ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನುಷ್ಯನ ಮೂತ್ರ ಚಂದ್ರನಲ್ಲಿ ಕಾಂಕ್ರೀಟ್ ತಯಾರಿಗೆ ಸಹಕಾರಿ: ಯುರೋಪ್ ಬಾಹ್ಯಾಕಾಶ ಸಂಸ್ಥೆ

|
Google Oneindia Kannada News

ಬರ್ಲಿನ್, ಮೇ 9: ಮಾನವನ ಮೂತ್ರ ಚಂದ್ರಗ್ರಹದಲ್ಲಿ ಕಾಂಕ್ರೀಟ್ ತಯಾರಿಕೆಗೆ ಸಹಕಾರಿಯಾಗಲಿದೆ ಎಂದು ಯುರೋಪ್ ನ ಬಾಹ್ಯಾಕಾಶ ಸಂಸ್ಥೆ ಹೇಳಿದೆ.

ಚಂದ್ರನ ಮೇಲ್ಮೈ ಮೇಲೆ ಲಭ್ಯವಾಗುವ ವಸ್ತುಗಳನ್ನು ಮಾತ್ರ ಬಳಕೆ ಮಾಡುವ ಸಾಧ್ಯತೆಯಿರುವುದರಿಂದ ಭೂಮಿಯಿಂದ ನಿರ್ಮಾಣಕ್ಕೆ ವಸ್ತುಗಳನ್ನು ಪೂರೈಸುವ ಅವಶ್ಯಕತೆ ಕಡಿಮೆಯಾಗಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಚಂದ್ರ ಗ್ರಹಕ್ಕೆ ಹೋಗಿ ಬಂದವರಿದ್ದಾರೆ. ಅಲ್ಲಿ ನೆಲೆಸಲು ಪ್ರಯತ್ನಗಳು, ಪ್ರಯೋಗಗಳು ನಡೆಯುತ್ತಲೇ ಇದೆ. ಇಂತಹ ಸಂದರ್ಭದಲ್ಲಿ ಚಂದ್ರನಲ್ಲಿ ನಿರ್ಮಾಣಕ್ಕೆ ಕಾಂಕ್ರೀಟ್ ತಯಾರಿಗೆ ಮಾನವನ ಮೂತ್ರ ಬಳಕೆಯ ವಸ್ತುವಾಗಬಹುದು ಎಂದು ಹೇಳಿದೆ.

Human Urine Could Help Make Concrete On Moon

ಸಂಶೋಧಕರು ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ ಮನುಷ್ಯನ ಮೂತ್ರದಲ್ಲಿ ಇರುವ ಮುಖ್ಯ ಸಾವಯವ ಸಂಯುಕ್ತ ವಸ್ತು ಯೂರಿಯಾ ಚಂದ್ರನ ಮೇಲೆ ಕಟ್ಟಡ ನಿರ್ಮಿಸುವಾಗ ಕಾಂಕ್ರೀಟ್ ತಯಾರಿಗೆ ಮಿಶ್ರಣ ಮಾಡಲು ಬಳಕೆಯಾಗಬಹುದು ಎಂದಿದ್ದಾರೆ.

ಭೂಮಿ ಮೇಲೆ ಯೂರಿಯಾವನ್ನು ಕಾರ್ಖಾನೆಗಳಲ್ಲಿ ರಸಗೊಬ್ಬರ ತಯಾರಿಕೆಗೆ ಕಚ್ಚಾ ವಸ್ತುವಾಗಿ ಕಂಪೆನಿಗಳು ಬಳಕೆ ಮಾಡುತ್ತಿವೆ.

ಚಂದ್ರಯಾನ ಯೋಜನೆಗಳಲ್ಲಿ ಯಶಸ್ವಿಯಾಗಿರುವುದು ಎಷ್ಟು ಗೊತ್ತೇ?
ಭವಿಷ್ಯದಲ್ಲಿ ಚಂದ್ರನ ಮೇಲೆ ವಾಸಿಸಲು ಯೋಚಿಸುತ್ತಿರುವ ನಿವಾಸಿಗಳಿಗೆ ಧನ್ಯವಾದಗಳು, ಒಬ್ಬ ವ್ಯಕ್ತಿಯು ಪ್ರತಿದಿನ ಉತ್ಪಾದಿಸುವ 1.5 ಲೀಟರ್ (3.2 ಪಿಂಟ್) ಮೂತ್ರ ತ್ಯಾಜ್ಯವು ಬಾಹ್ಯಾಕಾಶ ಪರಿಶೋಧನೆಗೆ ಭರವಸೆಯ ಉಪ ಉತ್ಪನ್ನವಾಗಬಹುದು ಎಂದು ಯುರೋಪ್ ನ ಅಂತರಿಕ್ಷ ಸಂಸ್ಥೆ ಹೇಳಿದೆ.

ಚಂದ್ರನ ಮೇಲ್ಮೈ ಮೇಲೆ ದೊರಕುವ ಪೌಡರ್ ತರಹದ ಮಣ್ಣನ್ನು ಚಂದ್ರನಲ್ಲಿ ನಿರ್ಮಾಣಕ್ಕೆ ಕಾಂಕ್ರೀಟ್ ತಯಾರಿಕೆಗೆ ಬಳಸಲಾಗುತ್ತದೆ. ಕಾಂಕ್ರೀಟ್ ತಯಾರಿಕೆಯಲ್ಲಿ ಯೂರಿಯಾ ಹದ ಮಿಶ್ರಣಕ್ಕೆ ಸಹಾಯ ಮಾಡುತ್ತದೆ.

English summary
The European Space Agency said Friday that human urine could one day become a useful ingredient in making concrete to build on the Moon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X