ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೋಸ್ಟನ್ ನಲ್ಲಿ ಅನಿಲ ಪೈಪ್ ಲೈನ್ ಸ್ಫೋಟ, ಓರ್ವ ಮೃತ

|
Google Oneindia Kannada News

ಬೋಸ್ಟನ್, ಸೆಪ್ಟೆಂಬರ್ 14: ಇಲ್ಲಿನ ಗ್ಯಾಸ್ ಪೈಪ್ ಲೈನ್ ವೊಂದರಲ್ಲಿ ಭಾರಿ ಬಿರುಕು ಉಂಟಾಗಿ 70 ಬಾರಿ ಸರಣಿ ಸ್ಫೋಟ ಸಂಭವಿಸಿದ ಘಟನೆ ಗುರುವಾರದಂದು ವರದಿಯಾಗಿದೆ. ಈ ಘಟನೆಯಿಂದಾಗಿ ಓರ್ವ ಬಾಲಕ ಮೃತಪಟ್ಟಿದ್ದು, ಹತ್ತಾರು ಮಂದಿಗೆ ಗಾಯವಾಗಿದ್ದು, ನೂರಾರು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಗಿದೆ.

ಪಶ್ಚಿಮ ಘಟ್ಟದಲ್ಲಿ ನಿಗೂಢ ಸ್ಫೋಟಗಳು, ಕಾದಿದೆಯಾ ಗಂಡಾಂತರ? ಪಶ್ಚಿಮ ಘಟ್ಟದಲ್ಲಿ ನಿಗೂಢ ಸ್ಫೋಟಗಳು, ಕಾದಿದೆಯಾ ಗಂಡಾಂತರ?

ಲಾರೆನ್ಸ್, ಆಂಡೋವರ್ ಹಾಗೂ ಆಂಡೋವರ್ ಉತ್ತರ ಭಾಗದ ವಾತಾವರಣ ಸಂಪೂರ್ಣ ಹೊಗೆ, ಕಾರ್ಮೋಡದಿಂದ ಆವರಿಸಿದೆ. ರಸ್ತೆ ಬೀದಿಗಳಲ್ಲಿ ಏನು ಕಾಣಿಸದಂಥ ದಟ್ಟ ಹೊಗೆ ವಾತಾವರಣ ಉಂಟಾಗಿದ್ದು, ಎಲ್ಲೆಡೆ ವಿದ್ಯುಚ್ಛಕ್ತಿ ಕಡಿತಗೊಲಿಸಲಾಗಿದೆ.

ಬೆಂಗಳೂರು: ಎಚ್‌ಎಎಲ್‌ ಬಳಿ ನಿಗೂಢ ಸ್ಫೋಟ, ಕಂಪಿಸಿದ ಭೂಮಿಬೆಂಗಳೂರು: ಎಚ್‌ಎಎಲ್‌ ಬಳಿ ನಿಗೂಢ ಸ್ಫೋಟ, ಕಂಪಿಸಿದ ಭೂಮಿ

Hundreds Evacuated After 70 Explosions Hit Gas Pipeline In Boston

ಈ ಘಟನೆಯಲ್ಲಿ ಗಾಯಗೊಂಡವರನ್ನು ಲಾರೆನ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ. ಕೊಲಂಬಿಯಾ ಗ್ಯಾಸ್ ಕಂಪನಿ ತನ್ನ ಘಟಕವನ್ನು ಉನ್ನತೀಕರಣ ಮಾಡುವುದಾಗಿ ತಿಳಿಸಿತ್ತು. ಆದರೆ, ಇದರಿಂದ ಯಾವುದೇ ಹಾನಿಯಾಗಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ಆರಂಭವಾಗಿದೆ.

ಘಟನೆಯಲ್ಲಿ 6 ಮಂದಿಗೆ ಗಾಯಗೊಂಡಿದ್ದಾರೆ, ಗಾಯಾಳುಗಳ ಸಂಖ್ಯೆ ಇನ್ನೂ ನಿಖರವಾಗಿ ತಿಳಿದು ಬಂದಿಲ್ಲ, ಎಂಡೋವರ್​ನಲ್ಲಿ ಅಗ್ನಿಶಾಮಕ ಸಿಬ್ಬಂದಿ ಯೊಬ್ಬರಿಗೆ ಗಾಯವಾಗಿದೆ. ಲಾರೆನ್ಸ್​ ಜನರಲ್​ ಹಾಸ್ಪಿಟಲ್​ನ ವಕ್ತಾರ ಜಿಲ್​ ಮೆಕ್​ಡೊನಾಲ್ಡ್ಸ್​ ಹೆಸ್ಲಿ ಮಾತನಾಡುತ್ತಾ 10 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

English summary
At least six people were injured and hundreds were ordered to evacuate their homes following a series of 70 explosions that rocked three communities near Boston on Thursday, apparently triggered by a gas pipeline rupture, local officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X