ್ಚ್ 23: ಕಾಬೂಲ್‌ನಲ್ಲಿ ತಾಲಿಬಾನಿಗಳು ಅಧಿಕಾರವನ್ನು ವಶಪಡಿಸಿಕೊಂಡು ಏಳು ತಿಂಗಳು ಕಳೆದಿವೆ. ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ತನ್ನ ಆಡಳಿತ ಆರಂಭಿಸಿ ಶಿಕ್ಷಣ ಪಡೆಯುವ ಮಹಿಳೆಯರ ಹಕ್ಕುಗಳ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಿತ್ತು. ಆದರೀಗ ತಾಲಿಬಾನ್ ಆಕ್ರಮಿತ ಕಾಬೂಲ್‌ನಲ್ಲಿ ಅಲ್ಲಿನ ಶಿಕ್ಷಣ ಅಧಿಕಾರಿಗಳು ಮಾಧ್ಯಮಿಕ ಶಾಲೆಗಳನ್ನು ಪುನರಾರಂಭಿಸುವುದಾಗಿ ಘೋಷಿಸಿದ್ದಾರೆ. ಈ ಘೋಷಣೆಯ ಬಳಿಕ ಬುಧವಾರ ಅಫ್ಘಾನ್ ರಾಜಧಾನಿಯಲ್ಲಿ ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ತಾಲಿಬಾನ್ ಅಧಿಕಾರ ವಹಿಸಿಕೊಂಡಾಗ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಎಲ್ಲಾ ಶಾಲೆಗಳನ್ನು ಮುಚ್ಚಲಾಯಿತು. ಎರಡು ತಿಂಗಳ ನಂತರ ತರಗತಿಗಳನ್ನು ಪುನರಾರಂಭಿಸಿ ಹುಡುಗರಿಗೆ ಮತ್ತು ಕೆಲವು ಕಿರಿಯ ಹುಡುಗಿಯರಿಗೆ ಮಾತ್ರ ಶಾಲೆಗಳಿಗೆ ತೆರಳಲು ಅನುಮತಿಸಲಾಯಿತು.

ಇದರ ನಡುವೆ ಕೊರೊನಾ ಆರ್ಥಿಕ ಸಂಕಷ್ಟದಲ್ಲಿರುವ ಕಾಬೂಲ್‌ನಲ್ಲಿ ಶಿಕ್ಷಕರಿಗೆ ಹಲವಾರು ರಾಷ್ಟ್ರಗಳು ಮತ್ತು ಸಂಸ್ಥೆಗಳು ವೇತನ ನೀಡಲು ಮುಂದಾಗಿವೆ. ಜೊತೆಗೆ ಎಲ್ಲರಿಗೂ ಶಿಕ್ಷಣದ ಹಕ್ಕನ್ನು ನೀಡಬೇಕು ಎಂದು ಒತ್ತಾಯಿಸಿವೆ. ರಾಜಧಾನಿ ಕಾಬೂಲ್ ಸೇರಿದಂತೆ ಹಲವಾರು ಪ್ರಾಂತ್ಯಗಳಲ್ಲಿ ಶಾಲೆಗಳು ಬುಧವಾರ ಮತ್ತೆ ತೆರೆಯಲಿವೆ ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ. ಆದರೆ ತಾಲಿಬಾನ್‌ನ ಆಧ್ಯಾತ್ಮಿಕ ಹೃದಯಭಾಗವಾದ ಕಂದಹಾರ್‌ನ ದಕ್ಷಿಣ ಪ್ರದೇಶದಲ್ಲಿರುವ ಶಾಲೆಗಳು ಮುಂದಿನ ತಿಂಗಳವರೆಗೆ ತೆರೆಯುವುದಿಲ್ಲ. ಆದರೆ ಇದಕ್ಕೆ ಕಾರಣ ತಿಳಿದುಬಂದಿಲ್ಲ.

ಶಾಲೆಗಳಿಗೆ ಮರಳಿದ ವಿದ್ಯಾರ್ಥಿನಿಯರು

ಶಾಲೆಗಳಿಗೆ ಮರಳಿದ ವಿದ್ಯಾರ್ಥಿನಿಯರು

ತಾಲಿಬಾನ್ ಆಡಳಿತ ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಮೇಲಿನ ನಿರ್ಬಂಧಗಳನ್ನು ಬಿಗಿಗೊಳಿಸಿತು. ಮಹಿಳೆಯರು ಕೆಲಸಕ್ಕೆ ಹೋಗಬಾರದು ಎನ್ನುವ ನಿಯಮ ತಂದಿತು. ಮಹಿಳೆಯರಿಗೆ ಏಕಾಂಗಿಯಾಗಿ ಹೊರಗೆ ನಡೆಯದಂತೆ ಆದೇಶ ನೀಡಲಾಯಿತು. ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಪ್ರವೇಶ ನಿರಾಕರಿಸಲಾಯಿತು. ಇದು ವಿವಿಧೆಡೆಯಿಂದ ಪ್ರತಿಭಟನೆಗೆ ಕಾರಣವಾಗಿತ್ತು.


ಆದರೆ ಬುಧವಾರ (ಮಾರ್ಚ್ 23) ಬೆಳಿಗ್ಗೆ AFP ತಂಡಗಳು ರಾಜಧಾನಿಯಲ್ಲಿ ಶಾಲಾ ಮೈದಾನಕ್ಕೆ ಪ್ರವೇಶಿಸಿದ ಹುಡುಗಿಯರ ಹಲವಾರು ಗುಂಪುಗಳನ್ನು ಕಂಡಿವೆ. AFP ವರದಿಗಾರರ ಪ್ರಕಾರ, ರಾಜಧಾನಿಯ ಅತಿದೊಡ್ಡ ಶಾಲೆಗಳಲ್ಲಿ ಒಂದಾದ ಜರ್ಘೋನಾ ಹೈಸ್ಕೂಲ್‌ಗೆ ಬೆಳಗ್ಗೆ 7:00 (0230 GMT) ಹೊತ್ತಿಗೆ ನೂರಾರು ಮಂದಿ ಆಗಮಿಸಿದ್ದಾರೆ. ಜೊತೆಗೆ ರಾಜಧಾನಿಯಲ್ಲಿರುವ ರಾಬಿಯಾ ಬಾಲ್ಖಿ ಶಾಲೆಯಲ್ಲಿ, ಹತ್ತಾರು ಹುಡುಗಿಯರು ಗೇಟ್‌ನಲ್ಲಿ ಜಮಾಯಿಸಿದ್ದರು, ಒಳಗೆ ಬಿಡಲು ಕಾಯುತ್ತಿದ್ದರು ಎನ್ನಲಾಗಿದೆ.

ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕೊಠಡಿ

ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕೊಠಡಿ

ಹೆರಾತ್ ಮತ್ತು ಪಂಜ್‌ಶೀರ್‌ನಂತಹ ಇತರ ಪ್ರಾಂತ್ಯಗಳಲ್ಲಿನ ಶಾಲೆಗಳೂ ತೆರೆದಿರುವುದು ಕಂಡುಬಂದಿವೆ. ಶಾಲೆಗಳನ್ನು ಪುನಃ ತೆರೆಯುವುದು ಯಾವಾಗಲೂ ಸರ್ಕಾರದ ಉದ್ದೇಶವಾಗಿದೆ ಮತ್ತು ತಾಲಿಬಾನ್ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಸಚಿವಾಲಯ ಹೇಳಿದೆ.


"ಅಂತಾರಾಷ್ಟ್ರೀಯ ಸಮುದಾಯವನ್ನು ಸಂತೋಷಪಡಿಸಲು ನಾವು ಶಾಲೆಗಳನ್ನು ಪುನಃ ತೆರೆಯುತ್ತಿಲ್ಲ ಅಥವಾ ಪ್ರಪಂಚದಿಂದ ಮನ್ನಣೆ ಪಡೆಯಲು ನಾವು ಇದನ್ನು ಮಾಡುತ್ತಿಲ್ಲ" ಎಂದು ಸಚಿವಾಲಯದ ವಕ್ತಾರ ಅಜೀಜ್ ಅಹ್ಮದ್ ರಾಯನ್ ಹೇಳಿದ್ದಾರೆ. "ನಮ್ಮ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಇತರ ಸೌಲಭ್ಯಗಳನ್ನು ಒದಗಿಸುವ ನಮ್ಮ ಜವಾಬ್ದಾರಿಯ ಭಾಗವಾಗಿ ನಾವು ಇದನ್ನು ಮಾಡುತ್ತಿದ್ದೇವೆ" ಎಂದು ಅವರು AFP ಗೆ ತಿಳಿಸಿದರು. ಈ ನಡುವೆ 12 ರಿಂದ 19 ವರ್ಷ ವಯಸ್ಸಿನ ಬಾಲಕಿಯರ ಶಾಲೆಗಳನ್ನು ಪ್ರತ್ಯೇಕಿಸಲಾಗಿದೆ ಮತ್ತು ಇಸ್ಲಾಮಿಕ್ ತತ್ವಗಳ ಪ್ರಕಾರ ಕಾರ್ಯನಿರ್ವಹಿಸುತ್ತದೆ ಎಂದು ಖಚಿತಪಡಿಸಲು ತಾಲಿಬಾನ್ ಒತ್ತಾಯಿಸಿದೆ.

ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರ ಹಿಂದೇಟು

ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರ ಹಿಂದೇಟು

"ನಾವು ಈಗಾಗಲೇ ನಮ್ಮ ಅಧ್ಯಯನದಲ್ಲಿ ಹಿಂದುಳಿದಿದ್ದೇವೆ". ಹೀಗಾಗಿ ಕಟ್ಟುನಿಟ್ಟಾದ ತಾಲಿಬಾನ್ ಡ್ರೆಸ್ ಕೋಡ್‌ನ ಪ್ರಕಾರ ತರಗತಿಗಳಿಗೆ ಹಾಜರಾಗಲು ತಾವು ಸಿದ್ಧರಾಗಿರುವುದಾಗಿ 17 ವರ್ಷದ ರೈಹಾನಾ ಅಜೀಜಿ ಅವರು ಹೇಳುತ್ತಾರೆ. ಕಪ್ಪು ಅಬಯಾ, ತಲೆ ಸ್ಕಾರ್ಫ್ ಮತ್ತು ಮುಖದ ಮೇಲೆ ಮುಸುಕು ಧರಿಸಿ ತರಗತಿಗೆ ಹಾಜರಾಗಲು ತಯಾರಿ ನಡೆಸಿದ್ದಾರೆ.

ತಾಲಿಬಾನ್ ಮಹಿಳೆಯರ ಮೇಲೆ ಹಲವಾರು ನಿರ್ಬಂಧಗಳನ್ನು ಹೇರಿದೆ. ಅನೇಕ ಸರ್ಕಾರಿ ಉದ್ಯೋಗಗಳಿಂದ ಅವರನ್ನು ತೆಗೆದುಹಾಕಲಾಗಿದೆ. ಅವರು ಹಿಜಾಬ್ ಇಲ್ಲದೆ ಏಕಾಂಗಿಯಾಗಿ ಹೊರಬರುವಂತಿಲ್ಲ. ನಗರಗಳ ಹೊರಗೆ ಏಕಾಂಗಿಯಾಗಿ ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ. ಅವರ ಜೊತೆಗೆ ಅವರ ಮನೆಯ ಪುರುಷರು ಅವರೊಂದಿಗಿರಬೇಕು ಎನ್ನುವ ನಿಯಮ ತಂದಿದೆ. ಜೊತೆಗೆ ತಾಲಿಬಾನಿಗಳು ಮಹಿಳಾ ಹಕ್ಕುಗಳಿಗಾಗಿ ಪ್ರತಿಭಟಿಸಿದ ಹಲವಾರು ಕಾರ್ಯಕರ್ತರನ್ನೂ ಬಂಧಿಸಿದ್ದಾರೆ.

ಹೀಗಾಗಿ ಆರಂಭದಲ್ಲಿ ತಾಲಿಬಾನಿಗಳ ಅಟ್ಟಹಾಸವನ್ನು ಕಂಡ ಅಫ್ಘಾನಿಸ್ತಾನಿಗಳು ಈ ಬದಲಾವಣೆಯನ್ನು ನಂಬಲು ಸಿದ್ಧರಿಲ್ಲ. ಶಾಲೆಗಳು ಪುನರಾರಂಭವಾಗಿದ್ದರೂ, ಹೆಣ್ಣುಮಕ್ಕಳು ಶಿಕ್ಷಣಕ್ಕೆ ಮರಳಲು ಅಡೆತಡೆಗಳು ಇವೆ. ಅನೇಕ ಕುಟುಂಬಗಳು ತಾಲಿಬಾನ್‌ಗಳ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿವೆ ಮತ್ತು ತಮ್ಮ ಹೆಣ್ಣುಮಕ್ಕಳನ್ನು ಹೊರಗೆ ಬಿಡಲು ಇಷ್ಟಪಡುತ್ತಿಲ್ಲ. ಹೆದರಿಕೆಯಿಂದಾಗಿ ಹುಡುಗಿಯರು ಕಲಿಯುವುದರಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಮಾತ್ರವಲ್ಲದೆ "ಶಿಕ್ಷಣ ಮುಗಿಸಿದ ಅನೇಕ ಹೆಣ್ಣುಮಕ್ಕಳು ಮನೆಯಲ್ಲಿಯೇ ಕುಳಿತಿದ್ದಾರೆ ಮತ್ತು ಅವರ ಭವಿಷ್ಯವು ಅನಿಶ್ಚಿತವಾಗಿದೆ" ಎಂದು ಶಾಲೆಯನ್ನು ತೊರೆಯಲು ನಿರ್ಧರಿಸಿದ ಕಂದಹಾರ್‌ನ 20 ವರ್ಷದ ಹೀಲಾ ಹಯಾ ಹೇಳಿದರು.

ಭಯದಲ್ಲೇ ವಿದ್ಯಾರ್ಥಿನಿಯರು ಶಾಲೆಯತ್ತ ಹೆಜ್ಜೆ

ಭಯದಲ್ಲೇ ವಿದ್ಯಾರ್ಥಿನಿಯರು ಶಾಲೆಯತ್ತ ಹೆಜ್ಜೆ

ಬಡತನ ಅಥವಾ ಸಂಘರ್ಷದ ಪರಿಣಾಮವಾಗಿ ಆಫ್ಘನ್ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಕಳೆದುಕೊಳ್ಳುವುದು ಸಾಮಾನ್ಯವಾಗಿದೆ. ಕೆಲವರು ತಮ್ಮ ಹದಿಹರೆಯದ ಕೊನೆಯಲ್ಲಿ ಅಥವಾ ಇಪ್ಪತ್ತರ ದಶಕದ ಆರಂಭದಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಾರೆ. ಇಂತಹ ವಾತಾವರಣದಲ್ಲಿ ಹುಡುಗಿಯರು ಅಧ್ಯಯನ ಮಾಡಲು ಯಾವ ಪ್ರೇರಣೆಯನ್ನು ಹೊಂದಿರುತ್ತಾರೆ ಎಂದು ಪ್ರಶ್ನಿ ಉದ್ಬವಿಸಿದೆ.

ಶಿಕ್ಷಣ ಸಚಿವಾಲಯವು ಅಧಿಕಾರಿಗಳು ಶಿಕ್ಷಕರ ಕೊರತೆಯನ್ನು ಎದುರಿಸುತ್ತಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ತಾಲಿಬಾನ್ ಅಧಿಕಾರಕ್ಕೆ ಬಂದಂತೆ ದೇಶದಿಂದ ಪಲಾಯನ ಮಾಡಿದ ಹತ್ತಾರು ಜನರಲ್ಲಿ ಹಲವರು ಶಿಕ್ಷಕರು ಇದ್ದಾರೆ ಎನ್ನಲಾಗುತ್ತಿದೆ.

"ನಮಗೆ ಸಾವಿರಾರು ಶಿಕ್ಷಕರ ಅಗತ್ಯವಿದೆ ಮತ್ತು ಈ ಸಮಸ್ಯೆಯನ್ನು ಪರಿಹರಿಸಲು ನಾವು ತಾತ್ಕಾಲಿಕ ಆಧಾರದ ಮೇಲೆ ಹೊಸ ಶಿಕ್ಷಕರನ್ನು ನೇಮಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ" ಎಂದು ಸಂಶೋಧಕರಾದ ಸಹರ್ ಫೆಟ್ರಾಟ್ ಹೇಳಿದರು.

English summary
Groups of girls headed back to class in the Afghan capital Wednesday after Taliban authorities announced the reopening of secondary schools, more than seven months after seizing power and imposing harsh restrictions on the rights of women to be educated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X